ನವರಸ ನಾಯಕ ಹಂಚಿಕೊಂಡಿರುವ ಈ ಫೊಟೋ ಹಿಂದಿರುವ ಕಥೆ ಏನು ಗೊತ್ತಾ?

in ಮನರಂಜನೆ/ಸಿನಿಮಾ 63 views

ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಜಗ್ಗೇಶ್ ಅವರು ತಮ್ಮ ಜೀವನದಲ್ಲಿ ನಡೆದ ಹಲವು ಘಟನೆಗಳು ಮತ್ತು ಸಮಾಜದಲ್ಲಿ ನಡೆಯುತ್ತಿರುವ ಅಂಕುಡೊಂಕುಗಳ ಬಗ್ಗೆ ಮಾತನಾಡುತ್ತಿರುತ್ತಾರೆ. ಇದರ ಜೊತೆ ಚಿತ್ರರಂಗದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುವ ಅವರು , ಚಿತ್ರೋದ್ಯಮದಲ್ಲಿ ಏನಾದರೂ ಸಮಸ್ಯೆ ಬಂದರೆ ಎದ್ದು ನಿಂತು ಮಾತನಾಡುತ್ತಾರೆ.. ಹೀಗೆ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ನಿರತರಾಗಿರುವ ಮನೆಯಲ್ಲಿ ಏನೇ ವಿಚಾರಗಳು ನಡೆದರೂ ಅದನ್ನು ಫೇಸ್ ಬುಕ್ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಅಚ್ಚರಿ ಮೂಡಿಸುತ್ತಿರುತ್ತಾರೆ. ಇದರ ಜೊತೆಗೆ ಉತ್ತಮ ವಿಚಾರಗಳನ್ನು ಕೂಡ ಹಂಚಿಕೊಳ್ಳುತ್ತಾ ಜನರಿಗೆ ಒಳ್ಳೆಯ ವಿಚಾರವನ್ನು ತಲುಪಿಸುತ್ತಿರುತ್ತಾರೆ.. ಇನ್ನು ಅಭಿಮಾನಿಗಳಿಗೆ ಒಳ್ಳೆಯ ವಿಚಾರವನ್ನು ತಲುಪಿಸುವುದರ ಜೊತೆಗೆ ಅವರು ಕಾಮೆಂಟ್ ಮಾಡಿದರೆ ಅದಕ್ಕೆ ಪ್ರತ್ಯುತ್ತರವನ್ನು ಕೂಡ ಕೊಡುತ್ತಲೇ ಇರುತ್ತಾರೆ..

Advertisement

 

Advertisement

Advertisement

ಸದ್ಯ ಕನ್ನಡ ಚಿತ್ರರಂಗದ ಜ್ಞಾನ ಭಂಡಾರದಂತಿರುವ ನವರಸ ನಾಯಕ ಜಗ್ಗೇಶ್ ಅವರು ಈಗ ಒಂದು ಅಪರೂಪದ ಹಳೆಯ ಫೋಟೋವನ್ನು ಹಂಚಿಕೊಂಡು ಅದರ ನೆನಪುಗಳನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ. ತಮ್ಮಗೆಲ್ಲರಿಗೂ ತಿಳಿದಿರುವ ಹಾಗೆ ಜಗ್ಗೇಶ್ ಅವರು ವರನಟ ಡಾ. ರಾಜ್ ಅವರ ಪರಮಭಕ್ತ. ಅಪ್ಪಾಜಿ ಹಾಗೂ ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗೇಶ್ವರರಾವ್ ಅವರ ಜೊತೆಗೆ ಇರುವ ಫೋಟೋ ಒಂದನ್ನು ಹಂಚಿಕೊಳ್ಳುವ ಮೂಲಕ ಇದರ ಹಿಂದಿನ ಕಥೆಯನ್ನು ಅಭಿಮಾನಿಗಳಿಗೆ ಈ ರೀತಿಯಾಗಿ ತಿಳಿಸಿದ್ದಾರೆ.

Advertisement

 

 

View this post on Instagram

 

ಆಕಸ್ಮಿಕ ಜಾಲತಾಣದ ಮಿತ್ರ ಹಂಚಿಕೊಂಡ ನಾನು ನೋಡಿರದ ಚಿತ್ರ! ತುಂಬ ಸಂತೋಷ ನೀಡಿತು!1996/97 ಇರಬಹುದು ಎಂದು ಭಾವಿಸುವೆ ಸರಿಯಾಗಿ ನೆನಪಿಲ್ಲಾ! ಆದರೆ ಅಣ್ಣ ನನ್ನ ಶ್ರೀನಾಗೇಶ್ವರ ರಾವ್ ರವರಿಗೆ ಪರಿಚಯಿಸಿದ ರೀತಿ ನೆನಪಿದೆ ಧಣಿ ಈತ ಜಗ್ಗೇಶ ಅಂತ ಬಹಳ ಪ್ರತಿಭಾವಂತ ನಟ ಜೊತೆಗೆ ನನ್ನ ಇಷ್ಟದ ಆಂಜನೇಯ ಎಂದುಬಿಟ್ಟರು! ಆಗ ನಾಗೇಶ್ವರ ರಾಯರು ಹೀಗೆ ಹಿರಿಯರ ಪ್ರೀತಿ ಗಳಿಸುವುದು ಒಂದು ತಪಸ್ಸು ಎಂದರು! ಇಂಥ ದಿಗ್ಗಜರ ನಡುವೆ ಬೆಳೆದ ಮಾಯಸಂದ್ರ ಪಕ್ಕದ ಸಣ್ಣಗ್ರಾಮದ ಹುಡುಗ ಎಂಥ ಅದೃಷ್ಟವಂತ ಅನ್ನಿಸಿತು! ಇಂಥ ಮಹನೀಯರ ಗುಣನಡತೆ ನನ್ನ ರಕ್ತದಲ್ಲಿ ಬೆರತಿದೆ ಕೊನೆ ಉಸಿರಿನವರೆಗೆ ನನ್ನ ಗುಣವಾಗಿರುತ್ತದೆ! ಗುರುಭ್ಯೋನಮಃ…

A post shared by ??????? ????????????? (@actor_jaggesh) on

‘ಆಕಸ್ಮಿಕ ಜಾಲತಾಣದ ಮಿತ್ರ ಹಂಚಿಕೊಂಡ ನಾನು ನೋಡಿರದ ಚಿತ್ರ! ತುಂಬ ಸಂತೋಷ ನೀಡಿತು!1996/97 ಇರಬಹುದು ಎಂದು ಭಾವಿಸುವೆ ಸರಿಯಾಗಿ ನೆನಪಿಲ್ಲಾ! ಆದರೆ ಅಣ್ಣ ನನ್ನ ಶ್ರೀನಾಗೇಶ್ವರ ರಾವ್ ರವರಿಗೆ ಪರಿಚಯಿಸಿದ ರೀತಿ ನೆನಪಿದೆ ಧಣಿ ಈತ ಜಗ್ಗೇಶ ಅಂತ ಬಹಳ ಪ್ರತಿಭಾವಂತ ನಟ ಜೊತೆಗೆ ನನ್ನ ಇಷ್ಟದ ಆಂಜನೇಯ ಎಂದುಬಿಟ್ಟರು! ಆಗ ನಾಗೇಶ್ವರ ರಾಯರು ಹೀಗೆ ಹಿರಿಯರ ಪ್ರೀತಿ ಗಳಿಸುವುದು ಒಂದು ತಪಸ್ಸು ಎಂದರು!
ಇಂಥ ದಿಗ್ಗಜರ ನಡುವೆ ಬೆಳೆದ ಮಾಯಸಂದ್ರ ಪಕ್ಕದ ಸಣ್ಣಗ್ರಾಮದ ಹುಡುಗ ಎಂಥ ಅದೃಷ್ಟವಂತ ಅನ್ನಿಸಿತು!
ಇಂಥ ಮಹನೀಯರ ಗುಣನಡತೆ ನನ್ನ ರಕ್ತದಲ್ಲಿ ಬೆರತಿದೆ ಕೊನೆ ಉಸಿರಿನವರೆಗೆ ನನ್ನ ಗುಣವಾಗಿರುತ್ತದೆ!
ಗುರುಭ್ಯೋನಮಃ… ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Advertisement
Share this on...