ಜಗ್ಗೇಶ್ ನಿವಾಸದ ಹತ್ತಿರದ ಮನೆಯವರಿಗೂ ಕೊರೊನಾ ಪಾಸಿಟಿವ್….ಜಗ್ಗೇಶ್ ಮಾಡಿದ್ದೇನು…?

in ಕನ್ನಡ ಆರೋಗ್ಯ/ಕನ್ನಡ ಮಾಹಿತಿ 260 views

ಕೊರೊನಾ ಜನರ ಜೀವನವನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಟ್ಟಿದೆ. ಮಾರ್ಚ್​ನಲ್ಲಿ ಮೊದಲ ಬಾರಿ ಬೆಂಗಳೂರಿನಲ್ಲಿ ಕಾಣಿಸಿಕೊಂಡ ಈ ಮಾರಕ ವೈರಸ್ ರಾಜ್ಯಾದ್ಯಂತ ತನ್ನ ಜಾಲ ವ್ಯಾಪಿಸಿದೆ. ಇನ್ನು ಬೆಂಗಳೂರಂತೂ ಎರಡನೇ ಮಹಾರಾಷ್ಟ್ರ ಆದಂತಿದೆ. ಬೆಂಗಳೂರಿನಲ್ಲಿ ನಿತ್ಯ 800-900 ಪಾಸಿಟಿವ್ ಕೇಸ್​​​ಗಳು ವರದಿಯಾಗುತ್ತಿವೆ.ನಟ ಜಗ್ಗೇಶ್ ಮಲ್ಲೇಶ್ವರಂನಲ್ಲಿ ವಾಸವಿದ್ದು ಅವರ ನಿವಾಸದ ಹತ್ತಿರದ ಮನೆಯ ವ್ಯಕ್ತಿಯೊಬ್ಬರಿಗೆ ಕೂಡಾ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಬೆಂಗಳೂರಿನಲ್ಲಿ ಕಂಟೇನ್ಮೆಂಟ್ ವಲಯಗಳು ಕೂಡಾ ಹೆಚ್ಚಾಗುತ್ತಿವೆ. ಜಗ್ಗೇಶ್ ಮನೆ ಪಕ್ಕದ ರಸ್ತೆಯಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದ್ದರಿಂದ ಜನರು ಅನಾವಶ್ಯಕವಾಗಿ ಮನೆಯಿಂದ ಹೊರ ಬಾರದಂತೆ ಜಗ್ಗೇಶ್ ಮುಂದೆ ನಿಂತು ರಸ್ತೆಯನ್ನು ಬಂದ್ ಮಾಡಿಸಿದ್ದಾರೆ.

Advertisement

Advertisement

ಈ ಬಗ್ಗೆ ವಿಡಿಯೋ ಮಾಡಿರುವ ಜಗ್ಗೇಶ್ ‘ನಮ್ಮ ಮನೆ ಅಕ್ಕಪಕ್ಕದಲ್ಲಿ ಹೆಚ್ಚು ವಯಸ್ಸಾದವರು ಮಕ್ಕಳು ಇದ್ದಾರೆ. ಮಣಿಪಾಲ್ ಆಸ್ಪತ್ರೆ ಕೂಡಾ ಇದೆ. ಸ್ವಲ್ಪ ಏಮಾರಿದರೂ ಕೊರೊನಾ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಯಾರಿಗೂ ತೊಂದರೆಯಾಗಬಾರದು ಎಂಬ ಕಾರಣಕ್ಕೆ ನಾನೇ ಮುಂದೆ ನಿಂತು ರಸ್ತೆಗಳನ್ನು ಬಂದ್ ಮಾಡಿಸುತ್ತಿದ್ದೇನೆ’ ಎಂದು ಜಗ್ಗೇಶ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

Advertisement

ಪತ್ರಿದಿನ ಟಿವಿ ಚಾನೆಲ್​​​​ನಲ್ಲಿ ಕೊರೊನಾದಿಂದ ಮೃತಪಟ್ಟವರನ್ನು ಎಳೆದೊಯ್ದು ಗುಂಡಿಗೆ ಬಿಸಾಡುತ್ತಿರುವ ದೃಶ್ಯ ನೋಡಿದರೆ ಕರುಳು ಹಿಂಡುವಂತಾಗುತ್ತದೆ. ಈ ನಡುವೆ ಕೊರೊನಾಗೆ ಲಸಿಕೆ ದೊರೆತಿರುವುದು ಸ್ವಲ್ಪ ಸಮಾಧಾನದ ವಿಚಾರವಾಗಿದೆ. ಆದರೆ ಈ ಲಸಿಕೆ ಕೂಡಲೇ ಲಭ್ಯವಾಗುತ್ತಿಲ್ಲ. ಲಸಿಕೆ ಮಾರುಕಟ್ಟೆಯಲ್ಲಿ ದೊರೆಯಲು ಇನ್ನೂ ಒಂದು ತಿಂಗಳು ಕಾಯಬೇಕು. ಬೆಂಗಳೂರಿನ ಆಯುರ್ವೇದ ವೈದರು ಕೂಡಾ ಕೊರೊನಾಗೆ ಮದ್ದು ಪ್ರಯೋಗ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ. ಇದೆಲ್ಲಾ ಸಮಸ್ಯೆಗಳು ಬೇಗ ಮುಗಿದರೆ ಸಾಕು ಎನ್ನುವಂತಾಗಿದೆ.

Advertisement
Share this on...