57ನೇ ವಯಸ್ಸಿನಲ್ಲಿ ಬುದ್ದಿ ಕಲಿತೆ : ಜೀವನದಲ್ಲಿ ಎಂದೂ ಈ ರೀತಿ ಜಗ್ಗೇಶ್ ಅವರಿಗೆ ಬೇಸರವಾಗಿರಲಿಲ್ಲವಂತೆ !

in ಮನರಂಜನೆ/ಸಿನಿಮಾ 81 views

ಕಳೆದ ಎರಡು ಮೂರು ವರ್ಷಗಳಿಂದ ಮಂಡ್ಯ ಮೂಲದ ಯುವ ವಿಜ್ಞಾನಿ ಡ್ರೋನ್ ಪ್ರತಾಪ್ ಬಾರಿ ಹೆಸರು ಮಾಡಿದ್ದರು. ಡ್ರೋನ್ ಅಚಾರ್ಯ ಎಂದೇ ಖ್ಯಾತಿ ಪಡೆದಿದ್ದ ಅವರನ್ನು ದೇಶದ ಸ್ಪೂರ್ತಿ ಎಂದೇ ಬಣ್ಣಿಸುತ್ತಿದ್ದರು. ತಾನು  ೧೪ ವರ್ಷದವನಾಗಿದ್ದಾಲೇ ಡ್ರೋನ್ ಮೇಲೆ ಆಸಕ್ತಿ ಉಂಟಾಗಿದ್ದು ‍ ೧೬ ನೇ ವಯ್ಯಸಿಗೆ ಡ್ರೋನ್ ತಯಾರಿಸಿದೆ ಮತ್ತು ೨೧ ವಯ್ಯಸ್ಸಿನ ಹೊತ್ತಿಗೆ ಬರೋಬ್ಬರಿ ೬೦೦ ಡ್ರೋನ್ ತಯಾರಿಸಿದ್ದೇ ಎಂದು ಹೇಳಿದ್ದರು. ಅಲ್ಲದೇ ತನ್ನನ್ನು ೮೭ ದೇಶಗಳು ಸಂಶೋದನೆಗಳ ಬಗ್ಗೆ ತಿಳಿಯಲು ಆಹ್ವಾನ ನೀಡಿವೆ, ಜರ್ಮನಿಯ ಸಿಬಿಐಟಿ ಎಕ್ಸಿಮಿಷನ್ ನಲ್ಲಿ ಚಿನ್ನದ ಪದಕ ಗೆದ್ದೆ ಮತ್ತು ಟೋಕಿಯೊ ಲ್ಲಿ ಬೆಳ್ಳಿ ಪದಕ ಗೆದ್ದಿದ್ದೆ ಎಂದು ಹೇಳಿದ್ದರು. ಅಲ್ಲದೇ ಫ್ರಾನ್ಸ್ ಸರ್ಕಾರವೂ ತನ್ನನ್ನು ಮಾಸಿಕ ೧೬ ಲಕ್ಷರೂ, ೪ ಬಿಎಚ್ ಕೆ ಮನೆ ಮತ್ತು ಮೂರು ಕೋಟಿ ವೆಚ್ಚದ ಕಾರನ್ನು ನೀಡುತ್ತೇನೆ ನಮ್ಮ ಸಂಸ್ಥೆ ಗೆ ಬನ್ನಿ ಎಂದು ಆಹ್ವಾನ ನೀಡಿದ್ದರು. ಆದರೆ ಅದನ್ನು ತ್ಯಜಿಸಿ ಮೋದಿ ಅವರು ನೇಮಕ ಮಾಡಿರುವ ಡಿಆರ್ ಡಿ ಒ  ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದರು. ಆದರೇ ಇವರು ಹೇಳಿರುವುದಕ್ಕೆ ಬಲವಾದ ಕಾರಣ ಯಾವು ಇಲ್ಲದ ಕಾರಣ ಇವೆಲ್ಲಾ ಬೊಗಳೆ ಎಂದು ಪರಿಗಣಿಸಲಾಗಿದೆ .

Advertisement

Advertisement

ಈ ವಿಚಾರವನ್ನು ತಿಳಿದ ಜಗ್ಗೇಶ್ ಅವರು, “ಕಣ್ಣು ಕಿತ್ತರು ನಿದ್ರೆ ಬರಲಿಲ್ಲಾ ಇವನ ವಿಷಯ ಕೇಳಿ..!
ಇವನ ಬಗ್ಗೆ ಬರೆದದ್ದು ಪ್ರಯೋಜನವಿಲ್ಲಾ ಎಂದು ತೆಗೆದುಬಿಟ್ಟೆ..!!
ಕಷ್ಟ ಅಂತ ಬಂದವರಿಗೆ ಭುಜ ಕೊಡುತ್ತಿದ್ದೆ ಇನ್ನು ಮುಂದೆ ನನ್ನ ಬಳಿ ಯಾರು ಅನಾಮಿಕರು ಬಂದರು ನಂಬುವುದಿಲ್ಲಾ..!!ನನ್ನ ಬದಲಾವಣೆ ಮಾಡಿದ #droneprathap ನಿಗೆ ಧನ್ಯವಾದ..!!
ತುತ್ತು ಸಿಕ್ಕರು ಪ್ರಾಮಾಣಿಕವಾಗಿ ದುಡಿದು ಗಳಿಸಬೇಕು..!!
57ನೆ ವಯಸ್ಸಿಗೆ ಹೊಸ ಪಾಠ ಕಲಿತೆ…. #ಕಲಿಯುಗ” ಹೀಗೆಂದು ಟ್ವೀಟ್ ಮಾಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೊದಲು ಬಕ್ರಾ ಅಗಿದ್ದು ನಾನೇ ಎಂದು ಅಸಮಾಧಾಮವನ್ನು ವ್ಯಕ್ತಪಡಿಸಿದ್ದಾರೆ.

Advertisement

Advertisement

ನವರಸ ನಾಯಕ ಜಗ್ಗೇಶ್ ಅವರ ಆಪ್ತ ಸ್ನೇಹಿತರೊಬ್ಬರು ವಿದೇಶದಲ್ಲಿ ಡಾಕ್ಟರ್ ಆಗಿದ್ದು, ತಿಂಗಳಿಗೆ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಒಮ್ಮೆ ಅವರನ್ನು ಭೇಟಿಯಾಗಲು ಅವರ ಮನೆಗೆ ಹೋದಾಗ, ಮೊದಲ ಬಾರಿಗೆ ಪ್ರತಾಪ್ ಅವರ ಅಜ್ಜಿ ತಾತ  ಭೇಟಿಯಾದರು. ಜಗ್ಗೇಶ್ ಅವರನ್ನುನೋಡಿದ ಆ ಹಿರಿಯರು, ಜಗ್ಗೇಶ್ ಅವರ ಕಾಲನ್ನು ಹಿಡಿದುಕೊಂಡು ತಮ್ಮ ಮೊಮ್ಮಗನ ಬಗ್ಗೆ ಮತ್ತು ಅತನ ಬುದ್ಧಿವಂತಿಕೆಯ ಬಗ್ಗೆ ಹೇಳಿ, ತನ್ನ ಮೊಮ್ಮಗನಿಗೆ ಒಂದು ದಾರಿ ತೋರಿಸಿ ಎಂದು ಕೇಳಿಕೊಂಡರಂತೆ. ಹಿರಿಯರು ಅಂಗಲಾಚಿ ಬೇಡಿಕೊಂಡಿದನ್ನು ನೋಡಿ ಕರಗಿದ ಜಗ್ಗೇಶ್ ಅವರು ಗ್ರಾಮೀಣ ಭಾಗದಿಂದ ಬಂದ ಪ್ರತಿಭಾವಂತನಿಗೆ ಏನಾದ್ರೂ ಮಾಡಬೇಕೆಂದು ತಾನು ಬೆಂಗಳೂರಿಗೆ ಹೋದ ಮೇಲೆ ತಮ್ಮ ಮೊಮ್ಮಗನನ್ನು ನನ್ನ ಮನೆಗೆ ಬಂದು ಭೇಟಿ ಮಾಡಲು ಹೇಳಿದರು. ನಂತರ ಭೇಟಿಯಾದ ಪ್ರತಾಪ್ ಅವರ ಮಾತುಗಳಿಗೆ ಬೆರಗಾದ ಜಗ್ಗೇಶ್ ಅವರು, ಅವನಿಗೆ ದೊಡ್ಡ ದೊಡ್ಡ ಗಣ್ಯರು ಮತ್ತು ರಾಜಕೀಯ ವ್ಯಕ್ತಿಗಳನ್ನು ಪರಿಚಯಿಸುವದರ ಜೊತೆಗೆ ರಾಜ್ಯದ ಎಲ್ಲಾ ಮಠಾಧೀಶರನ್ನು ಕೂಡಾ ಭೇಟಿ ಮಾಡಿ ಆಶೀರ್ವಾದ ಪಡೆಯಲು ಹೇಳಿದ್ದರು.

ಇವರೆಲ್ಲರ ಜೊತೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದರಾದ ಸದಾನಂದ ಗೌಡರನ್ನು ಕೂಡಾ ಜಗ್ಗೇಶ್ ಅವರು ಪ್ರತಾಪ್ ಗೆ ಸಹಾಯ ಅಗಲಿ, ಗ್ರಾಮೀಣ ಪ್ರ ತಿಭೆ ಬೆಳೆಯಲಿ ಎಂದು ಅವರಿಗೂ ಕೂಡ ಭೇಟಿ ಮಾಡಿಸಿದ್ದರು. ಇವೆಲ್ಲವನ್ನು ಕರಗತ ಮಾಡಿಕೊಂಡ ಈತ ಕೆಲವು ಗಣ್ಯರು ಹಾಗೂ ಮಠಾದೀಶರಿಂದ ಬರೋಬ್ಬರಿ ನಾಲ್ಕೈದು ಕೋಟಿ ಹಣವನ್ನು ದೇಣಿಗೆಯಾಗಿ ಕೂಡಾ ಪಡೆದಿದ್ದಾನೆ. ಮೊದಲಿಂದಲು ಜಗ್ಗೇಶ್ ಅವರ ಮ್ಯಾನೇಜರ್ ಆದಂತಹ ಮಾದೇಗೌಡರು ಆ ಹುಡುಗ ಓದ್ತಾ ಇರೋದೆ ಬೇರೆ, ಹೇಳುತ್ತಿರುವುದೇ ಬೇರೆ, ಡ್ರೋನ್ ಮಾಡ್ತಾನೆ ಅದು ಇದು ಅಂತಾನೆ ಒಂದ್ಸಲ ಸರಿಯಾಗಿ ವಿಚಾರಿಸಿ ಎಂದು ಹೇಳಿದ್ದರಂತೆ. ಆದರೆ ಜಗ್ಗೇಶ್ ಅವರು ಆತನ ಮಾತಿಗೆ ಬೆರಗಾಗಿ, ಈತನಿಗೆ ಸಹಾಯ ಮತ್ತು ಪ್ರೋತ್ಸಾಹ ಮಾಡಬೇಕು ಎಂದಿದ್ದರು. ಜೀ ವಾಹಿನಲ್ಲಿ ಪ್ರಸಾರವಾಗುವ ಜನಮೆಚ್ಚಿನ ಧಾರಾವಾಹಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಕರೆಸಿ ಪ್ರಪಂಚಕ್ಕೆ ಪರಿಚಯ ಮಾಡಿಸಿಬಿಟ್ಟರು. ಹೀಗೆ ಮಾಡಿ ನಾನು ಬಕ್ರಾ ಅದೇ, ೭೫ ನೇ ವಯಸ್ಸಿಗೆ ಬುದ್ದಿ ಕಲಿತೆ ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಈ ಕುರಿತು ಪ್ರತಾಪ್ ಬಗ್ಗೆ ಮಾದ್ಯಮಗಳು ಸತ್ಯತೆಯನ್ನು ತಿಳಿಯುವ ಪ್ರಯತ್ನ ಮಾಡುತ್ತಿದ್ದು, ಪ್ರತಾಪ್ ಮಾದ್ಯಮವೊಂದರ ಮೂಲಕ ಶೀಘ್ರದಲ್ಲೇ ತಾನು ತನ್ನ ಮೇಲೆ ಮಾಡಲಾಗಿರುವ ಆರೋಪಗಳು ಸುಳ್ಳೆಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ತನಗೆ ಬಂದಿರುವ ಎಲ್ಲಾ ಪ್ರಶಸ್ತಿಗಳು ಹಾಗೂ ಪದಕಗಳಿಗೆ ದಾಖಲೆ ಕೊಡುವುದಾಗಿ ಹೇಳಿದ್ದಾನೆ.

Advertisement
Share this on...