ಬಾಲಕನ ವಿದ್ಯಾಭ್ಯಾಸಕ್ಕೆ ಹಣ ಸಹಾಯ ಮಾಡಿದ ನವರಸನಾಯಕ…ವಿಡಿಯೋ ವೈರಲ್..!

in ಕನ್ನಡ ಮಾಹಿತಿ 52 views

ನವರಸನಾಯಕ ಜಗ್ಗೇಶ್​​ ನಟನಾಗಿ, ರಾಯರ ಭಕ್ತರಾಗಿ, ರಾಜಕೀಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ತುಮಕೂರಿನ ಶಿವಲಿಂಗಪ್ಪ ಹಾಗೂ ನಂಜಪ್ಪ ದಂಪತಿಯ ಪುತ್ರನಾಗಿ ಜನಿಸಿದ ಈಶ್ವರ್ ಗೌಡ ಸಿನಿಮಾಗೆ ಬಂದ ನಂತರ ಜಗ್ಗೇಶ್ ಆಗಿ ಬದಲಾದ್ರು. ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ನಾಯಕನಾಗಿ ಹೆಸರು ಮಾಡಿದವರು ಅವರು.ಕ್ಯಾಮರಾ ಮುಂದೆ ಮಾತ್ರವಲ್ಲ, ಕ್ಯಾಮರಾ ಹಿಂದೆ ಕೂಡಾ ನಾನೊಬ್ಬ ದೊಡ್ಡ ಹೀರೋ ಎಂದು ಸಾಕಷ್ಟು ಬಾರಿ ನಿರೂಪಿಸಿದ್ದಾರೆ ಜಗ್ಗೇಶ್. ತಾವು ಸಂಪಾದಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ಕಷ್ಟದಲ್ಲಿರುವವರಿಗಾಗಿ ಮೀಸಲಿಡುತ್ತಾ ಬಂದಿದ್ದಾರೆ ಜಗ್ಗೇಶ್. ಜೀ ಕನ್ನಡ ವಾಹಿನಿಯಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದ ರತ್ನಮ್ಮ-ಮಂಜಮ್ಮ ಎಂಬ ಅಂಧ ಗಾಯಕರಿಗಾಗಿ ಜಗ್ಗೇಶ್ ಮನೆ ನಿರ್ಮಿಸಿಕೊಟ್ಟಿದ್ದರು. ವಿಶೇಷ ಚೇತನ ವ್ಯಕ್ತಿಯೊಬ್ಬರಿಗೆ ವ್ಹೀಲ್ ಚೇರ್ ಕೊಡಿಸಿ, ಕೈಗೆ ಸ್ವಲ್ಪ ಹಣ ಕೂಡಾ ನೀಡಿ ಸಹಾಯ ಮಾಡಿದ್ದರು. ಅದೇ ರೀತಿ ‘ಕನ್ನಡದ ಕಣ್ಮಣಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಾಲಕನೊಬ್ಬನ ಓದಿಗೆ 50 ಸಾವಿರ ಹಣ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದು ಹಳೆಯ ವಿಡಿಯೋ ಆಗಿದ್ದು ಈಗ ವೈರಲ್ ಆಗುತ್ತಿದೆ. ಇದು ಎಷ್ಟೋ ಜನರಿಗೆ ಗೊತ್ತಿಲ್ಲದ ವಿಚಾರ.

Advertisement

Advertisement

ಕಾರ್ಯಕ್ರಮದಲ್ಲಿ ಜಗ್ಗೇಶ್ ಅವರು ಚಿತ್ರದುರ್ಗದ ಪವನ್ ಎಂಬ ಬಾಲಕ ಹಾಗೂ ಅವರ ತಂದೆ ತಾಯಿಯೊಂದಿಗೆ ಮಾತನಾಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಬಾಲಕ ಬೆಳಗ್ಗೆ ಬೇಗನೆ ಎದ್ದು ಅಪ್ಪ ತಂದುಕೊಟ್ಟ ತರಕಾರಿ ಮಾರಿ ಸ್ಕೂಲ್​​​​​ಗೆ ಹೋಗುತ್ತಾನೆ. ಸ್ಕೂಲ್​​ನಿಂದ ಮನೆಗೆ ಬಂದ ನಂತರ ಮತ್ತೆ ತರಕಾರಿ ಮಾರಲು ಹೋಗುವ ವಿಚಾರ ತಿಳಿದು ಜಗ್ಗೇಶ್ ಭಾವುಕರಾಗಿ, ನಿನ್ನ ಅಕೌಂಟ್​​​​ಗೆ ನಾನು 50 ಸಾವಿರ ಹಾಕುತ್ತೇನೆ. ನೀನು ಚೆನ್ನಾಗಿ ಓದಿ, ಬೆಳೆದು ದೊಡ್ಡವನಾದ ನಂತರ ನಾಲ್ಕು ಜನರಿಗೆ ಸಹಾಯ ಮಾಡು ಎಂದು ಹೇಳಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಜಗ್ಗೇಶ್ ತಾವು ಹೇಳಿದಂತೆ ಹುಡುಗನಿಗೆ ಹಣದ ಸಹಾಯ ಕೂಡಾ ಮಾಡಿದ್ದಾರೆ.

Advertisement

 

Advertisement

 

ಈ ವಿಡಿಯೋವನ್ನು ಅಭಿಮಾನಿಯೊಬ್ಬರು ಜಗ್ಗೇಶ್ ಟ್ವಿಟ್ಟರ್​​​​ನಲ್ಲಿ ಟ್ಯಾಗ್ ಮಾಡಿ ನಿಮ್ಮದು ದೊಡ್ಡ ಗುಣ ಎಂದು ಹೊಗಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್​, ‘ದೇವರು ನನಗೆ ಕೂಟ್ಟ ಪುಟ್ಟ ಕೈಯಲ್ಲಿ ನಾನು ನನ್ನ ಸಂಸಾರ ಉಂಡು ಮಿಕ್ಕಿದ್ದು ಹೀಗೆ ರಾಯರಿಗೆ ನೈವೇದ್ಯ ಎಂದು ಹಂಚಿಬಿಡುವೆ. ಹಸಿವು ಬಡತನದ ಮನೆಯಿಂದ ಎದ್ದು ಬಂದವನು ಈ ಪಾಮರ, ನನ್ನ ದಾನ ವಿದ್ಯೆಗೆ, ಪರಿಸರಕ್ಕೆ ನನ್ನ ಕೊನೆ ಉಸಿರಿನವರೆಗೂ ನಿಲ್ಲದು, ಕಾರಣ ವಿದ್ಯೆ, ಪರಿಸರ ನಾವು ಹೋದ ಮೇಲೂ ಉಳಿಯುತ್ತದೆ, ಧನ್ಯವಾದ ‘ ಎಂದು ಪ್ರತಿಕ್ರಿಯಿಸಿದ್ದಾರೆ.

ಕಳೆದ ಭಾನುವಾರ ನಿಧನರಾದ ಚಿರಂಜೀವಿ ಸರ್ಜಾ ಹಾಗೂ ಮೇಘನಾ ಪ್ರೀತಿ ವಿಚಾರವನ್ನು ಮನೆಯವರ ಬಳಿ ಮಾತನಾಡಿ ಮುಂದೆ ನಿಂತು ಮದುವೆ ಮಾಡಿಸಿದ್ದು ಕೂಡಾ ಜಗ್ಗೇಶ್. ಚಿರು ನಿಧನರಾದಾಗ ಅಷ್ಟೇ ಅತ್ತಿದ್ದರು ಅವರು. ಕಷ್ಟ ಎಂದು ಬರುವವರಿಗೆ ಮರುಗುವ ಹೃದಯ ಜಗ್ಗೇಶ್ ಅವರದ್ದು. ನಮ್ಮ ಕಣ್ಣ ಮುಂದೆ ದೊರೆಯುವ ಉದಾಹರಣೆ ಇಷ್ಟೇ. ಆದರೆ ನಮಗೆ ತಿಳಿಯದೆ ಜಗ್ಗೇಶ್​ ಖಂಡಿತ ನೂರಾರು ಜನರಿಗೆ ಸಹಾಯ ಮಾಡಿರುತ್ತಾರೆ. ಇನ್ನೊಬ್ಬರಿಗೆ ಸಹಾಯ ಮಾಡಿದರೆ ದೇವರು ನಮ್ಮನ್ನು ಆಶೀರ್ವದಿಸುತ್ತಾನೆ ಎಂಬುದು ಜಗ್ಗೇಶ್ ಅವರ ನಂಬಿಕೆ. ಜಗ್ಗೇಶ್ ಅವರಿಗೆ ರಾಯರು ಮತ್ತಷ್ಟು ಜನರಿಗೆ ಸಹಾಯ ಮಾಡುವ ಶಕ್ತಿ ನೀಡಲಿ ಎಂಬುದೇ ನಮ್ಮ ಹಾರೈಕೆ ಕೂಡಾ.

Advertisement
Share this on...