ಸಿಹಿಯಾಗಿರುವ ಬೆಲ್ಲ ಆರೋಗ್ಯ ವರ್ಧಕವೂ ಹೌದು!

in ಕನ್ನಡ ಆರೋಗ್ಯ 276 views

ಸಿಹಿತಿಂಡಿಗಳಲ್ಲಿ ಹೆಚ್ಚಾಗಿ ಬಳಸಲಾಗುವ ಬೆಲ್ಲದ ರುಚಿಯನ್ನು ಬಲ್ಲವರೇ ಎಲ್ಲಾ. ದಣಿದು ಮನೆಗೆ ಬಂದವರಿಗೆ ನೀರಿನೊಂದಿಗೆ ಬೆಲ್ಲ ಕೊಡುವುದು ನಡೆದುಬಂದ ಹಿಂದಿನಿಂದಲೂ ನಡೆದುಕೊಂಡ ಸಂಪ್ರದಾಯ. ಮತ್ತು ಆ ಸಂಪ್ರದಾಯಕ್ಕೆ ಸಕಾರಣವೂ ಇದೆಯನ್ನಿ. ಅದೇನೆಂದರೆ ಒಂದು ತುಂಡು ಬೆಲ್ಲ ತಿಂದು ನೀರು ಕುಡಿದರೆ ಸಾಕು, ದೇಹದ ಆಯಾಸವೆಲ್ಲಾ ಕ್ಷಣಮಾತ್ರದಲ್ಲಿ ಮಾಯ! ಹೌದು, ಬೆಲ್ಲದಲ್ಲಿರುವ ಗ್ಲುಕೋಸ್ ಅಂಶವು ದೇಹದ ದಣಿವನ್ನು ನಿವಾರಿಸುವುದು ಮಾತ್ರವಲ್ಲದೇ ದೇಹಕ್ಕೆ ಅಗತ್ಯವಿರುವಂತಹ ಚೈತನ್ಯ ದೊರೆಯುವಂತೆಯೂ ಮಾಡುವುದು. ಕಬ್ಬಿನ ರಸದಿಂದ ತಯಾರಿಸಲಾಗುವ ಬೆಲ್ಲ ತಿನ್ನುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗುವುದು. ಇದರಲ್ಲಿರುವ ಕಬ್ಬಿಣ ,ರಂಜಕ , ಪ್ರೊಟೀನ್ , ಕ್ಯಾಲ್ಸಿಯಂ ,ಮೆಗ್ನೀಶಿಯಂ ಅಂಶಗಳು ದೇಹದ ಆರೋಗ್ಯವನ್ನು ವೃದ್ಧಿಸಲು ಸಹಕಾರಿ. ಕಬ್ಬಿಣಾಂಶ ಅಧಿಕವಾಗಿರುವ ಬೆಲ್ಲ ರಕ್ತಹೀನತೆಯನ್ನು ತಡೆಗಟ್ಟಿ , ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಪಚನ ಕ್ರಿಯೆಯನ್ನು ಸುಗಮಗೊಳಿಸುವ ಮೂಲಕ ಹೊಟ್ಟೆಯುಬ್ಬರ, ತೇಗನ್ನು ತಡೆಗಟ್ಟುವ ಶಕ್ತಿ ತುಂಡು ಬೆಲ್ಲಕ್ಕಿದೆ. ಅದೇ ಕಾರಣದಿಂದ ಕೆಲವರು ಊಟವಾದ ನಂತರ ಬೆಲ್ಲವನ್ನು ತಿನ್ನುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ.

Advertisement

Advertisement

ಇನ್ನು ಪಿತ್ತಕೋಶದ ವಿಷಕಾರಿ ಅಂಶಗಳನ್ನು ಹೊರಹಾಕುವ ಬೆಲ್ಲ ಆಸಿಡಿಟಿಯನ್ನು ತಡೆಯಲು ಉತ್ತಮ. ಮಲಬದ್ಧತೆಯನ್ನು ನಿವಾರಿಸುವ ಶಕ್ತಿಯನ್ನು ಕೂಡಾ ಇದು ಹೊಂದಿದ್ದು ದೇಹದಲ್ಲಿನ ರಕ್ತ ಶುದ್ದಿ ಮಾಡುತ್ತದೆ. ಇದರ ಜೊತೆಗೆ ದೇಹದಲ್ಲಿನ ರಕ್ತ ಪರಿಚಲನೆಯನ್ನು ಸುಗಮಗೊಳಿಸುವ ಇದು ರಕ್ತದೊತ್ತಡ ಇರುವವರಿಗೆ ಉತ್ತಮ ಮದ್ದು. ಆಗಾಗ ಕಂಡು ಬರುವ ನೆಗಡಿ ಹಾಗೂ ಕೆಮ್ಮನ್ನು ಉಪಶಮನ ಮಾಡುವಲ್ಲಿ ಸಹಕರಿಸುವ ಇದು ಗಂಟಲಿನಲ್ಲಿ ಕಟ್ಟಿರುವ ಕಫವನ್ನು ಕರಗಿಸುತ್ತದೆ. ದೇಹಕ್ಕೆ ಉಲ್ಲಾಸ ನೀಡುವ ಬೆಲ್ಲ ಋತುಸ್ರಾವದ ಸಮಯದಲ್ಲಿ ಉಂಟಾಗುವ ಮಾನಸಿಕ ತೊಂದರೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುತ್ತದೆ.

Advertisement

Advertisement

ಇನ್ನು ಚರ್ಮದ ಅಂದವನ್ನು ಹೆಚ್ಚಿಸಲು ಬೆಲ್ಲ ಉತ್ತಮವಾಗಿದೆ. ಇದರಲ್ಲಿರುವ ವಿಟಮಿನ್ ಹಾಗೂ ಮಿನರಲ್ ಅಂಶಗಳು ಚರ್ಮಕ್ಕೆ ಅಗತ್ಯವಿರುವ ಸತ್ವ ನೀಡುವುದರಿಂದ ಚರ್ಮದ ಅಂದ ಹೆಚ್ಚಿ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಇದರಲ್ಲಿರುವ ಕಬ್ಬಿಣ ಅಂಶವು ಕೂದಲಿಗೆ ಬಲ ನೀಡಿ ಕೂದಲು ಉದುರುವುದು ಕಮ್ಮಿಯಾಗುತ್ತದೆ.ಮುಖದ ಮೊಡವೆ  ಕಲೆ ನಿವಾರಣೆಗೂ ಸಹಕರಿಸುವ ಬೆಲ್ಲವನ್ನು ಸೇವಿಸುವುದರಿಂದ ದೇಹಕ್ಕೆ ಪ್ರಯೋಜನಗಳಿವೆ. ಔಷಧಗಳಲ್ಲಿಯೂ ಬಳಕೆಯಾಗುವ ಬೆಲ್ಲದ ರುಚಿಯನ್ನು ಸವಿಯದೆ ಇರುವವರಿಲ್ಲ. ರುಚಿಯನ್ನು ಸವಿದವರೇ ಬಲ್ಲ.
– ಅಹಲ್ಯಾ

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement