ಮಗಳ ಗಂಡನೂ ದೂರವಾದ್ರು, ಅಪ್ಪನಾಗಿ ನಾನೂ ದೂರವಾದೆ…ಜೈ ಜಗದೀಶ್ ಮೊದಲ ಪತ್ನಿ,ಮಗಳ ಕಥೆ..

in ಮನರಂಜನೆ 154 views

ಜೈ ಜಗದೀಶ್, ಕನ್ನಡ ಚಿತ್ರರಂಗದಲ್ಲಿ ನಾಯಕ, ಖಳನಾಯಕ, ಪೋಷಕಪಾತ್ರ, ನಿರ್ಮಾಪಕ, ನಿರ್ದೇಶಕನಾಗಿ ಕೂಡಾ ಹೆಸರು ಮಾಡಿದವರು. ಸಿನಿಮಾ ಮಾತ್ರವಲ್ಲ ಕಿರುತೆರೆಯಲ್ಲೂ ಜೈ ಜಗದೀಶ್ ನಟಿಸಿದ್ದಾರೆ. ಸಿನಿಮಾ, ಕಿರುತೆರೆ ಎಂದು ಬ್ಯುಸಿ ಇದ್ದ ಜೈ ಜಗದೀಶ್ ಕಳೆದ ಬಾರಿ ಬಿಗ್​​ಬಾಸ್​​​​​​​​ ಸೀಸನ್ 7 ರಲ್ಲೂ ಸ್ಪರ್ಧಿಯಾಗಿ ಭಾಗವಹಿಸಿದ್ದರು.ಜೈ ಜಗದೀಶ್ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದವರು. ಸುಮಾರು 200 ಚಿತ್ರಗಳಲ್ಲಿ ನಟಿಸಿರುವ ಜೈಜಗದೀಶ್ ‘ಫಲಿತಾಂಶ’ ಚಿತ್ರದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಈ ವೇಳೆ ಜೈಗದೀಶ್ ಅವರ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿಲ್ಲದ ವಿಚಾರವನ್ನು ಅವರು ಇಡೀ ರಾಜ್ಯದ ಜನರ ಮುಂದೆ ಬಿಚ್ಚಿಟ್ಟಿದ್ದರು. ತಮ್ಮ ಮೊದಲನೆ ಮದುವೆ, ಮಗಳು, ಅವರ ಜೀವನ ಎಲ್ಲವನ್ನೂ ಜೈಜಗದೀಶ್ ಹೇಳಿಕೊಂಡು ಕಣ್ಣೀರು ಹಾಕಿದ್ದರು. ರೂಪಾ ಎಂಬುವವರನ್ನು ಪ್ರೀತಿಸಿದ ಜೈ ಜಗದೀಶ್ 1980 ರಲ್ಲಿ ಅವರನ್ನು ಮನೆಯವರಿಗೆ ತಿಳಿಯದಂತೆ ದೇವಸ್ಥಾನದಲ್ಲಿ ಮದುವೆಯಾಗುತ್ತಾರೆ. ಆ ವೇಳೆ ಇವರಿಗೆ ಸಹಾಯ ಮಾಡಿದ್ದು ಸಾಹಸಸಿಂಹ ಡಾ. ವಿಷ್ಣುವರ್ಧನ್. 2 ವರ್ಷಗಳ ನಂತರ ಈ ದಂಪತಿಗೆ ಅರ್ಪಿತಾ ಎಂಬ ಮಗಳು ಜನಿಸುತ್ತಾರೆ. 6 ವರ್ಷಗಳ ನಂತರ ದಂಪತಿ ನಡುವೆ ಮನಸ್ಥಾಪ ಉಂಟಾಗಿ ದೂರವಾಗುತ್ತಾರೆ. ಜಗದೀಶ್ ವಿಚ್ಛೇದನ ನೀಡದೆ ಮನೆ ಬಿಟ್ಟು ಬಂದು ಕೆಲವು ದಿನಗಳ ಕಾಲ ಹೋಟೆಲ್​​​​ವೊಂದರಲ್ಲಿ ಇದ್ದು ನಂತರ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗುತ್ತಾರೆ.

Advertisement

Advertisement

ನಂತರ ಜೈಜಗದೀಶ್ ಜೀವನದಲ್ಲಿ ಬಂದದ್ದೇ ವಿಜಯಲಕ್ಷ್ಮಿ ಸಿಂಗ್. ಇವರ ನಡುವೆ ಯಾವಾಗ ಪ್ರೀತಿ ಚಿಗುರಿತೋ ಅವರಿಗೇ ಗೊತ್ತಿಲ್ಲವಂತೆ. ಒಮ್ಮೆ ವಿಜಯಲಕ್ಷ್ಮಿ ಅವರನ್ನು ಭೇಟಿ ಮಾಡಲು ಬಂದಾಗ ನನ್ನನ್ನು ಇಂದು ಮದುವೆ ಮಾಡಿಕೋ ಎಂದು ವಿಜಯಲಕ್ಷ್ಮಿ ಸಿಂಗ್ ಹೇಳಿದ್ದಾರೆ. ಇದಕ್ಕೆ ಏನೂ ಹೇಳದೆ ಜೈ ಜಗದೀಶ್ ವಿಜಯಲಕ್ಷ್ಮಿ ಅವರಿಗೆ ತಾಳಿ ಕಟ್ಟುತ್ತಾರೆ. ಅಂದಿನಿಂದ ಈ ದಂಪತಿ ಸಂತೋಷದಿಂದ ಜೀವನ ನಡೆಸುತ್ತಿದ್ಧಾರೆ. ಈ ದಂಪತಿಗೆ ವೈಭವಿ, ವೈಸಿರಿ, ವೈನಿಧಿ ಎಂಬ ಮೂವರು ಹೆಣ್ಣುಮಕ್ಕಳಿದ್ದು ಇವರೂ ಕೂಡಾ ಸಿನಿಮಾದಲ್ಲಿ ನಟಿಸಿದ್ದಾರೆ.

Advertisement

Advertisement

ಇನ್ನು ಮೊದಲ ಪತ್ನಿ ರೂಪಾ ಅವರನ್ನು ಬಿಟ್ಟು ಬಂದ ಜೈ ಜಗದೀಶ್ ಮಗಳಿಗಾಗಿ ಮೊದಲ ಪತ್ನಿಗೆ ಡೈವೋರ್ಸ್ ನೀಡಿರಲಿಲ್ಲವಂತೆ. ಆದರೆ ಕೆಲವು ವರ್ಷಗಳ ನಂತರ ರೂಪಾ ಬಂದು ಡೈವೋರ್ಸ್​ಗೆ ಒತ್ತಾಯ ಮಾಡಿದ್ದರಿಂದ ಸಹಿ ಮಾಡಿಕೊಟ್ಟೆ. ಕೊನೆಗೆ ನಾವು ಕಾನೂನಿನ ಪ್ರಕಾರ ದೂರವಾದೆವು. ಕೆಲವು ವರ್ಷಗಳ ನಂತರ ಮಗಳನ್ನು ಭೇಟಿ ಮಾಡಿದಾಗ ಆಕೆ ಮದುವೆ ನಿಶ್ಚಯವಾಗಿತ್ತು. ನಾನೂ ಕೂಡಾ ಅವಳ ಮದುವೆಗೆ ಹೋಗಿದ್ದೆ. 6 ವರ್ಷಗಳ ನಂತರವೂ ಆಕೆಗೆ ಮಕ್ಕಳಾಗಲಿಲ್ಲ ಇದನ್ನು ವಿಚಾರಿಸಿದ್ದಕ್ಕೆ ಪತಿಗೆ ಮಗು ಬೇಡವಂತೆ ಎಂದು ಹೇಳಿದಳು. ನನ್ನಂತೆ ನನ್ನ ಮಗಳು ಕೂಡಾ ಆಕೆಯ ಪತಿಯಿಂದ ದೂರಾದಳು.

ಈ ವಿಚಾರವನ್ನೆಲ್ಲಾ ಬಿಗ್​ಬಾಸ್​​​​ನಲ್ಲಿ ಹೇಳಿಕೊಂಡಿದ್ದರು ಜೈ ಜಗದೀಶ್. ಇದು ಬಹಳಷ್ಟು ಜನರಿಗೆ ತಿಳಿದಿಲ್ಲ. ಎಷ್ಟೇ ಹಣವಿದ್ದರೂ, ಎಷ್ಟೇ ಖ್ಯಾತಿಯಿದ್ದರೂ ಹಲವು ಸೆಲಬ್ರಿಟಿಗಳ ಜೀವನ ಕೂಡಾ ಕಷ್ಟದಿಂದ ಕೂಡಿರುತ್ತದೆ. ಸಿನಿಮಾ ನಟರಿಗೇನು ಕಡಿಮೆ, ಅವರದ್ದು ಹೂವಿನ ಹಾಸಿಗೆ ಎಂದುಕೊಳ್ಳುವ ಜನರಿದ್ದಾರೆ. ಆದರೆ ಅವರ ಜೀವನದಲ್ಲೂ ಮರೆಯಲಾರದ ಇಂತಹ ಕಹಿ ಘಟನೆಗಳು ಜರುಗಿರುತ್ತದೆ ಎನ್ನುವುದಕ್ಕೆ ಇದು ಸಾಕ್ಷಿ.

Advertisement
Share this on...