ಸಾಕ್ಷಾತ್ಕಾರ ನಟಿಯನ್ನು ಸಿನಿಮಾ ದಿಗ್ಗಜರು ತಮ್ಮ ಸಿನಿಮಾದಿಂದ ದೂರ ಇಟ್ಟದ್ದು ಯಾಕೆ !? ಆಕೆ ಮಾಡಿದ್ದಾದರು ಏನು?

in ಮನರಂಜನೆ/ಸಿನಿಮಾ 313 views

ಒಲವೇ ಜೀವನ ಸಾಕ್ಷಾತ್ಕಾರ, ಒಲವೇ ಮರೆಯದ ಮಮಕಾರ… ಅಬ್ಬಾ ಎಂತಹ ಸಾಲುಗಳು. ಕರುನಾಡಲ್ಲಿ ಈ ಇಂಪಾದ ಸವಿಗಾನವನ್ನು ಎಂದೂ ಮರೆಯಲಾಗದು ಇಂದಿಗೂ, ಇನ್ನು ಮುಂದೆ ಒಂದು ದಶಕವಾಗಲಿ ಈ ಸುಮಧುರ ಹಾಡು ಜೀವಂತವಾಗೆ ಇರುತ್ತದೆ. ಇನ್ನು ಈ ಹಾಡು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ನಟಸಾರ್ವಭೌಮ  ಡಾ. ರಾಜ್ ಕುಮಾರ್ ಹಾಗೂ ನಟಿ ಜಮುನಾ ಅವರು ಅಭಿನಯಿಸಿದ್ದ ಸಾಕ್ಷಾತ್ಕಾರ ಚಿತ್ರದ ಹಾಡಾಗಿದೆ. ನಾಯಕಿ  ಜಮುನಾ ಅವರು ದಕ್ಷಿಣ ಭಾರತ ಕಂಡ  ಜನಪ್ರಿಯ ನಟಿಯಾಗಿದ್ದು, ಕನ್ನಡ, ತೆಲುಗು, ತಮಿಳಿನಲ್ಲಿ ಅಭಿನಯಿಸಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಡ್ರೀಮ್ ಗರ್ಲ್ ಖ್ಯಾತಿಯನ್ನು ಪಡೆದುಕೊಂಡಿದ್ದರು .‌ ಆ ಸಮಯದಲ್ಲಿ ನಟಿ ಜಮುನಾ ದಕ್ಷಿಣ ಭಾರತ ಚಿತ್ರರಂಗದ  ಬಹುಬೇಡಿಕೆಯ ನಟಿಯಾಗಿ ಮೆರೆದಿದ್ದರು. ದಿಗ್ಗಜರ ಜೊತೆ ನಟಿಸಿ, ನಟನೆಯಲ್ಲಿ ಅವರಿಗೆ ಪೈಪೋಟಿ ನೀಡುವ ಸ್ಟಾರ್ ನಟಿ ಕೂಡಾ ಆಗಿದ್ದರು.

Advertisement

Advertisement

ತೆಲುಗು ಚಿತ್ರರಂಗದಲ್ಲಿ ಆಕೆ ನಟಿಸಿದ್ದ  ಚಿತ್ರಗಳು ಒಂದಕ್ಕಿಂತ, ಒಂದು ಸೂಪರ್ ಡೂಪರ್  ಹಿಟ್ ಚಿತ್ರಗಳಾಗಿದ್ದವು. ಅಂದಿನ ದಿಗ್ಗಜ ನಟರಾದ ಎನ್. ಟಿ. ರಾಮರಾವ್, ಅಕ್ಕಿನೇನಿ,  ನಾಗೇಶ್ವರ ರಾವ್ ಅವರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದ ಈ ನಟಿ, ತನ್ನ ಅಂದ ಹಾಗೂ ನಟನಾ ಕೌಶಲ್ಯದಿಂದಲೇ ಪ್ರೇಕ್ಷಕರು ಮಾರು ಹೋಗಿದ್ದರು ಮತ್ತು ಜಮುನಾ ಅವರನ್ನು ಸ್ಟಾರ್  ನಟಿಯಾಗಿ ಬೆಳೆಸಿದರು. ಆದರೆ ನಟಿ  ಜಮುನಾ ಅವರಿಗೆ ಬಾಲ್ಯದಿಂದಲೂ ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳುವ ಅಭ್ಯಾಸವಿತ್ತು ಅಲ್ಲದೇ ಧೈರ್ಯವಾಗಿ ಅಭಿಪ್ರಾಯ ಹೇಳುವುದು ಇವರ ಹವ್ಯಾಸವೇ ಸರಿ. ಆದರೆ ಅವರ ಈ ಎರಡು ಗುಣಗಳು ಹಿಡಿಸದೇ ಅಂದಿನ ತೆಲುಗು ಚಿತ್ರರಂಗದ ಇಬ್ಬರು ದಿಗ್ಗಜ ನಟರಾದ ಎನ್ ಟಿ ಆರ್  ಮತ್ತು ಎಎನ್ಆರ್ ಇಬ್ಬರೂ ಈ ನಟಿಯ ಅಹಂ ಇಳಿಯಬೇಕಾದರೆ ನಮ್ಮ ಸಿನಿಮಾಗಳಿಂದ ಕೆಲ ಕಾಲ ದೂರ ಇಡಬೇಕು ಎಂದು ನಿರ್ಧಾರ ಮಾಡಿದ್ದರಂತೆ.‌

Advertisement

Advertisement

ನಂತರ ಪಟ್ಟು ಹಿಡಿದ ಈ ದಿಗ್ಗಜ ನಟರು ಜಮುನಾ ಅವರನ್ನು ಬರೋಬ್ಬರಿ ಮೂರು ವರ್ಷ ಯಾವುದೇ ಪಾತ್ರದಲ್ಲಿ ತಮ್ಮ ಸಿನಿಮಾಗಳಲ್ಲಿ ಅಭಿನಯಿಸಲು ಅವಕಾಶ ಕೊಡುವುದಿಲ್ಲ.‌ ಆದರೆ ನಟಿ ಜಮುನಾ  ನಾನೇನೂ ತಪ್ಪು ಮಾಡಿಲ್ಲ, ನಾನು ಯಾರಿಗೂ ಕ್ಷಮೆ ಕೇಳುವುದಿಲ್ಲ ಎಂದು ನಿರ್ದರಿಸಿ ಆ‌ ಮೂರು ವರ್ಷಗಳ ಕಾಲ ಇತರೆ ನಟರ ಜೊತೆ ಅಭಿನಯಿಸಿಲು ಮುಂದಾಗುತ್ತಾರೆ.  ಸ್ಟಾರ್ ನಟರು ಇಲ್ಲದೇ ಹೋದರೂ ಕೂಡ ನಟಿ ಜಮುನಾ ಸಿನಿಮಾ ಮಾಡಬಲ್ಲಳು.  ಒಂದಾದ ನಂತರ ಮತ್ತೊಂದು ಸಿನಿಮಾಗಳಲ್ಲಿ ಸಕ್ರಿಯರಾಗುತ್ತಾರೆ.  ದಿಗ್ಗಜ ನಟರ ಬಳಿ ಅವಕಾಶಕ್ಕಾಗಿ ಎಂದಿಗೂ ಕೂಡ ಕ್ಷಮೆ ಯಾಚಿಸಲೇಯಿಲ್ಲ.

 

ಕಡೆಗೆ ಮೂರು ವರ್ಷಗಳ ನಂತರ ಈ ವಿಚಾರ ಚಿತ್ರರಂಗಕ್ಕೆ ದೊಡ್ಡದಾಗಿ ಹರಡಿ,  ತೆಲುಗಿನ  ಹಿರಿಯ‌ ನಿರ್ದೇಶಕರು ಮತ್ತು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಸೂರ್ಯಕಾಂತಂ ಅವರು ಎನ್ ಟಿ ಆರ್, ಎಎನ್ಆರ್ ಮತ್ತು ಜಮುನಾರನ್ನು ಸೇರಿಸಿ ಒಂದು ಕಡೆ ಮೀಟಿಂಗ್  ಮಾಡಲು ನಿರ್ದರಿಸುತ್ತಾರೆ ನಂತರ ಮೂರು ಜನರ ಜೊತೆ ಮಾತನಾಡಿ ಅವರ ಮಧ್ಯೆ ಇದ್ದಂತಹ ಸಮಸ್ಯೆಯನ್ನು ಬಗೆಹರಿಸುತ್ತಾರೆ.‌ ಎಲ್ಲಾ ಸರಿ ಹೋದ ಮೇಲೆ   ಮತ್ತೆ ನಟಿ ಜಮುನಾ ಆ  ದಿಗ್ಗಜ ನಟರ ಜೊತೆ ನಟಿಸಲು ಮತ್ತೆ ಆರಂಭಿಸಿದರಂತೆ.‌ ಈ ವಿಷಯವನ್ನು ನಟಿ ಜಮುನಾ ಒಂದು ಶೋ ನಲ್ಲಿ ಹೇಳಿಕೊಂಡು, ನಾನು ಎಂದಿಗೂ ಆತ್ಮಾಭಿಮಾನಕ್ಕೆ ದಕ್ಕೆಯಾಗುವ ಕೆಲಸ ಮಾಡಿದವಳಲ್ಲ ಎಂದು ಹೇಳಿದ್ದರು.

Advertisement
Share this on...