ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪೋಸ್ಟ್ ಬಾಕ್ಸ್ ಬಗ್ಗೆ ನಿಮಗೆ ಗೊತ್ತಾ‌..?

in News 88 views

ಒಂದು ಕಾಲದಲ್ಲಿ ಸ್ನೇಹಿತರು ಮತ್ತು ಸಂಬಂಧಿಕರು ಎಲ್ಲೋ ಒಂದು ಕಡೆ ದೂರದಲ್ಲಿ ಇರುತ್ತಿದ್ದರೂ. ಅವರ ಯೋಗಕ್ಷೇಮ ವಿಚಾರಿಸುವುದಕ್ಕೆ ಅಥವಾ ತಮ್ಮ ಕಷ್ಟವನ್ನ ಹೇಳಿಕೊಳ್ಳುವುದಕ್ಕೆ ಇದ್ದ ಒಂದೇ ಒಂದು ಆಧಾರವೆಂದರೆ ಅವರಿಗೆ ಪತ್ರದ ಮುಖಾಂತರ ನಾವು ನಮ್ಮ ವಿಷಯವನ್ನ ತಿಳಿಸುವುದು. ಆದರೆ ಫೇಸ್ಬುಕ್, ಇನ್ಸ್ಟಾಗ್ರಾಂ, ವಾಟ್ಸಪ್ ಮತ್ತೆ ಇ-ಮೇಲ್ ಈ ತರಹದ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವ ಈಗಿನ ಕಾಲದ ಕೆಲವು ಮಕ್ಕಳುಗಳು ಪೋಸ್ಟ್ ಬಾಕ್ಸ್ ಗಳನ್ನೇ ನೋಡಿಲ್ಲ ಅನ್ಸುತ್ತೆ.

Advertisement

 

Advertisement

Advertisement

 

Advertisement

ಇಂತಹ ಕಾಲಘಟ್ಟದಲ್ಲೂ ಕೂಡ ಜಪಾನಿನಲ್ಲಿ ಸುಸಾಮಿ ಅಂತ ಒಂದು ಹಳ್ಳಿಯಿದೆ. ಅಲ್ಲಿನ ಜನಸಂಖ್ಯೆ ಕೇವಲ ಐದು ಸಾವಿರ ಮಾತ್ರ. ಆದರೆ ಇವತ್ತು ಆ ಒಂದು ಹಳ್ಳಿ ಇಡೀ ಪ್ರಪಂಚದಲ್ಲೇ ಹೆಸರುವಾಸಿಯಾಗಿದೆ ಅದಕ್ಕೆ ಕಾರಣ ಆ ಊರಿನಲ್ಲಿರುವ ಪೋಸ್ಟ್ ಬಾಕ್ಸ್ ಮತ್ತೆ ಈ ಒಂದು ಪೋಸ್ಟ್ ಬಾಕ್ಸ್ ಗಿನ್ನಿಸ್ ದಾಖಲೆಗೂ ಕೂಡ ಸೇರಿದೆ.

 

 

ಈ ಒಂದು ಪೋಸ್ಟ್ ಬಾಕ್ಸ್ ಅನ್ನ ಆ ಊರಿನ ಯಾವುದೋ ಒಂದು ಗೋಡೆಗೆ ನೇತು ಹಾಕಿಲ್ಲ. ಬದಲಿಗೆ ಸುಮಾರು ಹತ್ತು ಮೀಟರ್ ಸಮುದ್ರದ ಆಳದಲ್ಲಿ ಈ ಒಂದು ಪೋಸ್ಟ್ ಬಾಕ್ಸ್ ಅನ್ನ ಇಡಲಾಗಿದೆ. ಇವತ್ತು ಈವೊಂದು ಜಾಗ ಪ್ರವಾಸಿ ಕೇಂದ್ರವಾಗಿ ಮಾರ್ಪಟ್ಟಿದೆ. ಪ್ರಪಂಚದ ನಾನಾ ದೇಶಗಳಿಂದ ಜನರು ಪತ್ರವನ್ನ ಬರೆದು ಇಲ್ಲಿ ಪೋಸ್ಟ್ ಮಾಡಬೇಕೆಂದು ಬರುತ್ತಾರೆ. ಮತ್ತೆ ನೀರಿನಲ್ಲಿ ಪತ್ರಗಳು ಹಾಳಾಗಬಾರದು ಅಂತ ವಾಟರ್ ಪ್ರೂಫ್ ಗಾರ್ಡ್ ಅನ್ನ ಉಪಯೋಗಿಸಲಾಗುತ್ತದೆ. ಮತ್ತೆ ವಾಟರ್ ಡ್ರೈವಿಂಗ್ ಸೂಟ್ ಅನ್ನ ಹಾಕಿಕೊಂಡು ಆ ಪತ್ರವನ್ನ ಪೋಸ್ಟ್ ಬಾಕ್ಸ್ ಹಾಕುವುದಕ್ಕೆ ನೀರಿನಲ್ಲಿ ಜಿಗಿದಾಗ ಪ್ರವಾಸಿಗರಿಗೆ ರೋಮಾಂಚನ ಅನುಭವವಾಗುತ್ತದೆ.

 

 

ಇದುವರೆಗೆ ಸುಮಾರು 30 ಸಾವಿರಕ್ಕೂ ಹೆಚ್ಚು ಪತ್ರಗಳನ್ನ ಬರೆದು ಈವೊಂದು ಪೋಸ್ಟ್ ಬಾಕ್ಸ್ ಗೆ ಹಾಕಲಾಗಿದೆ. ಮತ್ತೆ ಯಾವ ಅಡ್ರೆಸ್ಸಿಗೆ ಅವರು ಪೋಸ್ಟ್ ಅನ್ನ ಬರೆದು ಹಾಕಿರುತ್ತಾರೋ ಅದೇ ಅಡ್ರೆಸ್ಸಿಗೆ ಅದನ್ನು ತಲುಪಿಸುವ ಕೆಲಸವನ್ನ ಮಾಡಲಾಗುತ್ತದೆ. ಮತ್ತೆ ಅದು ನೀರಿನಲ್ಲಿರುವ ಕಾರಣ ಪ್ರತಿ ಆರು ತಿಂಗಳಿಗೊಮ್ಮೆ ಆ ಪೋಸ್ಟ್ ಬಾಕ್ಸ್ ಅನ್ನ ರೀ ಪೆಂಟ್ ಮಾಡಲಾಗುತ್ತೆ. ಒಂದು ವರ್ಷಕ್ಕೊಮ್ಮೆ ಆ ಒಂದು ಡಬ್ಬವನ್ನ ಬದಲಾಯಿಸಲಾಗುತ್ತದೆ. 2002ನೇ ಇಸವಿಯಲ್ಲಿ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ಇದನ್ನ ಗುರುತಿಸಿ ತನ್ನ ಪಟ್ಟಿಗೆ ಸೇರಿಸಿಕೊಂಡಿದೆ. ಪ್ರಪಂಚದ ಯಾವುದೋ ಮೂಲೆಯಲ್ಲಿದ್ದ ಒಂದು ಚಿಕ್ಕ ಹಳ್ಳಿ ಇವತ್ತು ಇಡೀ ಪ್ರಪಂಚವೇ ಅದನ್ನ ಗುರುತಿಸಿದೆ ಅಂದರೆ ಅದಕ್ಕೆ ಕಾರಣ ಆ ಪೋಸ್ಟ್ ಮಾಸ್ಟರ್ ನ ಹೊಸ ಆಲೋಚನೆ.

– ಸುಷ್ಮಿತಾ

Advertisement
Share this on...