ಮಸೀದಿಗಳನ್ನು ಮುಚ್ಚುವುದಕ್ಕೆ ಬೆಂಬಲ ವ್ಯಕ್ತಪಡಿಸಿದ ಮುಸ್ಲಿಂ ಸ್ಕ್ರಿಪ್ಟ್ ರೈಟರ್

in News 44 views

ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿರುವ ಕೊರೊನಾ ವೈರಸ್ ವಿರುದ್ಧ ಹೋರಾಡಲು ಜನರು ವೈದ್ಯರನ್ನು, ಸರ್ಕಾರವನ್ನು, ಸಾಮಾಜಿಕ ಸಂಘಟನೆಗಳನ್ನು ಬೆಂಬಲಿಸುತ್ತಿದ್ದಾರೆ. ಇತ್ತ ಕಡೆ ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ಈಚೆಗೆ ನಡೆದ ತಬ್ಲಿಗ್ ಸಭೆಯಲ್ಲಿ ಅತಿ ಹೆಚ್ಚು ಜನರು ಭಾಗಿಯಾಗಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಕೆಲವು ಮಾಹಿತಿಯ ಪ್ರಕಾರ, ಈ ಸಭೆಯಲ್ಲಿ ಭಾಗವಹಿಸಿದವರಲ್ಲಿ ಮಲೇಷ್ಯಾ, ಇಂಡೊನೇಷ್ಯಾ, ಸೌದಿ ಅರೇಬಿಯಾ ಮತ್ತು ಕಿರ್ಗಿಸ್ತಾನ್ ಜನರು ಸೇರಿದ್ದಾರೆ.

Advertisement

 

Advertisement

Advertisement

 

Advertisement

ಇದರ ಬೆನ್ನಲ್ಲೇ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ತಾಹಿರ್ ಮಹಮೂದ್, “ಕೊರೊನಾ ಬಿಕ್ಕಟ್ಟು ಮುಗಿಯುವವರೆಗೂ ಎಲ್ಲಾ ಮಸೀದಿಗಳನ್ನು ಮುಚ್ಚಲು ಫತ್ವಾವನ್ನು ಮುಂದುವರಿಸಿ” ಎಂದು ದಾರುಲ್ ಉಲೂಮ್ ದಿಯೋಬಂದ್’ಗೆ ತಿಳಿಸಿದ್ದಾರೆ.

 

 

ಇದೀಗ ತಾಹಿರ್ ಹೇಳಿಕೆಯ ನಂತರ ಹಿಂದಿ ಸಿನಿಮಾ ಕ್ಷೇತ್ರದ ಹಿರಿಯ ಬರಹಗಾರ ಜಾವೇದ್ ಅಖ್ತರ್ ಅವರೂ ತಾಹಿರ್ ಹೇಳಿಕೆಯನ್ನು ಬೆಂಬಲಿಸಿ ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ “ಕೊರೊನಾ ಅವಧಿ ಮುಗಿಯುವವರೆಗೂ ಮಸೀದಿಗಳನ್ನು ಮುಚ್ಚಲು ದಾರುಲ್ ಉಲೂಮ್ ದಿಯೋಬಂದ್’ಗೆ ಫತ್ವಾ ಮುಂದುವರೆಸಿ ಎಂದು ತಾಹಿರ್ ಹೇಳಿದ್ದಾರೆ. ಅವರ ಹೇಳಿಕೆಯನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಕಾಬಾ ಮತ್ತು ಮದೀನಾ ಮಸೀದಿಗಳು ಮುಚ್ಚಿದರ, ಆಗ ಭಾರತದ ಮಸೀದಿಗಳನ್ನು ಏಕೆ ಮುಚ್ಚಬಾರದು? ” ಎಂದು ಪ್ರಶ್ನಿಸಿದ್ದಾರೆ.

 

 

ಜಾವೇದ್ ಅವರ ಟ್ವೀಟ್ ನಂತರ ಸಾರ್ವಜನಿಕರ ಪ್ರತಿಕ್ರಿಯೆಗಳು ಒಂದರ ನಂತರ ಒಂದರಂತೆ ಹೊರಬರುತ್ತಿವೆ. ಜಾವೇದ್ ಅವರ ಈ ಟ್ವೀಟ್ ಅನ್ನು ಅನೇಕ ಜನರು ಶ್ಲಾಘಿಸಿದ್ದಾರೆ. ಆದರೆ ಮತ್ತೊಂದೆಡೆ, ಕೆಲವರು ಅದನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆದಾರರು ಈ ಕುರಿತು ಹೀಗೆ ಬರೆದಿದ್ದಾರೆ – ‘ಮಸೀದಿಗಳನ್ನು ಮುಚ್ಚಲು ನಮಗೆ ಫತ್ವಾಗಳು ಏಕೆ ಬೇಕು?, ಇದಕ್ಕಾಗಿ ಭಾರತ ಸರ್ಕಾರ ಮಾಡಿದ ಮನವಿ ಮತ್ತು ಆದೇಶ ಸಾಕಾಗುವುದಿಲ್ಲವೇ? ಎಂದಿದ್ದಾರೆ. ಮತ್ತೋರ್ವ ಬಳಕೆದಾರರು ‘ಈ ವಿದ್ಯಾವಂತ ಸಮಾಜಕ್ಕೆ ಸರ್ಕಾರ ನೀಡಿದ ಸೂಚನೆಗಳು ಸಾಕಾಗುವುದಿಲ್ಲವೇ? ಎಂದು ಅನೇಕ ಜನರು ಕಾಮೆಂಟ್ ಮಾಡುವಲ್ಲಿ ನಿರತರಾಗಿದ್ದಾರೆ.

 

ಇತ್ತೆ ಕಡೆ ಕೊರೊನಾ ವೈರಸ್ ಕಾರಣದಿಂದಾಗಿ, ದೇಶಾದ್ಯಂತ ಲಾಕ್ ಡೌನ್ ಅವಧಿಯನ್ನು ಮೇ 3 ರವರೆಗೆ ವಿಸ್ತರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏಪ್ರಿಲ್ 20ರ ವರೆಗೆ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೆ ನಿರ್ಧರಿಸಲಾಗಿದೆ.

Advertisement
Share this on...