ಹುಲಿಯ ಹಾಲಿನ ಮೇವು ಚಿತ್ರದ ನಟಿ ಜಯ ಚಿತ್ರ ಈಗ ಹೇಗಿದ್ದಾರೆ ಗೊತ್ತಾ..?

in ಮನರಂಜನೆ/ಸಿನಿಮಾ 153 views

ಜಯಚಿತ್ರ 70-80 ರ ದಶಕದ ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಸಖ್ಖತ್ ಫೇಮಸ್ ಆಗಿದ್ದ ನಟಿ. ನಟಿ ಜಯಚಿತ್ರ ಸೆಪ್ಟೆಂಬರ್ 9,1957 ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ಇವರ ಇನ್ನೊಂದು ಹೆಸರು ಲಕ್ಷ್ಮಿ ರೋಹಿಣಿ ದೇವಿ. ಇವರು ಆರು ವರ್ಷವಿದ್ದಾಗಲೇ ಬಾಲನಟಿಯಾಗಿ ಭಕ್ತ ಪಟ್ಟಣ ಎಂಬ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ನಂತರ ಕೆ. ಎಸ್. ಗೋಪಾಲಕೃಷ್ಣನ್ ಅವರ ನಿರ್ದೇಶನದ ಕೊರತಿ ಮಗನ್ ಎಂಬ ತಮಿಳು ಚಿತ್ರದ ಮೂಲಕ ಮೊದಲ ಬಾರಿ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಡಾ. ರಾಜ್ ಕುಮಾರ್ ರವರ ‘ಹುಲಿಯ ಹಾಲಿನ ಮೇವು’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದರು ನಟಿ ಜಯಚಿತ್ರ. ನಂತರ ದ್ವಾರಕೀಶ್ ರವರ ‘ಕುಳ್ಳ-ಕುಳ್ಳಿ’ ಚಿತ್ರದಲ್ಲಿ ನಟಿಸಿದ್ದರು. ‘ಮನೆ-ಮನೆ ಕಥೆ’ ಚಿತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ನಾಯಕಿಯಾಗಿಯೂ ನಟಿಸಿದ್ದರು. ಅಪರಂಜಿ, ಸತ್ವಪರೀಕ್ಷೆ, ಪ್ರೇಮಲೋಕ, ರಣಧೀರ, ಲಾಕಪ್ ಡೆತ್, ವಿಜಯದಶಮಿ ಇನ್ನೂ ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿ ಜಯಚಿತ್ರ ನಟಿಸಿದ್ದಾರೆ.

Advertisement

Advertisement

2013 ರಲ್ಲಿ ನಟಿ ಜಯಚಿತ್ರರವರು ಕನ್ನಡದ ‘ಅಟ್ಟಹಾಸ’ ಚಿತ್ರದಲ್ಲಿ ಜಯಲಲಿತಾ ಪಾತ್ರದಲ್ಲಿ ಅಭಿನಯಿಸಿದ್ದರು. ಕನ್ನಡದಲ್ಲಿ ಜಯಚಿತ್ರ ನಾಯಕಿಯಾಗಿ, ಪೋಷಕ ನಟಿಯಾಗಿ ಸುಮಾರು ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1983 ರಲ್ಲಿ ಕೈಗಾರಿಕೋದ್ಯಮಿಯಾದ ಗಣೇಶ್ ಎಂಬುವರನ್ನು ನಟಿ ಜಯಚಿತ್ರ ಮದುವೆಯಾದರು. ಜಯಚಿತ್ರ-ಗಣೇಶ್ ದಂಪತಿಗೆ ಅಮರೇಶ್ ಎಂಬ ಒಬ್ಬ ಮಗನಿದ್ದಾನೆ. ಇವರು ಕೂಡ ನಟ ಹಾಗೂ ಸಂಗೀತ ನಿರ್ದೇಶಕರಾಗಿ, ಕಂಪೋಜ಼ರ್ ಆಗಿ, ಗಾಯಕರಾಗಿ ತಮಿಳು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಅಮರೇಶ್. ನಟಿ ಜಯಚಿತ್ರರವರು ಕೇವಲ ಸಿನಿಮಾ ಮಾತ್ರವಲ್ಲದೆ ಕೆಲವು ತಮಿಳಿನ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.

Advertisement


ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಸೇರಿದಂತೆ ಸುಮಾರು 130 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ಹಾಗೂ ಪೋಷಕ ನಟಿಯಾಗಿ ನಟಿ ಜಯಚಿತ್ರ ನಟಿಸಿದ್ದಾರೆ. ಜಯಚಿತ್ರರವರು ಕೇವಲ ನಟಿ ಮಾತ್ರವಲ್ಲದೆ ನಿರ್ದೇಶಕಿಯಾಗಿ ಹಾಗೂ ನಿರ್ಮಾಪಕಿಯಾಗಿಯೂ ಸಹ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಟಿ ಜಯಚಿತ್ರರಿಗೆ ಹಲವಾರು ಪ್ರಶಸ್ತಿಗಳು ಪುರಸ್ಕಾರಗಳು ಸಹ ದೊರೆತಿವೆ. 62 ವರ್ಷದ ಜಯಚಿತ್ರರವರು ಇಂದಿಗೂ ಸಹ ಸಿನಿಮಾಗಳಲ್ಲಿ ನಟಿಸುತ್ತ ಚಿತ್ರರಂಗದಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ.

Advertisement

– ಸುಷ್ಮಿತಾ

Advertisement
Share this on...