ನಟಿ ಜಯಂತಿ ಅವರ ಮೊಮ್ಮಗ ಕೂಡ ದೊಡ್ಡ ಸ್ಟಾರ್ ನಟ ಎಂದು ನಿಮಗೆ ಗೊತ್ತಾ…?

in ಸಿನಿಮಾ 159 views

ಅಭಿನಯ ಶಾರದೆ ನಟಿ ಜಯಂತಿ ಕನ್ನಡ ಚಿತ್ರರಂಗವನ್ನು ಆಳಿದ ಕೆಲವೇ ಕೆಲವು ನಟಿಯರಲ್ಲಿ ಇವರು ಕೂಡ ಒಬ್ಬರು. ಇವರ ಕ್ರೇಜ಼್ ಹೇಗಿತ್ತು ಅಂದರೆ ಹಲವಾರು ಚಿತ್ರಗಳಲ್ಲಿ ನಟರನ್ನೇ ಡಾಮಿನೇಟ್ ಮಾಡುತ್ತಿದ್ದರು ಈ ನಟಿ. ಅದಕ್ಕೆ ಕಾರಣ ಅವರ ನಟನೆ ಹಾಗೂ ಅವರ ಲಕ್ಷಾಂತರ ಅಭಿಮಾನಿಗಳು. ಆದರೆ ಹೆಚ್ಚು ಜನಕ್ಕೆ ನಟಿ ಜಯಂತಿ ಅವರ ಗಂಡ ಯಾರು ಎಂದು ಗೊತ್ತಿಲ್ಲ…! ನಟಿ ಜಯಂತಿಯವರ ಗಂಡ ಯಾರು ಗೊತ್ತಾ…? ಅವರು ಕೂಡ ಪ್ರಸಿದ್ಧ ನಟ ಹಾಗೂ ನಿರ್ದೇಶಕರಾಗಿದ್ದರು..!1945 ರಲ್ಲಿ ಬಳ್ಳಾರಿಯಲ್ಲಿ ನಟಿ ಜಯಂತಿಯವರು ಜನಿಸಿದರು. ಇವರ ಮೊದಲ ಹೆಸರು ಕಮಲಕುಮಾರಿ. ತಮ್ಮ ಬಾಲ್ಯದಲ್ಲಿ ತುಂಬಾ ಕಷ್ಟದ ದಿನಗಳನ್ನು ನೋಡಿದ್ದರು ನಟಿ ಜಯಂತಿ. ಅದಕ್ಕೆ ಕಾರಣ ಜಯಂತಿಯವರು ಚಿಕ್ಕವರಿದ್ದಾಗಲೇ ಅವರ ತಂದೆ-ತಾಯಿ ಇಬ್ಬರು ಬೇರೆಯಾದರು. ಆಗ ಜಯಂತಿ ಅವರನ್ನು ಕರೆದುಕೊಂಡು ಮದ್ರಾಸಿಗೆ ಹೋದ ಅವರ ತಾಯಿ ಅಲ್ಲಿ ಕ್ಲಾಸಿಕಲ್ ಡ್ಯಾನ್ಸ್ ಸ್ಕೂಲ್ ಗೆ ಸೇರಿಸಿದರು. ನಂತರ ನಟಿ ಜಯಂತಿಯವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

Advertisement

 

Advertisement


ನಟಿ ಜಯಂತಿ ಅವರ ಗಂಡನ ಹೆಸರು ಪಿಕೆಟಿ ಶಿವರಾಂ. ಇವರು ನಟ ಹಾಗೂ ನಿರ್ದೇಶಕರು. ಕನ್ನಡದಲ್ಲಿ 7 ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇಲ್ಲೊಂದು ಟ್ವಿಸ್ಟ್ ಏನೆಂದರೆ ಜಯಂತಿ ಅವರನ್ನು ಮದುವೆಯಾಗುವ ಮುಂಚೆ ಪಿಕೆಟಿ ಶಿವರಾಂ ರವರಿಗೆ ಆಗಾಗಲೇ ಒಂದು ಮದುವೆಯಾಗಿದ್ದು ಎಂಟು ಜನ ಮಕ್ಕಳಿದ್ದರು. ಪಿಕೆಟಿ ಶಿವರಾಂ ಅವರ ಮೊದಲ ಹೆಂಡತಿಯ ಹೆಸರು ಪ್ರಭಾವತಿ. ಇವರಿಗೆ ನಾಲ್ಕು ಜನ ಗಂಡು ಮಕ್ಕಳು ಹಾಗೂ ನಾಲ್ಕು ಜನ ಹೆಣ್ಣು ಮಕ್ಕಳಿದ್ದರು. ಅವರಲ್ಲಿ ಒಬ್ಬರಾದ ಶಾಂತಿ ಎನ್ನುವವರನ್ನು ದಕ್ಷಿಣ ಭಾರತದ ದೊಡ್ಡ ನಿರ್ದೇಶಕರಾದ ತ್ಯಾಗರಾಜ್ ಅವರಿಗೆ ಕೊಟ್ಟು ಮದುವೆ ಮಾಡಿದ್ದರು. ತ್ಯಾಗ್ ರಾಜ್ ಹಾಗೂ ಶಾಂತಿಯವರಿಗೆ ಹುಟ್ಟಿದ ಮಗ ನಟ ಪ್ರಶಾಂತ್.

Advertisement

 

Advertisement

‘ಜೀನ್ಸ್’ ಚಿತ್ರದ ನಟ ಒಂದು ಕಾಲದಲ್ಲಿ ಸತತ ಹಿಟ್ ಚಿತ್ರಗಳ ಮೂಲಕ ದಕ್ಷಿಣ ಭಾರತದಲ್ಲಿ ಮಿಂಚಿದರು. ಸಂಬಂಧದಲ್ಲಿ ಜಯಂತಿ ಅವರಿಗೆ ನಟ ಪ್ರಶಾಂತ್ ಮೊಮ್ಮಗನಾಗುತ್ತಾರೆ. ಚಿತ್ರರಂಗದ ಹಿನ್ನೆಲೆಯಿಲ್ಲದೆ ದೊಡ್ಡ ನಟಿಯಾಗಿ ಬೆಳೆದ ನಟಿ ಜಯಂತಿ ಅವರು ಇಂದು ಕನ್ನಡ, ತೆಲುಗು, ತಮಿಳಿನಲ್ಲಿ ದೊಡ್ಡ ಬಂಧು ಬಳಗವನ್ನು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದಕ್ಕಿಂತ ದೊಡ್ಡ ಸಾಧನೆ ಬೇರೊಂದಿಲ್ಲ ಅಲ್ಲವೇ..

– ಸುಷ್ಮಿತಾ

Advertisement
Share this on...