ಬಾಹ್ಯ ಸೌಂದರ್ಯಕ್ಕೆ ಬೆಲೆಕೊಟ್ಟು ದೂರವಾಗುವ ಪ್ರೇಮಿಗಳು ಈ ಲವ್ ಸ್ಟೋರಿ ಓದಲೇಬೇಕು..!

in Uncategorized/ಕನ್ನಡ ಮಾಹಿತಿ 161 views

ಪ್ರೇಮ ಪಕ್ಷಿಗಳಿಗೆ ಅವರ ಕಣ್ಣ ಮುಂದೆ ಯಾವ ಜಾತಿಯೂ ಕಾಣುವುದಿಲ್ಲ.. ಯಾವ ಧರ್ಮವೂ ಕಾಣುವುದಿಲ್ಲ, ಹೆತ್ತ ತಂದೆ ತಾಯಿಯಂತು ಲೆಕ್ಕಕ್ಕೆ ಇರುವುದಿಲ್ಲ. ಅಷ್ಟೇ ಯಾಕೆ ಯಾವ ದೇಶ,ರಾಜ್ಯವೂ ಕಾಣುವುದಿಲ್ಲ .ಅವರಿಗೆ ಮುಂದೇ ಹೇಗೆ ಬದುಕಬೇಕು ಎಂಬುದರ ಯೋಚನೆ ಇಲ್ಲದೆ, ಮದುವೆಯಾದರೇ ಸಾಕು ಎಂದು ಹುಚ್ಚು ಕನಸನ್ನು ಇಟ್ಟು ಕೊಂಡು ಪ್ರಪಂಚವನ್ನೇ ಎದುರು ಹಾಕಿಕೊಳ್ಳುತ್ತಾರೆ. ಅಂತೆಯೇ ಪ್ರೀತಿ ಎಂಬುದು ಒಂದು ಸುಮಧುರ ಅನುಭವ, ಪ್ರತಿಯೊಬ್ಬರ ಜೀವನದಲ್ಲಿ ಅನುಭವಿಸಬೇಕಾದ ಒಂದು ಫೀಲಿಂಗ್. ಮನುಷ್ಯನ ಜೀವನದಲ್ಲಿ ಒಂದು ಅವಿಭಾಜ್ಯ ಅಂಶ ಎಂದರೆ ಈ ಪ್ರೀತಿ ಎಂಬ ಫೀಲಿಂಗ್. ತಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರೀತಿ ಎಂಬುದು ಯಾವಾಗ, ಯಾರಿಗೆ, ಯಾವ ಜಾಗದಲ್ಲಿ, ಯಾವ ಕ್ಷಣದಲ್ಲಿ ಹೇಗೆ ಹುಟ್ಟುತ್ತದೆ ಎಂಬುದು ಹೇಳಲು ಬಹಳ ಕಷ್ಟಸಾಧ್ಯ. ಯಾವ ರೂಪದಲ್ಲಿ ಯಾರ ಮೇಲಾದರೂ ಕೂಡ ಆಗಬಹುದು ಉದಾಹರಣೆಗೆ ಬಡವ ಶ್ರೀಮಂತ ,ಸುಂದರಿ ಕುರೂಪಿ , ಮುಸಲ್ಮಾನ ಲಿಂಗಾಯಿತ ಹೀಗೆ ಯಾವ ಧರ್ಮಗಳ ಮೇಲೆ ಬೇಕಾದರೂ ಆಗಬಹುದು.. ಆದರೆ ಪ್ರೀತಿ ಮಾಡುವುದು ದೊಡ್ಡ ವಿಚಾರವಲ್ಲ. ಪ್ರೀತಿ ಮಾಡಿ ವಿವಾಹವಾಗಿ ಬದುಕಿ ಬಾಳಿ ತೋರಿಸಿದರೆ ನಮ್ಮ ಪ್ರೀತಿ ಮತ್ತು ಜೀವನಕ್ಕೆ ಒಂದು ಅರ್ಥ ಸಿಗುತ್ತದೆ ..

Advertisement

 

Advertisement

Advertisement

ಹಾಗೆಯೇ ಹೃದಯ ಸೌಂದರ್ಯ ನೋಡಿ ಹುಟ್ಟುವುದು ಪ್ರೀತಿ, ದೇಹ ಸೌಂದರ್ಯ ನೋಡಿ ಹುಟ್ಟುವುದು ಆಕರ್ಷಣೆ. ಪ್ರೀತಿ ಶಾಶ್ವತವಾಗಿರುತ್ತದೆ ಆಕರ್ಷಣೆ ಕ್ಷಣಿಕವಾಗಿರುತ್ತದೆ. ಈಗ ನಾವು ಹೇಳುತ್ತಿರುವ ಕಥೆಯಲ್ಲಿ ಕಾಲೇಜಿನಲ್ಲಿ ಪ್ರೀತಿಸಿದ ಯುವತಿ ಒಂದು ರಸ್ತೆ ಅಪಘಾತದಲ್ಲಿ ತನ್ನ ಮುಖವನ್ನೇ ಕಳೆದು ಕೊಳ್ಳುತ್ತಾಳೆ. ಆಕೆಯ ಮುಖ ವಿಕಾರವಾಗಿ ಬಿಡುತ್ತದೆ. ಯುವತಿ ಹೀಗೆ ಆಗಿದ್ದರು ಆಕೆಯ ಅಂತರಂಗದ ಸೌಂದರ್ಯ ಮೆಚ್ಚಿ ಯುವಕ ವಿವಾಹವಾಗುತ್ತಾನೆ. ಜಯಪ್ರಕಾಶ್ ಮತ್ತು ಸುನೀತಾ ಎಂಬ ಜೋಡಿಯ ಜೀವನದಲ್ಲಿ ನಡೆದ ನಿಜ ಕತೆ ಇದಾಗಿದ್ದು, ಸುದೀರ್ಘವಾದ ಪ್ರೀತಿ ಮತ್ತು ದಾಂಪತ್ಯ ಜೀವನದ ಸಂಗತಿಯನ್ನು ಜಯ ಪ್ರಕಾಶ್ ಎಂಬುವವರು ಸಾಮಾಜಿಕ ಜಾಲತಾಣವಾದ ಫೇಸ್​ಬುಕ್​  ಖಾತೆಯಲ್ಲಿ ಎಳೆ ಎಳೆಯಾಗಿ ಬರೆದುಕೊಂಡಿದ್ದಾರೆ..

Advertisement

 

“ನನಗೆ ಆಗ 17ರ ಹರೆಯ. ನನ್ನ ಕ್ಲಾಸ್ ರೂಂ ಮುಂದೆ ಹಾದು ಹೋದ ಆಕೆಯ ಸೌಂದರ್ಯಕ್ಕೆ ಸೋತುಬಿಟ್ಟೆ. ಇಬ್ಬರು ಸ್ನೇಹಿತರಾಗಿದ್ದೆವು. ಆಕೆ ಇನ್ನೊಬ್ಬರ ಜತೆ ಮಾತನಾಡಿದ್ದಕ್ಕೆ ನನಗೆ ಕೋಪಬಂದು ಮಾತು ನಿಲ್ಲಿಸಿಬಿಟ್ಟೆ. ಪರೀಕ್ಷೆ ಮುಗಿದ ನಂತರ ನನ್ನ ಆಟೋಗ್ರಾಫ್​ಬುಕ್​ನಲ್ಲಿ ಆಕೆ ‘ನನಗೆ ನಿಮ್ಮ ಜತೆ ಮಾತನಾಡಬೇಕು. ಆದರೆ ಅದು ಸಾಧ್ಯವಾಗಲೇ ಇಲ್ಲ’ ಎಂದು ಬರೆದಿದ್ದಳು. ಬಳಿಕ ಆಕೆ ಬೆಂಗಳೂರಿಗೆ ಹೋದಳು. ಆಮೇಲೆ ನಮ್ಮ ಬದುಕು ರೂಪಿಸಿಕೊಳ್ಳುವ ಕಾರ್ಯದಲ್ಲಿ ಬಿಜಿಯಾಗಿ ಬಿಟ್ಟೆವು. 2011ರ ನವೆಂಬರ್​ನಲ್ಲಿ ಸ್ನೇಹಿತ ಕರೆ ಮಾಡಿ ಸುನೀತಾಳಿಗೆ ಅಪಘಾತವಾಗಿದೆ ಎಂದು ತಿಳಿಸಿದ. ಆಕೆಯನ್ನು ಕೊಯಮತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಭೇಟಿಯಾಗಲು ಹೋದಾಗ ಸುನೀತಾಳ ತಲೆಯಲ್ಲಿ ಕೂದಲಿರಲಿಲ್ಲ, ಮುಖ ವಿಕಾರವಾಗಿತ್ತು. ಮೂಗು, ಬಾಯಿ, ಹಲ್ಲು ಯಾವುದೂ ಇರಲಿಲ್ಲ. 90ರ ಅಜ್ಜಿಯಂತೆ ಕಾಣುತ್ತಿದ್ದಳು. ಆಕೆಯ ಸ್ಥಿತಿಯನ್ನು ನೋಡಿ ನಾನು ಕುಸಿದುಹೋದೆ.

 

ನಾನು ಆಕೆಯನ್ನು ಪ್ರೀತಿಸುತ್ತಿದ್ದೇನೆ ಎಂಬುದು ಆ ಕ್ಷಣದಲ್ಲಿ ನನ್ನ ಅರಿವಿಗೆ ಬಂತು. ಮರುದಿನ ರಾತ್ರಿ ನಾನು ‘ನಿನ್ನನ್ನು ನೋಡಿಕೊಳ್ಳಲು ಯೋಗ್ಯವಾದ ವ್ಯಕ್ತಿ ನಾನೊಬ್ಬನೇ. ಐ ಲವ್ ಯೂ, ಮದುವೆಯಾಗೋಣ’ ಎಂದು ಸಂದೇಶ ರವಾನಿಸಿದೆ. ಆಕೆ ಕರೆ ಮಾಡಿದಾಗ ಪ್ರೇಮ ನಿವೇದನೆ ಮಾಡಿದೆ. ಆಕೆ ನಕ್ಕಳು, ಆದರೆ ನೋ ಎಂದು ಹೇಳಲಿಲ್ಲ.ಸುನೀತಾಳ ಬದುಕಿನ ಏರಿಳಿತದಲ್ಲಿ ಜತೆಯಾದೆ. ಆಕೆಯ ಸಾಂಗತ್ಯದಿಂದ ನನ್ನ ಜೀವನ ಕೂಡ ಬದಲಾಗುತ್ತ ಹೋಯಿತು. 2012ರಿಂದ ಆಕೆಗೆ ಪ್ರತಿ ಸರ್ಜರಿ ನಡೆದಾಗಲೂ ಜತೆಯಲ್ಲಿ ನಾನಿದ್ದೆ. ಸರ್ಜರಿ ಮುಗಿದು ಐಸಿಯುನಲ್ಲಿ ಮಲಗಿ ಆಕೆ ಕಣ್ಣು ಬಿಟ್ಟು ನಗುವುದನ್ನು ನೋಡಲು ನಾನಲ್ಲಿರುತ್ತಿದ್ದೆ. ಆಕೆಯನ್ನು ನಾನು ಬೆಂಗಳೂರಿಗೆ ಕರೆತಂದೆ. ಇದೆಲ್ಲ ಮಾಡುವುದು ಕಷ್ಟವಾಗಿದ್ದರೂ ನನ್ನ ಆತ್ಮವಿಶ್ವಾಸ ಹೆಚ್ಚುತ್ತಲೇ ಹೋಯಿತು.ನಾನು ಸುನೀತಾಳನ್ನು ಮದುವೆ ಆಗುತ್ತೇನೆ ಎಂದಾಗ ತಂದೆ-ತಾಯಿ ಗಾಬರಿಯಾದರು. ನನ್ನಪ್ಪ ನನ್ನ ಬೆಂಬಲಕ್ಕೆ ನಿಂತರು. ಆಮೇಲೆ ಇಬ್ಬರೂ ಒಪ್ಪಿಕೊಂಡರು. 2014ರಲ್ಲಿ ಸುನೀತಾಳನ್ನು ಮದುವೆಯಾದೆ. ಹಲವರು ನನ್ನನ್ನು ಪ್ರಶ್ನಿಸಿದರು. ಆಕೆಯನ್ನು ಮದುವೆಯಾಗಬೇಡ ಎಂದು ಒತ್ತಾಯ ಮಾಡಿದವರೂ ಇದ್ದರು. ಆಕೆಗೆ ಮುಖವಿಲ್ಲ, ಮದುವೆಯಾದ್ರೂ ಮಗು ಮಾಡಿಕೊಳ್ಳಬೇಡಿ ಎಂದು ಹೇಳಿದವರೂ ಇದ್ದಾರೆ.


ಆಕೆಯನ್ನು ಮದುವೆಯಾಗುವ ಮೂಲಕ ನಾನೇನೋ ಸಾಧನೆ ಮಾಡಿದೆ ಎಂದು ಹೇಳುವವರಿಗೂ ಕಡಿಮೆಯಿಲ್ಲ. ಆದರೆ, ಸುನೀತಾಳ ಮದುವೆಯಾಗಿ ಖುಷಿಯಾಗಿಯೇ ಇದ್ದೇನೆ ಎಂದು ಜಯಪ್ರಕಾಶ್ ಫೇಸ್​ಬುಕ್​ನಲ್ಲಿ ಪೋಸ್ಟ್ ಹಾಕಿದ್ದಾರೆ. ಇದೇ ಅಲ್ಲವೇ ನಿಜವಾದ ಪ್ರೀತಿ ಎಂದರೆ…

Advertisement
Share this on...