ನಾವೇನು ಗ್ಲಾಮರ್ ಗೊಂಬೆಗಳಾ? ಇಲ್ಲಾ ಸೈಡ್ ಆಕ್ಟರಾ? ಜಾನ್ವಿ ಕಪೂರ್

in ಸಿನಿಮಾ 54 views

ಬಾಲಿವುಡ್ ಚಿತ್ರರಂಗದಲ್ಲಿ ಹೆಚ್ಚು ಸುದ್ದಿಯಲ್ಲಿರುವ ಹಾಗೂ ಟ್ರೆಂಡಿ ನಾಯಕಿ ಎಂದು ಕರೆಸಿಕೊಳ್ಳುವ ನಾಯಕಿ ಎಂದರೆ ನಟಿ ಜಾನ್ವಿ ಕಪೂರ್. ಸಿನಿಮಾ ವಿಚಾರಗಳಿಗಿಂತ ಹೆಚ್ಚಾಗಿ ಫೋಟೋ ಶೂಟ್ ಮೂಲಕವೇ ಸುದ್ದಿಯಲ್ಲಿರುವ ಜಾನ್ವಿ ಕಪೂರ್ ಅವರು ಸಾಕಷ್ಟು ಸಿನಿಮಾಗಳಲ್ಲಿ ಬ್ಯೂಸಿ ಯಾಗಿದ್ದಾರೆ. ಇನ್ನು ಇತ್ತೀಚೆಗೆ ದಕ್ಷಿಣ ಭಾರತದ ಚಿತ್ರರಂಗಕ್ಕೆ ಕೂಡ ಈ ನಟಿ ಪಾದಾರ್ಪಣೆ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿತ್ತು.

Advertisement

 

Advertisement

Advertisement

 

Advertisement

ಹೌದು ಅರ್ಜುನ್ ರೆಡ್ಡಿ ಖ್ಯಾತಿಯ ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ ಎನ್ನುವ ಮಾತುಗಳು ಜೋರಾಗಿ ಹರಿದಾಡುತ್ತಿತ್ತು . ಆದರೆ ಇದೀಗ ಮಾತನಾಡಿರುವ ಜಾನ್ವಿ ಕಪೂರ್, ನಾನು ಟಾಲಿವುಡ್ ಕಡೆ ಎಂದಿಗೂ ಮುಖ ಮಾಡುವುದಿಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳಿಕೆಯನ್ನು ನೀಡಿದ್ದಾರೆ. ಹೌದು ಬಾಲಿವುಡ್ ನ ಖ್ಯಾತ ನಿರ್ಮಾಪಕರೊಬ್ಬರು ಶ್ರೀದೇವಿ ಮಗಳಾದ ಜಾನ್ವಿ ಅವರನ್ನು ಸಂಪರ್ಕಿಸಿದಾಗ ಸಿನಿಮಾ ಆಫರ್ ಅನ್ನು ಮುಲಾಜಿಲ್ಲದೆ ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

 

 

ಇದಕ್ಕೆ ಕಾರಣವೇನೆಂದರೆ ತೆಲುಗು ಚಿತ್ರರಂಗದಲ್ಲಿ ನಾಯಕಿಯರಿಗಿಂತ ನಿರ್ದೇಶಕ ಮತ್ತು ನಾಯಕ ನಟರಿಗೆ ಪ್ರಾಬಲ್ಯತೆ ಹೆಚ್ಚಾಗಿರುತ್ತದೆ ನಾಯಕಿಯ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುವುದಿಲ್ಲ ನಾಯಕಿಯರು ಗ್ಲಾಮರ್ ಬೊಂಬೆಗಳ ಹಾಗೆ ಅಷ್ಟೇ ಇರಬೇಕು . ನಮ್ಮನ್ನು ಸೈಡ್ ಆಕ್ಟರ್ ಆಗಿ ತೋರಿಸುತ್ತಾರೆ ಹಾಗಾಗಿ ಟಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಳ್ಳಲು ನನಗೆ ಇಷ್ಟವಿಲ್ಲ ಎಂದು ಜಾನ್ವಿ ನಿರ್ಮಾಪಕರಿಗೆ ಹೇಳಿದ್ದಾರಂತೆ .

 

 

ಈ ಜೂನಿಯರ್ ಶ್ರೀದೇವಿ ನೀಡಿರುವ ಹೇಳಿಕೆಗೆ ಕೇವಲ ನಿರ್ಮಾಪಕ ಮಾತ್ರವಲ್ಲ ಇಡೀ ಟಾಲಿವುಡ್ ಚಿತ್ರರಂಗವೇ ಶಾಕ್ ಆಗಿದೆ.ತಮಗೆ ತಿಳಿದಿರುವ ಹಾಗೆ ಜಾಹ್ನವಿ ಅವರ ತಾಯಿ ಶ್ರೀದೇವಿ ಅವರು ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ್ದರು. ಅಲ್ಲದೇ ತಮ್ಮ ಮಗಳನ್ನು ತೆಲುಗು ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿಸಬೇಕು ಎಂಬುದು ಅವರ ಮಹದಾಸೆಯಾಗಿತ್ತು. ಆದರೆ ಇವರು ನೀಡಿರುವ ಹೇಳಿಕೆ ಟಾಲಿವುಡ್ ಅಂಕಣದಲ್ಲಿ ಚರ್ಚೆಗೆ ಕಾರಣವಾಗಿದೆ.

 

 

ತೆಲುಗು ಚಿತ್ರರಂಗದಲ್ಲಿ ನಾಯಕಿಯರಿಗೆ ಹೆಚ್ಚು ಪ್ರಾಮುಖ್ಯತೆ ಇರುತ್ತೆ. ಅಲ್ಲದೆ ಹೆಚ್ಚು ಕಡಿಮೆ ನಾಯಕರು ಪಡೆಯುವ ಸಂಭಾವನೆಯನ್ನೇ ನಾಯಕಿಯರು ಕೂಡ ಪಡೆಯುತ್ತಾರೆ. ಆದರೆ ಜಾನ್ವಿಗೆ ಟಾಲಿವುಡ್ ನಲ್ಲಿ ಅಭಿನಯಿಸಲು ಇಷ್ಟವಿಲ್ಲದ ಕಾರಣ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ

Advertisement
Share this on...