ಜಿಮ್ ಕ್ಯಾರಿ ಸಿನಿಮಾ ಜಗತ್ತಿನ ಕಾಮಿಡಿ ಕಿಂಗ್ ರಿಯಲ್ ಲೈಫ್ ಹೇಗಿತ್ತು ಗೊತ್ತಾ…?

in ಮನರಂಜನೆ 48 views

ಜಿಮ್ ಕ್ಯಾರಿ ಇವರ ಹೆಸರನ್ನು ಬಹಳಷ್ಟು ಜನ ಕೇಳಿರುತ್ತೀರಾ. ಹಾಲಿವುಡ್ ನ ಪ್ರಸಿದ್ಧ ನಟ ಹಾಗೂ ಅತ್ಯಂತ ಶ್ರೀಮಂತ ನಟರಲ್ಲಿ ಇವರು ಒಬ್ಬರು. ಬಹುತೇಕರಲ್ಲಿ ನಾವು ಬಡವರು ನಮಗೆ ಏನು ಸಾಧನೆ ಮಾಡುವುದಕ್ಕೆ ಆಗುವುದಿಲ್ಲ ನಮ್ಮ ಬಳಿ ಹಣವಿಲ್ಲ ಅಂದರೆ ಈ ಜಗತ್ತಿನಲ್ಲಿ ಏನು ಮಾಡಲು ಆಗುವುದಿಲ್ಲ ಎಂಬ ಒಂದು ಮನಸ್ಥಿತಿ ಇದೆ. ಈತನ ಬಗ್ಗೆ ತಿಳಿದುಕೊಂಡರೆ ಆ ರೀತಿಯ ನಿಮ್ಮ ಮನಸ್ಥಿತಿ ಬದಲಾಗಬಹುದು.

Advertisement

 

Advertisement

Advertisement

 

Advertisement

ಜಿಮ್ ಕ್ಯಾರಿ ಹುಟ್ಟಿದ್ದು ಜನವರಿ 17, 1962ರಲ್ಲಿ. ಅಪ್ಪ-ಅಮ್ಮ, ಅಣ್ಣ-ತಮ್ಮ ಇವರೆಲ್ಲರನ್ನು ಹೊಂದಿರುವ ಒಂದು ಸಣ್ಣ ಬಡಕುಟುಂಬ ಇವರದ್ದು. 7 ಜನ್ಮಕ್ಕೆ ಆಗುವಷ್ಟು ಬಡತನ ಇವರಿಗಿತ್ತು. ಅವರ ತಂದೆ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ತರುವ 2 ಡಾಲರ್ ನಲ್ಲಿ ಮನೆಮಂದಿಯೆಲ್ಲಾ ತಿನ್ನುವುದಾದರೂ ಹೇಗೆ? ಆದ್ದರಿಂದ ಜಿಮ್ ಕ್ಯಾರಿ ಸಹ ಶಾಲೆ ಮುಗಿದ ನಂತರ ಎಂಟು ಗಂಟೆಗಳ ಕಾಲ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ತಡರಾತ್ರಿ ಮನೆಗೆ ಬಂದು ಮಲಗುತ್ತಿದ್ದೆ ಹಾಗೂ ಬೆಳಗ್ಗೆ ಬೇಗನೆ ಎದ್ದುಳುತ್ತಿದಿದ್ದರಿಂದ ಮೇಷ್ಟ್ರು ಏನು ಪಾಠಮಾಡುತ್ತಿದ್ದರು ಅನ್ನುವುದು ಅವನಿಗೆ ಅರ್ಥವಾಗುತ್ತಿರಲಿಲ್ಲ, ಯಾಕೆಂದರೆ ಅವರ ಮೇಷ್ಟ್ರು ಪಾಠ ಮಾಡಬೇಕಾದರೆ ಆತ ನಿದ್ದೆ ಮಾಡುತ್ತಿದ್ದ. ಹೀಗಾಗಿ ಎಲ್ಲಾ ಪರೀಕ್ಷೆಗಳಲ್ಲಿ ಆತ ಫೇಲ್ ಆಗುತ್ತಿದ್ದ.

 

 

ಯಾಕೆ ಹೀಗಾಗುತ್ತಿದೆ ಎಂದು ತಿಳಿಯಲು ಆ ಹುಡುಗನನ್ನು ವೈದ್ಯರ ಬಳಿ ಕರೆದುಕೊಂಡು ಹೋಗುತ್ತಾರೆ ಅಲ್ಲಿ ಹೋದ ಬಳಿಕ ಜಿಮ್ ಕ್ಯಾರಿಗೆ ಡಿಸ್ ಲೈಕಿಯಾ ಎಂಬ ಒಂದು ಕಾಯಿಲೆ ಇದೆ ಎಂದು ತಿಳಿಯುತ್ತದೆ. ಈ ಖಾಯಿಲೆ ಇದ್ದವರಿಗೆ ಓದು ತಲೆಗೆ ಹತ್ತುವುದೇ ಇಲ್ಲ. ಆದರೆ ಬಾಕಿ ಎಲ್ಲಾ ವಿಷಯದಲ್ಲೂ ತುಂಬಾ ಚುರುಕ್ಕಾಗಿ ಇರುತ್ತಾರೆ. ಹಾಗೆಯೇ ಜಿಮ್ ಕ್ಯಾರಿ ಕೂಡ ತುಂಬಾ ಚುರುಕಾಗಿದ್ದ. ಶಾಲೆಯಿಂದ ಬಂದ ಕೂಡಲೇ ಕನ್ನಡಿ ಮುಂದೆ ನಿಂತು ಟೀಚರ್ ಹೇಗೆ ಮಾತನಾಡುತ್ತಾರೆ, ಸ್ನೇಹಿತರು ಹೇಗೆ ನಡೆದುಕೊಳ್ಳುತ್ತಾರೆ ಇದನ್ನೆಲ್ಲಾ ನಟನೆ ಮಾಡುತ್ತಿದ್ದ. ಇದರಿಂದ ಆತನಿಗೆ ಏನೋ ಒಂದು ರೀತಿ ಖುಷಿ. ಜಿಮ್ ಕ್ಯಾರಿಯ ಬಾಲ್ಯ ಕಾಯಿಲೆ ಮತ್ತು ಬಡತನ ಕಸಿದುಕೊಂಡಿತ್ತು. ತನ್ನ ಹದಿನಾರನೇ ವಯಸ್ಸಿನಲ್ಲಿ ಆತ ಓದಿಗೆ ಗುಡ್ ಬಾಯ್ ಹೇಳಿದ.

 

 

ಅವರ ಕುಟುಂಬದ ಬಗ್ಗೆ ಜನರು ಮಾಡುತ್ತಿದ್ದಂತ ಟೀಕೆಗಳು, ಕೂಹಕಗಳನ್ನು ಸಹಿಸಿಕೊಳ್ಳಲಾರದೆ ಒಂದು ದಿನ ಕಾರನ್ನು ಏರಿ ಕೆನಡಾಗೆ ಬರುತ್ತಾರೆ. ಇವರು ತುಂಬಾ ಬಡವರಾಗಿದ್ದರಿಂದ ಎಲ್ಲೂ ಮನೆ ಸಿಗುತ್ತಿರಲಿಲ್ಲ, ಸಿಕ್ಕಿದರು ಬಾಡಿಗೆ ಕೊಡುವುದಕ್ಕೆ ಇವರ ಬಳಿ ಹಣವಿಲ್ಲದ ಕಾರಣ ತಮ್ಮ ಹಳೆಯ ಹೋಗ್ಸ್ ವ್ಯಾಗನ್ ಕಾರಿನಲ್ಲೇ ಜಿಮ್ ಕ್ಯಾರಿಯ ಕುಟುಂಬ ಮೈದಾನವೊಂದರಲ್ಲಿ ಪಾರ್ಕ್ ಮಾಡಿ 8 ತಿಂಗಳುಗಳ ಕಾಲ ಕಾರಿನಲ್ಲೇ ವಾಸ ಮಾಡಿದ್ದರು. ತಮ್ಮ ಪ್ರಯತ್ನವನ್ನು ಬಿಡದ ಜಿಮ್ ಕ್ಯಾರಿ ಯುಕ್ ಯುಕ್ ಎಂಬ ಕಾಮಿಡಿ ಕ್ಲಬ್ ಗೆ ಸೇರಿಕೊಂಡು ತನ್ನ ಮೊದಲ ಪ್ರದರ್ಶನ ನೀಡಿದ. ಬೇರೆ ಬೇರೆ ಕ್ಲಬ್ ಗಳಲ್ಲಿ ಈತನ ಪ್ರತಿಭೆ ಗುರುತಿಸಿ ಕರೆಯುವುದಕ್ಕೆ ಶುರುಮಾಡಿದವು.

 

 

 

ಇನ್ನು ಕೆಲವರು ಹಣ ಕೊಡದೇ ಸತಾಯಿಸುತ್ತಿದ್ದರು. ತಾನು ಏನಾದರೂ ಸಾಧನೆ ಮಾಡೆ ಮಾಡುತ್ತೇನೆ ಎಂಬ ಆತ್ಮವಿಶ್ವಾಸ ಜಿಮ್ ಕ್ಯಾರಿಯದ್ದು. ತನ್ನ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಿ ಎತ್ತರದ ಪ್ರದೇಶದಲ್ಲಿ ನಿಂತು ಎಲ್ಲರೂ ನನ್ನ ಜೊತೆ ಕೆಲಸ ಮಾಡಬೇಕೆನ್ನುತ್ತಿದ್ದಾರೆ, ನಾನು ನಿಜವಾಗಿಯೂ ಒಬ್ಬ ಒಳ್ಳೆಯ ನಟ ಈ ರೀತಿ ತನಗೆ ತಾನೇ ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದ. ನಿಧಾನವಾಗಿ ಆಫರ್ ಗಳು ಬರಲು ಶುರುವಾಯಿತು. ಆದರೆ 1990ರ ವೇಳೆ ಜಿಮ್ ಕ್ಯಾರಿ ಜೀವನ ಮತ್ತೆ ಇಳಿಮುಖವಾಗುತ್ತ ಬಂತು. ತಾನು ಯಾವಾಗಲೂ ಹೋಗುವ ಜಾಗಕ್ಕೆ ಹೋಗಿ ಅಲ್ಲಿ ಕುಳಿತು ಚೆಕ್ ಅನ್ನ ಬರೆಯುತ್ತಾರೆ. ಈತನ ಬಳಿ ಹಣವೇ ಇರುವುದಿಲ್ಲ. ಈತ ಯಾರಿಗೆ ತಾನೇ ಚೆಕ್ ಬರಿತ್ತಾನೆ ಎಂಬ ಅನುಮಾನ ನಿಮಗೆ ಬರಬಹುದು.

 

 

ನಿಜ ಜಿಮ್ ಕ್ಯಾರಿ ಬಳಿ ಹಣವಿರಲಿಲ್ಲ. ಆದರೆ ಆತ್ಮವಿಶ್ವಾಸವಿತ್ತು. ತಾನು ಚೆಕ್ಕ್ ಅನ್ನು ಬರೆಯುತ್ತಿದ್ದಂತಹ ದಿನಾಂಕದಿಂದ ಐದು ವರ್ಷದ ಮುಂದಿನ ದಿನಾಂಕಕ್ಕೆ ತನಗೆ ತಾನೇ 10 ಮಿಲಿಯನ್ ಡಾಲರ್ ಚೆಕ್ ಅನ್ನ ಬರೆದುಕೊಂಡು ಇದು ಸಿನಿಮಾದಲ್ಲಿ ನಟಿಸುವುದಕ್ಕೆ ನನಗೆ ಸಿಕ್ಕ ಸಂಭಾವನೆ ಅಂತ 1995 ಎಂಬ ದಿನಾಂಕ ಬರೆದು ಜೇಬಿನಲ್ಲಿ ಇಟ್ಟುಕೊಂಡಿದ್ದ. ಬಹುಶಃ ಜಿಮ್ ಕ್ಯಾರಿಗೆ ಸಾಡೆಸಾತ್ ಶನಿ ಕೊನೆ ಹಂತದಲ್ಲಿದ್ದ ಅನಿಸುತ್ತದೆ. ನಂತರದಲ್ಲಿ ಒಳ್ಳೆಯ ಆಫರ್ ಗಳು ಬಂದವು. ಜಿಮ್ ಕ್ಯಾರಿ ನಟನೆಯ ಕಾಮಿಡಿ ಚಿತ್ರಗಳಾದ ಫೆಡ್ ಡಿಟೆಕ್ಟೀವ್, ದಿ ಮಾಸ್ಕ್, ಡಮ್ ಅಂಡ್ ಡಂಬರ್ ಇವೆಲ್ಲವೂ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸನ್ನ ಕಂಡವು.

 

 

ಇದಾದ ಮೇಲೇ ಜಿಮ್ ಕ್ಯಾರಿಯ ಸಂಭಾಷಣೆ 20ಮೀಲಿಯನ್ ಗೆ ಅವರನ್ನ ಸಿನಿಮಾದ ನಿರ್ಮಾಪಕರು ಬುಕ್ ಮಾಡಲು ಶುರುಮಾಡಿದರು. ಶಾಲೆಗೆ ಹೋಗಿ ಕಲಿಯಲಾಗದೇ ಅರ್ಧಕ್ಕೆ ಬಿಟ್ಟು ಬಂದ ಜಿಮ್ ಕ್ಯಾರಿ ಜೀವನದಲ್ಲಿ ಗೆದ್ದಿದ್ದರು. ಈ ಸೌಭಾಗ್ಯವನ್ನ ನೋಡುವುದಕ್ಕೆ ಅವರ ತಂದೆಗೆ ಆಗಲಿಲ್ಲ. ಯಾಕೆಂದರೆ 1994ರಲ್ಲಿ ತೀರಿಕೊಂಡಿದ್ದರು. ಜಿಮ್ ಕ್ಯಾರಿ ತಾನು ಬರೆದುಕೊಂಡಿದ್ದ 10 ಮಿಲಿಯನ್ ಡಾಲರ್ ಚೆಕ್ ಅನ್ನ ತನ್ನ ತಂದೆಯ ಶವದ ಮೇಲೆ ಇಟ್ಟು ಹೂತ್ತಾಕಿದರು.

 

 

ವಿದ್ಯೆ ಹತ್ತಲಿಲ್ಲ, ಕೈಯಲ್ಲಿ ಹಣವಿಲ್ಲ, ಎಂಟು ಗಂಟೆ ದುಡಿಯುವುದರ ಜೊತೆಗೆ ಬಡತನ ಬೇರೆ ಇಷ್ಟಾದರೂ ಜಿಮ್ ಕ್ಯಾರಿ ಹಾಲಿವುಡ್ ನಲ್ಲಿ ಇಂದು ಬಹುಬೇಡಿಕೆಯ ಹಾಸ್ಯನಟ ಎಲ್ಲರೂ ಹೇಳುವ ಹಾಗೆ ಹಾಸ್ಯ ಮಾಡುವವನ ಹಿಂದೆ ಅಪಾರವಾದ ನೋವಿರುತ್ತೆ ಅನ್ನುವುದು ಜೀಮ್ ಕ್ಯಾರಿಯ ಜೀವನಕ್ಕೆ ಬಹಳ ಸೂಕ್ತ ಅನಿಸುತ್ತದೆ. ಜಿಮ್ ಕ್ಯಾರಿ ತಾನು ದಡ್ಡ ಅಂದುಕೊಂಡು ಸುಮ್ಮನೆ ಇದ್ದಿದ್ದರೆ ಇಷ್ಟೆಲ್ಲಾ ಸಾಧನೆ ಮಾಡಲು ಆಗುತ್ತಿರಲಿಲ್ಲ. ತನ್ನ ಮೇಲೆ ಅಪಾರವಾದ ನಂಬಿಕೆಯನ್ನ ಇಟ್ಟುಕೊಂಡು ಹೆಜ್ಜೆಹೆಜ್ಜೆಗೂ ಕನಸು ಕಾಣುತ್ತಾ ಅದನ್ನ ನನಸು ಮಾಡುವ ಪ್ರಯತ್ನ ಮಾಡುತ್ತ ಮುಂದೆ ಸಾಗಿದಕ್ಕೆ ಇಷ್ಟು ದೊಡ್ಡ ಸಾಧನೆ ಮಾಡುವುದಕ್ಕೆ ಸಾಧ್ಯವಾಯಿತು.

 

 

ಜಿಮ್ ಕ್ಯಾರಿಯ ಜೀವನ ತಿಳಿದ ಮೇಲೆ ನಮಗೆ ನಾವೇ ಕೇಳಿಕೊಳ್ಳುವ ಪ್ರಶ್ನೆ ಎಂದರೆ ನಾವೇಕೆ ಅವರ ಹಾಗೆ ಯೋಚನೆ ಮಾಡುವುದಿಲ್ಲ? ಯಾವಾಗಲೂ ಯಾಕೆ ದೂರದಲ್ಲಿ ಕುಳಿತಿರುತ್ತೇವೆ? ಇದೇ ನಮಗೂ ಮತ್ತು ಸಾಧಕರಿಗೆ ಇರುವ ವ್ಯತ್ಯಾಸ. ಸಾಧಕರು ಸಾಧಿಸುತ್ತಿರುತ್ತಾರೆ ಉಳಿದವರು ನಮ್ಮ ಕೈಯಲ್ಲಿ ಅದಿಲ್ಲ ಇದಿಲ್ಲ ಅಂತ ದೂರುತ್ತಿರುತ್ತಾರೆ. ಆದರೆ ನೀವು ಜಿಮ್ ಕ್ಯಾರಿಯ ತರ ಯೋಚನೆ ಮಾಡಿ ಹೆಜ್ಜೆಯನ್ನ ಮುಂದಿಡಿ ಕಂಡಿತ ಜೀವನದಲ್ಲಿ ಯಶಸ್ಸು ಸಿಗುತ್ತೆ.

– ಸುಷ್ಮಿತಾ

Advertisement
Share this on...