ಜಿಮ್ಮಿಗಲ್ಲು ಚಿತ್ರದ ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ ಹಾಡು ಹುಟ್ಟಿದ ಸಂದರ್ಭ ಗೊತ್ತೇ…?

in ಮನರಂಜನೆ/ಸಿನಿಮಾ 228 views

ತುತ್ತು ಅನ್ನ ತಿನ್ನೋಕೆ ಬೊಗಸೆ ನೀರು ಕುಡಿಯೋಕೆ ಎಂಬ ಹಾಡು ಯಾರಿಗೆ ತಾನೆ ಗೊತ್ತಿಲ್ಲ. ಬದುಕಿನ ನಶ್ವರತೆಯ ಸತ್ಯ, ಸಂಕಷ್ಟದಲ್ಲಿರುವವರಿಗೆ ಸಮಾಧಾನವನ್ನು ಹೇಳುವ ಅರ್ಥಗರ್ಭಿತವಾದ ಈ ಹಾಡು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಕಠಸಿರಿಯಲ್ಲಿ ಮೂಡಿಬಂದ ’ಜಿಮ್ಮಿಗಲ್ಲು’ ಚಿತ್ರದ ಹಾಡು. ಈ ಹಾಡನ್ನು ಕೇಳದ ಕನ್ನಡಿಗರಿಲ್ಲ, ಬದುಕಿನ ಕಠಿಣ ಸತ್ಯವನ್ನು ಅರಗಿಸಿಕೊಳ್ಳುವ ಪ್ರತಿಯೊಬ್ಬರೂ ಈ ಹಾಡನ್ನು ಸ್ಫೋರ್ತಿಯಾಗಿ ಪರಿಗಣಿಸದವರಿಲ್ಲ. ಜೀವನ ಸತ್ಯವನ್ನು ಸರಳ ಪದಗಳಲ್ಲಿ ಅರ್ಥವಾಗುವಂತೆ ಹೇಳುವ ಗೀತರಚನೆಕಾರ ಚಿ.ಉದಯ್ ಶಂಕರ್ ಅವರು ರಚಿಸಿರುವ ಈ ಹಾಡು ಹುಟ್ಟಿದ ಸಂದರ್ಭದ ಬಗ್ಗೆ ಪ್ರತಿಯೊಬ್ಬರಿಗೂ ಕುತೂಹಲ ಇದ್ದೇ ಇರುತ್ತೆ. ಈ ಕೂತುಹಲಕ್ಕೆ ಉತ್ತರ ಇಲ್ಲಿದೆ. 1982ರಲ್ಲಿ ತೆರೆಕಂಡ ಜಿಮ್ಮಿಗಲ್ಲು ಚಿತ್ರ ಸಾಹಿತಿ ವೇಣುಗೋಪಾಲ ಕಾಸರಗೋಡು ಅವರ ಕಾದಂಬರಿ ಆಧರಿಸಿ ತೆಗೆದ ಸಿನಿಮಾ. ಚಿತ್ರದ ತುತ್ತು ಅನ್ನ ತಿನ್ನೋಕೆ ಹಾಡು ರಚನೆ ಮಾಡಲು, ಹಾಡಿನ ಸಂದರ್ಭ, ಹಾಡಿನಲ್ಲಿರಬೇಕಾದ ಅಂಶಗಳ ಬಗ್ಗೆ, ಸುಭಾಷಿತದ ರೀತಿ ಹಾಡು ಸಾರ್ವಕಾಲಿಕವಾಗಿರಬೇಕು ಎಂದು ಚಿ.ಉದಯ್ ಶಂಕರ್ ಅವರಿಗೆ ವಿವರಿಸಿದ್ದು, ಚಿತ್ರದ ನಿರ್ದೇಶಕ ನ ಶೈಲಿ ಎಂದ ಕೆ ಎಸ್ ಎಲ್ ಸ್ವಾಮಿ (ರವಿ)ಯವರು.

Advertisement

Advertisement

ಜಿಮ್ಮಿಗಲ್ಲು ಚಿತ್ರದಲ್ಲಿ ನಾಯಕ ಹಳ್ಳಿಹೈದ, ಅನಕ್ಷರಸ್ಥ, ಮುಗ್ಧ. ಊರ ಪಟೇಲನ ಕುತಂತ್ರದಿಂದ ಆತ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾದ ಪರಿಸ್ಥಿತಿ. ಇದೇ ಕಾರಣಕ್ಕೆ ಊರಿಂದ ಬಹಿಷ್ಕಾರ ಹಾಕಿದಾಗ ಮುಂದಿನ ಬದುಕು ಗೊತ್ತಾಗದೇ ಆತ್ಮವಿಶ್ವಾಸದೊಂದಿಗೆ ತನಗೆ ತಾನೇ ಧೈರ್ಯ ಹೇಳಿಕೊಳ್ಳುತ್ತಾ ಸಾಗುವ ಸಂದರ್ಭ. ಈ ಸಂದರ್ಭಕ್ಕೆ ತಕ್ಕಂತೆ ಸುಭಾಷಿತದಂಥ ಒಂದು ಹಾಡು ಬೇಕು ಎಂದು ನಿರ್ದೇಶಕರು ಉದಯ್ ಶಂಕರ್ ಅವರಿಗೆ ಹೇಳಿದ್ದರಂತೆ. ಹಾಡಿನ ಸಾಹಿತ್ಯ ಎಲ್ಲರಿಗೂ ಅರ್ಥವಾಗಿಬಿಡಬೇಕು. ನೊಂದವರಿಗೆ ಸಮಾಧಾನ ಹೇಳುವಂತಿರಬೇಕು. ಸೋಲೇ ಕೊನೆಯಲ್ಲ. ಮುಂದಿನ ಗೆಲುವಿಗೆ ದಾರಿಯದು. ಮರುಗಬೇಕಾದ ಅಗತ್ಯವಿಲ್ಲ. ನಂಬಿದವರನ್ನು ದೇವರು ಯಾವತ್ತೂ ಕೈ ಬಿಡುವುದಿಲ್ಲ ಎಂಬ ಸಾಲುಗಳೆಲ್ಲ ಆ ಹಾಡಲ್ಲಿ ಇರಬೇಕು. ಹಾಡು ಕೇಳಿದ ಜನ ಅರೆ, ಹೌದು. ನಾವು ಬದುಕನ್ನು ಎದುರಿಸಬೇಕಾದದ್ದು ಹೀಗೇ ಎಂಬುದನ್ನು ಅರ್ಥಿಸಿಕೊಳ್ಳುವಂತಿರಬೇಕು.

Advertisement


ಈ ಹಾಡಿನಲ್ಲಿ ವೇದಾಂತ ಇರಬೇಕು. ಬುದ್ಧಿ ಮಾತಿರಬೇಕು. ಬದುಕಿನ ನಶ್ವರತೆಯ ವಿವರ ಬರಬೇಕು. ನಮಗೆ ನಾವೇ ದಿಕ್ಕು ಎಂಬುದು ಪ್ರಮುಖವಾಗಿರಬೇಕು ಎಂದು ಹೇಳಿದ್ದರಂತೆ. ಅದಕ್ಕೆ ಸರಿ. ನೀವು ಹೇಳಿರುವ ಅಷ್ಟೂ ಅಂಶಗಳು ಬರುವಂಥ ಹಾಡು ಬರೆದುಕೊಡ್ತೇನೆ. ಈ ಚಿತ್ರದ ನಾಯಕ ಹಳ್ಳೀಮುಕ್ಕ ತಾನೆ? ಹಾಗಾಗಿ ಇಡೀ ಹಾಡು ಗ್ರಾಮ್ಯ ಭಾಷೆಯ ಪದಗಳಲ್ಲಿರಲಿ ಎಂದರಂತೆ ಉದಯಶಂಕರ್. ನಂತರದ 15 ನಿಮಿಷದಲ್ಲಿ ’ತುತ್ತು ಅನ್ನ ತಿನ್ನೋಕೆ’ ಹಾಡು ಬರೆದು ಮುಂದಿಟ್ಟರಂತೆ ಹಿನ್ನೆಲೆ ಗಾಯಕರಿಂದ ಹಾಡಿಸಿದರೆ, ಪ್ರತಿಯೊಂದು ಹಾಡಿಗೂ ತಾನಾಗೇ ಸಂಗೀತದ ಚೌಕಟ್ಟು ಬಂದುಬಿಡುತ್ತದೆ. ಅಂಥ ಹಾಡು ನಮಗೆ ಬೇಕಿರಲಿಲ್ಲ. ಹಾಗಾಗಿ, ಇಡೀ ಸಿನಿಮಾದ ಸನ್ನಿವೇಶವನ್ನು ಅರ್ಥಮಾಡಿಕೊಂಡಿರುವ ಕಥಾನಾಯಕ ವಿಷ್ಣುವರ್ಧನ್ ಅವರಿಂದಲೇ ಹಾಡಿಸೋಣ ಎಂದುನಿರ್ಧರಿಸಿ ಕೆಸ್ ಎಲ್ ಸ್ವಾಮಿ ಹಾಡನ್ನು ವಿಷ್ಣವರ್ಧನ್ ಅವರಿಂದಲೇ ಹಾಡಿಸಿದರಂತೆ. ತಮ್ಮ ಎದೆಯಾಳದ ಭಾವನೆಯನ್ನೆಲ್ಲ ಈ ಹಾಡಿನಲ್ಲಿ ತಂದ ವಿಷ್ಣುವರ್ಧನ್, ಅದ್ಭುತವಾಗಿ ಹಾಡಿದರು.

Advertisement

ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿ ಕೃಪೆಯಿಂದ ಈ ರಾಶಿಗಳಿಗೆ ಇಂದು , ಇಂದಿನ ನಿಮ್ಮ ರಾಶಿ ಭವಿಷ್ಯ ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿ9886027322. ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 11 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀ ಸುಬ್ರಮಣ್ಯ ಆಚಾರ್ಯ ದೈವಶಕ್ತಿ ಜ್ಯೋತಿಷ್ಯರು . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9886027322 ಪರಿಹಾರ ಮಾಡಿಕೊಡುತ್ತಾರೆ.

Advertisement
Share this on...