ನಾಲ್ಕು ಮುಖ್ಯ ಸುಂದರ ಝರಿಯ ಜೋಗ ಜಲಪಾತ

in ಕನ್ನಡ ಮಾಹಿತಿ 580 views

ನಮ್ಮ ಕರ್ನಾಟಕವು ಅನೇಕ ಮುಖ್ಯ ಪೂಜ್ಯನೀಯ ಸ್ಥಳಗಳು ಹಾಗೂ ಪ್ರವಾಸಿ ಸ್ಥಳಗಳನ್ನೊಳಗೊಂಡಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲು ಅನೇಕ ಸ್ಥಳಗಳು ಪ್ರಸಿದ್ದಿಯಾಗಿವೆ. ನಾನೀಗ ಹೇಳ ಹೊರಟಿರುವುದು ಸಹ್ಯಾದ್ರಿ ತಪ್ಪಲಾದ ಅತಿ ಹಸಿರ ಮಲೆನಾಡಾದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗ ಜಲಪಾತ.. ಲೋಕ ವಿಕ್ಯಾತ ಈ ಸುಂದರ ಜೋಗಜಲಪಾತ ಕನ್ನಡ ನಾಡಿನ ಹೆಮ್ಮೆಯ ತಾಣ. ಸುರಿಯುವ ಮಳೆಯ ನಡುವೆ ಕೊಡೆ ಹಿಡಿದು ಜೋಗದ ರುದ್ರ ನರ್ತನ ನೋಡುವಾಗ ಸಿಗುವ ಆನಂದ ಊಹಿಸಲಸಾದ್ಯ. ಬಿಸಿಲು ಹರಿದಂತೆ ಜಲಧಾರೆಗಳ ಮೇಲಿನ ಕಾಮನ ಬಿಲ್ಲುಗಳು ನಿತ್ಯ ನವ್ಯವಾಗಿ ಕಾಣಿಸುವವು. ಬೆಳದಿಂಗಳ ರಾತ್ರಿಯಲ್ಲೂ ಕಾಮನಬಿಲ್ಲು ಕಾಣಿಸುವುದುಂಟು. ಸೌಮ್ಯ ಭೀಕರತೆಗಳ ವರ್ಣನೆ ಮಾತಿಗೆ ನಿಲುಕದ್ದು. ಈ ಜಲಪಾತವನ್ನು ಜೂನ್-ಅಕ್ಟೋಬರ್ ಅವಧಿಯಲ್ಲಿ ವೀಕ್ಷಿಸಲು ಬಲು ಸೂಕ್ತವಾಗಿದೆ. ಇದು ಚಲನಚಿತ್ರದ ನಿರ್ಮಾಣಕ್ಕು ಒಳ್ಳೆಯ ತಾಣವಾಗಿದೆ. ಮಾನವನಾಗಿ ಹುಟ್ಟಿದಮೇಲೆ ಏನೇನ್ ಕಂಡಿ ಇರೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ ಎನ್ನುವ ಅಣ್ಣಾವ್ರ ಹಾಡಿನಂತೆ,

Advertisement

ಒಂದುಬಾರಿಯಾದರು ನೋಡಲೇಬೇಕಾದ ರಮಣೀಯ ಸ್ಥಳ ನಮ್ಮ ಜೋಗ. ಇದರ ಬಗ್ಗೆ ಹಲವಾರು ಕವಿತೆ, ಕಥೆಗಳಿವೆ. ಮೇಘಾಲಯದ ನೋಹ್ಕಲಿಕೈ ಜಲಪಾತದ ನಂತರ ಜೋಗ್ ಫಾಲ್ಸ್ ಭಾರತದ ಎರಡನೆ ಅತಿ ಹೆಚ್ಚು ಧುಮುಕುವ ಜಲಪಾತವಾಗಿದೆ. ಜೋಗ್ ಫಾಲ್ಸ್ ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆಗಳ ಗಡಿ ಮಧ್ಯೆ ಇರುವ ಜಲಪಾತ. ಇದರ ಎತ್ತರ 829 ಅಡಿ. ಇದು ಜೋಗ ಗುಂಡಿಯೆಂದೆ ಹೆಚ್ಚು ಪ್ರಸಿದ್ದಿಯಾಗಿದೆ.

Advertisement

ಈ ಜಲಪಾತವನ್ನು ತಲುಪಲು ನಾಲ್ಕು ಕಡೆಯ ದಾರಿಗಳಲ್ಲಿ ಚಿಕ್ಕ ಚಿಕ್ಕ ಕಣಿವೆಗಳು, ಸಣ್ಣ ನೀರಿನ ಜರಿಗಳು ಇವೆ. ಮತ್ತು ರಸ್ತೆಗಳು ತುಂಬ ಅಂಕು ಡೊಂಕಾಗಿದ್ದು ಪ್ರಯಾಣಿಕರು ನಿದಾನ ವೇಗದಲ್ಲಿ ಚಲಿಸುತ್ತಾರೆ. ತನ್ನ ಧುಮುಕುವ ಜರಿಯ ಕಣಿವೆಯ ಸುತ್ತ ಸುಂದರ ಹಸಿರನ್ನೆ ತುಂಬಿಕೊಂಡಿರುವ ಈ ಜಲಪಾತ ನೋಡಲು ಹೃದಯ ಮಿಡಿಯುತ್ತದೆ ಜೋಗಾ ಎಂಬ ಪದದ ಕನ್ನಡದ ಅರ್ಥ ಜಲಪಾತ. ಇದು ಸಹ್ಯಾದ್ರಿ ಪ್ರದೇಶದಲ್ಲಿ ವಾಸಿಸುವ ಕನ್ನಡ ಬಾಷಿಕರ ಭಾಷೆಯಲ್ಲಿ ಉಲ್ಲೇಖನವನ್ನು ಹೊಂದಿದೆ. ಈ ಜಲಪಾತ ಶರಾವತಿ ನದಿಯು ನಾಲ್ಕು ಹೋಳಾಗಿ ಕಣಿವೆಗೆ ಧುಮುಕುತ್ತದೆ. ನದಿಯ ನಾಲ್ಕು ಝರಿಗಳಿಗೆ ಬೇರೆ ಬೇರೆ ಹೆಸರುಗಳಿವೆ.

Advertisement

 

Advertisement

ಮೊದಲನೆಯ ಝರಿಯ ಹೆಸರು ರಾಜ. ಇದು ಹೆಚ್ಚು ವೈಭವದಿಂದ ರಾಜಗಾಂಭೀರ್ಯದಿಂದ ಕಣಿವೆಯ ಧರೆಗೆ ಧುಮುಕುತ್ತದೆ. ರೋರರ್ ಇದು ಕಲ್ಲಿನ ಬಂಡೆಗಳ ನಡುವೆ ನುಗ್ಗುತ್ತ ಅತಿ ಹೆಚ್ಚಿನ ಶಬ್ಧ ಮಾಡುತ್ತದೆ. ರಾಕೆಟ್ ಇದು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತ ನುಗ್ಗುವ ಹೆಚ್ಚಿನ ಪ್ರಮಾಣದ ನೀರು, ಕಿಡಕಿಯಿಂದ ‌ಕಣಿವೆಯ ಧರೆಗಿಳಿಯುತ್ತದೆ. ಇದರ ರಭಸದ ವೇಗಕ್ಕೆ ರಾಕೆಟ್ ಎಂದು ಹೆಸರಿಡಲಾಗಿದೆ. ಬಳುಕುವ ಹೆಣ್ಣು ನರ್ತಕಿಯ ಹಾಗೆ ಕಣಿವೆಯ ಧರೆಗೆ ಧಮುಕುವ ಝರಿಗೆ ರಾಣಿ ಎಂದು ಹೆಸರಿಡಲಾಗಿದೆ. ಈ ನಾಲ್ಕುಝರಿಗಳು ತಮ್ಮದೇ ಆದ ರೀತಿಯಲ್ಲಿ ಧುಮುಕುವುದರಿಂದ ಬೇರೆ ಬೇರೆ ಹೆಸರುಗಳು ಬಂದಿವೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥದಲ್ಲಿ ಹುಟ್ಟಿ ಹನ್ನೆರಡು ಉಪನದಿಗಳನ್ನು ಸೇರಿಸಿಕೊಂಡು ಹರಿಯುವ ಶರಾವತಿ ನದಿಗೆ 132 ಕಿ.ಮೀ ಕ್ರಮಿಸಿ ಸಮುದ್ರ ಸೇರುವ ತವಕ. ಶರಾವತಿ ನದಿಯ ಈ ಜಲಪಾತಕ್ಕೆ ಗೇರುಸೊಪ್ಪೆ ಎಂದು ಕೂಡ ಕರೆಯುತ್ತಾರೆ. ಈ ಜಲಪಾತ ಕೇವಲ ಪ್ರವಾಸಿ ಸ್ಥಳವಾಗದೆ ವಿದ್ಯುತ್ ಪೂರೈಕೆಯಲ್ಲಿ ಬಹುಮುಖ್ಯ ಸ್ಥಾನ ಪಡೆದಿದೆ. ಹಿಂದೆ 1930 ರ ದಶಕದಲ್ಲಿ ಮೈಸೂರು ಲೋಕೋಪಯೋಗಿ ಇಲಾಖೆಯಿಂದ ಜಿಲ್ಲಾ ವಿದ್ಯುತ್ ಕಾರ್ಯ ಶುರುವಾಯಿತು.

ಮೊದಲು ಕೃಷ್ಣರಾಜೇಂದ್ರ ಜಲ ವಿದ್ಯುತ್ ಯೋಜನೆ ಎಂಬ ಹೆಸರಿನಿಂದ ನಂತರ ಮಹಾತ್ಮಗಾಂಧಿ ಜಲ ವಿದ್ಯುತ್ ಎಂಬ ಹೆಸರಿಡಲಾಯಿತು.  ಈ ಜೋಗ್ ಫಾಲ್ಸ್ ಬೆಂಗಳೂರಿನಿಂದ ಸುಮಾರು 329 ಕಿ.ಮೀ ಉತ್ತರದ ದೂರದಲ್ಲಿದೆ. ಜಿಲ್ಲಾ ಕೇಂದ್ರವಾದ ಶಿವಮೊಗ್ಗದಿಂದ 100 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಪ್ರಯಾಣ ಮಾಡಲು ಎಲ್ಲಾ ಸೌಲಭ್ಯಗಳು ಇವೆ. ಹಾಗೆ ರಸ್ತೆಗಳು ಸೂಕ್ತವಾಗಿವೆ. ಅಲ್ಲಿನ ಪ್ರವಾಸಿಗಳಿಗೆ ಉತ್ತಮವಾದ ಹೋಮ್ಸ್ ಸ್ಟೆ ಮತ್ತು ರೇಸಾರ್ಟ್ಗಳು ಇವೆ. ಹಾಗೂ ಹಲವಾರು ಅಬಿವೃದ್ದಿಗಳು ಪ್ರಾದಿಕಾರದಲ್ಲಿವೆ.

Advertisement
Share this on...