ಜೊತೆಜೊತೆಯಲಿ ಖ್ಯಾತಿಯ ಅನಿರುದ್ದ್ ಮೇಲೆ ಅಭಿಮಾನಿಗಳ ಬೇಸರ ! ತಿಳಿದು ಮಾತಾನಾಡಿ ಎಂದಿದ್ದೇಕೆ ಆರ್ಯವರ್ಧನ್ ?

in ಮನರಂಜನೆ 32 views

ಇತ್ತೀಚೆಗಿನ ದಿನಗಳಲ್ಲಿ ಕಿರುತೆರೆ ಅಂದರೆ ಟಿವಿ ಮಾಧ್ಯಮದಲ್ಲಿ ಹೊಸ ಸಂಚಲನವನ್ನೇ ಮೂಡಿಸಿರುವ ಧಾರಾವಾಹಿ ಎಂದರೆ ಅದು  ಜೊತೆ ಜೊತೆಯಲ್ಲಿ. ಸಾಕಷ್ಟು ಕನ್ನಡ ಚಲನಚಿತ್ರಗಳು ನಾಟಕಗಳಲ್ಲಿ ಅಭಿನಯಿಸಿರುವ ಅನಿರುದ್ಧ್ ರವರು ಬೆಳ್ಳಿ ತೆರೆಯಿಂದ ಕಿರುತೆರೆಗೆ ಎಂಟ್ರಿ ಕೊಟ್ಟು ಕಿರುತೆರೆಯಲ್ಲಿ  ಹೊಸ ಟ್ರೆಂಡ್  ಶುರು ಮಾಡಿದ್ದಾರೆ.  ಜೊತೆಜೊತೆಯಲಿ ಧಾರಾವಾಹಿಯಲ್ಲಿನ ಇವರ ಅಭಿನಯ  ಎಲ್ಲ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

 

Advertisement

Advertisement

ಅನಿರುದ್ಧ್ ರವರು ಸಾಹಸ ಸಿಂಹ ವಿಷ್ಣುವರ್ಧನ್ ರವರ ಅಳಿಯ ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರ . ಇವರು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿದ್ದ ಜನರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮಾತನಾಡುತ್ತಾ ಇರುತ್ತಾರೆ . ಇಂತಹ ಅನಿರುದ್ಧ್ ರವರು ಇಂದು ಇದ್ದಕ್ಕಿದ್ದಂತೆ ಬಂದು ಜನರ ಬಳಿ ಕ್ಷಮೆಯನ್ನೂ ಕೇಳುತ್ತಿದ್ದಾರೆ ಇದಕ್ಕೆ  ಕಾರಣವೂ ಕೂಡ ಇದೆ .  ಅನಿರುದ್ಧ್ ಅವರು  ನಾಯಕ ನಟನಾಗಿರುದರ ಜೊತೆಗೆ ಗಾಯಕರು ಕೂಡ ಹೌದು ಅನೇಕ ಹಾಡುಗಳನ್ನು ಹಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಕನ್ನಡ ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಹಾಡುಗಳನ್ನು ಹಾಡಿ ಪೋಸ್ಟ್ ಮಾಡಿದ್ದಾರೆ .

Advertisement

 

ಇವರು ಹಾಡಿದ ಹಿಂದಿ ಹಾಡಿಗೆ ಹೆಚ್ಚು ಜನರು ಕಾಮೆಂಟ್ ಮಾಡಿ ನೀವು ಯಾವಾಗಲೂ ಹೆಚ್ಚಾಗಿ ಹಿಂದಿ ಹಾಡುಗಳನ್ನು ಹಾಡುತ್ತೀರಾ, ಕನ್ನಡ ಹಾಡುಗಳನ್ನು ಹಾಡಿ ಎಂದು ಕಾಮೆಂಟ್ ಮಾಡಿದ್ದಾರೆ.ಹೀಗೆ ಎಲ್ಲಾ ಕಮೆಂಟ್ ಗಳಿಗೂ ಉತ್ತರವನ್ನು ನೀಡುತ್ತಾ ಜನರ ಬಳಿ ಕ್ಷಮೆ  ಕೇಳಿದ್ದಾರೆ….

 

 

View this post on Instagram

 

ನಮಸ್ಕಾರ ಎಲ್ಲರಿಗೂ… ಮೊಟ್ಟ ಮೊದಲಿಗೆ ನಾನು ತಮ್ಮ ಎಲ್ಲಾ ಸಂದೇಶಗಳಿಗೆ ಪ್ರತಿಕ್ರಿಯೆ ಅಥವಾ ಉತ್ತರ ಕೊಡೋದಕ್ಕೆ ಆಗ್ತಾ ಇಲ್ಲ ಅನ್ನೋದಕ್ಕೆ ಕ್ಷಮೆ ಕೇಳ್ತೀನಿ… ನಾನು ಹಿಂದಿ ಹಾಡನ್ನ ಹಾಕ್ದಾಗ, ಕೆಲವರು ನನ್ನ ಕನ್ನಡ ತಾಯಿಯ ಬಗ್ಗೆ ಇರೋ ಪ್ರೀತಿಯ ಬಗ್ಗೆ ನನ್ನನ್ನ ಪ್ರಶ್ನೆ ಮಾಡ್ತಾರೆ… ಅದು ತುಂಬಾ ಬೇಜಾರ್ ಉಂಟು ಮಾಡುತ್ತದೆ… ನಾನು ಕನ್ನಡ ಹಾಡುಗಳನ್ನ ಎಷ್ಟೋ ಹಾಡಿರೋದು ತಾವು ಕೇಳ್ಲಿಲ್ಲ… ಪ್ರತಿದಿನ ನಾನು ಆಪ್ಪಾವ್ರ ಸಾಹಸ ಸಿಂಹ ಡಾll ವಿಷ್ಣುವರ್ಧನ್ ರವರ ಹಾಡನ್ನ ಹಾಡ್ತಾ ಇದ್ದಿನಿ, ಅದು ಅಪ್ಲೋಡ್ ಕೂಡ ಮಾಡ್ತಾ ಇದ್ದಿನಿ…ದಯವಿಟ್ಟು ಕೇಳಿ, ನೋಡಿ….ಕೇಳ್ದೆ, ನೋಡದೆ ತಪ್ಪಾಗಿ ಪ್ರತಿಕ್ರಿಯೆ ನೀಡ್ಬೆಡಿ….. ಕನ್ನಡದಲ್ಲೇ ನಾನು ಓದಿರೋದು, ಸಾಕಷ್ಟು ಕನ್ನಡ ಸಾಹಿತ್ಯ ಓದ್ದ್ತಿನಿ… ಕನ್ನಡ ಭಾಷೆಯ ಚಿತ್ರ ಗಳಲ್ಲಿ ಹಾಗೂ ನಾಟಕಗಳಲ್ಲಿ ಅಭಿನಯಸುತ್ತಿರುವುದು ತಮಗೆ ಗೊತ್ತೇ ಇದೆ. ನಾನು ಕನ್ನಡ ಮಾತಾಡೋವಾಗ ಬೇರೆ ಭಾಷೆಯ ಪದಗಳನ್ನು ಬಳಸೋದೂ ಇಲ್ಲ…ನನ್ನ ಭಾಷಾಭಿಮಾನದ ಬಗ್ಗೆ ದಯಮಾಡಿ ಪ್ರಶ್ನಿಸಬೇಡಿ… ತುಂಬಾ ಬೇಜಾರ್ ಆಗತ್ತೆ…ವಸುಧೈವ ಕುಟುಂಬಕಂ…ಭೂಮಿ ಮೇಲೆ ಇರೋ ಎಲ್ಲರೂ ಪ್ರತಿಯೊಬ್ಬರೂ ನನ್ನ ಕುಟುಂಬಾನೇ….ಎಲ್ಲಾ ಭಾಷೆಗಳೂ ನನ್ನ ಭಾಷೆಗಳೇ….ಆಂಗ್ಲ ಭಾಷೆಯ ಸಾಹಿತ್ಯ ಓದ್ತಿನಿ. ನಾನು ಆಂಗ್ಲ ಭಾಷೆಯಲ್ಲಿ ಲೇಖನಗಳನ್ನ ಬರೀತಿನಿ. ಅವು ಸುಪ್ರಸಿದ್ಧ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಹಿಂದಿ ಭಾಷೆಯ ಹಾಡುಗಳನ್ನೂ ಹಾಡ್ತಿನಿ. ಪ್ರಪಂಚದ ಎಲ್ಲಾ ಭಾಷೆಯ ಚಿತ್ರಗಳನ್ನ ನಾನು ನೋಡ್ತೀನಿ…ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸಿದಿನೀ ಕೂಡ…. ಬೇರೆ ಬೇರೆ ರಾಜ್ಯಗಳ ಅಭಿಮಾನಿಗಳು ನನ್ನನ್ನ ಪ್ರೀತಿಸುತ್ತಾರೆ. ನನಗೆ ಕನ್ನಡದ ಜೊತೆ ಎಲ್ಲಾ ಭಾಷೆಗಳೂ ಇಷ್ಟ … ನನ್ನ ಬಗ್ಗೆ ದಯವಿಟ್ಟು ತಿಳಿದುಕೊಳ್ಳಿ… ತಾವು ಆ ದೇವರ ಸ್ವರೂಪ ಅಂತ ನಾನು ನಂಬಿದಿನಿ…ತಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ನನ್ನ ಮೇಲೆ ಸದಾ ಇರಲಿ….ಇದು ತಮ್ಮಲ್ಲಿ ಕಳಕಳಿಯ ವಿನಂತಿ….

A post shared by Aniruddha Jatkar (@aniruddhajatkar) on

ನಮಸ್ಕಾರ ಎಲ್ಲರಿಗೂ… ಮೊಟ್ಟ ಮೊದಲಿಗೆ ನಾನು ತಮ್ಮ ಎಲ್ಲಾ ಸಂದೇಶಗಳಿಗೆ ಪ್ರತಿಕ್ರಿಯೆ ಅಥವಾ ಉತ್ತರ ಕೊಡೋದಕ್ಕೆ ಆಗ್ತಾ ಇಲ್ಲ ಅನ್ನೋದಕ್ಕೆ ಕ್ಷಮೆ ಕೇಳ್ತೀನಿ… ನಾನು ಹಿಂದಿ ಹಾಡನ್ನ ಹಾಕ್ದಾಗ, ಕೆಲವರು ನನ್ನ ಕನ್ನಡ ತಾಯಿಯ ಬಗ್ಗೆ ಇರೋ ಪ್ರೀತಿಯ ಬಗ್ಗೆ ನನ್ನನ್ನ ಪ್ರಶ್ನೆ ಮಾಡ್ತಾರೆ… ಅದು ತುಂಬಾ ಬೇಜಾರ್ ಉಂಟು ಮಾಡುತ್ತದೆ… ನಾನು ಕನ್ನಡ ಹಾಡುಗಳನ್ನ ಎಷ್ಟೋ ಹಾಡಿರೋದು ತಾವು ಕೇಳ್ಲಿಲ್ಲ… ಪ್ರತಿದಿನ ನಾನು ಆಪ್ಪಾವ್ರ ಸಾಹಸ ಸಿಂಹ ಡಾll ವಿಷ್ಣುವರ್ಧನ್ ರವರ ಹಾಡನ್ನ ಹಾಡ್ತಾ ಇದ್ದಿನಿ, ಅದು ಅಪ್ಲೋಡ್ ಕೂಡ ಮಾಡ್ತಾ ಇದ್ದಿನಿ…ದಯವಿಟ್ಟು ಕೇಳಿ, ನೋಡಿ….ಕೇಳ್ದೆ, ನೋಡದೆ ತಪ್ಪಾಗಿ ಪ್ರತಿಕ್ರಿಯೆ ನೀಡ್ಬೆಡಿ….. ಕನ್ನಡದಲ್ಲೇ ನಾನು ಓದಿರೋದು, ಸಾಕಷ್ಟು ಕನ್ನಡ ಸಾಹಿತ್ಯ ಓದ್ದ್ತಿನಿ… ಕನ್ನಡ ಭಾಷೆಯ ಚಿತ್ರ ಗಳಲ್ಲಿ ಹಾಗೂ ನಾಟಕಗಳಲ್ಲಿ ಅಭಿನಯಸುತ್ತಿರುವುದು ತಮಗೆ ಗೊತ್ತೇ ಇದೆ. ನಾನು ಕನ್ನಡ ಮಾತಾಡೋವಾಗ ಬೇರೆ ಭಾಷೆಯ ಪದಗಳನ್ನು ಬಳಸೋದೂ ಇಲ್ಲ…ನನ್ನ ಭಾಷಾಭಿಮಾನದ ಬಗ್ಗೆ ದಯಮಾಡಿ ಪ್ರಶ್ನಿಸಬೇಡಿ… ತುಂಬಾ ಬೇಜಾರ್ ಆಗತ್ತೆ…

 

 

ವಸುಧೈವ ಕುಟುಂಬಕಂ…ಭೂಮಿ ಮೇಲೆ ಇರೋ ಎಲ್ಲರೂ ಪ್ರತಿಯೊಬ್ಬರೂ ನನ್ನ ಕುಟುಂಬಾನೇ….ಎಲ್ಲಾ ಭಾಷೆಗಳೂ ನನ್ನ ಭಾಷೆಗಳೇ….ಆಂಗ್ಲ ಭಾಷೆಯ ಸಾಹಿತ್ಯ ಓದ್ತಿನಿ. ನಾನು ಆಂಗ್ಲ ಭಾಷೆಯಲ್ಲಿ ಲೇಖನಗಳನ್ನ ಬರೀತಿನಿ. ಅವು ಸುಪ್ರಸಿದ್ಧ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಹಿಂದಿ ಭಾಷೆಯ ಹಾಡುಗಳನ್ನೂ ಹಾಡ್ತಿನಿ. ಪ್ರಪಂಚದ ಎಲ್ಲಾ ಭಾಷೆಯ ಚಿತ್ರಗಳನ್ನ ನಾನು ನೋಡ್ತೀನಿ…ಬೇರೆ ಬೇರೆ ಭಾಷೆಗಳಲ್ಲಿ ಅಭಿನಯಿಸಿದಿನೀ ಕೂಡ…. ಬೇರೆ ಬೇರೆ ರಾಜ್ಯಗಳ ಅಭಿಮಾನಿಗಳು ನನ್ನನ್ನ ಪ್ರೀತಿಸುತ್ತಾರೆ. ನನಗೆ ಕನ್ನಡದ ಜೊತೆ ಎಲ್ಲಾ ಭಾಷೆಗಳೂ ಇಷ್ಟ … ನನ್ನ ಬಗ್ಗೆ ದಯವಿಟ್ಟು ತಿಳಿದುಕೊಳ್ಳಿ… ತಾವು ಆ ದೇವರ ಸ್ವರೂಪ ಅಂತ ನಾನು ನಂಬಿದಿನಿ…ತಮ್ಮ ಪ್ರೀತಿ, ಹಾರೈಕೆ, ಆಶೀರ್ವಾದ ನನ್ನ ಮೇಲೆ ಸದಾ ಇರಲಿ….ಇದು ತಮ್ಮಲ್ಲಿ ಕಳಕಳಿಯ ವಿನಂತಿ….

Advertisement
Share this on...