ಜೊತೆಜೊತೆಯಲಿ ಧಾರಾವಾಹಿಯ ಪುಷ್ಪ ಬಗ್ಗೆ ನಿಮಗಿದು ಗೊತ್ತಾ ?

in ಮನರಂಜನೆ 204 views

ಇಂದು ಸಿನಿಮಾಗಳಿಗಿಂತ ಧಾರಾವಾಹಿಗಳ ಮೂಲಕ ಹಲವಾರು ಕಲಾವಿದರುಗಳ ಆಗಮನವಾಗುತ್ತಿದೆ. ಆ ಮೂಲಕ ಧಾರಾವಾಹಿಯಲ್ಲಿ ಅಭಿನಯಿಸಿ ಹೆಚ್ಚು ಪ್ರಸಿದ್ಧಿಯನ್ನು ಗಳಿಸಿಕೊಂಡ ನಂತರ ಸಿನಿಮಾದಲ್ಲಿ ಅಭಿನಯಿಸುತ್ತಾರೆ. ಕಿರುತೆರೆಯಿಂದ ಕಲಾವಿದರುಗಳು ಬಹುಬೇಗ ಜನರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಕಿರುತೆರೆಯು ಕಲಾವಿದರು ಬೆಳೆಯಲು ಒಂದು ಉತ್ತಮವಾದ ತಳಪಾಯವನ್ನು ಹಾಕಿ ಕೊಡುತ್ತಿದೆ.ಜೊತೆಜೊತೆಯಲಿ ಧಾರಾವಾಹಿಯಲ್ಲಿ ಆರ್ಯವರ್ಧನ್ ಮತ್ತು ಅನು  ಜೋಡಿಯನ್ನು ಎಷ್ಟು ಜನ ಇಷ್ಟಪಡುತ್ತಾರೋ ಹಾಗೆಯೇ ಪುಷ್ಪ ಮತ್ತು ಸುಬ್ಬು ಜೋಡಿಯನ್ನು ಕೂಡ ಅಷ್ಟೇ ಜನರು ಇಷ್ಟಪಡುತ್ತಾರೆ. ಇವರು ಹೆಚ್ಚು ಪ್ರಚಾರಕ್ಕೆ ಬಂದಿರುವುದು ಈ ಧಾರಾವಾಹಿಯ ಮೂಲಕವೆ. ಇದುವರೆಗೆ ಹಲವಾರು ಸಿನಿಮಾಗಳಲ್ಲಿ ಮತ್ತು  ಧಾರಾವಾಹಿಗಳಲ್ಲಿ ನಟಿಸಿದರೂ ಕೂಡ ಜೊತೆಜೊತೆಯಲಿ ಧಾರಾವಾಹಿಯ ಪುಷ್ಪ ಪಾತ್ರ ಅವರಿಗೆ ತುಂಬಾ ಹೆಸರನ್ನು ಗಳಿಸಿ ಕೊಟ್ಟಿದೆ.

Advertisement

 

Advertisement

Advertisement

ಇವರು ಎಲ್ಲೇ  ಹೊರಗಡೆ ಹೋದರೂ ಅಭಿಮಾನಿಗಳು  ಇವರನ್ನು ಪ್ರೀತಿಯಿಂದ ಪುಷ್ಪಾ ಎಂದೇ ಕರೆಯುತ್ತಾರಂತೆ. ಆದರೆ ಅವರ ನಿಜವಾದ ಹೆಸರು ಅಪೂರ್ವ  ಅಂತ.  ಘಾಟಿ ಹೆಂಗಸಿನ ಪಾತ್ರದಲ್ಲಿ ಈ ಧಾರಾವಾಹಿಯಲ್ಲಿ ನಟನೆ ಮಾಡಿದ್ದಾರೆ. ಇವರು ಮೂಲತಃ ಬೆಂಗಳೂರಿನವರು. ಇವರು ಓದಿದ್ದೆಲ್ಲಾ ಬೆಂಗಳೂರಿನಲ್ಲೆ.ಪುಷ್ಪ ಪಾತ್ರವನ್ನು ಜನರು ಇಷ್ಟಪಟ್ಟು ನೋಡುತ್ತಿದ್ದಾರೆ.  ಪುಷ್ಪ ಮತ್ತು ಸುಬ್ಬು ಜಗಳವಾಡೊದು ಅಭಿಮಾನಿಗಳಿಗೆ ತುಂಬಾ ಇಷ್ಟ. ಸುಬ್ಬು ಅವರಿಗೆ  ಜಾಸ್ತಿ ಬೈಬೇಡಿ ಅಂತ ಅಭಿಮಾನಿಗಳು ಪುಷ್ಪಾ ಅವರಿಗೆ ಹೇಳುತ್ತಾರಂತೆ . ಪುಷ್ಪಾ ಅಂದ್ರೆ ಅಪೂರ್ವಶ್ರೀ ಸಿಂಪಲ್ ಮಹಿಳೆ. ಇವರಿಗೆ ಟಿಕ್ ಟಾಕ್ ಮಾಡೋದು ಅಂದ್ರೆ ತುಂಬಾನೇ ಇಷ್ಟ .

Advertisement

ಜೊತೆ ಜೊತೆಯಲಿ ಧಾರಾವಾಹಿ ನಿಮಗೆ ಇಷ್ಟವಾಗಿದ್ದರೆ ಮತ್ತು ಪುಷ್ಪಾ ಅವರ ಅಭಿನಯ  ಇಷ್ಟ ಆಗಿದ್ರೆ ಪ್ಲೀಸ್ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ..

Advertisement
Share this on...