ನಟಿ ಜೂಹಿ ಚಾವ್ಲಾ ಎಲ್ಲರಿಗಿಂತ ಡಿಫರೆಂಟ್ ! ಹೇಗೆ ನೀವೆ ನೋಡಿ

in ಕನ್ನಡ ಮಾಹಿತಿ 35 views

ಲಾಕ್ ಡೌನ್ ಎಫೆಕ್ಟ್’ನಿಂದ ಸಂಷ್ಟದಲ್ಲಿರುವ ರೈತರಿಗೆ, ಕಾರ್ಮಿಕರಿಗೆ ಸಹಾಯ ಮಾಡಲು ಬಹಳಷ್ಟು ಜನ ಸೆಲೆಬ್ರಿಟಿಗಳು ಮುಂದೆ ಬಂದಿದ್ದಾರೆ. ಇದೀಗ ನಟಿ ಜೂಹಿ ಚಾವ್ಲಾ ಕೂಡ ರೈತರ ನೆರವಿಗೆ ಮುಂದಾಗಿದ್ದಾರೆ. ಜೂಹಿ ಚಾವ್ಲಾ ಮುಂಬೈನಿಂದ ಸ್ವಲ್ಪ ದೂರದಲ್ಲಿ ಕೃಷಿ ಭೂಮಿಯನ್ನು ಹೊಂದಿದ್ದು, ಆ ಜಮೀನಿನಲ್ಲಿ ಸಾವಯವ ಕೃಷಿ ತಜ್ಞರ ತಂಡವು ಅಭ್ಯಾಸ ಮಾಡುತ್ತಿದೆ. ಈ ಜಮೀನನ್ನು ಇದೀಗ ಜೂಹಿ ಜಮೀನು ಇಲ್ಲದ ರೈತರಿಗೆ ಕೃಷಿ ಚಟುವಟಿಕೆಗಾಗಿ ನೀಡಿದ್ದಾರೆ.

Advertisement

 

Advertisement

Advertisement

ಈ ಬಗ್ಗೆ ಮಾತನಾಡಿರುವ ಜೂಹಿ “ನಾವು ಪ್ರಸ್ತುತ ಲಾಕ್ ಡೌನ್ ನಲ್ಲಿರುವುದರಿಂದ, ನನ್ನ ಭೂಮಿಯನ್ನು ಭೂಹೀನ ರೈತರಿಗೆ ಕೃಷಿಗಾಗಿ ನೀಡಲು ನಿರ್ಧರಿಸಿದ್ದೇನೆ. ಅವರು ಈ ಸೀಸನ್’ನಲ್ಲಿ ಇಲ್ಲಿ ಭತ್ತವನ್ನು ಬೆಳೆಸಬಹುದು. ಪ್ರತಿಯಾಗಿ ಉತ್ಪನ್ನದ ಒಂದು ಸಣ್ಣ ಭಾಗವನ್ನು ನಿಮಗಾಗಿ ಇರಿಸಿಕೊಳ್ಳಬಹುದು” ಎಂದು ಹೇಳಿದ್ದಾರೆ.
“ಇದು ಹೊಸ ವಿಷಯವಲ್ಲ. ಹಳೆಯ ದಿನಗಳಲ್ಲಿ ಜನರು ಈ ರೀತಿ ಕೃಷಿ ಮಾಡುತ್ತಿದ್ದರು. ಇದು ಒಳ್ಳೆಯ ವಿಚಾರ. ನಮ್ಮ ರೈತರು ಮಣ್ಣು, ಗಾಳಿ, ಭೂಮಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ” ಎಂದು ತಿಳಿಸಿದ್ದಾರೆ ಜೂಹಿ.

Advertisement

 


ಅಷ್ಟೇ ಅಲ್ಲ, “ಈ ರೀತಿ ರೈತರಿಗೆ ಸಹಾಯ ಮಾಡುವುದರಿಂದ ನಮ್ಮೆಲ್ಲರಿಗೂ ಅನುಕೂಲವಾಗುತ್ತದೆ. ಆದ್ದರಿಂದ ನಮ್ಮ ರೈತರಿಗೆ ಕೈಲಾದಷ್ಟು ಸಹಾಯ ಮಾಡಬೇಕು ಎಂದು ಹೇಳಿರುವ ಜೂಹಿ, ಈ ಲಾಕ್ಡೌನ್ ನನ್ನ ಮನಸ್ಸಿಗೆ ಕೆಲವು ಒಳ್ಳೆಯ ಆಲೋಚನೆಗಳನ್ನು ತಂದಿದೆ” ಎಂದಿದ್ದಾರೆ. ಈ ಭೂಮಿಯಲ್ಲಿ ಸಾವಯವ ಬೇಸಾಯ ಮಾತ್ರ ಮಾಡಲಾಗುತ್ತಿದೆ. ಆದ್ದರಿಂದ ಭತ್ತದ ಗುಣಮಟ್ಟವನ್ನು ಗಮನದಲ್ಲಿರಿಸಿಕೊಳ್ಳಬೇಕೆಂದು ಜೂಹಿ ರೈತರನ್ನು ಕೇಳಿಕೊಂಡಿದ್ದು, ಈ ಕೃಷಿಯಲ್ಲಿ ಯಾವುದೇ ರಾಸಾಯನಿಕವನ್ನು ಬಳಸದಂತೆ ಎಚ್ಚರ ವಹಿಸುವಂತೆ ಕೇಳಿಕೊಂಡಿದ್ದಾರೆ.

 


ಕೊರೊನಾ ವೈರಸ್ ಕಾರಣದಿಂದಾಗಿ ಲಾಕ್ ಡೌನ್ ಆದ ಸಮಯದಲ್ಲಿ ಬಹುತೇಕರು ಕೃಷಿ ಚಟುವಟಿಕೆಗಳತ್ತ ಆಕರ್ಷಿತರಾಗಿದ್ದಾರೆ. ಇನ್ನು ಕೆಲವರು ಸಂತೋಷದಿಂದ ಗಿಡ ನೆಡುವುದು, ವಿವಿಧ ಬೀಜಗಳನ್ನು ಬಿತ್ತುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಜೂಹಿ ಚಾವ್ಲಾ ಸಹ ಸಾಕಷ್ಟು ಸಮಯವನ್ನು ತೋಟದಲ್ಲಿ ಕಳೆಯುತ್ತಿದ್ದಾರೆ. ಇತ್ತೀಚೆಗೆ ಜುಹಿ ಚಾವ್ಲಾ ಅವರು ಇನ್ಸ್ಟಾಗ್ರಾಮ್’ನಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, ಅವು ತುಂಬಾ ವೈರಲ್ ಆಗಿದ್ದವು.

 

ಈ ಚಿತ್ರಗಳಲ್ಲಿ ಜುಹಿ ತಮ್ಮ ಮನೆಯ ತೋಟದಲ್ಲಿ ಕೆಲವು ತರಕಾರಿಗಳನ್ನು ಬೆಳೆಯುವುದನ್ನು ನೀವು ನೋಡಿರಬಹುದು. ಜುಹಿ ತೋಟದಲ್ಲಿ ಟೊಮ್ಯಾಟೊ ಮತ್ತು ಮೆಂತ್ಯವನ್ನು ಬೆಳೆಯಲು ಬಯಸುತ್ತೇನೆ ಎಂದು ಫೋಟೋಗಳನ್ನು ಹಂಚಿಕೊಂಡಿದ್ದರು. ನಿಮಗೂ ಹೆಮ್ಮೆಯೆನಿಸಿದರೆ ಲೈಕ್ ಮಾಡಿ, ಶೇರ್ ಮಾಡಿ..ಕಮೆಂಟ್ ಮಾಡಿ..

Advertisement
Share this on...