ಈಗ ವ್ಯವಸಾಯ ಮಾಡುತ್ತಿರುವ ಈ ಖ್ಯಾತ ನಟಿಯರು ಯಾರು ಗೊತ್ತಾ..?

in ಮನರಂಜನೆ/ಸಿನಿಮಾ 766 views

ಭೂಮಿ ತಾಯಿಯ ಚೊಚ್ಚಲ ಮಗ ರೈತ. ಈ ಪ್ರಪಂಚದ ಅಳಿವು-ಉಳಿವು ನಿಂತಿರುವುದೇ ಈ ವ್ಯವಸಾಯದಿಂದ. ಅಷ್ಟೇ ಅಲ್ಲದೆ ಯಾವುದೇ ಕೆಲಸ ಮಾಡಿದರು ಸಿಗದಷ್ಟು ನೆಮ್ಮದಿ, ಸಂತೃಪ್ತಿ ವ್ಯವಸಾಯದಿಂದ ಸಿಗುತ್ತದೆ. ಅದನ್ನು ಅರಿತಿರುವ ಈ ನಟಿಯರು ತಮ್ಮ ಐಷಾರಾಮಿ ಜೀವನ ಐಷಾರಾಮಿ ಬಂಗಲೆಗಳನ್ನು ತೊರೆದು ಜಮೀನಿನಲ್ಲಿ ವ್ಯವಸಾಯ ಮಾಡಲು ಮುಂದಾಗಿದ್ದಾರೆ. ಅಷ್ಟಕ್ಕೂ ಆ ನಟಿಯರು ಯಾರು ಗೊತ್ತಾ..? ಬಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ನಟಿ ಯಾಮಿ ಗೌತಮಿ ಕೊರೊನಾದಿಂದ ಹಿಮಾಚಲ ಪ್ರದೇಶದ ತಮ್ಮ ಊರಿಗೆ ಹೋಗಿರುವ ಈ ನಟಿ ತಮಗಿರುವ ಜಮೀನಿನಲ್ಲಿ ಆರ್ಗ್ಯಾನಿಕ್ ಫಾರ್ಮಿಂಗ್ ಮಾಡಲು ಮುಂದಾಗಿದ್ದು ಕೆಲವೊಂದು ರಿಸರ್ಚ್ ಮಾಡಿ ವ್ಯವಸ್ಥಿತವಾಗಿ ವ್ಯವಸಾಯ ಮಾಡಲು ಮುಂದಾಗಿದ್ದಾರೆ ಈ ಸುಂದರ ನಟಿ. ಒಂದು ಕಾಲದಲ್ಲಿ ಕನ್ನಡಿಗರ ಹೃದಯಕ್ಕೆ ಹತ್ತಿರವಾದ ನಟಿ ಎಂದರೆ ಜೂಹಿ ಚಾವ್ಲಾ. ಬಾಲಿವುಡ್ ನಲ್ಲಿ ಹತ್ತಾರು ವರ್ಷ ಮಿಂಚಿದ ಈ ನಟಿ ಈಗ ವ್ಯವಸಾಯದತ್ತ ವಾಲಿದ್ದಾರೆ. ಈಗಾಗಲೇ ಕೃಷಿ ಭೂಮಿಯನ್ನು ಖರೀದಿಸಿರುವ ಜೂಹಿ ಚಾವ್ಲಾ ತಮ್ಮದೇ ಜಮಿನಿನಲ್ಲೀ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದು ಉತ್ಸುಕತೆಯಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

Advertisement

ತಮ್ಮ ಅದ್ಭುತ ನಟನೆಯ ಮೂಲಕ ಹಲವು ಭಾಷೆಗಳಲ್ಲಿ ಮಿಂಚಿದ ಸಂಪದ ಕುಲಕರ್ಣಿ. ಈಗ ಪೂರ್ತಿ ವ್ಯವಸಾಯದಲ್ಲಿ ತೊಡಗಿಸಿಕೊಳ್ಳಲು ಇಚ್ಛೀಸುತ್ತಿರುವ ಈ ನಟಿ ತಮ್ಮ ಹಳ್ಳಿಯಲ್ಲಿ ತಮಗಿರುವ ಭೂಮಿಯಲ್ಲಿ ವ್ಯವಸಾಯ ಮಾಡುತ್ತಾ ಇತರ ರೈತರಿಗೆ ಕೆಲಸವನ್ನು ಒದಗಿಸುತ್ತಿದ್ದಾರೆ. ಕನ್ನಡದ ಹತ್ತಾರು ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟ ಅರುಣ್ ಪಾಂಡ್ಯನ್. ಇವರ ಮಗಳು ಕೀರ್ತಿ ಪಾಂಡಿಯನ್ ಉದಯೋನ್ಮುಖ ನಟಿಯಾಗಿ ಗುರುತಿಸಿಕೊಂಡಿದ್ದು ತನ್ನ ತಂದೆಯ ಜೊತೆ ಜಮೀನಿನಲ್ಲಿ ವ್ಯವಸಾಯ ಮಾಡುವ ಕೀರ್ತಿ ಟ್ರ್ಯಾಕ್ಟರ್ ಹತ್ತಿ ಜಮೀನು ಉಳುಮೆ ಮಾಡುವುದರಿಂದ ಹಿಡಿದು ಕೆಸರಿನಲ್ಲಿ ಇಳಿದು ಪೈರು ನಾಟಿ ಮಾಡುವವರೆಗೆ ಎಲ್ಲಾ ಕೆಲಸವನ್ನು ಮಾಡುತ್ತಾರೆ.

Advertisement


ತಮ್ಮ ಮೊದಲ ಚಿತ್ರದಲ್ಲೇ ಸಕ್ಕತ್ ಹೆಸರು ಮಾಡಿದ ನಟಿ ಮಾಳವಿಕ ಗಾಯಕ್ ವಾಡ್. ನಂತರ ಹೆಚ್ಚು ವ್ಯವಸಾಯದಲ್ಲಿ ತೊಡಗಿಸಿಕೊಂಡಿರುವ ಈ ನಟಿ ತಮ್ಮ ಊರಿನಲ್ಲಿ ದೊಡ್ಡ ಮಟ್ಟದಲ್ಲಿ ವ್ಯವಸಾಯ ಮಾಡುತ್ತಾ ಅದರಲ್ಲಿ ಸಕ್ಸಸ್ ಜೊತೆ ನೆಮ್ಮದಿಯನ್ನು ಕಂಡುಕೊಂಡಿದ್ದಾರೆ. ಕನ್ನಡದ ಕಿರುತೆರೆ ಮತ್ತು ಬಿಗ್ ಬಾಸ್ ನಲ್ಲಿ ಮಿಂಚಿದ ನಟಿ ಭೂಮಿ ಶೆಟ್ಟಿ. ಕೊರೊನಾದಿಂದ ತಮ್ಮ ಊರಿಗೆ ಹೋದ ಭೂಮಿ ಶೆಟ್ಟಿ ತಮ್ಮ ಜಮೀನಿನಲ್ಲಿ ಕಠಿಣ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ತಮ್ಮ ಮನೆಯವರ ಜೊತೆ ವ್ಯವಸಾಯ ಮಾಡುತ್ತಿದ್ದಾರೆ.

Advertisement

ನ್ಯಾಷನಲ್ ಅವಾರ್ಡ್ ಪಡೆದ ಮಲೆಯಾಳಂ ನಟಿ ಸುರಭಿ ಲಕ್ಷ್ಮಿ ತಮ್ಮ ತೋಟದ ಕೆಲಸದಲ್ಲಿ ತೊಡಗಿಸಿಕೊಂಡಿದ್ದು ಸ್ವತಃ ತಾವೇ ತೋಟವನ್ನು ಕ್ಲೀನ್ ಮಾಡಿ ಉತ್ತಮ ಅಡಿಕೆ ಬೆಳೆಯನ್ನು ತೆಗೆಯಲು ಮುಂದಾಗಿದ್ದಾರೆ. ನಗರದ ಎ.ಸಿ ರೂಮ್ ನಲ್ಲಿ ಕುಳಿತಿರುವ ಬದಲು ಭೂಮಿ ತಾಯಿಯ ಮಡಿಲಲ್ಲಿ ವ್ಯವಸಾಯ ಮಾಡಲು ಹೊರಟಿರುವ ಈ ನಟಿಯರ ನಡೆ ಮೆಚ್ಚುವಂತಹದ್ದು.

– ಸುಷ್ಮಿತಾ

Advertisement
Share this on...