ಕೋಪ ಹಾಗೂ ಭಯವನ್ನು ನಿಯಂತ್ರಣದಲ್ಲಿಡಲು ಮಯೂರ ಮುದ್ರೆ !

in ಜ್ಯೋತಿಷ್ಯ 210 views

ಶ್ರೀ ಶಾರ್ವರಿ ಸಂವತ್ಸರೆ, ಉತ್ತರಾಯಣೆ, ಗ್ರೀಷ್ಮ ಋತು,  ಜೇಷ್ಠ ಮಾಸೇ, ಕೃಷ್ಣ ಪಕ್ಷದ ದ್ವಾದಶ ತಿಥಿ, ಭರಣಿ ನಕ್ಷತ್ರ, ಸುಕರ್ಮ ಯೋಗ, ತೈತುಲ ಕರ್ಣ, ಜೂನ್ 18 ರ  ಪಂಚಾಂಗದ  ಫಲವನ್ನು ಶ್ರೀ.  ರವಿಶಂಕರ್ ಗುರೂಜಿ  ಅವರು ನೀಡಿದ್ದಾರೆ.

Advertisement

ಎಲ್ಲಾ ಕಾಯಿಲೆಗಳು, ಸಮಸ್ಯೆಗಳು ಹೆಚ್ಚಾಗುತ್ತಿರುವುದಕ್ಕೆ  ಮನಸ್ಸನ್ನು  ಸ್ಥಿಮಿತದಲ್ಲಿ ಇಟ್ಟುಕೊಳ್ಳದೆ ಇರುವುದೇ ಕಾರಣ.  ಮನಸ್ಸಿನಲ್ಲಿರುವ  ಮಧುರವಾದ ನೆನಪುಗಳನ್ನು ನೆನಪಿಸಿಕೊಳ್ಳುತ್ತ  ಧ್ಯಾನ ಮಾಡುವುದರಿಂದ ಮಾನಸಿಕ ಒತ್ತಡವನ್ನು ದೂರ ಮಾಡಿ ಕಾಯಿಲೆಗಳು  ಮತ್ತು ಸಮಸ್ಯೆಗಳಿಂದಲೂ ಕೂಡ ದೂರಾಗಬಹುದು ಎಂದು ಗುರೂಜಿ ಅವರು ತಿಳಿಸಿದ್ದಾರೆ . ನಮ್ಮ ಮನಸ್ಸನ್ನು ಮತ್ತು ದೇಹವನ್ನು ಸದಾ ನಿಯಂತ್ರಣದಲ್ಲಿಟ್ಟುಕೊಳ್ಳಲು ಮಯೂರ ಮುದ್ರೆಯನ್ನು ಹಾಕುವುದು ಒಳ್ಳೆಯದು. ಈ ಮುದ್ರೆ ಕೋಪ ಮತ್ತು ಭಯವನ್ನು ನಿಯಂತ್ರಣದಲ್ಲಿಡುತ್ತದೆ ಅಲ್ಲದೆ ಈ ಮುದ್ರೆಯಿಂದ ತೂಕವನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು,  ಬಿಪಿ ಶುಗರ್ ಮತ್ತು ಮಾನಸಿಕ ಖಿನ್ನತೆಗಳಿಗೆಲ್ಲ ಈ ಮುದ್ರೆ ರಾಮಬಾಣ  ಎಂದು ಗುರೂಜಿ ಅವರು ಹೇಳಿದ್ದಾರೆ.  ಈ ಮುದ್ರೆಯ ಬಗ್ಗೆ ತಿಳಿದುಕೊಳ್ಳಲು ಕೊನೆಯಲ್ಲಿರುವ ವಿಡಿಯೋವನ್ನು ನೋಡಿ.

Advertisement

 

Advertisement

Advertisement

ನಿಮ್ಮ ರಾಶಿಗಳ ಫಲ ಹೇಗಿದೆ ?

ಮೇಷ ರಾಶಿ : ದಿನ ಚೆನ್ನಾಗಿದೆ , ಸಂಗೀತದ ಲಯ.. ಬೆಳಗ್ಗೆ ಎದ್ದಾಗಿನಿಂದ ಕುಣಿಸುತ್ತಿರುತ್ತದೆ, ಇಂದು  ಶುಭವಾರ್ತೆಯನ್ನು ಕೇಳುವಿರಿ .

ವೃಷಭರಾಶಿ : ಸ್ವಲ್ಪ ಒತ್ತಡ, ಮಾನಸಿಕ ಖಿನ್ನತೆ,  ಒಬ್ಬರೆ  ಅಳಬೇಕು ಅನ್ಸುತ್ತೆ,  ತಳಮಳಕ್ಕೆ ಒಳಗಾಗುತ್ತೀರಿ , ಇಂದು ಗುರುವಾರ  ಒಂದು ಹೊಸ ಬಟ್ಟೆಯನ್ನು ಧರಿಸಿಕೊಳ್ಳಿ , ಒಂದು ಒಳ್ಳೆಯ  ಸಿಹಿ ಮತ್ತು ಹೊಸದೊಂದು  ಅಡುಗೆಯನ್ನು ಮಾಡಿ ತಿನ್ನಿ ,  ಹೊಸದೊಂದು ಕೆಲಸದಲ್ಲಿ ಪ್ರಯತ್ನ , ಇದರಿಂದ ಹೊಸತನದ ಚಿಂತನೆ ಹುಟ್ಟುತ್ತದೆ  ಆಗ ಗೆಲುವು ನಿಮ್ಮದೇ.

ಮಿಥುನ ರಾಶಿ : ತುಂಟತನ, ಕಲಾವೃದ್ಧಿ , ಕಲಾವಿದರಿಗೆ ಇಂದು ಒಳ್ಳೆಯ ದಿನ ಚೆನ್ನಾಗಿದೆ.  ಅಣ್ಣ, ಅಕ್ಕ, ತಂಗಿ, ಕುಟುಂಬ ಎಲ್ಲರ ಜೊತೆ  ಒಂದು ಗುಡ್ ನ್ಯೂಸ್. ಮಗು ವಿಚಾರದಲ್ಲೊ,  ಮದುವೆ ವಿಚಾರದಲ್ಲೊ, ವಾಹನ ವಿಚಾರದಲ್ಲೊ,  ಉದ್ಯೋಗ ವಿಚಾರದಲ್ಲೊ ಕೇಳುತ್ತೀರಿ.

ಕರ್ಕಾಟಕ ರಾಶಿ : ಪ್ರಯತ್ನಕ್ಕೆ ತಕ್ಕ ಫಲ ,ಪ್ರಯತ್ನಕ್ಕೆ ಮೀರಿದ ಫಲವನ್ನು ಕೂಡ ನೋಡುತ್ತೀರಿ,  ಆಕಸ್ಮಿಕವಾಗಿ ತುಂಬಾ ಹಳೆಯ ಸ್ನೇಹಿತರೊ,  ಪ್ರೀತಿಯೊ,  ಹಳೆಯ ಸ್ನೇಹಿತನನ್ನು ಭೇಟಿ ಮಾಡುವ ಸುಯೋಗವನ್ನು ಪಡೆಯುತ್ತೀರಿ.

 

ಸಿಂಹ ರಾಶಿ: ಮನೆ ಮಾಡಿಕೊಳ್ಳಬೇಕು, ಗಾಡಿ  ತೆಗೆದುಕೊಳ್ಳಬೇಕು, ಇಂಟೀರಿಯರ್ ಅಲಂಕಾರ ಒಪ್ಪ ಹೊರಣ ಖರ್ಚು ಇಂತಹದ್ದೊಂದು ಯೋಚನೆ ಮಾಡಿ ಒಳ್ಳೆಯದೇ  ತೊಂದರೆ ಏನೂ ಇಲ್ಲ .

ಕನ್ಯಾ ರಾಶಿ : ಇಂದು ಸರ್ಪ್ರೈಸ್ ಗುಡ್ ನ್ಯೂಸ್ ಇರುತ್ತದೆ. ವ್ಯಾವಹಾರಿಕವಾಗಿಯೂ ಕುಟುಂಬ ನಿಮಿತ್ತವಾಗಿಯೋ ಒಂದು ಖುಷಿ ವಿಚಾರವನ್ನು ಕೇಳುವಂತಹ ಅದ್ಭುತವಾದ ದಿನ.

ತುಲಾ ರಾಶಿ : ಪರಿಶ್ರಮಕ್ಕೆ ತಕ್ಕ ಫಲ, ಸ್ವಲ್ಪ ಓಡಾಟ ಜಾಸ್ತಿ,  ಕೆಲವು ಸಮಯ  ಇನ್ನೊಬ್ಬರನ್ನು ನಂಬಿಕೊಂಡು ನೆಚ್ಚಿಕೊಂಡು ಇರಬಾರದು. ತೀರಾ ಪೊಸೆಸಿವ್,  ತೀರಾ ಡಿಪೆಂಡಿಗ್ ತುಂಬಾ ಕಷ್ಟ. ಸ್ವಲ್ಪ ಕಡಿಮೆ ಮಾಡಿಕೊಳ್ಳಿ.

ವೃಶ್ಚಿಕ ರಾಶಿ : ಒಡಹುಟ್ಟಿದವರ ಸಹಯೋಗ,  ಒಡಹುಟ್ಟಿದವರ ಬಗ್ಗೆ ತಲೆ ಕೆಡಿಸಿಕೊಂಡಿರುತ್ತೀರಿ,  ಸಂಗಾತಿಯಿಂದ ನೆರವು  ಒದಗಿ ಬರುತ್ತದೆ.

ಧನಸ್ಸು ರಾಶಿ : ಸ್ವಲ್ಪ ಬೆನ್ನು ನೋವು,  ಕುತ್ತಿಗೆ ನೋವು,  ಸೊಂಟ ನೋವು,   ಸ್ವಲ್ಪ ಜಾಗರುಕವಾಗಿರಿ. ಪದೇ ಪದೇ ಅನಾರೋಗ್ಯದಿಂದ ದಾರಿ ತಪ್ಪುತ್ತಿದೆ,  ದೇಹದ ಶಕ್ತಿಯೆಲ್ಲ ಕಡಿಮೆಯಾಗುತ್ತಿದೆ,  ದೇಹದ ಎಡಭಾಗ ಜೋಮು ಹಿಡಿಯುತ್ತಿದೆ  ಎಂದರೆ ಕಿಡ್ನಿ ಲಿವರ್ ಶುಗರ್ ಇವುಗಳಲ್ಲಿ ಏನೋ ವ್ಯತ್ಯಾಸವಾಗುತ್ತಿದೆ ಎಂಬುದರ ಸೂಚನೆ.  ಆದ್ದರಿಂದ ದೇಹದ ಸಂಪೂರ್ಣ   ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ದೇಹಕ್ಕೆ ಯಾವ ಪ್ರೋಟೀನ್ ಬೇಕು ಎಂಬುದನ್ನು ತಿಳಿದುಕೊಂಡು ಮುಂದಕ್ಕೆ ಹೆಜ್ಜೆ ಇಡಿ.

 

ಮಕರ ರಾಶಿ : ಕಷ್ಟಪಟ್ಟಿದ್ದಕ್ಕೆ ಒಂದು ತಕ್ಕದಾದ ಫಲ,  ಚಿಕ್ಕ ಚಿಕ್ಕ ಮೂವೀಸ್,  ಚಿಕ್ಕ ಚಿಕ್ಕ ಆರ್ಟಿಸ್ಟ ಗಳು,  ಚಿಕ್ಕಚಿಕ್ಕ ವ್ಯವಹಾರಗಳಲ್ಲಿ ತೊಡಗಿದ್ದೀರಿ ಅಂಥವರು ಸ್ವಲ್ಪ ಮಟ್ಟಿನ ಹಣಕಾಸಿನ ಲಾಭವನ್ನು ನೋಡುವ ಅಭಿವೃದ್ಧಿಯ ದಿನ.

ಕುಂಭ ರಾಶಿ:  ಪರಿಪೂರ್ಣ ಖುಷಿ ಕೊಡುವ ದಿನ, ಒಂದು ಒಳ್ಳೆಯ ಸುದ್ದಿ ಕೇಳುವಿರಿ,  ದೂರದ ಊರು,  ದೂರದ ಕೆಲಸ,  ದೂರದ ವ್ಯವಹಾರದಲ್ಲೊಂದು ಅದ್ಭುತವಾದ ಘಟನೆಯೊಂದು ನಡೆಯುವ ದಿನ.

ಮೀನ ರಾಶಿ : ಸ್ವಲ್ಪ ತಳಮಳ,  ಕೀಲು ನೋವು,  ಮಂಡಿ ನೋವು,  ಪಾದ ನೋವು,  ಇದ್ದರೆ ಜಾಗರೂಕತೆಯಿಂದ ಇರಿ,  ತಾಯಿಯಿಂದ ಸಹಯೋಗ,  ತಾಯಿಯಿಂದ ಸಹಕಾರ,  ಅತ್ತೆ,  ಅಮ್ಮ,  ಹತ್ತಿರದ ಬಂಧುಗಳು,  ಆತ್ಮೀಯರುಗಳಿಂದ  ಒಳ್ಳೆಯ ಮಾತು,  ಒಳ್ಳೆಯ ಭೋಜನದ ಸಹಯೋಗ ಉಂಟು

Advertisement
Share this on...