ದೇವಸ್ಥಾನಗಳ ಬಗ್ಗೆ ವಿವಾದಾತ್ಮಕ ಹೇಳಿಕೆ…ಪತ್ನಿ ಜ್ಯೋತಿಕಾ ಬೆಂಬಲಕ್ಕೆ ನಿಂತ ಸೂರ್ಯ

in News 68 views

ದೇವಸ್ಥಾನಗಳ ಬಗ್ಗೆ ತಮಿಳು ನಟಿ ಜ್ಯೋತಿಕಾ ನೀಡಿದ ಹೇಳಿಕೆಗೆ ಪರ ವಿರೋಧ ಚರ್ಚೆ ಆರಂಭವಾಗಿದ್ದು ಹಿಂದೂಪರ ಸಂಘಟನೆಗಳು ಸೇರಿ ಬಹಳಷ್ಟು ಮಂದಿ ಜ್ಯೋತಿಕಾ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಆದರೆ ಜ್ಯೋತಿಕಾ ಬೆಂಬಲಕ್ಕೆ ಅವರ ಪತಿ ಸೂರ್ಯ ನಿಂತಿದ್ದಾರೆ. ಜಸ್ಟ್ ಫಾರ್ ವಿಮೆನ್ ಪ್ರಶಸ್ತಿ ಸಮಾರಂಭದ ವೇಳೆ ಜ್ಯೋತಿಕಾ ಆಡಿದ್ದ ಮಾತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ದೇವಸ್ಥಾನಗಳಿಗೆ ಹಣ ನೀಡುವ ಬದಲು ಅದನ್ನು ಆಸ್ಪತ್ರೆ ಹಾಗೂ ಶಾಲೆಗಳ ನಿರ್ಮಾಣಕ್ಕೆ ನೀಡಬೇಕು ಎಂದು ಜ್ಯೋತಿಕಾ ಹೇಳಿದ್ದರು.

Advertisement

 

Advertisement

 

Advertisement

Advertisement

 

‘ರಾಚಸಿ’ ಚಿತ್ರದ ನಟನೆಗಾಗಿ ಜ್ಯೋತಿಕಾ ಜಸ್ಟ್ ಫಾರ್ ವಿಮೆನ್ ಪ್ರಶಸ್ತಿ ಸಮಾರಂಭದಲ್ಲಿ ಸಿಮ್ರಾನ್​ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು. ಆ ವೇಳೆ ಚಿತ್ರದ ಚಿತ್ರೀಕರಣದಲ್ಲಿ ತಮಗೆ ಉಂಟಾದ ಅನುಭವವನ್ನು ಹೇಳಿಕೊಂಡಿದ್ದರು. ‘ಒಮ್ಮೆ ಚಿತ್ರೀಕರಣ ನಡೆಯುವಾಗ ಶೂಟಿಂಗ್ ಪ್ಯಾಕ್​​​ ಅಪ್ ನಂತರ ಎಲ್ಲರೂ ಅಲ್ಲೇ ಹತ್ತಿರದಲ್ಲಿದ್ದ ಬೃಹದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲು ನಿರ್ಧರಿಸಿದರು. ಅದರಂತೆ ಎಲ್ಲರೂ ಆಸ್ಪತ್ರೆಗೆ ತೆರಳಿದೆವು. ದೇವಸ್ಥಾನ ಬಹಳ ಸುಂದರವಾಗಿತ್ತು. ಉದಯಪುರದ ಅರಮನೆಯಂತೇ ಅದನ್ನು ನಿರ್ವಹಣೆ ಮಾಡಲಾಗಿತ್ತು.

 

 

ಆದರೆ ಮರುದಿನ ಆಸ್ಪತ್ರೆಯಲ್ಲಿ ಶೂಟಿಂಗ್ ಇದ್ದಿದ್ದರಿಂದ ಅಲ್ಲಿಗೆ ಹೋಗಬೇಕಾಯ್ತು. ಆದರೆ ಆಸ್ಪತ್ರೆ ನೋಡಲು ಬಹಳ ಗಲೀಜು ಇತ್ತು. ಅಲ್ಲಿ ಸೂಕ್ತ ನಿರ್ವಹಣೆ ಇರಲಿಲ್ಲ. ದೇವಸ್ಥಾನದ ನಿರ್ವಹಣೆಗೂ ಆಸ್ಪತ್ರೆ ನಿರ್ವಹಣೆಗೂ ಬಹಳ ವ್ಯತ್ಯಾಸವಿತ್ತು. ಇದರಿಂದ ನನಗೆ ಬಹಳ ಬೇಸರವಾಯ್ತು. ದೇವಸ್ಥಾನಕ್ಕಾಗಿ ಜನರು ಸಾಕಷ್ಟು ಹಣ ಖರ್ಚು ಮಾಡುತ್ತಾರೆ. ಆದರೆ ಅದೇ ಹಣವನ್ನು ಆಸ್ಪತ್ರೆಗಳ ಹಾಗೂ ಶಾಲೆಗ ನಿರ್ವಹಣೆಗೆ ನೀಡಿದರೆ ಚೆನ್ನಾಗಿರುತ್ತದೆ. ಆಸ್ಪತ್ರೆ ಹಾಗೂ ಶಾಲೆಗಳಷ್ಟೇ ಮುಖ್ಯ’ ಎಂದು ಜ್ಯೋತಿಕಾ ಹೇಳಿದ್ದರು. ಆದರೆ ಕೆಲವು ಸಂಘಟನೆಗಳು ಇದನ್ನೇ ದೊಡ್ಡದಾಗಿ ಮಾಡುತ್ತಾ ಜ್ಯೋತಿಕಾ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗುವ ಹೇಳಿಕೆ ನೀಡಿದ್ದಾರೆ. ಅದಕ್ಕೆ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದವರು.

 

 

ಇದೀಗ ನಟ ಸೂರ್ಯ ಪತ್ನಿ ಬೆಂಬಲಕ್ಕೆ ನಿಂತಿದ್ದಾರೆ. ‘ವಿವೇಕಾನಂದ ಮತ್ತು ತಿರುಮುಲರ್ ಅಂತಹ ದೊಡ್ಡ ಡೊಡ್ಡ ವಿದ್ವಾಂಸರು ಹಾಗೂ ಸಂತರು ಇದನ್ನೇ ಹೇಳಿದ್ದರು. ಆದರೆ ಅಂತಹ ಉತ್ತಮ ಸಂದೇಶಗಳಿಗೆ ಕಿವುಡರಾಗಿದ್ದ ಜನರು ಈಗ ಜ್ಯೋತಿಕಾ ಮಾತಿನಲ್ಲಿ ವಿವಾದ ಸೃಷ್ಟಿಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ ಅಲ್ಲದೆ ‘ದೇವರನ್ನು ದೇವಸ್ಥಾನದಲ್ಲಿ ಮಾತ್ರವಲ್ಲ, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಲ್ಲಿ ಕಾಣಬಹುದು ಎಂಬ ಸತ್ಯವನ್ನು ಎಲ್ಲಾ ಧರ್ಮಗಳೂ ಒಪ್ಪಿಕೊಂಡಿವೆ.

 

 

ಜ್ಯೋತಿಕಾ ಹೇಳಿದ್ದು ಕೂಡಾ ಅದನ್ನೇ. ಧರ್ಮಕ್ಕಿಂತಲೂ ಮುಖ್ಯವಾಗಿ ನಮ್ಮ ಮಕ್ಕಳಿಗೆ ಮಾನವೀಯತೆ ಕಲಿಸುತ್ತಿದ್ದೇವೆ. ಕೆಲವರು ದ್ವೇಷ ಬಿತ್ತಲು ಪ್ರಯತ್ನಿಸುತ್ತಿದ್ದರೂ ಮಾಧ್ಯಮ ಸಂಸ್ಥೆಗಳು, ಅಭಿಮಾನಿಗಳು, ಸ್ನೇಹಿತರು ಹಾಗೂ ಹಿತೈಷಿಗಳು ನಮ್ಮ ಬೆಂಬಲಕ್ಕೆ ನಿಂತಿರುವುದು ಖುಷಿ ನೀಡಿದೆ’ ಎಂದು ಸೂರ್ಯ ಹೇಳಿಕೊಂಡಿದ್ದಾರೆ.

Advertisement
Share this on...