ಕೆ.ಎಲ್ ರಾಹುಲ್ ಎಂಬ ಕನ್ನಡಿಗ….

in News/ಕ್ರೀಡೆ 199 views

ಕ್ರಿಕೆಟಿಗ ಕೆ ಎಲ್ ರಾಹುಲ್ ಯಾರಿಗೆ ಗೊತ್ತಿಲ್ಲ ಹೇಳಿ ಅವರ ಅದ್ಭುತ ಪ್ರದರ್ಶನದಿಂದಾಗಿ ಭಾರತ ಕ್ರಿಕೆಟ್ ಲೋಕದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಮೂಡಿಸುತ್ತಿದ್ದಾರೆ , ಬ್ಯಾಟಿಂಗ್ ಕೀಪಿಂಗ್ ಫೀಲ್ಡಿಂಗ್ ಎಲ್ಲಾ ರೀತಿಯಲ್ಲೂ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ , ಎಲ್ಲಾದಕಿಂತ ಹೆಚ್ಚು ಇವರು ನಮ್ಮ ಕನ್ನಡಿಗ ಎಂಬುದು ಹೆಮ್ಮೆಯ ವಿಷಯ. ಪ್ರಸ್ತುತ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಆಗಿರುವ ಇವರು ಉತ್ತಮ ಪ್ರದರ್ಶನವನ್ನೂ ತಮ್ಮ ಬ್ಯಾಟಿಂಗ್ ವಿಭಾಗದಲ್ಲಿ ಕೊಡುತ್ತಾ ಇದ್ದಾರೆ ,ಆದರೆ ನಾಯಕತ್ವದಲ್ಲಿ ಕೊಂಚ ಎಡವುತ್ತಿದ್ದಂತೆ ಕಾಣಿಸುತ್ತದೆ ಏಕೆಂದರೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅಂತ ಹೇಳಿಕೊಳ್ಳುವಂತ ಪ್ರದರ್ಶನ ಏನೂ ನೀಡುತ್ತಿಲ್ಲ ಸದ್ಯದ ಮಟ್ಟಿಗೆ. ಇವರು 1992 ಏಪ್ರಿಲ್ 18ರಂದು ಮಂಗಳೂರಲ್ಲಿ ಜನಿಸುತ್ತಾರೆ ಇವರ ತಂದೆ ಕೆ ಎನ್ ಲೋಕೇಶ್ ತಾಯಿ ರಾಜೇಶ್ವರಿ , ಇವರ ತಂದೆ ಸುನಿಲ್ ಗವಾಸ್ಕರ್ ಅವರ ದೊಡ್ಡ ಅಭಿಮಾನಿ ಆಗಿರುತ್ತಾರೆ ತಮ್ಮ ಮಗನಿಗೆ ಅದೇ ಹೆಸರು ಇಡಲು ಇಚ್ಛಿಸಿರುತ್ತಾರೆ.

Advertisement

Advertisement

ರಾಹುಲ್ ಅವರು ತಮ್ಮ ಶಿಕ್ಷಣವನ್ನು ಮಂಗಳೂರಿನಲ್ಲಿ ಮತ್ತೆ ಬೆಂಗಳೂರಿನಲ್ಲಿ ಮಾಡುತ್ತಾರೆ ,ಇವರು ತಮ್ಮ 10ನೆ ವಯಸ್ಸಲ್ಲೇ ಕ್ರಿಕೆಟ್ ಅಭ್ಯಾಸವನ್ನು ಪ್ರಾರಂಭಿಸುತ್ತಾರೆ .
ಇವರು 2010 ರಲ್ಲಿ ಕರ್ನಾಟಕ ತಂಡದ ಪರವಾಗಿ ಆಡಲು ಶುರು ಮಾಡುತ್ತಾರೆ, ಐಪಿಎಲ್ ನಲ್ಲಿ ಮೊದಲು ಬೆಂಗಳೂರು ತಂಡದ ಪರವಾಗಿ ಆಡುತ್ತಾರೆ 2013 ರಲ್ಲಿ ನಂತರ 2014-15ರಲ್ಲಿ ಸನ್ ರೈಸರ್ಸ್ ಹೈದರ ಬಾದ್ ಪರವಾಗಿ ಆಡುತ್ತಾರೆ ನಂತರ ಮತ್ತೆ 2016 ರಲ್ಲಿ ಬೆಂಗಳೂರು ತಂಡದ ಪರವಾಗಿ ಆಡುತ್ತಾರೆ ಆ ನಂತರ 2017ರಲ್ಲಿ ತಮ್ಮ ಭುಜದ ಸಮಸ್ಯೆ ಇಂದಾಗಿ ಐಪಿಎಲ್ ಇಂದ ಹೊರ ಉಳಿಯ ಬೇಕಾಯಿತು ಆದರೆ 2018ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಇವರನ್ನು ಖರಿದಿಸುತ್ತದೆ ,ಪ್ರಸ್ತುತ ಇವರು ಅದೇ ತಂಡದಲ್ಲಿ ಆಡುತ್ತಾ ಇದ್ದಾರೆ.

Advertisement

ಅಂತರಾಷ್ಟ್ರೀಯ ಪಂದ್ಯವನ್ನು 2014 ರಲ್ಲಿ ಶುರು ಮಾಡುತ್ತಾರೆ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆಡುತ್ತಾರೆ ಆರಂಭದಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡದಿದ್ದರೂ ನಂತರದ ಅವಧಿಯಲ್ಲಿ ಒಳ್ಳೆಯ ಪ್ರದರ್ಶನ ಕೊಟ್ಟು ಈಗ ಪ್ರಸ್ತುತ ಭಾರತ ತಂಡದ ಪ್ರಮುಖ ಬ್ಯಾಟ್ಸ್ ಮ್ಯಾನ್ ಆಗಿ ಆಡುತ್ತಾ ಇದ್ದಾರೆ.ಕಳೆದ ವಿಶ್ವ ಕಪ್ ನಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದಾರೆ ಹಾಗೂ ಅನೇಕ ಸರಣಿಗಳಲ್ಲಿ ಅದ್ಬುತ ಆಟವನ್ನು ನೀಡುತ್ತಾ ಬಂದಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಇವರು ನಮ್ಮ ಕನ್ನಡದವರು ಎನ್ನಲು ತುಂಬಾ ಸಂತೋಷ ಆಗುತ್ತದೆ,ಕೆಲವು ಪಂದ್ಯಗಳಲ್ಲಿ ಇವರೊಂದಿಗೆ ಮತ್ತೊಬ್ಬ ಕನ್ನಡಿಗ ಇದ್ದಾರೆ ಇವರು ಕನ್ನಡದಲ್ಲಿಯೇ ಮಾತನಾಡುತ್ತಾರೆ ಆ ಮಾತುಗಳನ್ನು ಕೇಳಲು ತುಂಬಾ ಖುಷಿಯಾಗುತ್ತದೆ.

Advertisement

ಕಳೆದ ನ್ಯೂಜಿಲ್ಯಾಂಡ್ ಸರಣಿಯಲ್ಲಿ ಮನೀಶ್ ಪಾಂಡೆ ಅವರೊಂದಿಗೆ ಕನ್ನಡದಲ್ಲಿ ಮಾತನಾಡುತ್ತಾ ಬ್ಯಾಟಿಂಗ್ ಮಾಡುತ್ತಿದ್ದರು, ಅಷ್ಟೆ ಅಲ್ಲದೆ ಈ ಬಾರಿಯ ಐಪಿಎಲ್ ಪಂದ್ಯದಲ್ಲೂ ಕೆಲವು ಕನ್ನಡ ಪದಗಳನ್ನು ಬಳಸಿರುವುದನ್ನು ನಾವು ನೋಡಿದ್ದೇವೆ. ಇದೆಲ್ಲ ಏನೇ ಇದ್ದರೂ ಇವರು ತಮ್ಮ ಅದ್ಬುತ ಆಟವನ್ನು ನೀಡುತ್ತಾ ತುಂಬಾ ಎತ್ತರ ಬೆಳೆಯಲಿ ನಮ್ಮ ಕನ್ನಡ ನಾಡಿನ ಹೆಮ್ಮೆಯನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಹಾರೈಸೋಣ..
ಶರತ್ ಕುಮಾರ್ ಟಿ
ಸಾರಗನ ಜೆಡ್ಡು.

Advertisement
Share this on...