ಮದುವೆ ಸಂಭ್ರಮದಲ್ಲಿದ್ದಾರೆ ಕಾಜಲ್ ಅಗರ್ವಾಲ್ ! ಹುಡುಗ ಯಾರು ಗೊತ್ತಾ?

in ಮನರಂಜನೆ/ಸಿನಿಮಾ 71 views

ಬಹುಭಾಷಾ ತಾರೆ ಕಾಜಲ್ ಅಗರ್ವಾಲ್ ಕಳೆದ 13 ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಅವರ ಬಗ್ಗೆ ಏನೇ ಗಾಸಿಪ್ ಹರಡಿದರೂ, ಅದರ ನಡುವೆಯೂ ಅವರು ಉನ್ನತ ಸ್ಥಾನದಲ್ಲಿದ್ದಾರೆ. ಅಂದಹಾಗೆ ಕಾಜಲ್ ಇತ್ತೀಚೆಗೆ ತಮ್ಮ 35 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸದ್ಯ ಅವರ ಕೈಯ್ಯಲ್ಲಿ ಒಂದೆರಡು ಆಸಕ್ತಿದಾಯಕ ಸಿನಿಮಾಗಳಿದ್ದು, ಸ್ಟಾರ್ ಹೀರೋಗಳಿಂದ ಯಾವುದೇ ಆಫರ್’ಗಳನ್ನು ಪಡೆಯದಿದ್ದರೂ, ಅವರ ವೃತ್ತಿಜೀವನವು ಸುಗಮವಾಗಿ ನಡೆಯುತ್ತಿದೆ.  ಇನ್ನು ಕಾಜಲ್ ಅವರ ವಿವಾಹವು ಪಾಪರಾಜಿಗಳಿಗೆ ಅತ್ಯಂತ ಆಸಕ್ತಿದಾಯಕ ವಿಷಯವಾಗಿದ್ದು, ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದಾಗಲೆಲ್ಲಾ ಕಾಜಲ್’ಗೆ ಈ ಪ್ರಶ್ನೆಯನ್ನು ಕೇಳುತ್ತಲೇ ಇರುತ್ತಾರೆ. ಆದರೆ ಪ್ರತಿ ಬಾರಿಯೂ ಕಾಜಲ್ ಜಾಣತನದಿಂದ ತನ್ನ ವೃತ್ತಿಜೀವನದತ್ತ ಗಮನ ಹರಿಸುತ್ತಿರುವ ಬಗ್ಗೆ ಮಾತ್ರ ಹೇಳಿ ಅಂತಹ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುತ್ತಾರೆ. ಆಗಾಗ ಕಾಜಲ್ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿದ್ದವು.

Advertisement

 

Advertisement


ವಿಶ್ವಾಸಾರ್ಹ ಮೂಲಗಳಿಂದ ಬಂದ ಇತ್ತೀಚಿನ ಸುದ್ದಿ ಏನೆಂದರೆ, ಉತ್ತರ ಭಾರತದ ಸುಂದರಿ ಕಾಜಲ್ ಅಂತಿಮವಾಗಿ ಮದುವೆಯಾಗಲು ತಯಾರಾಗುತ್ತಿದ್ದಾರೆ. ಈ ವಿಚಾರವಾಗಿ ಕಾಜಲ್ ಆಕೆಯ ಪೋಷಕರಿಗೆ ಹಸಿರು ಸಂಕೇತ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಕಾಜಲ್ ಮದುವೆಯಾಗುತ್ತಿರುವ ಹುಡುಗ ಔರಂಗಾಬಾದ್ನ ಉದ್ಯಮಿ ಎಂದು ವರದಿಯಾಗಿದ್ದು, ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಅಧಿಕೃತವಾಗಿ ಬಹಿರಂಗಪಡಿಸಲಾಗುವುದು ಎಂದು ತಿಳಿಸಲಾಗಿದೆ. ಈ ಸುದ್ದಿಯಲ್ಲಿ ಏನಾದರೂ ಸತ್ಯವಿದೆಯೇ ಅಥವಾ ಇಲ್ಲವೇ ಎಂದು ಕಂಡುಹಿಡಿಯಲು ನಾವು ಇನ್ನೂ ಕೆಲವು ದಿನಗಳವರೆಗೆ ಕಾಯಬೇಕಾಗಿದೆ.

Advertisement


ಕಾಜಲ್ ಪ್ರಸ್ತುತ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ‘ಆಚಾರ್ಯ’ ಮತ್ತು ಕಮಲ್ ಹಾಸನ್-ಶಂಕರ್ ಅವರ ‘ಇಂಡಿಯನ್ 2’ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ, ಅವರು ‘ಮುಂಬೈ ಸಾಗಾ’ ಮತ್ತು ‘ಹೇ ಸಿನಾಮಿಕಾ’, ಮಂಚು ವಿಷ್ಣು ಜೊತೆ ‘ಮೊಸಾಗಲ್ಲು’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರ ‘ಪ್ಯಾರಿಸ್ ಪ್ಯಾರಿಸ್’ ಚಿತ್ರದ ಬಿಡುಗಡೆಯ ದಿನಾಂಕ ಇನ್ನು ತಿಳಿದುಬಂದಿಲ್ಲ.

Advertisement

 


ಮೆಗಾಸ್ಟಾರ್ ಚಿರಂಜೀವಿ ಅವರ ‘ಆಚಾರ್ಯ’ ಚಿತ್ರದಲ್ಲಿ ನಾಯಕಿಯ ಪಾತ್ರ ಮಾಡುವ ಬಗ್ಗೆ ನಿರ್ದೇಶಕ ಕೊರಟಾಲ ಶಿವ ದೂರವಾಣಿ ಕರೆ ಮಾಡಿದ ನಂತರ ಕಥೆ ಅಥವಾ ಸೀನ್’ಗಳನ್ನು ಕೇಳದೆ ಕಾಜಲ್ ಚಿತ್ರಕ್ಕೆ ಓಕೆ ಮಾಡಿದರು ಎನ್ನಲಾಗಿದೆ. ಆದರೆ ಈ ಚಿತ್ರದಲ್ಲಿ ನಟಿಸಲು ಕಾಜಲ್ 2.5 ಕೋಟಿಗೂ ಹೆಚ್ಚು ಬೇಡಿಕೆ ಇಟ್ಟಿದ್ದಾರೆ ಎಂಬ ವದಂತಿಗಳು ಹೊರಬಂದಿತು. ಕೊನೆಗೆ ಕಾಜಲ್ 1 ಕೋಟಿ ಸಂಭಾವನೆಗಾಗಿ ಚಿತ್ರ ಮಾಡಲು ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ ಚಿತ್ರತಂಡದಿಂದ ಅಧಿಕೃತ ಪ್ರಕಟಣೆ ಇದುವರೆಗೂ ಹೊರಬಿದ್ದಿಲ್ಲ.

Advertisement
Share this on...