ಡಾರ್ಲಿಂಗ್ ಹುಡುಗಿಗೆ ಕೂಡಿ ಬಂತು ಕಂಕಣ ಭಾಗ್ಯ…ಅಭಿಮಾನಿಗಳ ಆಶೀರ್ವಾದ ಬಯಸಿದ ನಟಿ

in ಮನರಂಜನೆ/ಸಿನಿಮಾ 181 views

ಸಿನಿಮಾ ನಟಿಯರು ತಮ್ಮ ಕರಿಯರ್ ನಡುವೆ ಮದುವೆ ಕಡೆ ಹೆಚ್ಚಾಗಿ ಗಮನ ಕೊಡುವುದಿಲ್ಲ. ಮೊದಲು ಹಣ, ಕೀರ್ತಿ ಸಂಪಾದಿಸಿ ಸಾಧನೆ ಮಾಡಿದ ನಂತರ ಮದುವೆ ಆದರಾಯಿತು ಎಂದುಕೊಳ್ಳುತ್ತಾರೆ. ಕೆಲವೇ ಕೆಲವು ನಟಿಯರು ಮಾತ್ರ ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಮದುವೆಯಾಗುತ್ತಾರೆ. ಕೆಲವರು ಮದುವೆಯಾದ ನಂತರ ಕೂಡಾ ನಟಿಸುತ್ತಾರೆ. ಇದೀಗ ಟಾಲಿವುಡ್ ನಟಿ ಕಾಜಲ್ ಅಗರ್​​​ವಾಲ್​​​ಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ತಾವು ಬಹಳ ದಿನಗಳಿಂದ ಇಷ್ಟ ಪಟ್ಟಿದ್ದ ಗೌತಮ್ ಎಂಬುವವರನ್ನು ಕಾಜಲ್ ಅಗರ್​​ವಾಲ್ ಕೈ ಹಿಡಿಯುತ್ತಿದ್ದಾರೆ. ಕಾಜಲ್ ಅಗರ್​​ವಾಲ್ ಗೌತಮ್ ಎಂಬುವವರೊಂದಿಗೆ ತಿರುಗಾಡುತ್ತಿದ್ದಾರೆ. ಅವರನ್ನೇ ಮದುವೆಯಾಗುತ್ತಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ ಕಾಜಲ್ ಈ ಬಗ್ಗೆ ಏನೂ ಹೇಳಿರಲಿಲ್ಲ. ಆದರೆ ಇದೀಗ ತಮ್ಮ ಮದುವೆ ಬಗ್ಗೆ ಸ್ವತ: ಕಾಜಲ್ ಅಗರ್​ವಾಲ್ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

Advertisement

Advertisement

ಇಂದು ತಮ್ಮ ಮದುವೆ ಬಗ್ಗೆ ಅಧಿಕೃತವಾಗಿ ಘೋಷಿಸಿರುವ ಕಾಜಲ್ ಅಗರ್​​ವಾಲ್, “ಗೌತಮ್ ಕಿಚ್ಲು ಹಾಗೂ ನಾನು ಇದೇ ಅಕ್ಟೋಬರ್ 30 ರಂದು ಮುಂಬೈನಲ್ಲಿ ಮದುವೆಯಾಗುತ್ತಿದ್ದೇವೆ. ಹೊಸ ಜೀವನ ಆರಂಭಿಸಲು ನಿರ್ಧರಿಸಿದ್ದೇವೆ. ಈ ಕಷ್ಟಕರ ಪರಿಸ್ಥಿತಿಯಲ್ಲಿ ಮದುವೆಯಾಗುತ್ತಿದ್ದೇವೆ. ಕುಟುಂಬದ ಕೆಲವೇ ಮಂದಿ ಆಪ್ತರು ಹಾಗೂ ಸ್ನೇಹಿತರು ಈ ಸಮಾರಂಭದಲ್ಲಿ ಹಾಜರಿರುತ್ತಾರೆ. ನನಗೆ ನಿಮ್ಮ ಆಶೀರ್ವಾದ ಬೇಕು. ಮದುವೆಯಾದ ನಂತರ ಕೂಡಾ ನನ್ನ ಜೀವಕ್ಕೆ ಜೀವವಾದ ನಟನೆಯನ್ನು ಮುಂದುವರೆಸುತ್ತೇನೆ” ಎಂದು ಬರೆದುಕೊಂಡಿದ್ದಾರೆ. ಕಾಜಲ್ ಅಗರ್​ವಾಲ್​​ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದಕ್ಕೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಜೋಡಿಗಳಿಗೆ ಶುಭ ಕೋರಿದ್ದಾರೆ.

Advertisement

ಪಂಜಾಬಿ ಕುಟುಂಬಕ್ಕೆ ಸೇರಿದ ಕಾಜಲ್ ಅಗರ್​​ವಾಲ್ ಹುಟ್ಟಿ ಬೆಳೆದದ್ದು ಮಹಾರಾಷ್ಟ್ರದ ಮುಂಬೈನಲ್ಲಿ. ಕಾಜಲ್ ತಂದೆ ವಿನಯ್ ಅಗರ್​ವಾಲ್ ಹಾಗೂ ತಾಯಿ ಸುಮನ್ ಅಗರ್​​ವಾಲ್. ಕಾಜಲ್​​ ಸಹೋದರಿ ನಿಶಾ ಅಗರ್​ವಾಲ್ ಕೂಡಾ ನಟಿ. ಮೊದಲಿನಿಂದಲೂ ಸಿನಿಮಾದಲ್ಲಿ ಆಸಕ್ತಿಯಿದ್ದ ಕಾಜಲ್ ಅಗರ್​ವಾಲ್​​​​ಗೆ 2004 ರಲ್ಲಿ ಹಿಂದಿ ಚಿತ್ರವೊಂದರಲ್ಲಿ ಚಿಕ್ಕ ಪಾತ್ರ ದೊರೆಯಿತು. ಆದರೆ ಈ ಸಿನಿಮಾ 2008 ರಲ್ಲಿ ಬಿಡುಗಡೆಯಾಯಿತು. 2007 ರಲ್ಲಿ ತೆಲುಗಿನ ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ತೆಲುಗಿನಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದ ಕಾಜಲ್ ಅಗರ್​​ವಾಲ್​​​​​​ ಅವರನ್ನು ತೆಲುಗು ಪ್ರೇಕ್ಷಕರು ಅಪ್ಪಿಕೊಂಡರು. ಅಲ್ಲಿಂದ ಅವರು ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲೇ ಹೆಚ್ಚು ಸಕ್ರಿಯರಾದರು.

Advertisement

ಮಗಧೀರ, ಡಾರ್ಲಿಂಗ್, ಆರ್ಯ 2, ಮಿ. ಪಫೆಕ್ಟ್, ಸಿಂಗಂ, ಬ್ಯುಸ್ನೆಸ್ ಮ್ಯಾನ್, ತುಪಾಕಿ, ಬಾದ್​ಷಾ, ಟೆಂಪರ್, ಮಾರಿ, ಜನತಾ ಗ್ಯಾರೇಜ್, ನೇನೇ ರಾಜು ನೇನೆ ಮಂತ್ರಿ, ಸೀತ, ಇಂಡಿಯನ್ 2, ಪ್ಯಾರಿಸ್ ಪ್ಯಾರಿಸ್ ಸೇರಿ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಜಲ್ ಅಗರ್​​ವಾಲ್ ನಟಿಸಿದ್ದಾರೆ. ಇದೀಗ ಈಕೆ ಜೀವನದ ಮತ್ತೊಂದು ಘಟ್ಟಕ್ಕೆ ಕಾಲಿಡುತ್ತಿದ್ದು ಕಾಜಲ್ ಅಗರ್​ವಾಲ್ ವೈಯಕ್ತಿಕ ಜೀವನ ಸಂತೋಷವಾಗಿರಲಿ ಎಂದು ಹಾರೈಸೋಣ.

Advertisement
Share this on...