ಕಾಳಸರ್ಪ ದೋಷ – ತಿಳಿದುಕೊಳ್ಳಿ….ಹೀಗೆ ನಿವಾರಣೆ ಮಾಡಿಕೊಳ್ಳಿ

in ಜ್ಯೋತಿಷ್ಯ 1,443 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್   ಋತು,  ಅಧಿಕ ಮಾಸೆ,  ಕೃಷ್ಣ  ಪಕ್ಷದ ಅಷ್ಟಮಿ ತಿಥಿ,  ಪುನರ್ವಸು ನಕ್ಷತ್ರ,  ಶಿವ ಯೋಗ,  ಕೌಲವ ಕರಣ  ಅಕ್ಟೋಬರ್ 10 ಶನಿವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ಅವರು ನೀಡಿದ್ದಾರೆ.  ಇಂದು ಅಮೃತ ಕಾಲ ಮಧ್ಯರಾತ್ರಿ ಬರುವುದರಿಂದ ಉಲ್ಲೇಖ ಮಾಡಿಲ್ಲ.

Advertisement

ಜನ್ಮತಃ ರಾಹು ಕೇತು ಕ್ರೂ’ರಿಯೇ, ರಾಹು ಕೇತು ಜಾತಕದಲ್ಲಿ ಚೆನ್ನಾಗಿದ್ದರೆ ಜೀವನದಲ್ಲಿ ಒಳ್ಳೆಯ ಸಂತೋಷಗಳು ತುಂಬಿರುತ್ತವೆ ಅಥವಾ ರಾಹು ಕೇತು ಏನಾದರೂ ಕೆ’ಟ್ಟಿದ್ದರೆ ಜೀವನದಲ್ಲಿ ಹೆಚ್ಚು ದುಃ’ಖ ತುಂಬಿರುತ್ತದೆ. ಅಷ್ಟಮಿಯ ದಿನದಂದು ಗುರೂಜಿರವರು ಒಂದು ವಿಶೇಷವಾದ ಸಂಕಲ್ಪವನ್ನು ತಿಳಿಸಿಕೊಡಲಿದ್ದಾರೆ. ತುಂಬಾ ಜನಕ್ಕೆ ಕಾಳಸರ್ಪ ದೋಷದ ಬಗ್ಗೆ ತಪ್ಪಾದ ಅವಗಾಹನೆ ಇದೆ. ಈ ರಾಹು ಕೇತುಗಳ ಕಾಳಸರ್ಪ ದೋಷವನ್ನು ಭಕ್ತಿಯಿಂದ ನಿವಾರಿಸಿಕೊಳ್ಳಬಹುದು. ಕಾಳಸರ್ಪ ದೋಷ ಎಂದರೆ ಆತಂಕ ಭಯವನ್ನು ಹುಟ್ಟಿಸುವುದು, ನಮ್ಮ ಕೆಲಸವನ್ನು ಮಾಡುವಾಗ ಅದಕ್ಕೆ ಅಡ್ಡಿಯುಂಟು ಮಾಡುವುದು.  ಯಾವ ಕೆಲಸ ಮಾಡಲು ಹೋದರೂ ಮೇಲಿಂದ ಮೇಲೆ ಅಡ್ಡಿ ಉಂಟಾಗುತ್ತಿದ್ದರೆ ಅದೇ ಕಾಳ ಸರ್ಪದೋಷ.  ನಿಮಗೆ ಯೋಗ್ಯತೆ ಇದ್ದರೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೂ ಯಾವುದೋ ರೂಪದಲ್ಲಿ ಅಡ್ಡಿ ಆತಂಕ ತಡೆ ಆಗುತ್ತಿದ್ದರೆ ಅದೇ ಕಾಳಸರ್ಪ ದೋಷ. ಮದುವೆಗೂ ಮೊದಲು ಕಾಳಸರ್ಪ ದೋಷವಿದ್ದರೆ ಮದುವೆಯಾದ ನಂತರ ದೋಷ ನಿವಾರಣೆಯಾಗುತ್ತದೆ. ಮದುವೆಯಾದ ನಂತರ ಕಾಳಸರ್ಪ ದೋಷವಿದ್ದರೆ ಅದು ಮಗು ಹುಟ್ಟಿದ ಮೇಲೆ ನಿವಾರಣೆಯಾಗುತ್ತದೆ ಅದರಲ್ಲೂ ಲಕ್ಷ್ಮಿ ಸ್ವರೂಪವಾದ ಹೆಣ್ಣು ಮಗು ಹುಟ್ಟಿದ ಮೇಲೆ ದೋಷಕ್ಕೆ ಮೊದಲ ತಡೆಯುಂಟಾಗುತ್ತದೆ.

Advertisement

Advertisement

ಒಂದು ಹೆಬ್ಬೆರಳಿನಷ್ಟು ಉದ್ದದ ವಿನಾಯಕನ ಮೂರ್ತಿ ದುರ್ಗಾ ದೇವಿಯ ಮೂರ್ತಿ ಇಲ್ಲವೇ ಅನ್ನಪೂರ್ಣೇಶ್ವರಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ. ವಿಗ್ರಹಗಳ ಮುಂದೆ ಅಷ್ಟ ದಿಗ್ಬಂಧನವನ್ನು ಇಟ್ಟು ಪಾರಿಜಾತ ಪುಷ್ಪಗಳಿಂದ ಪೂಜೆ ಮಾಡಿ.  ಕನಿಷ್ಠ ಪಕ್ಷ ನಲವತ್ತೆಂಟು ದಿನ ಇಲ್ಲವೇ ನೂರ ಎಂಟು ದಿನಗಳ ಕಾಲ ಧೂಪದ ನೈವೇದ್ಯವಿಟ್ಟು ಪೂಜೆ ಮಾಡಿ. ಸಂಧ್ಯಾಕಾಲದಲ್ಲಿ ಒಂದು ಸಿಹಿಯನ್ನು ಮಾಡಿ ಅದನ್ನು ನೈವೇದ್ಯವಾ ಗಿಟ್ಟು ಅದನ್ನು ಮನೆಯವರೆಲ್ಲರೂ ಸೇವಿಸಿದರೆ ತುಂಬಾ ಒಳ್ಳೆಯದು. ಸಂಜೆ ಏಳರಿಂದ ಏಳೂವರೆ ಒಳಗಡೆ ಅಡುಗೆಯನ್ನು ಮಾಡಿ ಒಂದು ಬೊಗಸೆಯಷ್ಟು ಊಟವನ್ನು ಯಾರಾದರೂ ವೃದ್ಧರಿಗೆ ಭಿಕ್ಷುಕರಿಗೆ ಊಟವನ್ನು ಕೊಟ್ಟು ಮನೆಗೆ ಬಂದು ಕಾಲು ತೊಳೆದು ದೇವರ ಮನೆಯ ದೀಪವನ್ನು ನೋಡಿ ಆ ನಂತರ ಮನೆಯವರೆಲ್ಲರಿಗೂ ಊಟ ಬಡಿಸಿ ನಂತರ ಗೃಹಿಣಿ ಊಟ ಮಾಡಬೇಕು. ಇದನ್ನು ಚಾಚೂ ತಪ್ಪದೆ ಅನುಸರಿಸುತ್ತಾ ಬಂದರೆ ಕಾಳಸರ್ಪ ದೋಷ ನಿವಾರಣೆಯಾಗುತ್ತದೆ. ಕಾಳಸರ್ಪ ದೋಷದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗಿನ ವಿಡಿಯೋವನ್ನು ನೋಡಿ.

Advertisement

ನಿಮ್ಮ ರಾಶಿ ಫಲದ  ಬಗ್ಗೆ ಮಾಹಿತಿ ಹೀಗಿದೆ :

ಮೇಷ ರಾಶಿ : ಗುರು ಸಾರದಲ್ಲಿ ಚಂದ್ರನಿರುವ ವುದರಿಂದ ವಿಶೇಷವಾಗಿ ರುವಂತಹ ದಿನ ಸ್ವಲ್ಪ ಒಡಹುಟ್ಟಿದವರ ವಿಚಾರದಲ್ಲಿ ಖರ್ಚುವೆಚ್ಚಗಳು ಬಂದರೂ ಕೂಡ ನಿಭಾಯಿಸಿಕೊಂಡು ಹೋಗುತ್ತೀರಾ.

ವೃಷಭ ರಾಶಿ :  ಹಣಕಾಸಿನ ಚಿಕ್ಕುಗಳು,  ಶುಭ  ಯೋಗಕ್ಕೆ ವಿಘ್ನಗಳು, ನಿಮ್ಮ ಮನೆಯಲ್ಲಿ ರಾಹು ಇರುವುದರಿಂದ ಇಂದು ತಿಳಿಸಿಕೊಟ್ಟ ಸಂಕಲ್ಪ ಪೂಜೆಯನ್ನು ಮಾಡಿಕೊಳ್ಳಿ.

ಮಿಥುನ ರಾಶಿ : ತುಂಬಾ ಒಳ್ಳೆಯವರಾಗಿದ್ದರೆ ಅಲ್ಲೊಂದು ಎಡವಟ್ಟಾಗುತ್ತದೆ. ಆದ್ದರಿಂದ ಇಂದು ಒಳ್ಳೆಯವರಾಗಲು ಹೋಗಿ ಕೆಟ್ಟವರಾಗಿ ಬಿಡುತ್ತೀರಾ ಜಾಗ್ರತೆ.

ಕರ್ಕಾಟಕ ರಾಶಿ : ಚಂದ್ರ ಗುರು ಸಾರದಲ್ಲಿ ಇರುವುದರಿಂದ ಕೆಟ್ಟವರಾಗ ಬೇಡಿ. ಒಳ್ಳೆಯವರು  ಕೆಟ್ಟವರಾದರೆ ಅಲ್ಲಿ ಧ್ವಂಸವೇ ಆಗುತ್ತದೆ. ಮನೆ ಕುಟುಂಬ ಎಂದು ತಲೆಕೆಡಿಸಿಕೊಳ್ಳುತ್ತೀರಿ,  ಮೇಲೆ ತಿಳಿಸಿದಂತೆ ವಿನಾಯಕನ ಪೂಜೆಯನ್ನು ಮಾಡಿ ಒಳ್ಳೆಯದಾಗುತ್ತದೆ.

ಸಿಂಹ ರಾಶಿ : ಒಳ್ಳೆಯ ದಿನ,  ಬಹುದಿನಗಳ ನಂತರ ಮನೆಯಲ್ಲಿ ಶುಭ ಕಾರ್ಯವೊಂದು ನಡೆಯುತ್ತದೆ.

ಕನ್ಯಾ ರಾಶಿ : ತುಂಬಾ ಲೆಕ್ಕಾಚಾರ ಹಾಕಲು ಹೋಗಬೇಡಿ. ಎಲ್ಲವೂ ಆ ಭಗವಂತನಿಗೆ ಗೊತ್ತಿದೆ.

ತುಲಾ ರಾಶಿ : ತಂದೆ ತಾಯಿ ಆರೋಗ್ಯದ ಕಡೆ ಗಮನ ಕೊಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಶಂಕರ ಅಮೃತವನ್ನು ತೆಗೆದುಕೊಳ್ಳಿ .

ವೃಶ್ಚಿಕ ರಾಶಿ : ದೂರದ ಊರಿನಿಂದ ಶುಭ ಸುದ್ದಿಯೊಂದು ಬರುತ್ತದೆ ಒಳ್ಳೆಯ ಊಟ ಶಾಪಿಂಗ್ ಮಾಡುವಂತಹ ದಿನ.

ಧನಸ್ಸು ರಾಶಿ : ಇಂದು ಶನಿವಾರವಾದರೂ ಸೋಮವಾರದಂತೆ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುತ್ತೀರಿ.

ಮಕರ ರಾಶಿ : ನೀವು ಕೊಡಬೇಕಾದ ದುಡ್ಡು ಬರಬೇಕಾದ ದುಡ್ಡು ಎರಡೂ ಕೂಡ ನೆರವೇರುತ್ತದೆ.

ಕುಂಭ ರಾಶಿ : ಚೆನ್ನಾಗಿದೆ ಗುರುವಿನ ಸಾಂಗತ್ಯ ಗುರುವಾಗಿ ನಿಂತು ದಾರಿ ತೋರಿಸುವಂತಹ ಟೀಚರ್, ಅಡ್ವೈಸರ್, ಡಾಕ್ಟರ್, ಲಾಯರ್ ಮುಂತಾದ ಕೆಲಸಗಳಲ್ಲಿ ತೊಡಗಿರುವವರಿಗೆ ಅದ್ಭುತವಾಗಿರುವಂತಹ ದಿನ.

ಮೀನ ರಾಶಿ : ಸುಖ ಉಂಟು ಆದರೆ ಆ ಸುಖವನ್ನು ನೋಡಿ ನೋಡಿ ಅದು ನಿಜವಾ ಇಲ್ಲವಾ ಎಂಬ ಭ್ರಮೆಗೆ ಒಳಗಾಗುತ್ತೀರ. ಒಳ್ಳೆಯದೇ ಆಗುತ್ತದೆ. ನೀವು ಕಲಾವಿದರಾಗಿದ್ದರೆ ಏನು ಕಷ್ಟಪಟ್ಟಿದ್ದರು ಅದಕ್ಕೆ ತಕ್ಕಂಥ ಪ್ರತಿಫಲವನ್ನು ನೋಡುವಂತಹ ದಿನ.

All Rights reserved Namma  Kannada Entertainment.

Advertisement
Share this on...