ದಿನಕ್ಕೆ ಮೂರು ಬಾರಿ ತನ್ನ ರೂಪವನ್ನು ಬದಲಾಯಿಸುವ ಕಾಳಿದೇವಿಯ ವಿಗ್ರಹವನ್ನು ನೋಡಿದ್ದೀರಾ ? ಎಲ್ಲಿದೆ ಗೊತ್ತಾ ?

in ಕನ್ನಡ ಮಾಹಿತಿ 34 views

ಭಾರತದಲ್ಲಿ ಅನೇಕ ನಿಗೂಢ ಮತ್ತು ಪ್ರಾಚೀನ ದೇವಾಲಯಗಳಿವೆ. ಇದರ ಹಿಂದಿರುವ ಅನೇಕ ರಹಸ್ಯಗಳನ್ನು ನೀವು ಕೇಳಿರಲೂಬಹುದು. ಅಂದಹಾಗೆ ಉತ್ತರಾಖಂಡದ ಶ್ರೀನಗರದಿಂದ ಸುಮಾರು 14 ಕಿಲೋಮೀಟರ್ ದೂರದಲ್ಲಿ ಒಂದು ದೇವಾಲಯವಿದೆ. ಅಲ್ಲಿ ಪ್ರತಿ ಸಾರಿ ಸಂಭವಿಸುವ ಪವಾಡ ನೋಡಿ ಜನರು ಆಶ್ಚರ್ಯ ಪಡುತ್ತಾರೆ. ಹೌದು, ಈ ದೇವಾಲಯದಲ್ಲಿ ಇರುವ ದೇವಿಯ ವಿಗ್ರಹವು ದಿನಕ್ಕೆ ಮೂರು ಬಾರಿ ತನ್ನ ಸ್ವರೂಪವನ್ನು ಬದಲಾಯಿಸುತ್ತದೆ.

Advertisement

 

Advertisement


ವಿಗ್ರಹವು ಬೆಳಗ್ಗೆ ಹುಡುಗಿಯಂತೆ, ಮಧ್ಯಾಹ್ನ ಯುವತಿಯಂತೆ ಮತ್ತು ಸಂಜೆ ವೃದ್ಧೆಯಂತೆ ಕಾಣುತ್ತದೆ. ವಿಗ್ರಹದ ಈ ನೋಟ ನೋಡಿದ ಎಂಥವರು ನಿಜಕ್ಕೂ ಬೆರಗಾಗಿದ್ದಾರೆ. ಈ ದೇವಾಲಯವನ್ನು ‘ಧಾರಿ ದೇವಿ’ ದೇವಸ್ಥಾನ ಎಂದು ಕರೆಯಲಾಗುತ್ತದೆ. ಈ ದೇವಾಲಯವು ಸರೋವರದ ಮಧ್ಯದಲ್ಲಿದ್ದು, ಕಾಳಿ ದೇವಿಗೆ ಅರ್ಪಿತವಾದ ಈ ದೇವಾಲಯದ ಬಗ್ಗೆ ಕೆಲವು ನಂಬಿಕೆಗಳಿವೆ. ಇಲ್ಲಿರುವ ದೇವಿ ಧಾರಿ ಉತ್ತರಾಖಂಡದ ಚಾರ್ ಧಾಮ್ ಅನ್ನು ರಕ್ಷಿಸುತ್ತಿದ್ದಾಳಂತೆ. ಅಷ್ಟೇ ಅಲ್ಲ, ದೇವಿಯನ್ನು ಪರ್ವತಗಳು ಮತ್ತು ಯಾತ್ರಿಕರ ರಕ್ಷಕ ದೇವತೆ ಎಂದು ನಂಬಲಾಗುತ್ತದೆ.

Advertisement

 

Advertisement


ಒಂದು ದಂತಕಥೆಯ ಪ್ರಕಾರ, ಒಮ್ಮೆ ದೇವಾಲಯವು ತೀವ್ರ ಪ್ರವಾಹದಿಂದ ನಾಶವಾಯಿತು. ಅದೇ ಸಮಯದಲ್ಲಿ ಅದರಲ್ಲಿರುವ ದೇವಿಯ ವಿಗ್ರಹವೂ ಕೊಚ್ಚಿಕೊಂಡು ಹೋಯಿತು. ನಂತರ ವಿಗ್ರಹ ಧಾರೋ ಗ್ರಾಮದ ಬಳಿಯ ಬಂಡೆಯೊಂದಕ್ಕೆ ಡಿಕ್ಕಿ ಹೊಡೆದು ಅಲ್ಲೇ ನಿಂತು, ಆ ವಿಗ್ರಹದಿಂದ ದೈವಿಕ ಧ್ವನಿ ಹೊರಬಂದಿತು ಎಂದು ಜನರು ಹೇಳುತ್ತಾರೆ. ದೇವಿ ಆ ಸ್ಥಳದಲ್ಲಿ ತನ್ನ ವಿಗ್ರಹವನ್ನು ಸ್ಥಾಪಿಸುವಂತೆ ಗ್ರಾಮಸ್ಥರಿಗೆ ಸೂಚಿಸಿದಳು ಎನ್ನಲಾಗಿದೆ. ನಂತರ ಗ್ರಾಮಸ್ಥರು ಒಟ್ಟಾಗಿ ಸೇರಿ ಅಲ್ಲಿ ಧಾರಿ ದೇವಿಯ ದೇವಾಲಯವನ್ನು ನಿರ್ಮಾಣ ಮಾಡಿದರು. ಪುರೋಹಿತರ ಪ್ರಕಾರ, ದೇವಾಲಯದ ದೇವತೆಯ ಪಟ್ಟಿಯ ಪ್ರತಿಮೆ ದ್ವಾಪರ ಯುಗದಿಂದಲೂ ಸ್ಥಾಪಿತವಾಗಿದೆ.

 


ಧಾರಿ ದೇವಿ ದೇವಾಲಯವನ್ನು 2013 ರಲ್ಲಿ ನೆಲಸಮ ಮಾಡಲಾಯಿತು. ಅಷ್ಟೇ ಅಲ್ಲ, ವಿಗ್ರಹವನ್ನು ಅದರ ಮೂಲ ಸ್ಥಳದಿಂದ ತೆಗೆದುಹಾಕಲಾಯಿತಂತೆ. ಇದರಿಂದಾಗಿ ಆ ವರ್ಷ ಉತ್ತರಾಖಂಡದಲ್ಲಿ ಭೀಕರ ಪ್ರವಾಹ ಉಂಟಾಯಿತು. ಇದರಲ್ಲಿ ಸಾವಿರಾರು ಜನರು ಸಾವನ್ನಪ್ಪಿದರು. ಹೌದು, 16 ಜೂನ್, 2013 ರ ಸಂಜೆ ಧಾರದೇವಿಯ ವಿಗ್ರಹವನ್ನು ತೆಗೆದುಹಾಕಿದ ಕೆಲವು ಗಂಟೆಗಳ ನಂತರ ರಾಜ್ಯಕ್ಕೆ ವಿಪತ್ತು ಸಂಭವಿಸಿದೆ ಎಂದು ನಂಬಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಅದೇ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಲಾಯಿತು.

Advertisement
Share this on...