‘ಪ್ರಾರಂಭ’ದೊಂದಿಗೆ ಕಲ್ಯಾಡಿ ಸಹೋದರರ ಮತ್ತೊಂದು ಬಿಗ್ ಬಜೆಟ್ ಚಿತ್ರ !

in ಸಿನಿಮಾ 42 views

ಜಗದೀಶ್ ಕಲ್ಯಾಡಿ ನಿರ್ಮಾಣದಲ್ಲಿ ಮನು ಕಲ್ಯಾಡಿ ನಿರ್ದೇಶಿಸಿರುವ ‘ಪ್ರಾರಂಭ’ ಸಿನಿಮಾ ಚಿತ್ರೀಕರಣ ಬಿಡುಗಡೆಗೆ ಸಿದ್ಧವಾಗಿದೆ. ಕೊರೊನಾ ಸಮಸ್ಯೆಗಳೆಲ್ಲಾ ಬಗೆಹರಿದ ನಂತರ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ‘ಪ್ರಾರಂಭ’ದಲ್ಲಿ ರವಿಚಂದ್ರನ್ ಪುತ್ರ ಮನುರಂಜನ್ ನಟಿಸಿದ್ದು ಚಿತ್ರದಲ್ಲಿ ಅವರು ಪಕ್ಕಾ ಮಾಸ್ ಹಾಗೂ ಕ್ಲಾಸ್ ಲುಕ್​​ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

Advertisement

 

Advertisement

Advertisement

ಈಗಾಗಲೇ ಪ್ರಾರಂಭ ಚಿತ್ರದ ಹಾಡುಗಳು ಹಾಗೂ ಟೀಸರ್ ಬಹಳ ಸದ್ದು ಮಾಡಿದೆ. ಮನು ಇದುವರೆಗೂ ನಟಿಸಿರುವ ಸಿನಿಮಾಗಳು ಹೇಳಿಕೊಳ್ಳುವಂತ ಯಶಸ್ಸು ನೀಡಲಿಲ್ಲ. ಆದರೆ ಈ ಚಿತ್ರದ ಮೂಲಕ ಮನುರಂಜನ್ ಬ್ರೇಕ್​​​​ಗಾಗಿ ಕಾಯುತ್ತಿದ್ದಾರೆ. ಚಿತ್ರದಲ್ಲಿ ಲವ್​​, ಮಾಸ್​ ಕಥೆ ಇದ್ದು ಚುಂಬನದ ದೃಶ್ಯಗಳೂ ಯುವಜನತೆಯನ್ನು ಸೆಳೆಯಲಿದೆ ಎನ್ನಲಾಗುತ್ತಿದೆ. ಮನು ಈ ಚಿತ್ರದಲ್ಲಿ ಮೂರು ವಿಭಿನ್ನ ಶೇಡ್​​​​​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಚಿತ್ರದಲ್ಲಿ ಯುವಜನತೆಗೆ ಒಂದು ಸಂದೇಶ ನೀಡಲಾಗಿದೆಯಂತೆ. ಮನು ಜೊತೆಗೆ ಕೀರ್ತಿ ಕಲಕೇರಿ ನಾಯಕಿಯಾಗಿ ಅಭಿನಯಿಸಿದ್ದಾರೆ.

Advertisement

 

ಚಿತ್ರದಲ್ಲಿ 5 ಹಾಡುಗಳಿದ್ದು ಪ್ರಜ್ವಲ್ ಪೈ ಅವರ ಸಂಗೀತ ನಿರ್ದೇಶನವಿದೆ. ಕೆಜಿಎಫ್ ಚಿತ್ರದ ಫೈಟ್ ಕೊರಿಯೋಗ್ರಫಿಗಾಗಿ ರಾಷ್ಟ್ರಪ್ರಶಸ್ತಿ ಪಡೆದ ವಿಕ್ರಮ್ ಮೋರ್​​​ ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಕಡ್ಡಿಪುಡಿ ಚಂದ್ರು, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಹಾಗೂ ಇನ್ನಿತರರು ನಟಿಸಿದ್ದಾರೆ.

 

ಇನ್ನು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರ ಬಗ್ಗೆ ಹೇಳುವುದಾದರೆ ಮನು ಕಲ್ಯಾಡಿ ಹಾಗೂ ಜಗದೀಶ್ ಕಲ್ಯಾಡಿ ಸಹೋದರರು. ಮನು ಕಲ್ಯಾಡಿ ‘ಪ್ರಾರಂಭ’ ಸಿನಿಮಾವನ್ನು ನಿರ್ದೇಶನ ಮಾಡುವಾಗ ಕಥೆ ಕೇಳಿದ ಜಗದೀಶ್ ಅವರು ತಮ್ಮದೇ ‘ಜೇನು ಶ್ರೀ ತನುಷ ಪ್ರೊಡಕ್ಷನ್ಸ್ ‘ ಬ್ಯಾನರ್ ಮೂಲಕ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದರು. ಮನು ಕಲ್ಯಾಡಿ ಅನೇಕ ಕನ್ನಡ ಸಿನಿಮಾಗಳಿಗೆ ಸ್ಕ್ರಿಪ್ಟ್​​​​​, ಸಾಹಿತ್ಯ ರಚಿಸುವ ಮೂಲಕ ಗುರುತಿಸಿಕೊಂಡಿದ್ದಾರೆ.

 

ವಿಶೇಷ ಎಂದರೆ ‘ಪ್ರಾರಂಭ’ ಚಿತ್ರ ಬಿಡುಗಡೆಗೂ ಮುನ್ನವೇ ಸಹೋದರರರು ಮತ್ತೊಂದು ಚಿತ್ರವನ್ನು ಮಾಡಲು ಹೊರಟಿದ್ದಾರೆ. ಪ್ರಾರಂಭ ಮಾಸ್ ಕಥೆಯಾದರೆ ಈ ಸಿನಿಮಾ ಮಾಸ್ ಜೊತೆಗೆ ಪಕ್ಕಾಆ್ಯಕ್ಷನ್ ಸಿನಿಮಾವಂತೆ. ಅಲ್ಲದೆ ಇದು ಬಿಗ್ ಬಜೆಟ್ ಚಿತ್ರ ಎನ್ನಲಾಗಿದೆ. ಈ ಚಿತ್ರಕ್ಕೆ ಕೂಡಾ ಮನು ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಲು ಹೊರಟಿದ್ದಾರೆ. ಲಾಕ್​​ಡೌನ್​​​​ನಲ್ಲಿ ಮನು ಕಥೆ ರೆಡಿ ಮಾಡಿದ್ದಾರಂತೆ. ನಾಯಕ, ನಾಯಕಿ ಹಾಗೂ ಉಳಿದ ಕಲಾವಿದರ ಆಯ್ಕೆ ಕೂಡಾ ನಡೆಯುತ್ತಿದೆ. ಶೀಘ್ರವೇ ಚಿತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಲ್ಯಾಡಿ ಸಹೋದರರು ರಿವೀಲ್ ಮಾಡಲಿದ್ದಾರೆ.

Advertisement
Share this on...