ಅಂದು ಕ್ಯಾಮರಾಮೆನ್ ಬಳಿ ಚಾಲೆಂಜ್ ಮಾಡಿದ್ದ ‘ಕಮಲಿ’ ಅಮೂಲ್ಯ !

in ಮನರಂಜನೆ/ಸಿನಿಮಾ 1,612 views

ಕಮಲಿ ಧಾರಾವಾಹಿ ಒಂದು ಹಳ್ಳಿ ಹುಡುಗಿಯ ಸುತ್ತ ಹೆಣೆದಿರುವ ಸುಂದರ ಕಥೆ.ಇದರಲ್ಲಿ ಕಮಲಿ ಪಾತ್ರ ಮಾಡುತ್ತಿರುವುದು ನಟಿ ಅಮೂಲ್ಯ ಓಂಕಾರ್ ಗೌಡ.ಇವರ ತಂದೆಗೆ ಇವರು ಬಣ್ಣದ ಲೋಕಕ್ಕೆ ಕಾಲಿಡುವುದು ಇಷ್ಟವಿರಲಿಲ್ಲ ಆದರೆ ಅವರ ತಾಯಿಗೆ ಮಗಳನ್ನು ಹಾಗೆ ನೋಡಬೇಕೆನ್ನುವ ಆಸೆ ಇತ್ತು ಅಮೂಲ್ಯ ಅವರಿಗೂ ಕೂಡಾ ಇದರಲ್ಲಿ ಆಸಕ್ತಿ ಇತ್ತು ಆದರೆ ಒಂದು ಬೇಸರದ ಸಂಗತಿ ಎಂದರೆ ಇಂದು ಕಮಲಿ ಎಲ್ಲರಿಗೂ ಚಿರಪರಿಚಿತವಾದ ವ್ಯಕ್ತಿಯಾಗಿದ್ದಾರೆ.ಮತ್ತು ಎಲ್ಲರೂ ಅವರನ್ನು ಮನೆ ಮಗಳು ಎಂದು ಹೇಳುತ್ತಾರೆ .ಆದರೆ ಈ ಸಂತಸದ ಕ್ಷಣಗಳನ್ನು ನೋಡಲು ಇಂದು ಇವರ ತಾಯಿ ಇವರೊಂದಿಗೆ ಜೀವಂತವಾಗಿಲ್ಲ.ಅವರ ಸವಿ ನೆನಪುಗಳೊಂದಿಗೆ ಇವರ ಈ ಬಣ್ಣದ ಪಯಣ ಸಾಗುತ್ತಿದೆ.ನೋಡಲು ಸುಂದರ ಕಂಗಳ ಈ ಚೆಲುವೆ ಬೆಂಗಳೂರಿನವರು.ತಿದ್ದಿ ತೀಡಿದ ಗೊಂಬೆಯ ಹಾಗೆ ಕಾಣುವ ಇವರು ಎಲ್ಲರನ್ನೂ ತಮ್ಮೆಡೆಗೆ ಸೆಳೆದುಕೊಳ್ಳುತ್ತಾರೆ.
ಇವರು ಕಮಲಿ ಧಾರಾವಾಹಿಗೆ ಬರುವ ಮುನ್ನ ಇವರ ಬಣ್ಣದ ಲೋಕದ ಪಯಣವನ್ನು ‘ ಸ್ವಾತಿ ಮುತ್ತು ‘ ಧಾರವಾಹಿಯ ಮೂಲಕ ಶುರು ಮಾಡಿದರು. ಆ ಧಾರಾವಾಹಿಯಲ್ಲಿ ನಟಿಸುವಾಗ ತುಂಬಾ ಕಷ್ಟ ಆಗಿತ್ತು ಇವರಿಗೆ.ಆಗ ಕ್ಯಾಮರಾಮೆನ್ ಹತ್ತಿರ ನಾನು ಸುಮ್ಮನೆ ಇಲ್ಲಿಗೆ ಬಂದಿದ್ದು,ಇನ್ಮುಂದೆ ಸೀರಿಯಲ್ನಲ್ಲಿ ನಟಿಸಲ್ಲ ಅಂತಾ ಕ್ಯಾಮರಾಮೆನ್ ಹತ್ತಿರ ಚಾಲೆಂಜ್ ಮಾಡಿದ್ರು, ಅದಕ್ಕೆ ಅವರು ಈ ಬಣ್ಣದ ಲೋಕಕ್ಕೆ ಒಂದು ಸಲ ಕಾಲಿಟ್ಟ ಮೇಲೆ ಮುಗಿಯಿತು ಇಲ್ಲೇ ಇನ್ನ ಭವಿಷ್ಯ ಶುರು ಆಗುತ್ತೆ ಮತ್ತು ನೀನು ಬೇರೆ ಫೀಲ್ಡ್ಗೆ ಹೋಗೋದು ತುಂಬಾ ಕಷ್ಟ ಎಂದು ಅವರು ಹೇಳಿದ್ರಂತೆ ಇವರ ಜೀವನದಲ್ಲೂ ಅವರು ಹೇಳಿದ ಹಾಗೆಯೇ ಆಯಿತು.ಕೊನೆಗೆ ಇವರು ಬಣ್ಣದ ಲೋಕವನ್ನೇ ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಂಡರು .

Advertisement

Advertisement

ಇವರು ‘ ಸ್ವಾತಿ ಮುತ್ತು’, ‘ಪುನರ್ ವಿವಾಹ ‘, ‘ ಅರಮನೆ ‘ ಧಾರಾವಾಹಿಗಳಲ್ಲಿ ಇವರು ನಟಿಸಿದ್ದಾರೆ. ಇವರಿಗೆ ಇದಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ನಟಿಸುವ ಆಫರ್ ಬರುತ್ತಿದೆಯಂತೆ.ಸಿನಿಮಾಗಳಲ್ಲಿ ನಟಿಸಲು ಕೂಡಾ ಸಮಯ ಸಾಕಾಗದಷ್ಟು ಇವರು ಈಗ ಬ್ಯುಸಿಯಾಗಿದ್ದರೆ.ಬೇರೆ ಧಾರವಾಹಿಯಲ್ಲೂ ಅಭಿನಯಿಸಲು ಆಗುತ್ತಿಲ್ಲ ಎಂದು ಇವರು ಹೇಳುತ್ತಾರೆ. ಒಳ್ಳೆಯ ಅವಕಾಶ ಮತ್ತು ಸಮಯ ಹೊಂದಿದರೆ ಖಂಡಿತವಾಗಿಯೂ ಅಭಿನಯಿಸುತ್ತೇನೆ ಎಂದು ಹೇಳಿದ್ದಾರೆ.ಇವರಿಗೆ ಭಾಷೆಯ ಯಾವುದೇ ಹಂಗಿಲ್ಲ ಮತ್ತು ಪಾತ್ರ ಜನರ ಒಪ್ಪಿಗೆಗೆ ಸರಿ ಹೊಂದುವಂತಿರ ಬೇಕು.ಸಿನಿಮಾ ಮತ್ತು ಸೀರಿಯಲ್ ಅಲ್ಲಿ ನಿಮ್ಮ ಆಯ್ಕೆ ಯಾವುದು ಎಂದು ಇವರನ್ನು ಕೇಳಿದರೆ ಇವರು ಹೇಳುವುದು ಹೀಗೆ,ಒಂದು ಸಿನಿಮಾದಲ್ಲಿ ನಾವು ಒಂದು ಸಲ ಕಾಣಿಸಿಕೊಳ್ಳುತ್ತವೆ ಆದರೆ ಸೀರಿಯಲ್ ನಮ್ಗೆ ವರ್ಷ ಪೂರ್ತಿ ಅನ್ನ ಹಾಕುತ್ತದೆ.

Advertisement

Advertisement

ಸೀರಿಯಲ್ ನಲ್ಲಿ ಅಭಿನಯಿಸಿದರೆ ಜನರ ಬಾಯಲ್ಲಿ ಮತ್ತು ಮನಸಲ್ಲಿ ಯಾವಾಗಲೂ ಇರುತ್ತೇವೆ ಆದರೆ ಸಿನಿಮಾದಲ್ಲಿ ಹಾಗಲ್ಲ ಸಿನಿಮಾ ಬಂದು ಹೋದ ನಂತರ ಅವರು ನಮ್ಮನ್ನು ಮರೆತು ಬಿಡ್ತಾರೆ. ಕಮಲಿ ಧಾರಾವಾಹಿಯಲ್ಲಿ ಅಮೂಲ್ಯ ಅವರದು ತುಂಬಾ ಪಾಪದ, ಮುಗ್ಧೆ,ತಾಳ್ಮೆಯ ಹಳ್ಳಿ ಹುಡುಗಿಯ ಪಾತ್ರ ಎರಡೂವರೆ ವರ್ಷದಿಂದ ಇವರು ಈ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.ಇವರು ಎಲ್ಲ ರೀತಿಯ ಉ ಡುಗೆಗಳಲ್ಲಿಯೂ ಚೆನ್ನಾಗಿ ಕಾಣುತ್ತಾರೆ. ಯಾವ ಪಾತ್ರವನ್ನು ಕೊಟ್ಟರೂ ಹೇಗೆ ಮಾಡುತ್ತಾರೋ ಹಾಗೆ ಎಲ್ಲ ರೀತಿಯ ಉಡುಗೆಗಳಲ್ಲಿಯೂ ಸುಂದರವಾಗಿ ಕಾಣುತ್ತಾರೆ.

ಇವರು ಇದಕ್ಕಿಂತ ಅಥವಾ ಇಲ್ಲಿಯವರೆಗೆ ಮಾಡಿದ ಪಾತ್ರಕ್ಕಿಂತ ವಿಭಿನ್ನ ಪಾತ್ರವನ್ನು ಮಾಡುವ ಆಸೆ ಇದೆ ಎಂದು ಹೇಳಿದ್ದಾರೆ.ಇವರು ಮತ್ತು ಧಾರಾವಾಹಿಯ ನಾಯಕ ರಿಷಿ ಅವರು ಲವ್ ಮಾಡುತ್ತಿದ್ದಾರೆ ಎಂಬ ಸುಳ್ಳು ಸುದ್ದಿ ಎಲ್ಲೆಡೆ ಹರಡಿತ್ತು ಅದನ್ನು ಸುಳ್ಳು ಎಂದು ಹೇಳಿದರು.ಮತ್ತು ಇವರಿಬ್ಬರಿಗೂ ನಿಮ್ಮಿಬ್ಬರ ಜೋಡಿ ಚೆನ್ನಾಗಿದೆ ಮದುವೆಯಾಗಿ ಎಂದು ತುಂಬಾ ಜನ ಸಲಹೆ ಕೊಟ್ಟಿದ್ದಾರಂತೆ.ಪರದೆಯ ಮೇಲೆ ಕಣ್ತುಂಬಿ ಪ್ರೇಕ್ಷಕರ ಮನ ಸೆಳೆಯುವ ಈ ಸುಂದರ ಬೆಡಗಿ ನಮ್ಮ ಕನ್ನಡದ ಹುಡುಗಿ ಮುಂದೆ ಇನ್ನೂ ಹೆಚ್ಚಿನ ರೀತಿಯಲ್ಲಿ ಬಣ್ಣದ ಲೋಕದಲ್ಲಿ ಮಿಂಚಲಿ…..

Advertisement
Share this on...