anusirimane meghashetty

‘ಜೊತೆ ಜೊತೆಯಲಿ’ ಖ್ಯಾತಿಯ ಅನು ಕಂಡ ಕನಸ್ಸೆ ಬೇರೆ, ಆಗಿದ್ದೆ ಬೇರೆ ! ಕನಸು ಯಾವುದು ಗೊತ್ತಾ?

in ಮನರಂಜನೆ/ಸಿನಿಮಾ 1,182 views

ಜೊತೆ ಜೊತೆಯಲಿ ಧಾರಾವಾಹಿ ನಾಯಕಿ ನಿಜವಾದ ಹೆಸರು ಮೇಘಾ ಶೆಟ್ಟಿ.ಇವರು 1998 ರಲ್ಲಿ ಕರ್ನಾಟಕದ ಮಂಗಳೂರಿನಲ್ಲಿ ತುಳು ಮಾತನಾಡುವ ಬಂಟ್ಸ್ ಕುಟುಂಬದಲ್ಲಿ ಜನಿಸಿದರು.ಇವರು ಹುಟ್ಟಿದ್ದು ಮಂಗಳೂರಿನಲ್ಲೇ ಆದರೂ ಇವರು ಬೆಳೆದಿದ್ದೆಲ್ಲ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ.ಇವರು ಬೆಂಗಳೂರಿನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದರು.ಇವರು 2018-19 ರಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಾಯಕಿ ಆಗಿ ಅಭಿನಯದ ಜೊತೆಗೆ ಅವರ ನಟನಾ ವೃತ್ತಿಯನ್ನು ಶುರು ಮಾಡಿದರು. ಈ ಧಾರಾವಾಹಿಯಲ್ಲಿ ಇವರು ಅನಿರುದ್ಧ್ ಜತ್ಕರ್ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ.ಈ ಧಾರಾವಾಹಿಯ ಕಿರುತೆರೆಯಲ್ಲಿ ದೊಡ್ಡದಾದ ಪ್ರೇಕ್ಷಕರನ್ನು ಗಳಿಸಿಕೊಂಡಿದೆ.ಈ ಧಾರಾವಾಹಿ ಶುರು ಆಗುವುದಕ್ಕಿಂತ ಮೊದಲೇ ಈ ಧಾರಾವಾಹಿಯ ಹಾಡು ಎಲ್ಲೆಡೆ ತುಂಬಾ ಸದ್ದು ಮಾಡಿತ್ತು. ಆ ಸಮಯದಲ್ಲಿ ಎಲ್ಲರ ಬಾಯಲ್ಲಿಯೂ ಈ ಧಾರಾವಾಹಿಯ ಹಾಡು ಗುನುಗುತಿತ್ತು. ಟಿಕ್ ಟಾಕ್ ನಲ್ಲೂ ಕೂಡಾ ಇದರದೆ ವಿಡಿಯೋ .

Advertisement


ಇವರ ಎಂಬಿಎ ಪದವಿ ಮುಗಿದ ನಂತರ ಇವರ ಬಹುದೊಡ್ಡ ಕನಸು ಐಎಎಸ್ ಅಧಿಕಾರಿ ಆಗಬೇಕೆಂದು ತುಂಬಾ ಕನಸು ಕಂಡಿದ್ದರು.ಆದ್ದರಿಂದ ಇವರು ಯುಪಿಎಸ್ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳಲು ತಯಾರಿ ನಡೆಸಿಕೊಂಡು ಓದುತ್ತಿದ್ದರು.ಆದರೂ ಕೂಡ ಇವರು ಬೇರೆ ಬೇರೆ ರೀತಿಯ ಆಲೋಚನೆಗಳನ್ನು ಹೊಂದಿದ್ದರು.ಇವರು ಆಕಸ್ಮಿಕವಾಗಿ ಶೋಬಿಜ್ ಉದ್ಯಮಕ್ಕೆ ಕಾಲಿಟ್ಟರು.ಅಲ್ಲಿಂದ ಇವರು ನಟನಾ ದಾರಿಯಡೆಗೆ ಸಾಗಿ ಬಂದರು ಇವರಿಗೆ ಮೊದಲ ಅವಕಾಶವೇ ದೊಡ್ಡ ಮತ್ತು ವಿಷ್ಣುವರ್ಧನ್ ಅಳಿಯ ಅನೀರುದ್ಧ್ ಜೊತೆ ಜೋಡಿಯಾಗಿ ನಟಿಸುವ ಅವಕಾಶ ಒದಗಿ ಬಂತು.

Advertisement

ಎಲ್ಲೆಡೆ ಇವರು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡು ಜನರಿಂದ ಇಂದು ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದು ಕೊಂಡಿದ್ದಾರೆ.ಇವರು ಯಾವುದೋ ಒಂದು ಸಂದರ್ಶನದಲ್ಲಿ ನಾನು ನಟ ದರ್ಶನ್ ತೂಗುದೀಪ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ.ಮೇಘಾ ಶೆಟ್ಟಿಯವರು ಮಂಗಳೂರಿನ ಮತ್ತೊಬ್ಬ ಪ್ರತಿಭಾವಂತ ನಟಿ ಎಂದು ಹೇಳಿದರೆ ಬಹುಶಃ ತಪ್ಪಾಗಲಾರದು.

Advertisement


ಈ ಧಾರಾವಾಹಿ ಹೇಗೆ ಎಂದರೆ ನೋಡುಗರನ್ನು ಮನಸ್ಸೇಳೆಯುವ ಧಾರಾವಾಹಿ ಇದಾಗಿದೆ.ಕರ್ನಾಟಕದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ,ಮತ್ತು ಉನ್ನತ ಹಂತದ ವಿದ್ಯಾರ್ಥಿ ಅಲ್ಲದೇ ಕುಟುಂಬ ಸಮೇತರಾಗಿ ನೋಡುವ ಒಂದು ವಿಭಿನ್ನ ಧಾರಾವಾಹಿ ಇದು ವಯಸ್ಸುಗಳ ನಡುವಿನ ಅಂತರ ಮತ್ತು ಅದರಲ್ಲಿಯ ಪ್ರೀತಿಯ ಬೇಸಿಗೆಯ ಸುಂದರ ಧಾರಾವಾಹಿ.ವಯಸ್ಸು ಎಷ್ಟೇ ಆದರೂ ಕೂಡ ಅವರಿಗೆ ಪ್ರೀತಿಸುವ ಮನಸ್ಸು ಇರುತ್ತದೆ.ಮತ್ತು ಪ್ರೀತಿಗೆ ಯಾವುದೇ ರೀತಿಯ ವಯಸ್ಸಿನ ಇತಿ ಮಿತಿ ಇರುವುದಿಲ್ಲ ಎಂದು ತೋರಿಸಿ ಕೊಡುವ ಒಂದು ಚಿತ್ರಕತೆ ಸಂಯೋಜಿತ ಸೀರಿಯಲ್ ಇದಾಗಿದೆ .ಸರಳ ಸ್ವಾಭಾವಿಕ ನಡೆ ನುಡಿ ಹೊಂದಿರುವ ವ್ಯಕ್ತಿತ್ವ ಇವರದಾಗಿದೆ.
ಇದು ಒಂದು ರೀತಿಯ ಪುನರ್ ಜೀವನದ ಸಂಗತಿಗಳಿಂದ ಕೂಡಿದ ಕತೆಯಾಗಿದ್ದು.ದಿನೇ ದಿನೇ ನೋಡುಗರಲ್ಲಿ ಕುತೂಹಲವನ್ನು ಮೂಡಿಸುತ್ತಿದೆ.

Advertisement

ಇವರು ಕಂಡ ಕನಸು ಐಎಎಸ್ ಅಧಿಕಾರಿ ಆಗಬೇಕೆಂದು ಆದರೆ ಬಣ್ಣದ ಲೋಕಕ್ಕೆ ಇವಾಗ ಕಾಲಿಟ್ಟಿದ್ದಾರೆ.ಮತ್ತು ಇದರಲ್ಲಿಯೇ ಅವರು ಮುಂದು ನಡೆಯುವುದಾಗಿಯೂ ಹೇಳಿದ್ದಾರೆ. ಮೊದಲ ಪ್ರಾರಂಭ ಉತ್ತಮ ಪ್ರಾರಂಭ ಎನ್ನುವ ಹಾಗೆ ಇವರಿಗೆ ಸಿಕ್ಕಿದ ಮೊದಲ ಅವಕಾಶವೇ ಉತ್ತಮ ಅವಕಾಶವಾಗಿತ್ತು ಇದರಿಂದ ಇವರು ಎಲ್ಲೆಡೆ ಮತ್ತು ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ.

Advertisement
Share this on...