ದಿನಗೂಲಿ ಕಾರ್ಮಿಕರ ಸಂಕಷ್ಟಕ್ಕೆ ಮಿಡಿದ ಕಂಗನಾ ಕೊಟ್ಟ ದೇಣಿಗೆ ಎಷ್ಟು?

in ಸಿನಿಮಾ 67 views

ಬಾಲಿವುಡ್ ನಟಿ ಕಂಗನಾ ರನೌತ್ ಪ್ರತಿ ಸಾರಿ ಒಂದಲ್ಲಾ ಒಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಮತ್ತೇನಾಯಿತು ಎಂದು ಕೇಳಬೇಡಿ. ಬಲ್ಲ ಮೂಲಗಳ ಪ್ರಕಾರ ಕಂಗನಾ ದಕ್ಷಿಣ ಭಾರತದ ಚಲನಚಿತ್ರ ನೌಕರರ ಒಕ್ಕೂಟದ ದೈನಂದಿನ ಕೆಲಸಗಾರರಿಗೆ ದೇಣಿಗೆ ನೀಡಿದ್ದಾರೆ. ಎಷ್ಟು ಅಂತೀರಾ ಮುಂದೆ ಓದಿ…

Advertisement

 

Advertisement

Advertisement

 

Advertisement

ಕಂಗನಾ ಲಾಕ್ ಡೌನ್’ಗೂ ಮುಂಚೆ ‘ತಲೈವಿ’ ಚಿತ್ರೀಕರಣದಲ್ಲಿ ಬ್ಯೂಸಿಯಾಗಿದ್ದರು. ಇದರಲ್ಲಿ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಲೈವಿ ಚಿತ್ರದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿದ್ದು, ಕಂಗನಾ ರನೌತ್ ಅವರ ನೋಟಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿನಯ್ ನಿರ್ದೇಶನದ ತಲೈವಿ ಚಿತ್ರವನ್ನು ವಿಷ್ಣು ವರ್ಧನ್ ಇದುರೈ ಮತ್ತು ಶೈಲೇಶ್ ಆರ್ ಸಿಂಗ್ ನಿರ್ಮಾಣ ಮಾಡುತ್ತಿದ್ದಾರೆ. ಜಯಲಲಿತಾ ಅವರ ರಾಜಕೀಯ ಗುರು ಎಂ ಜಿ ರಾಮಚಂದ್ರನ್ ಅವರ ಪಾತ್ರವನ್ನು ಅರವಿಂದ್ ಸ್ವಾಮಿ ಮಾಡುತ್ತಿದ್ದಾರೆ.

 

 

ಅಂದಹಾಗೆ ಕೊರೊನಾ ವೈರಸ್ ಕಾರಣದಿಂದಾಗಿ, ಎಲ್ಲಾ ಚಿತ್ರಗಳ ಚಿತ್ರೀಕರಣವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಕಷ್ಟದ ದಿನಗಳಲ್ಲಿ ದಕ್ಷಿಣ ಭಾರತದ ಚಲನಚಿತ್ರ ನೌಕರರ ಒಕ್ಕೂಟದ ನೌಕರರು ಮತ್ತು ದೈನಂದಿನ ಕೂಲಿ ಕಾರ್ಮಿಕರಿಗೆ ಸಹಾಯ ಮಾಡಲು ಕಂಗನಾ ಮುಂದೆ ಬಂದಿದ್ದಾರೆ.

 

 

ಕೆಲವು ಮೂಲಗಳ ಪ್ರಕಾರ ದಕ್ಷಿಣ ಭಾರತದ ನೌಕರರ ಒಕ್ಕೂಟಕ್ಕೆ ಐದು ಲಕ್ಷ ಮತ್ತು ಉಳಿದ 5 ಲಕ್ಷವನ್ನು ‘ತಲೈವಿ’ ಯ ದೈನಂದಿನ ಕೂಲಿ ಕಾರ್ಮಿಕರಿಗೆ ನೀಡಿದ್ದಾರೆ ಕಂಗನಾ. ಬಿಪಿಎಲ್ ಕುಟುಂಬಗಳಿಗೆ ಪಡಿತರವನ್ನು ನೀಡುವುದರ ಜೊತೆಗೆ ಕಂಗನಾ ಈ ಹಿಂದೆ ಪಿಎಂ-ಕೇರ್ಸ್ ಗೆ 25 ಲಕ್ಷ ರೂ. ನೀಡಿದ್ದನ್ನು ನಾವಿಲ್ಲಿ ಗಮನಿಸಬಹುದು.

 

 

ಈಗಾಗಲೇ ತಮಿಳು ಚಿತ್ರರಂಗದ ಅನೇಕ ಸ್ಟಾರ್ ನಟರು ಒಕ್ಕೂಟಕ್ಕೆ ದೇಣಿಗೆ ನೀಡಿದ್ದಾರೆ. ರಜನಿಕಾಂತ್ 50 ಲಕ್ಷ ರೂ ದೇಣಿಗೆ ನೀಡಿದರೆ, ನಟ ವಿಜಯ್ ಸೇತುಪತಿ ದಕ್ಷಿಣ ಭಾರತ ಸದಸ್ಯರ ಚಲನಚಿತ್ರ ನೌಕರರ ಒಕ್ಕೂಟದ ಕಲ್ಯಾಣಕ್ಕಾಗಿ 10 ಲಕ್ಷ ದೇಣಿಗೆ ನೀಡಿದ್ದಾರೆ. ಜೊತೆಗೆ ಸೂರ್ಯ ಮತ್ತು ಅವರ ಸಹೋದರ ಕಾರ್ತಿ ಹಾಗೂ ಅವರ ತಂದೆ ನಟ ಶಿವಕುಮಾರ್ 10 ಲಕ್ಷ ರೂ., ನಟ ಶಿವಕಾರ್ತಿಕೇಯನ್ ಕೂಡ 10 ಲಕ್ಷ ರೂ. ನೀಡಿದ್ದಾರೆ.

Advertisement
Share this on...