ಕಂಕಣ ಸೂರ್ಯಗ್ರಹಣ ಯಾವ ರಾಶಿ ಮೇಲೆ ಹೆಚ್ಚು ಪ್ರಭಾವ ? ಸರ್ವ ರಾಶಿಗೂ ಪರಿಹಾರ ಇಲ್ಲಿದೆ..

in ಜ್ಯೋತಿಷ್ಯ 99 views

ಶ್ರೀ ಶಾರ್ವರಿ ನಾಮ ಸಂವತ್ಸರೆ, ಉತ್ತರಾಯಣೆ,  ಗ್ರೀಷ್ಮ ಋತು, ಜೇಷ್ಠ ಮಾಸೆ,  ಕೃಷ್ಣ ಪಕ್ಷದ ಅಮಾವಾಸ್ಯೆ, ಮೃಗಶಿರಾ ನಕ್ಷತ್ರ,  ನಾಗವಾಂಕ್ಕರಣ , ಜೂನ್ 21 ಭಾನುವಾರದ ಪಂಚಾಂಗ ಫಲವನ್ನು ಶ್ರೀ ರವಿಶಂಕರ್ ಗುರೂಜಿ ರವರು ನೀಡಿದ್ದಾರೆ. ಇಂದು ಅಮೃತ ಕಾಲ ವಿಶೇಷವಾಗಿ ರಾತ್ರಿ  3 ಗಂಟೆ 18  ನಿಮಿಷದಿಂದ 4 ಗಂಟೆ 56 ನಿಮಿಷದವರೆಗೂ ಇರುತ್ತದೆ. ಇಂದು ಭಾನುವಾರವಾದರು ಎಲ್ಲದಕ್ಕೂ ಮೀರಿದ ಗ್ರಹಾಚಾರಣ ಉಂಟು.  ಕಂಕಣ ಸೂರ್ಯಗ್ರಹಣವಿದೆ , ಈ ಗ್ರಹಣದಿಂದ ಹಲವಾರು ಸಮಸ್ಯೆಗಳಿವೆ,  ಅಷ್ಟ ಗ್ರಹಗಳ ಕೂಟ ನಡೆಯುತ್ತಿದೆ. ಅಷ್ಟ ಗ್ರಹಗಳ ಕೂಟದಲ್ಲಿ ಸೂರ್ಯಗ್ರಹಣ ನಡೆಯುತ್ತಿರುವುದು  ಒಳ್ಳೆಯ ಲಕ್ಷಣವಲ್ಲ ಜಾಗೃತವಾಗಿರಿ. ಈ ಸೂರ್ಯ ಗ್ರಹಣ ಬೆಳಗ್ಗೆ  9  ಗಂಟೆ 15  ನಿಮಿಷಕ್ಕೆ  ಕಟಕ ಲಗ್ನದಲ್ಲಿ ನಡೆಯುತ್ತದೆ. ಕಟಕ ಲಗ್ನ ಅಮ್ಮನ ಲಗ್ನ, ಜಲ ಲಗ್ನ , ಸೀತಮ್ಮನ ಲಗ್ನ,  ರಾಮ ಲಗ್ನ , ಧರ್ಮದ  ಲಗ್ನ, ಮನುಷ್ಯತ್ವದ ಲಗ್ನ , ಅಮ್ಮನ ಬಳಿ ಅಧರ್ಮ ಅನ್ನುವುದೇ ಇಲ್ಲ ಅನ್ಯಾಯ ಅನ್ನುವುದೇ ಇಲ್ಲ ಅವರಿಗೊಂದು ಇವರಿಗೊಂದು ಎಂಬ ಲೆಕ್ಕಾಚಾರದ ಭಾವವೇ ಇಲ್ಲ.  ಅಂತಹುದರಲ್ಲಿ ಕಟಕ ಲಗ್ನದಲ್ಲಿ ಗ್ರಹಣ ನಡೆಯುತ್ತಿರುವುದರಿಂದ ಸಪ್ತಮದಲ್ಲಿ  ಶನಿ ಮತ್ತು ಗುರು ವಕ್ರ ಪಕ್ಷಾಂತರಗಳು ಆಗುತ್ತದೆ. ರಾಜಕೀಯದಲ್ಲಿ ಬಹುದೊಡ್ಡ ಅವಾಂತರಗಳು ನಡೆಯುತ್ತದೆ. ಧರ್ಮದ್ರೋಹದ ಕೆಲಸ ಮತ್ತು ರಾಜ್ಯ ದ್ರೋಹದ ಕೆಲಸಕ್ಕೆ ಇಳಿದುಬಿಡುತ್ತಾರೆ . ಅಡ್ಡದಾರಿಯತ್ತ ಮನುಷ್ಯ ಜಾರಿ ಬಿಡುವಂಥ ಸಂಭವವಿದೆ.

Advertisement

 

Advertisement

Advertisement

 

Advertisement

ಕಡಿಮೆ ಬೆಲೆಯಲ್ಲಿ ಚಿನ್ನಾಭರಣಗಳನ್ನು ಕೊಡುತ್ತೇವೆ ಕಡಿಮೆ ಬೆಲೆಯಲ್ಲಿ ಮನೆಗಳನ್ನು ಮಾರುತ್ತೇವೆ ಇಂತಹ ಪ್ರಚೋದನೆಗಳು ಹೆಚ್ಚಾಗುತ್ತವೆ .ಸೂರ್ಯ ಬುಧನ ಮನೆಯಲ್ಲಿ ಕುಳಿತಿದ್ದು ರಾಹುಗ್ರಸ್ತ ನಾಗಿರುವುದರಿಂದ ದೊರೆಯ ತಾಕತ್ತಿನಲ್ಲಿ ಒಂದು ಕನ್ಫ್ಯೂಷನ್ ಶುರುವಾಗುತ್ತೆ. ಗುರುವಿನ ಜೊತೆ ಶನಿ ಶುಕ್ರನು ವಕ್ರವಾಗಿರುವುದರಿಂದ ಆಟೋ ಮೊಬೈಲ್ಸ್ , ಪೆಟ್ರೋಲ್,  ಲಿಕ್ಕರ್,  ಗಾರ್ಮೆಂಟ್ಸ್ , ಗ್ಯಾಸ್ ಗಳ ಬೆಲೆಯಲ್ಲಿ ವಿಪರೀತವಾದ ಏರಿಳಿತಗಳು ಆಗುತ್ತವೆ. ಕುಜನಿಗೆ ಕೇಂದ್ರದಲ್ಲಿ ರಾಹು ಇರುವುದರಿಂದ ದವಸ ಧಾನ್ಯಗಳ ಬೆಲೆ ಹೆಚ್ಚಳವಾಗುತ್ತದೆ. ಕೃತಕ ಅಭಾವವನ್ನು ಸೃಷ್ಟಿಸುತ್ತದೆ, ಕೃತಕ ಮಾಯೆಯನ್ನು ಸೃಷ್ಟಿಸುತ್ತದೆ, ಕೃತಕ ಬೆಲೆಯನ್ನು ಕೂಡ ಸೃಷ್ಟಿಸುತ್ತದೆ. ಎಲ್ಲಾ ಗ್ರಹಗಳ ಅಧೀನದಲ್ಲಿ ನಡೆಯುವುದರಿಂದ ಸಾಮಾನ್ಯ ಮನುಷ್ಯರು ಕನಸುಗಳನ್ನ ಬಿತ್ತುತ್ತಾರೆ. ಆ ಕನಸುಗಳು ನನಸಾಗಲು ಬಿಡುವುದಿಲ್ಲ. ಕನ್ಸ್ಟ್ರಕ್ಷನ್ ಲೈನಿನಲ್ಲಿ ಇರುವವರಿಗೆ ಸ್ವಲ್ಪ ಉಸಿರಾಡಲು ಆಗುತ್ತದೆ. ಎಜುಕೇಷನ್ ಲೈನ್ ನಲ್ಲಿ  ಇರುವಂತವರಿಗೆ ಬಹಳ ದೊಡ್ಡ ಪೆಟ್ಟು,  ಗುರು ಎಜುಕೇಷನ್ ಕಾರಕ , ಜ್ಞಾನಕಾರಕ,  ಬೇಳೆ ಕಾಳುಗಳಿಗೆ ಹುಳ ಬೀಳುವಂತಹ ದ್ದು ಜಮೀನುಗಳಿಗೆ ತೊಂದರೆಯಾಗುವಂತಹ ದೋಷಗಳನ್ನು ಸೂಚಿಸುತ್ತಿದೆ. ಇನ್ನೂ ಒಂದು ಎರಡು ಮೂರು ವರ್ಷಗಳ ಕಾಲ ದೊಡ್ಡ ಗಾಡಿಯನ್ನು ತೆಗೆದುಕೊಳ್ಳುವುದು,  ಮನೆಗಳನ್ನು ತೆಗೆದುಕೊಳ್ಳುವುದು , ಚಿನ್ನದ ಮೇಲೆ ಹೂಡಿಕೆ ಮಾಡುವುದು,  ಯಾವುದು ಬೇಡ. ದೊಡ್ಡ ದೊಡ್ಡ ಮನೆಗಳನ್ನು ಕಟ್ಟುವುದು ಖರ್ಚು ಮಾಡುವುದು ಬೇಡ,   ಹಣವನ್ನು ಸೇವ್ ಮಾಡಿ  ಹಿಡಿ,  ಎಚ್ಚರಿಕೆಯಿಂದ ಇರಿ. ಕಲಾವಿದರು ಮತ್ತಷ್ಟು ಎಚ್ಚರಿಕೆಯಿಂದ ಇರಿ, ಸಿನಿಮಾಗಳನ್ನು  ಮಾಡಲು ಹಣವನ್ನು ಹೂಡಬೇಡಿ , ಗ್ಯಾಂಬ್ಲಿಂಗ್ ಮತ್ತು ಬೆಟ್ಟಿಂಗ್ ಗಳಂತಹ ಸುಳಿಯಲ್ಲಿ ಸಿಲುಕಿಕೊಳ್ಳಬೇಡಿ, ಎಚ್ಚರಿಕೆಯಿಂದ ಇರಿ .

 

ಗ್ರಹಣದ ಪ್ರಭಾವಕ್ಕೆ ಒಳಗಾಗುವ ರಾಶಿಗಳ ಫಲಗಳು ಹೀಗಿದೆ

ಮೇಷ ರಾಶಿ: ಸ್ವಲ್ಪ ಜಾಗೃತರಾಗಿರಿ,  ನಿಮ್ಮ ಕೆಲಸ ಕಾರ್ಯಗಳು ವಿಳಂಬ , ಬೆಂಕಿ ಅವಘಡ, ಭೂಮಿ, ಮನೆ, ವ್ಯವಹಾರ, ಆಳು ಕಾಳು , ಅಣ್ಣ, ತಮ್ಮ, ತಂದೆ,  ತಾಯಿ,  ಒಡ ಹುಟ್ಟಿದವರಿಗೆ ಉದ್ಯೋಗದ ವಿಚಾರದಲ್ಲಿ ಒಂದು ತಳಮಳ, ಅಧಿಕಾರ ವರ್ಗದಲ್ಲಿದ್ದರಂತೂ ಅಧಿಕಾರವನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತದೆ ಜನಾಕ್ರೋಶಕ್ಕೆ ಎದುರಾಗಬೇಕಾಗುತ್ತದೆ.

ವೃಷಭ ರಾಶಿ: ನಿಮ್ಮ ರಾಶಿಯ ಅಧಿಪತಿಯೆ ವಕ್ರ. ಎದುರಾಳಿ ಬಲವಾಗಿದ್ದಾನೆ ಜಾಗ್ರತೆ.  ಕಲಹಕ್ಕೆ, ಜಗಳಕ್ಕೆ,  ಹೋಗಬೇಡಿ. ನೀವು ಏನೇ ಮಾಡಿದರೂ ಕೂಡ ವಕ್ರವಾಗಿಯೇ ನೋಡುತ್ತಾರೆ , ಒಳ್ಳೆಯದನ್ನು ಮಾಡಿದರೂ ವಕ್ರ ,  ಸಹಾಯವನ್ನು ಮಾಡಿದರು ಕೂಡ ವಕ್ರವಾಗಿಯೇ ನೋಡುತ್ತಾರೆ . ಅಪವಾದಗಳು ಹುಡುಕಿ ಬರುತ್ತವೆ ಕೋರ್ಟ್ ಸಮಸ್ಯೆಗಳಿದ್ದಲ್ಲಿ , ಮಕ್ಕಳ ದಾಂಪತ್ಯದಲ್ಲಿ ಏರುಪೇರು ಇದ್ದರೆ ಒಂದು ಬರ ಸಿಡಿಲು ಎರಗುತ್ತದೆ,  ಸಾಲದ ಸುಳಿಗೆ ನಿಮ್ಮನ್ನು ಸಿಲುಕಿಸುತ್ತದೆ. ಕಷ್ಟಪಟ್ಟು ಭೂಮಿಯನ್ನು ಪಡೆಯುವ ಸುಯೋಗವೂ ಉಂಟು.

ಮಿಥುನ ರಾಶಿ: ಗ್ರಹಣ ಪ್ರಭಾವ ನಿಮ್ಮ ಕುಟುಂಬದ ಸ್ಥಾನದಲ್ಲೇ ನಡೆಯುತ್ತಿರುವುದರಿಂದ ಸ್ವಲ್ಪ ಆತಂಕ , ನಿಮ್ಮ ಅಧಿಕಾರ ವೃದ್ಧಿಯ ಸ್ಥಾನದಲ್ಲಿ ನಡೆಯುತ್ತಿದೆ , ಜಾಗೃತೆ ಕುಟುಂಬದಲ್ಲಿ ಒಂದು ಪುಟ್ಟ ಎಳೆದಾಟ. ಕಟಕ ಲಗ್ನ ಮಿಥುನ ರಾಶಿಯಲ್ಲಿ ಗ್ರಹಣ ವಾಗುವುದರಿಂದ ನಿಮ್ಮ ಲೆಕ್ಕಾಚಾರಗಳು ಉಲ್ಟಾ ಹೊಡೆಯುತ್ತವೆ. ಸರ್ಕಾರಿ ಕೆಲಸಗಳಲ್ಲಿ, ರಾಜಕಾರಣದಲ್ಲಿ ಒಂದು ಅದೃಷ್ಟವೇ ಹುಡುಕಿಕೊಂಡು ಬರುವುದು ಕೂಡ ಉಂಟು. ದಿಢೀರ್ ಬದಲಾವಣೆಗಳ ಚಿಂತನೆ ನಡೆಯುತ್ತದೆ,  ಉದ್ಯೋಗವನ್ನು ಬದಲಾಯಿಸಲು ಹೋಗಬೇಡಿ.

ಕರ್ಕಾಟಕ ರಾಶಿ: ಅನಾರೋಗ್ಯ , ಭಾತೃವಿಗೆ ತೊಂದರೆ,  ಪಿತೃವಿಗೆ ತೊಂದರೆ,  ವ್ಯವಹಾರದಲ್ಲಿ ತೊಂದರೆ , ಬುದ್ಧಿ, ಜ್ಞಾನ,  ವಿಕಾಸ, ಇವುಗಳೆಲ್ಲವೂಗಳಲ್ಲಿ ಏರುಪೇರು , ತೊಳಲಾಟವಾಗುವ ಪ್ರಭಾವವಿರತ್ತದೆ, ಎಚ್ಚರಿಕೆ .

ಸಿಂಹ ರಾಶಿ: ಸೂರ್ಯಗ್ರಹಣ ನಡೆಯುತ್ತಿರುವುದೇ ಸೂರ್ಯನಿಗಾಗಿ ಆಗಿರುವುದರಿಂದ ನಿಮ್ಮ ಸುತ್ತಲೂ ಇರುವವರು ಬಲವಾಗಿ ಇರುತ್ತಾರೆ, ಉನ್ಮಾದ , ಅಷ್ಟಮದಲ್ಲಿ ಕುಜ  ವಕ್ರವಾಗಿ ಇರುವುದರಿಂದ  ಷಷ್ಟಮ ಭಾಗದಲ್ಲಿ ಗುರು ನೀಚನಾಗಿ ನಿಂತಿರುತ್ತಾನೆ. ನಿಮಗೆ ಬಲವಿದ್ದರೂ ರಾಹುಗ್ರಸ್ತನಾಗಿ ಕಂಕಣ ಕಟ್ಟಿ ನಿಂತಿದ್ದಾನೆ,  ಕಂಕಣ ಸೂರ್ಯ ಗ್ರಹಣವು ನಿಮ್ಮನ್ನು ಕೋಟೆಯ ರೀತಿ ಸುತ್ತುವರಿದಿದೆ, ತುಂಬಾ ಎಚ್ಚರವಾಗಿರಿ,  ಭೂಮಿ ಮನೆ ಕಟ್ಟುವುದು ಇಂತಹ ವಿಚಾರಗಳಲ್ಲಿ ದುಡುಕಬೇಡಿ, ಎಷ್ಟು  ನಿಧಾನ ಮಾಡುವಿರೊ ಅಷ್ಟು ಒಳ್ಳೆಯದು ಯಾವುದೇ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಕೊನೆಯ ಪಕ್ಷ 21  ದಿನಗಳು,  48 ದಿನಗಳ ವರೆಗೆ ಯಾವುದೇ ಇನ್ವೆಸ್ಟ್ ಮಾಡುವ ವ್ಯವಹಾರಗಳಲ್ಲಿ ಸಿಲುಕಿಕೊಳ್ಳಬೇಡಿ.

 ಕನ್ಯಾ ರಾಶಿ: ನಿಮ್ಮ ಶತ್ರು ಅಷ್ಟಮಾಧಿಪತಿ ಸಪ್ತಮದಲ್ಲಿದ್ದಾನೆ, ಒಂದು ವಿಚಿತ್ರವಾದ ಘಟನೆಗಳು ನಡೆಯುತ್ತವೆ,  ಸೋತು ಹೋದ ನಿಮಗೆ ಬಹುದೊಡ್ಡದಾದ ಗೆಲುವೊಂದು ಹುಡುಕಿಕೊಂಡು ಬರುತ್ತದೆ,  ಶತ್ರುವಾದ ಗುರು ವಕ್ರ,  ಆದರೆ ಯೋಗಕಾರಕ ವಾದ ಶುಕ್ರ ವಕ್ರ  ಇರುವುದರಿಂದ ಆರೋಗ್ಯದಲ್ಲಿ ಒಂದು ತಳಮಳವಿರುತ್ತದೆ ಎಚ್ಚರಿಕೆ ,  ಏನೋ ಒಂದು ತಲೆಭಾರ, ಟೆನ್ಷನ್,  ಕೊರಗುತ್ತೀರಿ , ಗಾಬರಿಯ ಪ್ರಭಾವವನ್ನು ಸೂಚಿಸುತ್ತದೆ ಎಚ್ಚರಿಕೆ , ಭೂಮಿ ವಾಹನಗಳನ್ನು ಕೊಳ್ಳುವಿರಿ,  ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ,  ಆದರೆ ಬುಧ ವಕ್ರ ತುಂಬಾ ಕನ್ಫ್ಯೂಸನ್  ಗೆ ಒಳಗಾಗುತ್ತೀರಿ.

 

ತುಲಾ ರಾಶಿ: ನಿಮ್ಮ ಭಾಗ್ಯಸ್ಥಾನದಲ್ಲಿ ಗ್ರಹಣ ನಡೆಯುತ್ತಿರುವುದರಿಂದ ಮನೆಯಲ್ಲಿ ಹಿರಿಯರ ಕಡೆ ಗಮನ ಕೊಡಿ.  ಅಣ್ಣ ತಮ್ಮಂದಿರ ಕಡೆ ಒಂದು ಕಣ್ಣಿಡಿ, ಸಂಗಾತಿಯ ಆರೋಗ್ಯದ ಮೇಲೆ ಗಮನವಿಡಿ ,  ಹಣಕಾಸಿನ ಸ್ಥಿತಿಗತಿಗಳಲ್ಲಿ ದಿಢೀರ್ ಬದಲಾವಣೆಯಾಗುತ್ತದೆ, ದಿಢೀರ್ ಬದಲಾವಣೆ ಹೀರೋ ಟೂ ಜೀರೋ , ಜೀರೋ ಟು ಹೀರೋ,  ಆಗಿ ಬದಲಾವಣೆಯಾಗುವುದು ಉಂಟು.

ವೃಶ್ಚಿಕ ರಾಶಿ: ಮನೆಯಲ್ಲಿ ತಳಮಳ,  ಉದ್ಯೋಗ ,ಅಧಿಕಾರ ಸ್ಥಾನಗಳಲ್ಲಿ ಕದಲಿಕೆ ಆದರೂ  ನಿಮ್ಮ ರಾಶಿಯ ಅಧಿಪತಿ ಕುಜ ಬಲಾಢ್ಯ  ನಾಗಿರುವುದರಿಂದ ಯಾವುದೋ ಒಂದು ಶಕ್ತಿ ಕಾಯುತ್ತದೆ ನಿಮಗೆ ತಾಳ್ಮೆ  ಇರಬೇಕು ಅಷ್ಟೆ , ತಂದೆಯ ಸಮಾನರಾದವರ ಮೇಲೆ ಸ್ವಲ್ಪ ಗಮನವಿರಲಿ. ತಂದೆ ಅಥವಾ ಮಾವ ಅವರ ಬೆಂಬಲಕ್ಕೆ ನೀವೆ ನಿಂತುಕೊಳ್ಳಬೇಕಾಗುತ್ತದೆ.

ಧನಸ್ಸು ರಾಶಿ: ಭಾಗ್ಯ ಅಧಿಪತಿಯಾದ ಸೂರ್ಯನಿಗೆ ಗ್ರಹಣ,  ನಿಮ್ಮ ಭಾಗ್ಯ ಕಳೆಯುತ್ತಿದೆ, ಎಚ್ಚರಿಕೆ ಸಪ್ತಮದಲ್ಲಿ ಕುಳಿತಿದ್ದಾನೆ ಸಪ್ತಮಾಧಿಪತಿ ಬಲಾಢ್ಯರಾಗಿದ್ದಾನೆ,  ಅದರಲ್ಲಿ ರಾಹು  ಬೇರೆ ಕುಳಿತಿದ್ದಾನೆ, ನಿಮ್ಮ ಮನೆಯಲ್ಲಿಯೇ ಕೇತು ಇರುವುದರಿಂದ ಅದೃಷ್ಟ ಕಳೆದುಕೊಳ್ಳುವಿರಿ , ಹಿಂದೆ ಮಾಡಿದ ಮೋಸದಿಂದ ದಂಡನೆಗೆ ಒಳಗಾಗುವಿರಿ,  ಜೈಲು ಪಾಲಾಗುವಿರಿ , ಲಂಚ ಮೋಸ ಆದಾಗ ಈ ರೀತಿ ವಿಚಾರದಲ್ಲಿ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಕಲಿಯುಗದ ಶಾಪ ನಿಮಗೆ ತಟ್ಟುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ನೋಡಿ.

 

 ಮಕರ ರಾಶಿ: ಆಕಸ್ಮಿಕ ಬದಲಾವಣೆ ನಿಮ್ಮ ಜೀವನದಲ್ಲಿ ನಡೆಯುತ್ತದೆ.  ಸಾಲಬಾಧೆ ,  ಕೋರ್ಟು,  ಶೂಲ ಬಾಧೆ,  ವ್ಯವಹಾರ ಬಾಧೆ, ಹಣಕಾಸು ಬಾಧೆಗಳೆಲ್ಲ ಕಳೆದು ಗಂಜಿಯೂಟ ತಿನ್ನುತ್ತಿದ್ದವರಿಗೆ ಹೋಳಿಗೆ ಊಟ ಸಿಗುವಂತಾಗುತದೆ, ಈ ರೀತಿಯ ವಿಚಿತ್ರ ಸನ್ನಿವೇಶ ಸೃಷ್ಟಿಯಾಗುತ್ತದೆ .

ಕುಂಭ ರಾಶಿ: ಅತ್ಯಂತ ವೇಗವಾಗಿ ಓಡುವ ಪ್ರಭಾವ ಏಕೆಂದರೆ ಸೂರ್ಯ ನಿಮಗೆ ಬಾಧಕ ಸೂರ್ಯನಿಗೆ ಗ್ರಹಣ ನಡೆದಿರುವುದರಿಂದ ನಿಮಗೆ ಶಕ್ತಿ ಹೆಚ್ಚುತ್ತದೆ ಆದರೆ ವಕ್ರಗತಿಯಲ್ಲಿ ಶನಿ ಮತ್ತು ಗುರು  ಇರುವುದರಿಂದಲೂ ನಿಮ್ಮ ವ್ಯವಹಾರ ಕುಟುಂಬ ಹಣಕಾಸಿನ ವಿಷಯದಲ್ಲಿ ಸಾಲ ಮಾಡುವುದು ಹೇಗೆ ಮುಂತಾದ ಕನ್ ಫ್ಯೂಜನ್ ಗಳು  ಇರುತ್ತವೆ ಮುನ್ನೆಚ್ಚರಿಕೆಯಿಂದ ನಿಧಾನವಾಗಿ ಹೆಜ್ಜೆ ಇಡಿ,  ಒಂದು ಕೆಲಸಕ್ಕೆ ಎರಡು ಪಟ್ಟು ಮೂರು ಪಟ್ಟು ಬಲವನ್ನು ತುಂಬಿಸಬೇಕಾಗುತ್ತದೆ ಆದರೆ ನಿಧಾನಗತಿಯಿಂದ ಎಲ್ಲ ಸರಿಹೋಗುತ್ತದೆ.

ಮೀನ ರಾಶಿ: ಸುಖ ಭಾವದಲ್ಲಿ ಗ್ರಹಣ ತಾಯಿ ತಂದೆ ವೃತ್ತಿ ಅಧಿಕಾರದಲ್ಲಿ ಎಚ್ಚರಿಕೆ ಸಮಾಧಿಪತಿ ಗುರು ಬೇರೆ ವಕ್ರ  ನೀಚನಾಗಿದ್ದಾನೆ ಕರ್ಮಾಧಿಪತಿ ವಕ್ರ ಬೇರೆ ರೀತಿಗಳಲ್ಲಿ ಸಂಪಾದನೆ ಮಾಡಲು ಒದ್ದಾಡುತ್ತೀರಿ,  ಇಲ್ಲದ ಪ್ರಚೋದನೆಗೆ ಒಳಗಾಗುತ್ತೀರಿ , ಬುಧ  ಬೇರೆ ವಕ್ರ,   ಕೇಂದ್ರ ಅಧಿಪತಿ ದೋಷ,  ಅಷ್ಟಮಾಧಿಪತಿ ಬೇರೆ ವಕ್ರ ಮೂರನೇ ಮನೆಯಲ್ಲಿ ಕುಳಿತಿದ್ದಾನೆ , ಅಕ್ಕ, ತಂಗಿ , ಮಕ್ಕಳು ಕುಟುಂಬ ಹೆಂಡತಿ ಈ ವಿಚಾರದಲ್ಲಿ ನಾನಾ ರೀತಿಯ ತಳಮಳ,  ಆತುರ ಕಾರಕ , ಯುದ್ಧಕಾರಕ , ಅಂಗಾರಕ ವಿಶೇಷವಾಗಿ ಮೀನ ರಾಶಿಯಲ್ಲಿ ಕುಳಿತಿದ್ದಾನೆ , ಯೋಗಕಾರಕ ಆದರೂ ಅದೃಷ್ಟವಿದ್ದರೂ ಅದನ್ನು ಅನುಭವಿಸಲು ಬಿಡುವುದಿಲ್ಲ,  ಕಷ್ಟ ನಿಮ್ಮದು ಅದರ ಫಲ ಮತ್ತೊಬ್ಬರಿಗೆ ಎನ್ನುವ ಪ್ರಭಾವಿದೆ.

 

ಸರ್ವ ರಾಶಿಗಳಿಗೂ ಒಂದು ಪುಟ್ಟ  ಪರಿಹಾರವಿದೆ

ಸೂರ್ಯ ಗ್ರಹಣ ವೆಂದರೆ ಪಿತೃಕಾರಕ,  ಆತ್ಮಕಾರಕ , ನಾವು ಇಂದು ಇದ್ದೇವೆ ಎಂದರೆ ನಮ್ಮ ತಂದೆ ಕೊಟ್ಟಿರುವಂತಹ ಪ್ರಾಣ , ತಂದೆಯ ಜೊತೆ ಮಧುರವಾಗಿರಿ, ವಾದ ವಿವಾದಕ್ಕೆ ಇಳಿಯಬೇಡಿ. ತಂದೆ ಅಥವಾ ತಂದೆ ಸಮನಾದ ವ್ಯಕ್ತಿಗಳಿಗೆ ಏನಾದರೂ ವಸ್ತ್ರಗಳನ್ನು ನೀಡಿ ಸೇವೆಯನ್ನು ಮಾಡಿ ಆದಷ್ಟು ಆದಿತ್ಯ ಹೃದಯ ಸ್ತೋತ್ರವನ್ನು ಪಠಣೆ ಮಾಡಿ,  ಸ್ಕಂದ  ಕವಚ,  ದುರ್ಗಾ ಸಪ್ತಸ್ಥುತಿ  ಕೇಳಿ ಮನೆಯಲ್ಲಿ ರಾಜರಾಜೇಶ್ವರಿ ಪೂಜೆ,  ಗೋಪೂಜೆಯನ್ನು ಮಾಡಿ. ಎಲ್ಲರೂ ನಿಮ್ಮ ಕೈಲಾದಷ್ಟು ಶಾಸ್ತ್ರಬದ್ಧವಾಗಿ ಮೂರು ಕೆಜಿ ರವೆ,  ಮೂರು ಕೆಜಿ ಗೋಧಿ,  ಮೂರು ಕೆಜಿ ವಿಶೇಷವಾಗಿ ಒಣಗಿದ ಕೆಂಪು ಮೆಣಸಿನಕಾಯಿ ,  ಮೂರು ಕೆಜಿ ಬೆಲ್ಲ , ಒಂದು ಶಲ್ಯ,  ಅಥವಾ ಪಂಚೆ,  ಹದಿನಾರು ರೂಪಾಯಿಗಳನ್ನು ಇಟ್ಟು  ಸಂಧ್ಯಾ ಕಾಲದಲ್ಲಿ ಸ್ನಾನ ಮಾಡಿ ಮನೆ ದೇವರಿಗೆ ದೀಪ ಹಚ್ಚಿ,  ಶಿವನ ದೇವಸ್ಥಾನದ ಅರ್ಚಕರಿಗೆ ಅಥವಾ ತಂದೆ ಸಮಾನ ವ್ಯಕ್ತಿಗಳಿಗೆ ಅಥವಾ ತಂದೆಗೆ ಅದನ್ನು ಕೊಡಿ ಇದರಿಂದ ಎಲ್ಲ ಸಮಸ್ಯೆಗಳು ನಿವಾರಣೆಯಾಗಿ ತಿಳಿಯಾಗುತ್ತದೆ.

Advertisement
Share this on...