ತೆಲುಗಿನ ಬಿಗ್​ ಬಜೆಟ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಅವಿನಾಶ್​​​…ಚಿತ್ರದ ನಾಯಕ ಯಾರು…?

in ಸಿನಿಮಾ 237 views

ಕನ್ನಡ ಸಿನಿಮಾ ನಟರು ಇತರ ಭಾಷೆಗಳ ಸಿನಿಮಾದಲ್ಲಿ ಅಭಿನಯಿಸಿ ಅಲ್ಲಿ ಹೆಸರು ಮಾಡಿದರೆ ಅದು ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆ. ಇಲ್ಲವರೆಗೂ ಸಾಕಷ್ಟು ನಟ,ನಟಿಯರು, ಪೋಷಕ ನಟರು ಬೇರೆ ಭಾಷೆಯ ಸಿನಿಮಾಗಳಲ್ಲಿ, ಕಿರುತೆರೆಯಲ್ಲಿ ಅಭಿನಯಿಸಿ ಅಲ್ಲಿನ ಜನರ ಪ್ರೀತಿ ಗಳಿಸಿದ್ದಾರೆ.

Advertisement

 

Advertisement

Advertisement

 

Advertisement

ಇದೀಗ ಕನ್ನಡ ಹಿರಿಯ ನಟ ಅವಿನಾಶ್ ಕೂಡಾ ಪರಭಾಷೆ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವಿನಾಶ್ ಮೊದಲ ಬಾರಿಗೆ ಮೆಗಾಸ್ಟಾರ್ ಚಿರಂಜೀವಿ ಜೊತೆಗೆ ನಟಿಸುತ್ತಿದ್ದಾರೆ. ಚಿರಂಜೀವಿ ಅವರ 152ನೇ ಸಿನಿಮಾ ‘ಆಚಾರ್ಯ‘ ಚಿತ್ರದಲ್ಲಿ ಅವಿನಾಶ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಚಿತ್ರದಲ್ಲಿ ಚಿರಂಜೀವಿ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದು ಪ್ರಮುಖ ದೇವಸ್ಥಾನವೊಂದರ ಹಣ ದುರುಪಯೋಗ ಆಗುತ್ತಿರುವ ಬಗ್ಗೆ ನಾಯಕ ಹೋರಾಡುವ ಕಥೆಯನ್ನು ಸಿನಿಮಾ ಒಳಗೊಂಡಿದೆ. ಈ ಮೆಗಾ ಬಜೆಟ್ ಚಿತ್ರದಲ್ಲಿ ಅವಿನಾಶ್ ನಟಿಸಲು ಆಯ್ಕೆಯಾಗಿರುವುದು ನಿಜಕ್ಕೂ ಅವರಿಗೆ ಖುಷಿ ನೀಡಿದೆ.

 

 

ಕಳೆದ ಸುಮಾರು 30 ವರ್ಷಗಳಿಂದ ಚಿತ್ರರಂಗದಲ್ಲಿರುವ ಅವಿನಾಶ್, ಇದುವರೆಗೂ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ವೃತ್ತಿ ಜೀವನದಲ್ಲಿ ‘ಆಪ್ತಮಿತ್ರ’ ಚಿತ್ರದ ರಾಮಚಂದ್ರ ಆಚಾರ್ಯ ಪಾತ್ರ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಇಡೀ ದಕ್ಷಿಣ ಸಿನಿಮಾ ಇಂಡಸ್ಟ್ರಿಯಲ್ಲಿ ಬಹಳ ಫೇಮಸ್ ಆಯ್ತು. ಕೊನೆಯ ಹೆಸರಿನ ಚಿತ್ರದಲ್ಲಿ ಅವಿನಾಶ್ ನಟಿಸಲಿದ್ದಾರೆ. ಆದರೆ ಇದುವರೆಗೂ ಚಿತ್ರದಲ್ಲಿ ತಮ್ಮ ಪಾತ್ರ ಏನು ಎಂಬ ಗುಟ್ಟನ್ನು ಅವಿನಾಶ್ ಬಿಟ್ಟುಕೊಟ್ಟಿಲ್ಲ. ಈಗಾಗಲೇ ಅವಿನಾಶ್ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

 

 

‘ಆಚಾರ್ಯ’ ಸಿನಿಮಾವನ್ನು ತೆಲುಗಿನ ಖ್ಯಾತ ನಿರ್ದೇಶಕ ಕೊರಟಾಲ ಶಿವ ನಿರ್ದೇಶಿಸುತ್ತಿದ್ಧಾರೆ. ಲಾಕ್​ ಡೌನ್​​​​ಗೂ ಮುನ್ನವೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿತ್ತು. ಇದೀಗ ಲಾಕ್ ಡೌನ್ ಇರುವ ಕಾರಣ ಚಿತ್ರೀಕರಣ ಜರುಗುತ್ತಿಲ್ಲ. ಕನ್ನಡದ ‘ರಾಜವೀರ ಮದಕರಿ’ ಹಾಗೂ ಇನ್ನಿತರ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ.

Advertisement
Share this on...