ಕನ್ನಡದ ಪ್ರಸಿದ್ಧ ನಿರೂಪಕರ ಪಟ್ಟಿ ಇಂತಿದೆ ನೋಡಿ !

in ಮನರಂಜನೆ 451 views

ಅಕೂಲ್ ಬಾಲಾಜಿ : ನಟ, ನಿರೂಪಕ ಅಲ್ ಬಾಲಾಜಿ ಅವರು ಮೂಲತಃ ಆಂಧ್ರ ಪ್ರದೇಶ ರಾಜ್ಯದವರು. ಆದರೆ ಅವರು ಬದುಕು ಕಟ್ಟಿಕೊಂಡಿದ್ದು ಮಾತ್ರ ನಮ್ಮ ಚಂದನವನದಲ್ಲಿ. ಪ್ಯಾಟೆ ಹುಡಗೀರ್ ಹಳ್ಳಿ ಲೈಫ್ ಎಂಬ ರಿಯಾಲಿಟಿ ಶೊ ನ ನಿರೂಪಣೆ ಮೂಲಕ ಖ್ಯಾತಿ ಪಡೆದ ಅಕುಲ್’ ಕನ್ನಡದ ಹಲವಾರು ಕಾರ್ಯಕ್ರಮಗಳ ನಿರೂಪಿಸಿದ್ದಾರೆ.

Advertisement

Advertisement

ಅನುಶ್ರೀ : ಅನುಶ್ರೀ ಅವರು ಅಂತ್ಯಾಕ್ಷರಿ ,ಡಿಮ್ಯಾಂಡಪ್ಪೊ ಡಿಮ್ಯಾಂಡು ಕಾರ್ಯಗಳ ನಿರೂಪಣೆ ಮೂಲಕ ಪ್ರಸಿದ್ಧಿ ಪಡೆದುಕೊಂಡರು. ನಂತರ ದಕ್ಷಿಣ ಭಾರತದ ಅತೀ ದೊಡ್ಡ ರಿಯಾಟಿ ಶೋ ಬಿಗ್ ಬಾಸ್ ಮೂಲಕ ತಮ್ಮ ಖ್ಯಾತಿಯನ್ನು ಮತ್ತಷ್ಟು ಏರಿಸಿಕೊಂಡರು. ಪ್ರಸ್ತುತ ಹಲವು ಚಿತ್ರ ಸಮಾರಂಭಗಳ ನಿರೂಪಣೆಯೊಂದಿಗೆ ಜೀ ಕನ್ನಡದ ಸರಿಗಮಪ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.

Advertisement

 

Advertisement

ಸೃಜನ್ ಲೋಕೇಶ್ : ಸೃಜನ್ ಲೋಕೇಶ್ ಅವರು ಮಜಾ ವಿಥ್ ಸೃಜಾ, ಸೈ ,ಚೋಟಾ ಚಾಂಪಿಯನ್ ಮುಂತಾದ ಕಾರ್ಯಗಳನ್ನು ನಿರೂಪಣೆ ಮಾಡಿ ಕರುನಾಡ ಮನೆ ಮಗರಾಗಿದ್ದಾರೆ. ಬಿಗ್ ಬಾಸ್ 2 ನೇ ಸೀಸನ್ ಸ್ಪರ್ಧಿಯಾಗಿದ್ದ ಇವರು ಮಜಾ ಟಾಕೀಸ್ ಕಾರ್ಯಕ್ರಮವನ್ನು ತಮ್ಮದೇ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣ ಮಾಡಿ ಪ್ರಸಿದ್ಧಿಯಾಗಿದ್ದಾರೆ.ಇದರ ಜೊತೆಗೆ ಸಿನಿಮಾದಲ್ಲೂ ಕೂಡ ಅಭಿನಯಿಸುತ್ತಿರುತ್ತಾರೆ.

ಕಿಚ್ಚ ಸುದೀಪ್ :ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ನಲ್ಲಿ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದ ಸುದೀಪ್ ಅವರು, 2013 ರಲ್ಲಿ ಆರಂಭವಾದ ಬಿಗ್ ಬಾಸ್ ಕನ್ನಡ ಅವತರಿಣಿಕೆಯನ್ನು ನಿರೂಪಣೆ ಮಾಡುತ್ತಿದ್ದಾರೆ…

 

ಪುನೀತ್ ರಾಜ್ ಕುಮಾರ್ : 2012 ರಲ್ಲಿ ಪ್ರಾರಂಭವಾದ ಕನ್ನಡ ಅವತರಿಣಿಕೆಯ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಮೂಲಕ ಪುನೀತ್ ನಿರೂಪಣೆಗೆ ಇಳಿದರು. ಕೋಟ್ಯಾಧಿಪತಿಯ ಮೊದಲರೆಡು ಸೀಸನ್ ಗಳನ್ನು ನಿರೂಪಿಸಿದ್ದ ಪುನೀತ್ ನಂತರ ಫ್ಯಾಮಿಲಿ ಪವರ್  ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

ರಮೇಶ್ ಅರವಿಂದ್ : ರಮೇಶ್ ಕಸ್ತೂರಿ ವಾಹಿನಿಯಲ್ಲಿ ಪ್ರೀತಿಯಿಂದ ರಮೇಶ್ ಮತ್ತು ಈಟಿವಿ ವಾಹಿನಿಯಲ್ಲಿ ರಾಜಾ ರಾಣಿ ರಮೇಶ್ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ. ಜೀ ಕನ್ನಡದಲ್ಲಿ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮವನ್ನು ಮತ್ತು ಕನ್ನಡದ ಕೋಟ್ಯಾಧಿಪತಿ ಮೂರನೇ ಸೀಸನ್ ನ್ನು ನಿರೂಪಣೆ ಮಾಡಿದ್ದಾರೆ.

ಮಾಸ್ಟರ್ ಆನಂದ್ : ಕನ್ನಡ ಚಿತ್ರರಂಗದಲ್ಲಿ ಬಾಲ ಕಲಾವಿದನಾಗಿ ಹೆಸರು ಮಾಡಿದ ಇವರು, ನಂತರ ನಾಯಕ ನಟನಾಗಿ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಆನಂದ್ ಕಾಮಿಡಿ ಕಿಲಾಡಿಗಳು ,ಡ್ರಾಮಾ ಜೂನಿಯರ್ಸ್ ಮುಂತಾದ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದ್ದಾರೆ.

ಗಣೇಶ್ : ಕಾಮಿಡಿ ಟೈಮ್ ನಿರೂಪಣೆ ಮೂಲಕ ನಟ ಗಣೇಶ್‌ ಜನಪ್ರಿಯತೆ ಪಡೆದರು. ನಂತರ ಸೂಪರ್ ಮಿನಟ್ ಎಂಬ ಕಾರ್ಯಕ್ರಮದ ನಾಲ್ಕು ಆವೃತ್ತಿಗಳನ್ನು ನಿರೂಪಣೆ ಮಾಡಿದ್ದಾರೆ

ಶ್ವೇತಾ ಚಂಗಪ್ಪ : ಜನ ಮೆಚ್ಚಿದ ಧಾರಾವಾಹಿ ಸುಮತಿ ಹಾಗೂ ಕಾದಂಬರಿಯ ಧಾರಾವಾಹಿಯ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ಶ್ವೇತಾ ಚಂಗಪ್ಪ ಅವರು, ಯಾರಿಗುಂಟು ಯಾರಿಗಿಲ್ಲ, ಕುಣಿಯೋಣ ಬಾರಾ, ಡ್ಯಾನ್ಸ್ ಜೂನಿಯರ್ಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದಾರೆ.

Advertisement
Share this on...