ಕನ್ನಡ ಚಾನಲ್​​​​ಗಳಲ್ಲಿ ಕನ್ನಡ ಧಾರಾವಾಹಿಗಳಿಗೇ ಜಾಗವಿಲ್ಲದಂತಾಗುತ್ತಾ..ಇದಕ್ಕೆ ಸಾಕ್ಷಿ ಇಲ್ಲಿದೆ ನೋಡಿ..!

in ಮನರಂಜನೆ 114 views

ಧಾರಾವಾಹಿ, ಇದು ಮಹಿಳೆಯರಿಗೆ ಬಹಳ ಇಷ್ಟವಾದ ಪದ. ಸಂಜೆ 6 ಆದರೆ ಸಾಕು ಧಾರಾವಾಹಿ ನೋಡಿಕೊಂಡು ಅಡುಗೆ ಮಾಡಿದರೆ ಅವರಿಗೆ ಸಮಾಧಾನ. ಒಂದು ದಿನ ಧಾರಾವಾಹಿ ನೋಡದಿದ್ದರೆ ಸಾಕು ಅವರಿಗೆ ಏನೋ ಕಳೆದುಕೊಂಡಂತೆ ಆಗುತ್ತದೆ. ಆದರೆ ಕೊರೊನಾ ಭಯದಿಂದ ಧಾರಾವಾಹಿ ಚಿತ್ರೀಕರಣ ನಿಂತಾಗಲಂತೂ ಹೆಂಗಸರಿಗೆ ಆಕಾಶವೇ ತಲೆ ಮೇಲೆ ಕಳಚಿಬಿದ್ದಂತಾಯ್ತು. ಸುಮಾರು 2 ತಿಂಗಳು ತಮ್ಮ ಮೆಚ್ಚಿನ ಧಾರಾವಾಹಿಯನ್ನು ನೋಡದೆ ಬಹಳ ಬೇಸರ ಮಾಡಿಕೊಂಡಿದ್ದರು.ಆದರೆ ಕಳೆದ ಕೆಲವು ದಿನಗಳಿಂದ ಧಾರಾವಾಹಿ ಚಿತ್ರೀಕರಣಕ್ಕೆ ಅನುಮತಿ ನೀಡಲಾಗಿದ್ದು ಫ್ರೆಷ್ ಎಪಿಸೋಡ್​​​​​ಗಳು ಮತ್ತೆ ಪ್ರಸಾರವಾಗುತ್ತಿವೆ. ಆದರೆ ಜನರು ಬಹಳ ಇಷ್ಟಪಟ್ಟು ನೋಡುತ್ತಿದ್ದ ಅನೇಕ ಧಾರಾವಾಹಿಗಳು ಅರ್ಧಕ್ಕೆ ಪ್ರಸಾರ ನಿಲ್ಲಿಸಿದವು. ದೇವಯಾನಿ, ರಾಧಾಕಲ್ಯಾಣ, ಮಗಳು ಜಾನಕಿ, ಅರಮನೆ ಗಿಳಿ, ನಾಯಕಿ, ನಾನು ನನ್ನ ಕನಸು, ಅಮ್ಮೋರು, ಕಾವೇರಿ, ಜೀವನದಿ, ಬಯಸದೆ ಬಳಿ ಬಂದೆ, ಆರತಿಗೊಬ್ಬ ಕೀರ್ತಿಗೊಬ್ಬ ಸೇರಿದಂತೆ ಸುಮಾರು 20 ಕ್ಕೂ ಹೆಚ್ಚು ಧಾರಾವಾಹಿಗಳು ಪ್ರಸಾರ ನಿಲ್ಲಿಸಿದವು.

Advertisement

 

Advertisement

Advertisement

ಧಾರಾವಾಹಿಗಳು ಅರ್ಧಕ್ಕೆ ನಿಲ್ಲಲು ಈ ಮುನ್ನ ಟಿಆರ್​ಪಿ ಕೊರತೆ ಕಾರಣ ಎನ್ನಲಾಗಿತ್ತು. ಆದರೆ ಬೇರೆ ಭಾಷೆಯ ಡಬ್ಬಿಂಗ್ ಧಾರಾವಾಹಿಗಳನ್ನು ಕನ್ನಡ ವಾಹಿನಿಗಳಲ್ಲಿ ಪ್ರಸಾರ ಮಾಡಲು ಕನ್ನಡ ಧಾರಾವಾಹಿಗಳನ್ನು ಅರ್ಧಕ್ಕೆ ಎತ್ತಂಗಡಿ ಮಾಡಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಪ್ರತಿದಿನ ಪ್ರಸಾರವಾಗುತ್ತಿರುವ ಹೊಸ ಡಬ್ಬಿಂಗ್ ಧಾರಾವಾಹಿಗಳೇ ಸಾಕ್ಷಿ. ಉದಯ ಟಿವಿಯಲ್ಲಿ ಅಲಾದ್ದಿನ್, ಗಣೇಶ ಡಬ್ಬಿಂಗ್ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಹಾಭಾರತ, ರಾಧಾಕೃಷ್ಣ ಪ್ರಸಾರವಾಗುತ್ತಿದೆ. ಕೆಲವೇ ದಿನಗಳಲ್ಲಿ ರಾಮಾಯಣ ಕೂಡಾ ಕನ್ನಡದಲ್ಲಿ ಡಬ್ ಆಗಿ ಪ್ರಸಾರವಾಗಲಿದೆ.

Advertisement

 

ಇದೀಗ ಸ್ಟಾರ್ ಸುವರ್ಣದಲ್ಲಿ ‘ದೃಷ್ಟಿ’ ಎಂಬ ಹೆಸರಿನಲ್ಲಿ ಮತ್ತೊಂದು ಧಾರಾವಾಹಿ ಪ್ರಸಾರವಾಗಲಿದೆ. ಇದು ಹಿಂದಿಯ ‘ನಜರ್’ ಧಾರಾವಾಹಿ ಡಬ್ಬಿಂಗ್. ಇದೇ ರೀತಿ ದಿನೇ ದಿನೆ ಪರಭಾಷೆ ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗುತ್ತಾ ಹೋದರೆ ಕನ್ನಡ ಕಿರುತೆರೆಯಲ್ಲಿ ಕನ್ನಡ ಧಾರಾವಾಹಿಗಳಿಗೆ ಜಾಗವಿಲ್ಲದಂತಾಗುತ್ತದೆ. ಈಗಾಗಲೇ ಕೊರೊನಾದಿಂದ ಬಹಳಷ್ಟು ಸಿನಿ, ಕಿರುತೆರೆ ಕಾರ್ಮಿಕರು ಕಷ್ಟ ಅನುಭವಿಸುತ್ತಿದ್ದಾರೆ. ಒಂದು ವೇಳೆ ಡಬ್ಬಿಂಗ್ ಧಾರಾವಾಹಿಗಳು ಹೆಚ್ಚಾಗುತ್ತಾ ಹೋದರೆ ಡಬ್ಬಿಂಗ್ ಕಲಾವಿದರು ಹಾಗೂ ವಾಹಿನಿಯವರಿಗೆ ಲಾಭವಾಗಲಿದೆಯೇ ಹೊರತು, ಕಾರ್ಮಿಕರು, ಕಲಾವಿದರು ಕೆಲಸ ಇಲ್ಲದೆ ಸಂಕಷ್ಟಕ್ಕೆ ಸಿಲುಕುವುದು ಖಂಡಿತ.

Advertisement
Share this on...