ಕನ್ನಡಿಗರ ಹೆಮ್ಮೆ – ಕನ್ನಡ ಸಾಹಿತ್ಯ ಪರಿಷತ್ತು

in ಕನ್ನಡ ಮಾಹಿತಿ 255 views

(ಮೇ ೫ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನದ ಪ್ರಯುಕ್ತ ಈ ಲೇಖನ)

Advertisement

ಎನಿತು ಇನಿತು ಈ ಕನ್ನಡ ನುಡಿಯು ಮನವನು ತಣಿಸುವ ಮೋಹದ ಸುಧೆಯು,
ಸೃಷ್ಟಿಯಲ್ಲಿ ಮನುಷ್ಯ ಬುದ್ಧಿಜೀವಿ ಎನಿಸಿಕೊಳ್ಳಲು ಮೂಲ ಪ್ರೇರಣೆಯೇ “ಭಾಷೆ ” ಪ್ರಾಚೀನ ಪ್ರಮುಖ ದ್ರಾವಿಡ ಭಾಷೆಗಳಲ್ಲಿ ಕನ್ನಡ ಭಾಷೆಯು ಕೂಡ ಮಹತ್ವದ ಸ್ಥಾನ ಹೊಂದಿದೆ. ಜಗತ್ತಿನ ಬೇರೆ ಯಾವುದೇ ಭಾಷೆಗಿಂತಲೂ ಹೆಚ್ಚು ಕನ್ನಡ ಭಾಷೆಯಲ್ಲಿ ವಿಫುಲವಾದ ಸಾಹಿತ್ಯಿಕ ಕೃಷಿ ಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಕನ್ನಡ ಸಾಹಿತ್ಯವು ಜಗತ್ತಿನ ಭಾಷಾ ಪ್ರಪಂಚದಲ್ಲಿ ಅತಿ ಮಹತ್ವದ ಶ್ರೀಮಂತ ಭಾಷೆಯಾಗಿದೆ.

Advertisement

“ಕನ್ನಡದಿ ಏನಿಲ್ಲ ಕೇಳಯ್ಯ ಜಾಣ
ಸಾಹಿತ್ಯ ಸಂಗೀತ ಸಮೃದ್ಧ ರತ್ನ ಶಿಲ್ಪ ಕಲೆ ನಾಟ್ಯ ಕಲೆ ಅಪರಂಜಿ ಕಾಣಾ
ಸಂಸ್ಕೃತಿಯ ತವರಣ್ಣ ಕನ್ನಡದ ತಾಣ ”
ಡಾ.ದೊಡ್ಡರಂಗೇಗೌಡರು

Advertisement

 

Advertisement

ಹೀಗೆ ಕನ್ನಡವು ಎಲ್ಲವನ್ನೂ ಒಳಗೊಂಡ ಸಂಸ್ಕೃತಿಯ ತಾಣವಾಗಿ ಶ್ರೀಮಂತಿಕೆಯಿಂದ ಕೂಡಿದೆ. ಕನ್ನಡ ಭಾಷೆ ,ಕಲೆ, ಸಾಹಿತ್ಯ ,ಜಾನಪದ ,ಮುಂತಾದ ಸಂಸ್ಕೃತಿಗಳ ಸಂವರ್ಧನೆ ಹಾಗೂ ಸಂರಕ್ಷಣೆಯ ಸದಾಶಯದೊಂದಿಗೆ ದಿನಾಂಕ ೫-೫-೧೯೧೫ ರಲ್ಲಿ ಸ್ಥಾಪನೆಯಾದ ಕನ್ನಡಿಗರೆಲ್ಲರ ಹೆಮ್ಮೆಯ ಸಂಸ್ಥೆಯೇ “ಕನ್ನಡ ಸಾಹಿತ್ಯ ಪರಿಷತ್ತು”.ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಹಾಗೂ ಕನ್ನಡ ನಾಡು ನುಡಿಯನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಅಂದಿನ ಸರಕಾರ ಹಾಗೂ ಮೈಸೂರು ಸಂಸ್ಥಾನದ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು.ಅಂದು ಬೆಂಗಳೂರಿನ ಒಂದು ಚಿಕ್ಕ ಕೊಠಡಿಯಲ್ಲಿ ಕಾರ್ಯಾರಂಭ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತು ಇಂದು ರಾಜ್ಯಾದ್ಯಂತ ಹಾಗೂ ಹೊರ ರಾಜ್ಯಗಳಲ್ಲೂ ತನ್ನ ಛಾಪನ್ನು ಮೂಡಿಸಿದೆ. ಇಂದು ಬೃಹತ್ ಬೆಂಗಳೂರು ಮಹಾನಗರದ ಹೃದಯ ಭಾಗದಲ್ಲಿರುವ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿ ಇರುವ ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಕನ್ನಡ ಸಾಹಿತ್ಯ ಪರ ಚಟುವಟಿಕೆಗಳು ನಿರಂತರವಾಗಿ ಸಾಗಿ ಬಂದಿವೆ. ಅಷ್ಟೇ ಅಲ್ಲ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಸಹ ಕನ್ನಡ ಸಾಹಿತ್ಯ ಭವನಗಳು ನಿರ್ಮಾಣವಾಗಿ ಕನ್ನಡಪರ ಸಾಹಿತ್ಯಿಕ ಚಟುವಟಿಕೆಗಳು ಕ್ರಿಯಾಶೀಲವಾಗಿ ಸಾಗಿವೆ. ಆದರೆ ಇನ್ನೂ ಕೆಲವೊಂದು ಕಡೆ ಸಾಹಿತ್ಯ ಭವನಗಳ ನಿರ್ಮಾಣವಾಗಬೇಕಿದೆ.

 

 

ಕನ್ನಡ ನಾಡು ನುಡಿಯ ಜಾಗೃತಿ ಬೆಳೆಸಲು ಕನ್ನಡ ಪ್ರೇಮವನ್ನು ಇಮ್ಮಡಿಗೊಳಿಸಲು ಸಾಹಿತ್ಯ ಸಮಾಜಮುಖಿ ಸಮ್ಮೇಳನಗಳು ರಾಜ್ಯ ,ಜಿಲ್ಲೆ ,ತಾಲ್ಲೂಕುಗಳಲ್ಲಿ ನಡೆಯುತ್ತಾ ಬಂದಿವೆ.ಸಾಹಿತ್ಯಿಕವಾಗಿ ಸಾಂಸ್ಕೃತಿಕವಾಗಿ ನಾಡಿನಾದ್ಯಂತ ಚಟುವಟಿಕೆಗಳು ನಡೆಯುತ್ತಿವೆ ವಿಚಾರ ಗೋಷ್ಠಿಗಳು ಕವಿಗೋಷ್ಠಿಗಳು ಉಪನ್ಯಾಸ ಮನೆಯಂಗಳದಲ್ಲಿ ಸಾಹಿತ್ಯ , ವಿದ್ಯಾರ್ಥಿಗಳಿಗೆ ಸಾಹಿತ್ಯ ಕಲರವ ಕಾರ್ಯಕ್ರಮಗಳು ,ಸಾಹಿತಿಗಳು ಬರೆದ ಪುಸ್ತಕಗಳ ಪರಿಚಯಿಸುವ ಕಾರ್ಯಕ್ರಮಗಳು,ಹೀಗೆ ಹತ್ತು ಹಲವಾರು ಕಾರ್ಯ ಯೋಜನೆಗಳು ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುತ್ತಿದೆ. ಲೇಖಕರು ಹಾಗೂ ಪ್ರಕಾಶಕರ ಉತ್ತೇಜನಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತು ಪುಸ್ತಕ ಸಂತೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಗ್ರಂಥ ಭಂಡಾರ ಹಾಗೂ ಧ್ವನಿ ಮುದ್ರಣ ಮತ್ತು ಸಾಕ್ಷ್ಯಚಿತ್ರ ಭಂಡಾರ ವಸ್ತು ಸಂಗ್ರಹಾಲಯ ಸಾಹಿತ್ಯ ಲೋಕದ ಗಣ್ಯರ ಅಮೂಲ್ಯ ಭಾಷಣಗಳು ಹೀಗೆ ಇವೆಲ್ಲವೂ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಲಭ್ಯವಿದೆ. “ಸಾಧಕರೊಡನೆ ಸಂವಾದ “ಹೀಗೆ ಹತ್ತು ಹಲವು ಕಾರ್ಯಯೋಜನೆಗಳು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಗುತ್ತಾ ಬಂದಿವೆ. ಹೀಗೆಯೇ ಕನ್ನಡ ಸಾಹಿತ್ಯಿಕ ಭವ್ಯ ಪರಂಪರೆಯು ಪ್ರತಿಯೊಬ್ಬರಿಗೂ ತಲುಪುವಂತಾಗಲಿ ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇನ್ನೂ ಕ್ರಿಯಾಶೀಲವಾಗಿ ತನ್ನ ಕಾರ್ಯವನ್ನು ಮುಂದುವರಿಸುತ್ತಾ ಸಮಸ್ತ ಕನ್ನಡಿಗರ ಭಾವ ಸಿರಿಯನ್ನು ವೃದ್ಧಿಸಲಿ.

 


ಪ್ರೊ ಸುಧಾ ಹುಚ್ಚಣ್ಣವರ ಉಪನ್ಯಾಸಕರು
ಎಫ್ಎಂ ಡಬಾಲಿ ಪಿಯು ಕಾಲೇಜ್ ಶಿರಹಟ್ಟಿ
ಗದಗ ಜಿಲ್ಲೆ

Advertisement
Share this on...