ಆಂಗ್ಲ ಭಾಷೆ ಬಳಸದೆ ನಿರ್ವಹಿಸುವ ಪಾತ್ರ ಕನ್ನಡತಿಯಲ್ಲಿ ಪುಟ್ಟ ಗೌರಿ ಖ್ಯಾತಿಯ ಭುವಿ…

in ಮನರಂಜನೆ/ಸಿನಿಮಾ 305 views

ಕನ್ನಡತಿ ಇದು ಸರಳವಾದ ಸಹಜಸುಂದರ ಪಾತ್ರಗಳ ವಿವರಣಾ ಕಥೆ. ಅನೇಕ ಧಾರವಾಹಿಗಳಿಗೆ ಹೋಲಿಸಿದರೆ ಈ ಧಾರವಾಹಿ ಅತ್ಯುತ್ತಮ ಕಥೆಯನ್ನು ಒಳಗೊಂಡಿದೆ. ಇದರ ಸರಳತೆ ಎಷ್ಟಿದೆಯೆಂದರೆ ಇದನ್ನು ವೀಕ್ಷಿಸುವವರಿಗೆ ಅಲ್ಲಿರುವ ಪಾತ್ರಗಳು ಬರಿ ಪಾತ್ರಗಳೆನಿಸದೆ ನಮ್ಮಲ್ಲೇ ದಿನ ನಿತ್ಯ ನಡೆಯುವ ಮತ್ತು ಅತೀ ಹತ್ತಿರದ ವ್ಯಕ್ತಿಗಳೆನಿಸುತ್ತಾರೆ. ಈ ಧಾರವಾಹಿಯಲ್ಲಿ ಎಲ್ಲ ಪಾತ್ರಗಳು ಸಹಜಸುಂದರತೆಯಿಂದ ಅದ್ಭುತವಾಗಿವೆ. ಅತ್ಯಂತ ಮನಸೆಳೆಯುವ ಮನಮುಟ್ಟುವ ಪಾತ್ರ ಎಂದರೆ ಅದು ರಂಜನಿ ರಾಘವನ್ ರವರ ಭುವನೇಶ್ವರಿ ಪಾತ್ರ. ಆ ಪಾತ್ರ ಭುವಿ ಎಂದೆ ಖ್ಯಾತಿ ಪಡೆದಿದೆ. ಈ ಪಾತ್ರದಲ್ಲಿರುವ ರಂಜನಿ ರಾಘವನ್ ಇವರ ಪರಿಚಯ ಮಾಡಿಕೊಳ್ಳುವುದಾದರೆ ರಂಜನಿ ರಾಘವನ್ ಇವರು ಕಿರುತರೆಯಲ್ಲಿ ಹಿಂದೆ ಪುಟ್ಟಗೌರಿ ಮದುವೆಯ ಗೌರಿ ಎಂದೆ ಪ್ರಸಿದ್ದಿಯಾದವರು. ಇವರು ಮಾರ್ಚ್ 29 ರಂದು 1994 ರ ಇಸವಿಯಲ್ಲಿ ಜನಿಸಿದ್ದಾರೆ. ಇವರು ಹುಟ್ಟಿದ್ದು ಬೆಳೆದಿದ್ದು ಈಗ ಇರೋದು ಬೆಂಗಳೂರಿನಲ್ಲೇ. ತಂದೆ ತಾಯಿ ಮತ್ತು ಇಬ್ಬರು ತಂಗಿಯರ ಮುದ್ದಿನ ಅಕ್ಕ ಇವರು. ಇವರು ಬೆಲ್ ಹೈಸ್ಕೂಲ್ನಲ್ಲಿ ತಮ್ಮ ಹೈ ಸ್ಕೂಲ್ ಶಿಕ್ಷಣ,ಹಾಗೂ ಬೆಲ್ ಕಾಂಪೊಸಿಟ್ ಕಾಲೇಜ್ ನಲ್ಲಿ ತಮ್ಮ ಪಿಯುಸಿ ಮುಗಿಸಿದ್ದಾರೆ.

Advertisement

Advertisement

ಅಷ್ಟಕ್ಕೇ ನಿಲ್ಲದ ವಿಧ್ಯಾಭ್ಯಾಸ ಶೇಷಾದ್ರಿ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಅಲ್ಲಿ ಬಿ.ಕಾಮ್ ಕಂಪ್ಲೀಟ್ ಮಾಡಿದ್ದಾರೆ. ಮತ್ತು ತಮ್ಮ ಮಾಸ್ಟರ್ ಡಿಗ್ರಿಯನ್ನು ಕೂಡ(MBA) ಮುಗಿಸಿದ್ದಾರೆ. ಇವರು ಪಸ್ಟ್ ಡೆಬ್ಯೂಟ್ ಮಾಡಿದ ಧಾರವಾಹಿ ಕೆಳದಿ ಚೆನ್ನಮ್ಮ ಈ ಧಾರವಾಹಿಯಲ್ಲಿ ನಾಗವೇಣಿ ಎನ್ನುವ ಸಣ್ಣಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಇದಾದಮೇಲೆ ಆಕಾಶದೀಪ ಅನ್ನೊ ಧಾರವಾಹಿಯಲ್ಲಿ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರವಾಹಿಯಲ್ಲಿ ತಮ್ಮ ಅದ್ಭುತ ನಟನೆಯಿಂದ ಎಲ್ಲರಲ್ಲು ಗುರುತಿಸಿಕೊಳ್ಳುತ್ತಾರೆ.

Advertisement

ಇದರಿಂದ ಪುಟ್ಟಗೌರಿ ಮದುವೆ ಎಂಬ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಆಯ್ಕೆ ಆಗ್ತಾರೆ. ಪುಟ್ಟಗೌರಿ ಮದುವೆಯ ಈ ಪಾತ್ರ ಇವರ ಬದುಕಿನಲ್ಲಿ ಅತೀ ಹೆಚ್ಚು ಯಶಸ್ಸು, ಗೌರವ, ಹೆಚ್ಚು ಅವಕಾಶಗಳನ್ನ ತಂದುಕೊಡುತ್ತೆ. ಕಿರುತೆರೆಯಲ್ಲಿ ಈ ಪಾತ್ರದಿಂದ ಅತೀ ಹೆಚ್ಚು ಗುರುತಿಸಿಕೊಳ್ಳುತ್ತಾರೆ. ಇದರಿಂದ ಸಿನಿಮಾದಲ್ಲಿ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೂಡ ಅವಕಾಶ ಸಿಗತ್ತೆ. ನಂತರ ತಮ್ಮದೆ ಆದ ಹೊಸ ಧಾರವಾಹಿ ಮಾಡ್ತಾರೆ. ಇಷ್ಟದೇವತೆ ಅನ್ನೊ ಧಾರವಾಹಿಯಲ್ಲಿ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡ್ತಾರೆ. ಇದಷ್ಟೆ ಅಲ್ಲದೆ ಪೌರ್ಣಮಿ ತಿಂಗಳ್ ಎನ್ನುವ ಮಲಯಾಳಂ ಧಾರವಾಹಿಯಲ್ಲಿ ಪಾತ್ರ ನಿರ್ವಹಿಸುತ್ತಾರೆ. ಅಷ್ಟೆ ಅಲ್ಲದೆ ಸಿನಿಮಾ ರಂಗದಲ್ಲು ಕೂಡ ನಟಿಸಿದ್ದಾರೆ. ರಾಜಹಂಸ ಚಿತ್ರದ ಮೂಲಕ ನಾಯಕಿಯಾಗಿ ನಟಿಸಿದ್ದಾರೆ. ಮತ್ತು ತಾವೆ ಬರೆದ ಕಥೆಗೆ ತಾವೆ ಡೈರೆಕ್ಷನ್ ಮಾಡಬೇಕೆಂದು ಕೂಡ ಹೇಳಿಕೊಂಡಿದ್ದಾರೆ. ಟಕ್ಕರ್ ಸಿನಿಮಾದಲ್ಲು ನಾಯಕಿಯಾಗಿ ನಟಿಸಿದ್ದಾರೆ. ಇವರು ವೃತ್ತಿಯಲ್ಲಿ ಕಿರುತೆರೆಯ ನಾಯಕಿ ಅಲ್ಲದೆ ಮಾಡೆಲ್ ಕೂಡ ಹೌದು.

Advertisement

ಇವರು ಸಿನಿಮಾದಲ್ಲಿ ದರ್ಶನ್ ಮತ್ತು ಪುನೀತ್ ತಮ್ಮ ನೆಚ್ಚಿನ ನಟರೆಂದು ಹೇಳಿಕೊಂಡಿದ್ದಾರೆ. ಹವ್ಯಾಸಗಳಲ್ಲಿ ಟ್ರಾವೆಲಿಂಗ್,ಡ್ಯಾನ್ಸಿಂಗ್ ಮೊದಲನೆಯವಾಗಿವೆ. ಇವರು ಸಂಗೀತದಲ್ಲು ಹೆಚ್ಚು ಆಸಕ್ತಿವಂತರಾಗಿದ್ದಾರೆ. ಇಷ್ಟೆಲ್ಲ ನಟನೆಯಲ್ಲಿ ಪ್ರಸಿದ್ದಿಯಾದ ಇವರು ಈಗ ಕನ್ನಡತಿ ಎಂಬ ಧಾರವಾಹಿಯ ಮೂಲಕ ಮನೆ ಮನೆಯ ಎಲ್ಲರ ಮನ ಮುಟ್ಟುವಂತೆ ಪಾತ್ರ ನಿರ್ವಹಿಸುತ್ತಿದ್ದಾರೆ. ಕನ್ನಡ ಭಾಷೆಯ ಸೊಗಡನ್ನು ಉತ್ತಮವಾಗಿ ಮತ್ತು ಒಂದು ಪದ ಆಂಗ್ಲ ಭಾಷೆ ಬಳಸದೆ ನಿರ್ವಹಿಸುವ ಪಾತ್ರ ಅತ್ಯುತ್ತಮ. ತನ್ನೊಳಗಿನ ನೋವನ್ನು ಮರೆತಂತೆ ಇದ್ದು ಬೇರೆಯವರ ಬಗ್ಗೆ ಒಳಿತು ಬಯಸುವ ಈ ನಿಸ್ವಾರ್ಥಿ ಭುವಿ ನಿಜಕ್ಕೂ ಅದ್ಭುತ. ಈ ಧಾರವಾಹಿಯಲ್ಲಿ ಎಲ್ಲಿಯೂ ಆಡಂಬರದ ಆಕರ್ಷಣೆ ಇಲ್ಲ. ಸಂಬಂಧಗಳ ಸಿಹಿಯೂ ಇದರಲ್ಲಿ ಸರಳ ಸುಂದರತೆಯಿಂದ ಕೂಡಿದೆ. ಹೆಚ್ಚಿನ ಕೃತಕ ಸುಂದರ ಆಕರ್ಷಣೆಯ ಧಾರವಾಹಿಗಳನ್ನು ಬದಿಗಿರಿಸಿ ಕನ್ನಡತಿಯ ಕನ್ನಡದ ಬಗ್ಗೆ ಒಲವು ತೋರಿಸೋಣ. ರಂಜನಿ ರಾಘವನ್ ರವರ,ಭುವಿ ಕನ್ನಡತಿಯ ಪಾತ್ರ ಹೀಗೆ ಸಾಗಲಿ ಎಂದು ಆಶಿಸೋಣ.

Advertisement
Share this on...