ಆಂಜಿಯೋಪ್ಲಾಸ್ಟಿ ಬಳಿಕ ಚೇತಿರಿಸಿಕೊಳ್ಳುತ್ತಿದ್ದೇನೆ ಎಂದ ಕಪಿಲ್ ದೇವ್

in ಕ್ರೀಡೆ 218 views

ಕ್ರಿಕೆಟ್ ದಿಗ್ಗಜ, ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದು, ಸಧ್ಯ ತಾವು ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಕಪಿಲ್ ದೇವ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ವಿಚಾರ ಅವರ ಅಭಿಮಾನಿಗಳಲ್ಲಿ ತೀವ್ರ ಆತಂಕವನ್ನುಂಟುಮಾಡಿತ್ತು. ಇದೀಗ ತಾವು ಚೇತರಿಸಿಕೊಳ್ಳುತ್ತಿರುವುದಾಗಿ ಅವರೇ ಮಾಹಿತಿ ನೀಡಿರುವುದು ಸಮಾಧಾನ ತಂದಿದೆ.ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಕಪಿಲ್ ದೇವ್, ಎಲ್ಲರ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು. ಎಲ್ಲರ ಶುಭ ಹಾರೈಕೆಯಿಂದ ನಾನು ಚೇತರಿಸಿಕೊಳ್ಳುತ್ತಿದ್ದೇನೆ. ನಾನು ಗಾಲ್ಫ್ ಆಡಲು ಕಾತರದಿಂದ ಕಾಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.ಕಪಿಲ್ ದೇವ್ ಅ.23ರಂದು ಎದೆನೋವಿನಿಂದ ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ತಕ್ಷಣ ವೈದ್ಯರು ಕಪಿಲ್ ಅವರಿಗೆ ಆಂಜಿಯೋಪ್ಲಾಸ್ಟ್ ಶಸ್ತ್ರಚಿಕಿತ್ಸೆ ನೀಡಿದ್ದರು. ಸಧ್ಯ ಕಪಿಲ್ ದೇವ್ ಚೇತರಿಸಿಕೊಳ್ಳುತ್ತಿದ್ದು, ಶೀಘ್ರದಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.

Advertisement

Advertisement

ಇಂಗ್ಲೆಂಡ್​ನ ಲಾರ್ಡ್ಸ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡ 1983ರಲ್ಲಿ ವಿಶ್ವಕಪ್ ಗೆದ್ದಿತ್ತು. 1999 ಅಕ್ಟೋಬರ್ ನಿಂದ 10 ತಿಂಗಳು ಭಾರತದ ರಾಷ್ಟ್ರೀಯ ಕ್ರಿಕೆಟ್ ತರಬೇತುದಾರರಾಗಿ ಕಪಿಲ್ ಕಾರ್ಯ ನಿರ್ವಹಿಸಿದ್ದಾರೆ.

Advertisement

ಹೃದಯಸ್ನಾಯುವಿಗೆ ರಕ್ತಪೂರೈಕೆಗೆ ಅಡ್ಡಿಯುಂಟಾದಾಗ ಹೃದಯಕ್ಕೆ ಹೊಸ ರಕ್ತನಾಳಗಳ ಜೋಡಣೆಯ ಬೈಪಾಸ್ ಸರ್ಜರಿಯ ಬದಲು, ಇಂದು ಬಳಕೆಗೆ ಬಂದಿರುವ ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಆಂಜಿಯೋಪ್ಲಾಸ್ಟ್ ಪ್ರಮುಖವಾಗಿದ್ದು, ಅವು ಹೃದಯದ ರಕ್ತಪೂರೈಕೆಯನ್ನು ಸರಾಗಗೊಳಿಸುವಲ್ಲಿ ಸಮರ್ಥವಾಗಿವೆ. ಹೃದಯಾಘಾತವಾದ ವ್ಯಕ್ತಿಯನ್ನು ಉಳಿಸಿಕೊಳ್ಳುವಲ್ಲಿ ಆಂಜಿಯೋಪ್ಲ್ಯಾಸ್ಟಿ ಪರಿಣಾಮಕಾರಿಯಾಗಿದೆ.

Advertisement

Advertisement
Share this on...