ಯಾರಿಗೆ ಸಾಲುತ್ತೆ 15 ಸಾವಿರ ಎನ್ನುತ್ತಿದ್ದಾರೆ ಕನ್ನಡ ಚಿತ್ರರಂಗದ​ ನಿರ್ಮಾಪಕರು

in ಸಿನಿಮಾ 45 views

ಚೀನಾ ಇಡೀ ವಿಶ್ವಕ್ಕೇ ಹರಡಿದ ಭಯಾನಕ ಕೊರೊನಾ ವೈರಸ್​​​​​​​​​​​​ ವಿಶ್ವಾದ್ಯಂತ ತನ್ನ ಜಾಲ ಹರಡುತ್ತಿದೆ. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಕೊರೊನಾ ಭೀತಿ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಲಾಕ್​​ಡೌನ್​​​​​ನಿಂದ ಭಾರತೀಯ ಅರ್ಥವ್ಯವಸ್ಥೆಗೆ ಹೊಡೆದ ಬಿದ್ದಿದೆ. ಸಿನಿಮಾ ಸೇರಿದಂತೆ ಪ್ರತಿ ಕ್ಷೇತ್ರವೂ ಬಂದ್ ಆಗಿದೆ. ಕಡಿಮೆ ಎಂದರೂ ದಿನಂಪ್ರತಿ 10 ಕೋಟಿ ರೂಪಾಯಿ ಲಾಭ ಮಾಡುತ್ತಿದ್ದ ಸಿನಿಮಾ ಉದ್ಯಮ ಈಗ ಲಾಕ್​​​​ಡೌನ್​​​ನಿಂದ ಸಂಕಷ್ಟ ಎದುರಿಸುತ್ತಿದೆ.

Advertisement

 

Advertisement

Advertisement

 

Advertisement

ಇನ್ನು ಇತರ ದಿನಕೂಲಿ ನೌಕರರಂತೆ ಸಿನಿಮಾ ಕಾರ್ಮಿಕರು ಕೂಡಾ ಲಾಕ್​​​​​ಡೌನ್​​​ನಿಂದ ಬೇಸರ ವ್ಯಕ್ತಪಡಿಸಿದ್ದಾರೆ. ಲೈಟ್​​ಬಾಯ್, ಮೇಕಪ್ ಆರ್ಟಿಸ್ಟ್​​​​, ಸೆಟ್​​​ನಲ್ಲಿ ಕೆಲಸ ಮಾಡುವವರು, ಸಾಧನೆ ಮಾಡಿದರೆ ಚಿತ್ರರಂಗದಲ್ಲೇ ಮಾಡಬೇಕು ಎಂದು ನಿರ್ಧರಿಸಿ ಮನೆ ಬಿಟ್ಟು ಬೆಂಗಳೂರಿಗೆ ಬಂದವರು ಈಗ ಕೆಲಸ ಇಲ್ಲದೆ, ಕೆಲಸದಿಂದ ದುಡ್ಡು ಇಲ್ಲದೆ ಪರದಾಡುತ್ತಿದ್ದಾರೆ.

 

 

ಇನ್ನು ಸಾಲ ಮಾಡಿ ಸಿನಿಮಾ ನಿರ್ಮಾಣ ಮಾಡುವ ಹೊಸ ನಿರ್ಮಾಪಕರು ಕೂಡಾ ಇದೇ ಪರಿಸ್ಥಿತಿಯಲ್ಲಿದ್ದಾರೆ. ಈ ಕಾರಣ ನಿರ್ಮಾಪಕರ ವಲಯ ಈಗ ಚಲನಚಿತ್ರ ವಾಣಿಜ್ಯ ಮಂಡಳಿ ಮೊರೆ ಹೋಗಿದೆ. ವಾಣಿಜ್ಯ ಮಂಡಳಿಯಲ್ಲಿರುವ ಕಲ್ಯಾಣ ನಿಧಿಯಿಂದ ಕಷ್ಟದಲ್ಲಿರುವವರಿಗೆ ಹಣ ಹಂಚುವಂತೆ ಫಿಲ್ಮ್ ಚೇಂಬರ್ ಅಧ್ಯಕ್ಷರ ಬಳಿ ಮನವಿ ಮಾಡಿದ್ದಾರೆ.

 

 

ಇನ್ನು 1944 ರಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಥಾಪಿತವಾಗಿದ್ದು ಮಾರ್ಚ್​ನಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ವಜ್ರ ಮಹೋತ್ಸವ ಆಚರಿಸಲು ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿತ್ತು. ಇದಕ್ಕಾಗಿ ಸುಮಾರು 50 ಲಕ್ಷ ರೂಪಾಯಿ ಹಣವನ್ನು ತೆಗೆದಿರಿಸಿತ್ತು. ಆದರೆ ಕೊರೊನಾ ವೈರಸ್ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಆದ ಕಾರಣ ಅಮೃತ ಮಹೋತ್ಸವಕ್ಕೆಂದು ಇರಿಸಲಾಗಿದ್ದ 50 ಲಕ್ಷ ರೂಪಾಯಿ ಜೊತೆ ‘ಕಲ್ಯಾಣ ನಿಧಿ’ಯ ಬಡ್ಡಿ ಹಣ ಸೇರಿ ಸುಮಾರು 1500 ಸದಸ್ಯರಿಗೆ ತಲಾ 15 ಸಾವಿರ ಹಣ ಹಂಚಲು ವಾಣಿಜ್ಯ ಮಂಡಳಿ ನಿರ್ಧರಿಸಿತ್ತು. ಆದರೆ ಇದೀಗ ನಿರ್ಮಾಪಕರು ಯಾರಿಗೆ ಸಾಲುತ್ತೆ ಸ್ವಾಮಿ 15 ಸಾವಿರ ಎಂದು ಪ್ರಶ್ನಿಸಿದೆ.

 

 

ಈ ದುಬಾರಿ ದುನಿಯಾದಲ್ಲಿ ಪ್ರತಿಯೊಂದು ಪದಾರ್ಥದ ಬೆಲೆ ಗಗನಕ್ಕೆ ಏರಿದೆ. ಇದಕ್ಕೂ ಮುನ್ನ ಏಪ್ರಿಲ್ 14 ವರೆಗೂ ಲಾಕ್​ಡೌನ್ ಎನ್ನಲಾಗಿತ್ತು. ಆದರೆ ಪ್ರಧಾನಿ ಮೋದಿ ಮೇ 3 ವರೆಗೂ ಲಾಕ್​​​ಡೌನ್ ವಿಸ್ತರಿಸಿದ್ದಾರೆ. ಲಾಕ್​ಡೌನ್ ಅಲ್ಲಿಗೆ ಮುಗಿದರೆ ಪರವಾಗಿಲ್ಲ. ಆದರೆ ಲಾಕ್​​​ಡೌನ್ ಮುಗಿದು ಕೊರೊನಾ ಒಂದು ಹಂತಕ್ಕೆ ಬಂದು ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರಲು ಕನಿಷ್ಠ 6 ತಿಂಗಳು ಬೇಕೇ ಬೇಕು. ಈ ಪರಿಸ್ಥಿತಿಯಲ್ಲಿ 15 ಸಾವಿರ ಹೇಗೆ ಸಾಲುತ್ತದೆ. ಆದ್ದರಿಂದ ತಾವು ಪ್ರತಿ ಸದಸ್ಯರಿಗೂ ತಲಾ 25 ಸಾವಿರ ಹಣ ನೀಡಬೇಕು ಎಂದು ನಿರ್ಮಾಪಕರ ಸಂಘ ಒತ್ತಾಯಿಸಿದೆ.

Advertisement
Share this on...