ಚಿತ್ರರಂಗದ ಮೇರು ನಟರುಗಳಿಗೆ ಗುರುವಾಗಿದ್ದವರು ಕಾಶಿನಾಥ್ !

in ಮನರಂಜನೆ/ಸಿನಿಮಾ 210 views

ಕನ್ನಡ ಚಿತ್ರರಂಗದ ಮೇರು ನಟರುಗಳಿಗೆ ಗುರುವಾಗಿದ್ದವರು ಕಾಶಿನಾಥ್. 80 ಹಾಗೂ 90 ರ ದಶಕದಲ್ಲಿ ಕನ್ನಡ ಚಿತ್ರರಂಗದ ದೇಸೆಯನ್ನೆ ಬದಲಿಸಿದರು. ಇವರು ಕಡಿಮೆ ವೆಚ್ಚದಲ್ಲಿ ವಿಭಿನ್ನ ಶೈಲಿಯ ಉತ್ತಮ ಚಿತ್ರಗಳನ್ನ ನಿರ್ಮಿಸಿ ತೋರಿಸಿದ್ದಾರೆ. ಹಲವು ಪ್ರತಿಭಾನ್ವಿತರನ್ನು ಚಿತ್ರರಂಗಕ್ಕೆ ಕಾಶಿನಾಥ್ ರವರು ಪರಿಚಯಿಸಿದ್ದಾರೆ. ನಟ, ನಿರ್ದೇಶಕ, ನಿರ್ಮಾಪಕ, ಸಂಗೀತ ಸಂಯೋಜಕ ಹೀಗೆ ಚಿತ್ರರಂಗದ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಕಾಶಿನಾಥ್ ರವರು ತೋರಿದ್ದಾರೆ. ಕಾಶಿನಾಥ್ ರವರು ಕುಂದಾಪುರ ಸಮೀಪದ ಕೋಟೇಶ್ವರದ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸುತ್ತಾರೆ. ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಪದವಿಯನ್ನು ಪಡೆದುಕೊಳ್ಳುತ್ತಾರೆ. ಸುರೇಶ್ ಹೆಬ್ಬಾಳ್ಕರ್ ರವರ ಜೊತೆ ಸೇರಿ ಅಸಿಮಾ ತಂಡವನ್ನು ಸೇರಿಕೊಳ್ಳುತ್ತಾರೆ. 1975ರಲ್ಲಿ ಅಪರೂಪದ ಅತಿಥಿಗಳು ಚಿತ್ರವನ್ನು ನಿರ್ದೇಶಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ನಂತರ 1978 ರಲ್ಲಿ ಸುರೇಶ್ ಹೆಬ್ಬಾಳ್ಕರ್ ರವರನ್ನು ಇಟ್ಟುಕೊಂಡು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಅಪರಿಚಿತ ಸಿನಿಮಾವನ್ನು ನಿರ್ದೇಶಿಸಿದರು. ಕಾಶಿನಾಥ್ ರವರು ಕನ್ನಡದಲ್ಲಿ ಒಟ್ಟಾರೆಯಾಗಿ 16 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅದರಲ್ಲಿ ಹಲವಾರು ಚಿತ್ರಗಳು ಸೂಪರ್ ಡೂಪರ್ ಹಿಟ್ ಗಳಾಗಿದ್ದು ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ.

Advertisement

Advertisement

1984ರಲ್ಲಿ ಅನುಭವ ಚಿತ್ರದ ಮೂಲಕ ಅಭಿನಯ ಮತ್ತು ಉಮಾಶ್ರೀಯವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಘನತೆ ಇವರದ್ದಾಗಿದೆ. ‘ಅನುಭವ’ ಚಿತ್ರ ಹಲವು ರಾಜ್ಯ ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿತ್ತು. ಅವಳೆ ನನ್ನ ಹೆಂಡತಿ, ಅವನೇ ನನ್ನ ಗಂಡ, ಮನ್ಮಥರಾಜ, ಚಪಲಚೆನ್ನಿಗರಾಯ, ಅಜಗಜಾಂತರ, ಅನಾಮಿಕ, ಅನಂತನ ಅವಾಂತರ, ಹೆಂಡತಿ ಎಂದರೆ ಹೀಗಿರಬೇಕು, ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು, ಆಹಾ ನನ್ನ ತಂಗಿ ಮದುವೆ, ಅಪ್ಪಚ್ಚಿ ಸೇರಿದಂತೆ ಹಲವಾರು ಚಿತ್ರಗಳನ್ನು ನಟಿಸಿ, ನಿರ್ದೇಶಿಸಿದ್ದಾರೆ. ಕಾಶಿನಾಥ್ ರವರು ಕನ್ನಡ, ಹಿಂದಿ ಹಾಗೂ ತೆಲುಗು ಸೇರಿದಂತೆ ಒಟ್ಟಾರೆ 13 ಚಿತ್ರಗಳನ್ನು ನಿರ್ಮಿಸಿದ್ದಾರೆ.

Advertisement

ಅದರಲ್ಲಿ 11 ಕನ್ನಡ ಚಿತ್ರಗಳು ಹಾಗೂ ಒಂದು ಹಿಂದಿ ಮತ್ತು ಒಂದು ತೆಲುಗಿನಲ್ಲಿ ಚಿತ್ರವನ್ನು ನಿರ್ಮಿಸಿ ತಮ್ಮ ಖ್ಯಾತಿಯನ್ನ ಹೆಚ್ಚಿಸಿಕೊಂಡಿದ್ದಾರೆ. ಕನ್ನಡ 7 ಚಿತ್ರಗಳಿಗೆ ಸಂಭಾಷಣೆ ಬರೆದಿದ್ದು ಮಂಗಳೂರು ಮಂಜುನಾಥ ಚಿತ್ರ ಬಹಳ ಜನಪ್ರಿಯವಾಗಿ ಜನರ ಮನ್ನಣೆಯನ್ನು ಪಡೆಯಿತು. ಸ್ಯಾಂಡಲ್ ವುಡ್ ಗೆ ರಿಯಲ್ ಸ್ಟಾರ್ ಉಪೇಂದ್ರ, ಸುನಿಲ್ ಕುಮಾರ್ ದೇಸಾಯಿ, ವಿ.ಮನೋಹರ್, ಅಭಿನಯ ಮತ್ತು ಉಮಾಶ್ರೀ ಸೇರಿದಂತೆ ಹಲವು ಕಲಾವಿದರು, ತಂತ್ರಜ್ಞರನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

Advertisement


ಮೊದಲಿಗೆ ಉಪೇಂದ್ರ, ಕಾಶಿನಾಥ್ ರವರ ಚಿತ್ರಗಳಿಗೆ ಸಂಭಾಷಣೆ ಬರೆಯುತ್ತಿದ್ದರು. ನಂತರದ ದಿನಗಳಲ್ಲಿ ಕಾಶಿನಾಥ್ ರವರಿಗೆ ಸಹಾಯಕ ನಿರ್ದೇಶಕರಾಗಿ ದುಡಿದ ಉಪೇಂದ್ರ ತರ್ಲೆ ನನ್ನ ಮಗ ಚಿತ್ರವನ್ನ ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಾರೆ. ಇದೇ ರೀತಿ ಸುನೀಲ್ ಕುಮಾರ್ ದೇಸಾಯಿರವರು ಸಹ ಮೊದಲಿಗೆ ಕಾಶಿನಾಥ್ ರವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಪ್ರಾರಂಭಿಸಿ ನಂತರ ಹಲವು ಹಿಟ್ ಚಿತ್ರಗಳನ್ನ ನಿರ್ದೇಶಿಸಿದರು. ತರುಣ್ ಸುಧೀರ್ ನಿರ್ದೇಶನದ 2017ರಲ್ಲಿ ತೆರೆಕಂಡ ಚೌಕ ಸಿನಿಮಾ ಕಾಶಿನಾಥ್ ರವರ ನಟನೆಯ ಕೊನೆಯ ಸಿನಿಮಾವಾಗಿತ್ತು. ಕಾಶಿನಾಥ್ರವರು ಜನವರಿ 16, 2018ರಲ್ಲಿ ನಿಧನರಾಗುತ್ತಾರೆ.

– ಸುಷ್ಮಿತಾ

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...