ನನ್ನರಸಿ ರಾಧೆಯ ಇಂಚರಾ ಆಗಿ ಮಿಂಚುತ್ತಿರುವ ಕೌಸ್ತುಭಮಣಿ!

in ಮನರಂಜನೆ/ಸಿನಿಮಾ 640 views

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನನ್ನರಸಿ ರಾಧೆ ಧಾರಾವಾಹಿಯಲ್ಲಿ ನಾಯಕಿ ಇಂಚರಾ ವೈದ್ಯ ಆಗಿ ಅಭಿನಯಿಸುತ್ತಿರುವ ಚೆಂದಳ್ಳಿ ಚೆಲುವೆಯ ಹೆಸರು ಕೌಸ್ತುಭಮಣಿ. ಮನೋಜ್ಞವಾದ ಅಭಿನಯದ ಮೂಲಕ ಮನ ಸೆಳೆಯುವ ಮಹಾನಗರಿಯ ಚೆಲುವೆ ಕೌಸ್ತುಭಮಣಿ ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ಪ್ರಿಯರ ಮನ ಸೆಳೆದು ಬಿಟ್ಟಿದ್ದಾರೆ. ಇಂಚರಾ ವೈದ್ಯ ಆಗಿ ಕಿರುತೆರೆ ಲೋಕದಲ್ಲಿ ಹೊಸ ಅಲೆ ಸೃಷ್ಟಿ ಮಾಡಿರುವ ಈ ಬೆಡಗಿಗೆ ಮೊದಲಿನಿಂದಲೂ ನಟನೆಯತ್ತ ವಿಶೇಷ ಗೀಳು ಇದ್ದಿದ್ದೇನೋ ನಿಜ. ಆದರೆ ನಟನೆಯ ರೀತಿ ನೀತಿಗಳು, ಗಂಧ ಗಾಳಿಗಳು ಏನು ಎತ್ತ ಎಂದು ತಿಳಿದಿರದ ಕಾರಣ ಆಕೆ ಈ ಕ್ಷೇತ್ರಕ್ಕೆ ಬಂದಿರಲಿಲ್ಲ. ಆದರೆ ಅದೃಷ್ಟ ಎಂಬುದು ಯಾರಿಗೆ ಯಾವಾಗ ಹೇಗೆ ಒಲಿಯುತ್ತದೆ ಎಂದು ಹೇಳುವುದು ಹೇಗೆ ಹೇಳಿ? ಬಹುಶಃ ಕೌಸ್ತುಭಮಣಿ ಅವರ ಅದೃಷ್ಟ ಬಣ್ಣದ ಲೋಕದಲ್ಲಿ ಎಂಬುದು ಮೊದಲೇ ಲಿಖಿತವಾಗಿತ್ತೇನೋ? ಅದೇ ಕಾರಣದಿಂದ ಆಕೆ ಇಂದು ಇಂಚರಾ ಆಗಿ ಮೋಡಿ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಿಂದ ಬಂದ ಒಂದು ಕರೆ ಇಂದು ಕೌಸ್ತಭ ಅವರ ಬದುಕನ್ನೇ ಬದಲಾಯಿಸಿದೆ ಎಂದರೆ ಸುಳ್ಳಲ್ಲ! ಕಲರ್ಸ್ ಕನ್ನಡ ವಾಹಿನಿಯಿಂದ ಕರೆ ಮಾಡಿ ಧಾರಾವಾಹಿಯಲ್ಲಿ ಬಣ್ಣ ಹಚ್ಚುತ್ತೀರಾ ಎಂದು ಕೇಳಿದಾಗ ಕೌಸ್ತುಭಮಣಿ ಹೇಳಿದ್ದು ನನಗೆ ನಟನೆ ಎಂದರೇನು, ಅದರ ಅನುಭವಗಳೇನು ಎಂಬುದು ಕೊಂಚವೂ ತಿಳಿದಿಲ್ಲವೆಂದು. ಆದರೆ ಅವರನ್ನು ಹುರಿದುಂಬಿಸಿದ ವಾಹಿನಿ ಆಡಿಶನ್ ಕೊಡುವಂತೆಯೂ ಪ್ರೇರೇಪಿಸಿದರು.

Advertisement

Advertisement

ಅಲ್ಲೂ ಪಾಸ್ ಆದ ಕೌಸ್ತುಭ ಮುಂದೆ ನಟನೆ ರೀತಿ ನೀತಿಗಳನ್ನು ತಿಳಿದುಕೊಂಡರು ಮತ್ತು ಇಂಚರಾ ಪಾತ್ರಕ್ಕೆ ಬೇಕಾಗುವಂತಹ ತಯಾರಿಯನ್ನು ಕೂಡಾ ಮಾಡಿದರು. ಇದೀಗ ಯಶಸ್ಸನ್ನು ಕೂಡಾ ಆಕೆ ಪಡೆದರು. “ಮೊದಲಿನಿಂದಲೂ ನಟನಾ ರಂಗಕ್ಕೆ ಬರಬೇಕು ಎಂಬ ಕನಸು ಕಂಡಿದ್ದವಳು ನಾನು. ಆದರೆ ಏನು, ಎತ್ತ ಎಂದು ತಿಳಿಯದ ಕಾರಣ ಈ ಕ್ಷೇತ್ರಕ್ಕೆ ಕಾಲಿಡಲು ತುಂಬಾನೇ ಭಯವಾಗಿತ್ತು. ಆರಂಭದಲ್ಲಿ ಇಂಚರಾ ಆಗಿ ಬದಲಾಗಲು ಕೊಂಚ ಹೆದರಿಕೆ ಆಗಿತ್ತು. ಆದರೆ ಈಗ ಸಲೀಸಾಗಿ ಅಭಿನಯಿಸುತ್ತೇನೆ. ಇದರ ಜೊತೆಗೆ ವೀಕ್ಷಕರ ಪ್ರೀತಿಯೂ ದೊರಕಿದೆ. ಜನ ಇಂದು ಇಂಚರಾ ಎಂದು ಗುರುತಿಸುವಾಗ ಈ ಲೋಕಕ್ಕೆ ಬಂದುದಕ್ಕೂ ಸಾರ್ಥಕ ಎಂದೆನಿಸುತ್ತದೆ” ಎನ್ನುತ್ತಾರೆ ಕೌಸ್ತುಭಮಣಿ.

Advertisement

Advertisement

“ಕೌಸ್ತುಭ ಮತ್ತು ಇಂಚರಾ ಪಾತ್ರಕ್ಕೆ ಅಜಗಜಾಂತರ ವ್ಯತ್ಯಾಸ ಇದೆ. ಇಂಚರಾ ಪಾತ್ರ ನಿಜಕ್ಕೂ ತುಂಬಾ ಬಬ್ಲಿಯಾದುದು. ಆಕೆ ಎಲ್ಲರೊಂದಿಗೂ ನಗುನಗುತ್ತಾ ಬರೆಯುತ್ತಾಳೆ. ಪಟಪಟನೆ ಅರಳು ಹುರಿದಂತೆ ಎಲ್ಲರೊಂದಿಗೂ ಹರಟುತ್ತಾಳೆ. ಆದರೆ ಕೌಸ್ತುಭ ಹಾಗಲ್ಲ. ತುಂಬಾ ಕ್ಲೋಸ್ ಇರುವವರೊಡನೆ ಮಾತ್ರವಷ್ಟೇ ಮಾತನಾಡುತ್ತಾಳೆ” ಎಂದು ಪಾತ್ರವನ್ನು ವಿವರಿಸುತ್ತಾರೆ ಕೌಸ್ತುಭ. ಅಚಾನಕ್ ಆಗಿ ಬಂದ ಅವಕಾಶದಿಂದ ಇಂದು ಕಿರುತೆರೆಯಲ್ಲಿ ನಟಿಸಿ, ಮನರಂಜನೆಯ ರಸದೌತಣ ಉಣಬಡಿಸುತ್ತಿರುವ ಈ ಚೆಲುವೆಗೆ ಈಗಾಗಲೇ ಪರಭಾಷೆಯಿಂದಲೂ ನಟಿಸುವ ಅವಕಾಶಗಳು ಬರುತ್ತಿದೆ. ಆದರೆ ನನ್ನರಸಿ ರಾಧೆಯಲ್ಲಿ ಬ್ಯುಸಿಯಾಗಿರುವ ಕಾರಣ ಅದರ ಬಗ್ಗೆ ಕೌಸ್ತುಭಮಣಿ ಇಲ್ಲಿಯ ತನಕ ಆಲೋಚನೆ ಮಾಡಲಿಲ್ಲ. ಮುಂದಿನ ದಿನಗಳಲ್ಲಿ ಮಾಡುತ್ತಾರೆಯೇ ಕಾದು ನೋಡಬೇಕಾಗಿದೆ.
– ಅಹಲ್ಯಾ

ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿ ಕೃಪೆಯಿಂದ ಈ ರಾಶಿಗಳಿಗೆ ಇಂದು , ಇಂದಿನ ನಿಮ್ಮ ರಾಶಿ ಭವಿಷ್ಯ ನಿಮ್ಮ ಸಮಸ್ಯೆ ಏನೇ ಇರಲಿ ಕರೆ ಮಾಡಿ9886027322. ದಕ್ಷಿಣ ಕನ್ನಡದ 108 ಜ್ಯೋತಿಷ್ಯ ತಂತ್ರಗಳಿಂದ ನಿಮ್ಮ ನಿಗೂಢ ಗುಪ್ತ ಸಮಸ್ಯೆಗಳಿಗೆ, ತಾಂಬೂಲ ಪ್ರಶ್ನೆ ಮತ್ತು ಆರೂಢ ಪ್ರಶ್ನೆಯಿಂದ ಕೇವಲ 11 ದಿನದಲ್ಲೇ ಶಾಶ್ವತ ಪರಿಹಾರ. ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು ಶ್ರೀ ಸುಬ್ರಮಣ್ಯ ಆಚಾರ್ಯ ದೈವಶಕ್ತಿ ಜ್ಯೋತಿಷ್ಯರು . ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ಕೇರಳದ 18 ದೈವಿಕ ಪೂಜಾ ಶಕ್ತಿಗಳಿಂದ ಪರಿಹಾರ ಮಾಡಿಕೊಡುತ್ತಾರೆ .ನಿಮ್ಮಲ್ಲಿ ಸಮಸ್ಯೆಗಳಾದ ಮಾಟ ಮಂತ್ರ ನಿವಾರಣೆ, ಕೋರ್ಟ್ ವಿಚಾರ ,ಆಸ್ತಿ ವಿಚಾರ , ಹಣಕಾಸಿನ ಸಮಸ್ಯೆ, ಸತಿಪತಿ ಕಲಹ , ಅತ್ತೆ-ಸೊಸೆ ಕಲಹ , ಮಕ್ಕಳ ವಿದ್ಯಭ್ಯಾಸದಲ್ಲಿ ತೊಂದರೆ, ಪ್ರೇಮ ಸಂಬಂಧದಂತ ಯಾವುದೇ ಸಮಸ್ಯೆಗಳಿಗೆ ಇಂದೇ ಕರೆ ಮಾಡಿ. 9886027322 ಪರಿಹಾರ ಮಾಡಿಕೊಡುತ್ತಾರೆ.

Advertisement
Share this on...