ಬಾರಿ ಬೇಡಿಕೆಯಲ್ಲಿದ್ದ ಈ ನಟಿ ಈಗ ಹೈವೇ ಪಕ್ಕದಲ್ಲಿ ಇಡ್ಲಿ ಮಾರುತ್ತಿದ್ದಾರೆ ಆ ನಟಿ ಯಾರು ಗೊತ್ತಾ..?

in Kannada News 61 views

ಸಿನಿಮಾರಂಗವೆಂಬುದು ವರ್ಣರಂಜಿತ ಜಗತ್ತು ಎನ್ನುವುದೇನೋ ನಿಜ. ಆದರೆ ಸಿನಿಮಾಗಳಲ್ಲಿ ನಟಿಸುವ ನಟ-ನಟಿಯರ ವೈಯಕ್ತಿಕ ಬದುಕು ಕೂಡ ಅಷ್ಟೇ ವರ್ಣರಂಜಿತವಾಗಿ ಇರುತ್ತದೆ ಎಂಬುದು ಮಾತ್ರ ಸುಳ್ಳು. ಕೆಲವು ಸಿನಿಮಾ ನಟ-ನಟಿಯರಿಗೂ ನಮ್ಮಂತೆ ಎಲ್ಲಾ ರೀತಿಯ ಸಮಸ್ಯೆಗಳು ಇರುತ್ತವೆ. ಆರ್ಥಿಕ ಸಂಕಷ್ಟಗಳು ಕೂಡ ತುಂಬಾನೇ ಇರುತ್ತವೆ. ಇಂತಹ ಕಷ್ಟಗಳಿಂದ ಅದೆಷ್ಟೋ ನಟ-ನಟಿಯರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಆದರೆ ಈ ನಟಿ ತನಗೆ ಬಂದ ಆರ್ಥಿಕ ಸಂಕಷ್ಟದಿಂದ ಪಾರಾಗಿ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ. ಯಾವುದೇ ಅಡ್ಡ ದಾರಿಯನ್ನು ಹಿಡಿಯದೆ ಛಲದಿಂದ ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ.

Advertisement

 

Advertisement


ಮಲೆಯಾಳಂನ ಖ್ಯಾತ ನಟಿ ಕವಿತಾ ಲಕ್ಷ್ಮಿ. ಮಮ್ಮುಟ್ಟಿ ಮೋಹನ್ ಲಾಲ್ ರವರಂತಹ ಮೇರು ನಟರ ಜೊತೆ ನಟಿಸಿದ್ದಾರೆ. ಮಲೆಯಾಳಂನ ಸೀರಿಯಲ್ ಗಳಲ್ಲೂ ಕೂಡ ನಟಿಸುತ್ತಾರೆ. 15 ವರ್ಷಗಳ ಹಿಂದೆಯೇ ತನ್ನ ಪತಿಗೆ ವಿಚ್ಛೇದನ ನೀಡಿದ ಕವಿತಾಲಕ್ಷ್ಮಿ ತಮ್ಮ ಇಬ್ಬರು ಮಕ್ಕಳನ್ನು ಸಾಕುವ ಸಂಪೂರ್ಣ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡರು. ತನ್ನ ಮಕ್ಕಳನ್ನು ತುಂಬಾ ಚೆನ್ನಾಗಿ ಓದಿಸಿ ವಿದ್ಯಾವಂತರನ್ನಾಗಿ ಬುದ್ಧಿವಂತರನ್ನಾಗಿ ಮಾಡಬೇಕು ಸಮಾಜದಲ್ಲಿ ನಾಲ್ಕು ಜನ ತನ್ನ ಮಕ್ಕಳನ್ನು ಕಂಡು ಬೇಷ್ ಎನ್ನಬೇಕು ಎಂದು ಹಲವಾರು ಕನಸುಗಳನ್ನು ಕಂಡರು.

Advertisement

 

Advertisement


ಸಿನಿಮಾಗಳಲ್ಲಿ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದ ಕವಿತಾ ಲಕ್ಷ್ಮಿ ತುಂಬಾ ಬೇಡಿಕೆಯ ನಟಿಯಾಗಿದ್ದರು. ಆದರೆ ಕಾಲ ಕ್ರಮೇಣ ಈ ನಟಿಗೆ ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾದವು. ತನ್ನ ಒಬ್ಬ ಮಗನನ್ನು ವಿದೇಶದಲ್ಲಿ ಓದಿಸುತ್ತಿದ್ದರು. ಈ ವೇಳೆಯಲ್ಲಿ ಈ ನಟಿಗೆ ತೀವ್ರ ಆರ್ಥಿಕ ಸಂಕಷ್ಟ ಎದುರಾಯಿತು. ಮಕ್ಕಳ ಶಿಕ್ಷಣಕ್ಕೆ ತುಂಬಾ ಹಣ ಖರ್ಚಾಗುತ್ತಿತ್ತು. ಜೀವನ ನಿರ್ವಹಣೆಗೆ ಹಾಗೂ ಮಕ್ಕಳ ಶಿಕ್ಷಣ ಈ ಎರಡನ್ನೂ ಏನಾದರೂ ಮಾಡಿ ಅಚ್ಚುಕಟ್ಟಾಗಿ ನಿಭಾಯಿಸಬೇಕೆಂದು ಯೋಚಿಸಿದ ಕವಿತಾ ಲಕ್ಷ್ಮಿ ತಿರುವನಂತಪುರಂನ ಹೈವೇನಲ್ಲಿ ರಸ್ತೆ ಬದಿಯಲ್ಲಿ ಕ್ಯಾಂಟೀನ್ ತೆಗೆದರು.

 

ರುಚಿ ರುಚಿಯಾಗಿ ದೋಸೆ, ಇಡ್ಲಿ ಇನ್ನೂ ಮುಂತಾದ ತಿಂಡಿಗಳನ್ನು ರಾತ್ರಿ ವೇಳೆಯಲ್ಲಿ ಮಾರಿ ಒಳ್ಳೆ ಬಿಜಿ಼ನೆಸ್ ಮಾಡಿದರು. ತಮ್ಮ ಹಣದ ಸಮಸ್ಯೆಯನ್ನು ಸುಧಾರಿಸಿಕೊಂಡರು. ಹಗಲಿನಲ್ಲಿ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ನಟಿಸುವ ಕವಿತಾ ಲಕ್ಷ್ಮಿ, ರಾತ್ರಿ ವೇಳೆಯಲ್ಲಿ ಕ್ಯಾಂಟೀನ್ ನಡೆಸುತ್ತಿದ್ದಾರೆ. ಹಗಲು-ರಾತ್ರಿ ಕಷ್ಟಪಟ್ಟು ದುಡಿದು ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ. ಇಂತಹ ಛಲ ಹಾಗೂ ಸ್ವಾಭಿಮಾನವಿರುವ ನಟಿ ಕವಿತಾ ಲಕ್ಷ್ಮಿಯವರ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತದೆ.

– ಸುಷ್ಮಿತಾ

Advertisement
Share this on...