‘ಟೀಮ್ ಇಂಡಿಯಾ ಕ್ರಿಕೆಟಿಗರಲ್ಲಿ ಯಾರು ಚಾಣಾಕ್ಷರು’ ಎಂಬ ಪ್ರಶ್ನೆಗೆ ಕೀರ್ತಿ ಕೊಟ್ಟ ಉತ್ತರವೇನು ಗೊತ್ತಾ ?

in ಕ್ರೀಡೆ 28 views

ಭಾರತ ಕ್ರಿಕೆಟ್ ತಂಡವು ವಿಶ್ವದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದೆ. ಅದರಲ್ಲೂ ಸಿನಿಮಾ ಕ್ಷೇತ್ರದವರು ಕ್ರೀಡಾಪಟುಗಳನ್ನು ಹೆಚ್ಚು ಇಷ್ಟಪಡುವುದು ಸಾಮಾನ್ಯವಾಗಿದೆ. ಇಂದು ನಾವು ನಿಮಗೆ ಬೌಲರ್ ಕುಲದೀಪ್ ಯಾದವ್ ಅವರನ್ನು ಇಷ್ಟಪಡುವ ನಟಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಅವರು ಬೇರೆ ಯಾರೂ ಅಲ್ಲ, ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್. ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಕೀರ್ತಿ ಸುರೇಶ್ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ, ಕೀರ್ತಿ ಸುರೇಶ್ ಅವರಿಗೆ ನಿಮ್ಮ ನೆಚ್ಚಿನ ಭಾರತದ ಕ್ರಿಕೆಟಿಗ ಯಾರು ಎಂದು ಕೇಳಿದಾಗ, ಅವರು ಸ್ಪಿನ್ ಬೌಲರ್ ಕುಲದೀಪ್ ಯಾದವ್ ಎಂದು ಹೇಳಿದ್ದಾರೆ.

Advertisement

 

Advertisement

 

Advertisement

Advertisement

ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗರಲ್ಲಿ ಯಾರು ಚಾಣಾಕ್ಷರು ಎಂದು ಕೇಳಿದಾಗ ಮತ್ತೆ ಕೀರ್ತಿ ಕುಲದೀಪ್ ಯಾದವ್ ಎಂದು ಉತ್ತರಿಸಿದ್ದಾರೆ. ಹೌದು, ಕೀರ್ತಿ ಸುರೇಶ್ ಅವರು ನನಗೆ ಕುಲದೀಪ್ ಯಾದವ್ ಅವರು ತುಂಬಾ ಇಷ್ಟ, ನಾನು ಅವರ ದೊಡ್ಡ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಮುರಳಿ ವಿಜಯ್ ಅವರು ತಮ್ಮ ಐಪಿಎಲ್ ತಂಡದ ಚೆನ್ನೈ ಸೂಪರ್ ಕಿಂಗ್ಸ್ ಅವರ ಇನ್ಸ್ಟಾಗ್ರಾಮ್ ಲೈವ್ ಚಾಟ್’ನಲ್ಲಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಸುಂದರ ಆಟಗಾರ್ತಿ ಎಲಿಸ್ ಪೆರಿಯೊಂದಿಗೆ ಡಿನ್ನರ್ ಡೇಟ್’ಗೆ ಹೋಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು . ಆಗ ಅವರ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ತೀವ್ರವಾಗಿ ವೈರಲ್ ಆಗಿತ್ತು.

 


ಎಲಿಸ್ ಪೆರಿ ಆಸ್ಟ್ರೇಲಿಯಾದ ಕ್ರೀಡಾಪಟು, ಅವರು 16 ನೇ ವಯಸ್ಸಿನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ಮತ್ತು ಆಸ್ಟ್ರೇಲಿಯಾದ ಮಹಿಳಾ ರಾಷ್ಟ್ರೀಯ ಸಾಕರ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ಪೆರಿ ಕ್ರಿಕೆಟ್’ನಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ವ್ಯಕ್ತಿ ಹಾಗೂ ಕ್ರಿಕೆಟ್ ಮತ್ತು ಫುಟ್ಬಾಲ್ ವಿಶ್ವಕಪ್ ಎರಡರಲ್ಲೂ ಕಾಣಿಸಿಕೊಂಡ ಮೊದಲ ಆಸ್ಟ್ರೇಲಿಯಾ ಆಟಗಾರ್ತಿ. ಪೆರಿ ಸಹ ಶ್ರೇಷ್ಠ ಮಹಿಳಾ ಕ್ರಿಕೆಟಿಗರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.

 


ಇನ್ನು ಮುರಳಿ ವಿಜಯ್ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್. ವಿಜಯ್ ತಮ್ಮ 17 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಟವನ್ನು ಪ್ರಾರಂಭಿಸಿದರು. ಮುರಳಿ ವಿಜಯ್ ನಿಕಿತಾ ವಂಜಾರ ಎಂಬುವವರನ್ನು ವಿವಾಹವಾಗಿದ್ದು, ಅವರಿಗೆ ಮೂವರು ಮಕ್ಕಳಿದ್ದಾರೆ. ಮೂವರು ಮಕ್ಕಳಲ್ಲಿ ಇಬ್ಬರು ಗಂಡು ಮಕ್ಕಳು ಮತ್ತು ಒಬ್ಬ ಮಗಳು ಇದ್ದಾರೆ.

Advertisement
Share this on...