ಅಭಿಮಾನಿ ಕೊಟ್ಟ ಲವ್ ಲೆಟರ್ ಅನ್ನು ತೆಗೆದುಕೊಂಡ ಈ ಟಾಪ್ ನಟಿ ಮಾಡಿದ್ದೇನು ಗೊತ್ತಾ…?

in ಮನರಂಜನೆ 153 views

ಪ್ರೀತಿ ಯಾರ ಮೇಲೆ ಯಾವಾಗ ಹುಟ್ಟುತ್ತದೆ ಎಂದು ಯಾರಿಗೆ ತಾನೆ ಗೊತ್ತು ಹೇಳಿ. ಹಾಗೇ ಕೆಲವೊಮ್ಮೆ ನಟ-ನಟಿಯರ ಮೇಲೂ ಗಾಢವಾದ ನಿಜವಾದ ಪ್ರೀತಿ ಹುಟ್ಟುತ್ತದೆ. ಅದನ್ನು ತಡೆಯಲು ಆಗುವುದಿಲ್ಲ. ಹೀಗೆ ಒಬ್ಬ ನಟಿಯ ಮೇಲೆ ತನಗೆ ಹುಟ್ಟಿದ ಪ್ರೀತಿಯನ್ನು ಅಭಿಮಾನಿ ಹೇಗೆ ಹೇಳಿದ ಗೊತ್ತಾ..?  ನಟಿ ಕೀರ್ತಿ ಸುರೇಶ್ ಮಹಾನಟಿ ಮೂಲಕ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡು ದಕ್ಷಿಣ ಭಾರತದ ಟಾಪ್ ನಟಿಯಾಗಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ನಟಿ ತುಂಬಾ ಸಿಂಪ್ಲಿಸಿಟಿ. ಯಾವುದೇ ಕಾರಣಕ್ಕೂ ತುಂಡು ಬಟ್ಟೆ ಹಾಕುವುದಿಲ್ಲ. ತನ್ನ ಸೌಂದರ್ಯ ಅಲ್ಲದೆ ತನ್ನ ನಟನೆಯ ಮೇಲೆ ನಂಬಿಕೆ ಇಟ್ಟಿರುವ ನಟಿ ಇವರು. ಇಂತಹ ಹುಡುಗಿ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ.
ನಟಿ ಕೀರ್ತಿ ಸುರೇಶ್ ಒಂದು ಜ್ಯೂವೆಲ್ಲರಿ ಶಾಪ್ ಓಪನಿಂಗ್ ಮಾಡಲು ಹೋಗಿದ್ದಾಗ ಆಕೆಯನ್ನು ತುಂಬಾ ಪ್ರೀತಿ ಮಾಡುತ್ತಿದ್ದ ಒಬ್ಬ ಹುಡುಗ ಒಂದು ಬಾಕ್ಸ್ ನಲ್ಲಿ ತನ್ನ ಫೋಟೋ ಜೊತೆ ಲವ್ ಲೆಟರ್ ಇಟ್ಟು ಕೀರ್ತಿ ಸುರೇಶ್ ಗೆ ಕೊಟ್ಟಿದ್ದಾನೆ.

Advertisement

 

Advertisement

Advertisement

ಅಭಿಮಾನಿ ಏನೋ ಗಿಫ್ಟ್ ಕೊಟ್ಟಿದ್ದಾನೆ ಎಂದು ಭಾವಿಸಿದ ನಟಿ ಕೀರ್ತಿ ಸುರೇಶ್ ಮನೆಗೆ ತೆಗೆದುಕೊಂಡು ಹೋಗಿ ಬಾಕ್ಸ್ ಓಪನ್ ಮಾಡಿ ನೋಡಿದಾಗ ಶಾಕ್ ಆದಳು. ಅಭಿಮಾನಿ ಕೊಟ್ಟ ಬಾಕ್ಸ್ ನಲ್ಲಿ ಕೀರ್ತಿ ಸುರೇಶ್ ಫೋಟೋಗಳ ಆಲ್ಬಮ್, ಲವ್ ಲೆಟರ್ ಹಾಗೂ ಆ ಹುಡುಗನ ಫೋಟೋ ಕೂಡ ಇತ್ತು. ಅಭಿಮಾನಿ ಕೊಟ್ಟ ಲವ್ ಲೆಟರ್ ಅನ್ನು ಕೀರ್ತಿ ಸುರೇಶ್ ಬಿಸಾಕದೆ ಈಗಲೂ ತಮ್ಮ ರೂಮಿನಲ್ಲಿ ಇಟ್ಟುಕೊಂಡಿದ್ದಾರಂತೆ. ಕಾರಣ..! ಕಾಲೇಜ್ ಡೇಸ್ ನಲ್ಲಿ ಯಾರು ನಟಿ ಕೀರ್ತಿ ಸುರೇಶ್ ಗೆ ಲವ್ ಲೆಟರ್ ಕೊಟ್ಟಿರಲಿಲ್ಲವಂತೆ. ಹಾಗಾಗಿ ನನಗೆ ಬಂದ ಮೊದಲ ಲವ್ ಲೆಟರ್ ಇದಾದ ಕಾರಣ ಇನ್ನೂ ತನ್ನ ಬಳಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ ನಟಿ ಕೀರ್ತಿ ಸುರೇಶ್.

Advertisement

ಅದು ಅಲ್ಲದೆ ಬೇರೆ ನಟಿಯರು ಆಗಿದ್ದಿದ್ದರೆ ಅಲ್ಲೇ ಕಸದ ತೊಟ್ಟಿಗೆ ಬಿಸಾಕಿ ಹೋಗುತ್ತಿದ್ದರು. ಆದರೆ ಕೀರ್ತಿ ಸುರೇಶ್ ಬೇರೆ ನಟಿಯರಿಗಿಂತ ಸ್ವಲ್ಪ ಭಿನ್ನ. ಹಾಗಾಗಿ ಅದು ಅಭಿಮಾನಿಯೇ ಕೊಟ್ಟರು ಇನ್ನು ತಮ್ಮ ಮೊದಲ ಲವ್ ಲೆಟರ್ ಅನ್ನು ಜೋಪಾನವಾಗಿ ಇಟ್ಟುಕೊಂಡಿದ್ದಾರೆ. ಕೀರ್ತಿ ಸುರೇಶ್ ಪ್ರೀತಿ ಸಿಗದಿದ್ದರೂ ಅಟ್ಲಿಸ್ಟ್ ನನ್ನ ಲವ್ ಲೆಟರ್ ಕೀರ್ತಿ ಸುರೇಶ್ ಇಟ್ಟುಕೊಂಡಿದ್ದಾರೆ ಎನ್ನುವ ಸಮಾಧಾನ ಆ ಅಭಿಮಾನಿಗೆ ಸಿಕ್ಕಿದೆ.

– ಸುಷ್ಮಿತಾ

Advertisement
Share this on...