ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಕೆಜಿಎಫ್ ಪ್ರಸಾರ ..! ಅಭಿಮಾನಿಗಳು ಫುಲ್ ಖುಷ್

in ಮನರಂಜನೆ/ಸಿನಿಮಾ 38 views

ಡಿಸೆಂಬರ್ 2018 ರಲ್ಲಿ ಬಿಡುಗಡೆಯಾದ ಸ್ಯಾಂಡಲ್’ವುಡ್’ನ ಬ್ಲಾಕ್ ಬಸ್ಟರ್ ಚಿತ್ರ ‘ಕೆಜಿಎಫ್’ ಚಾಪ್ಟರ್ 1 ಅನೇಕರನ್ನು ಮೋಡಿ ಮಾಡಿದ್ದಲ್ಲದೆ, ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸನ್ನು ಗಳಿಸಿತು. ಕನ್ನಡ ಮಾತ್ರವಲ್ಲದೆ, ಈ ಚಿತ್ರ ತೆಲುಗು, ತಮಿಳು ಮತ್ತು ಹಿಂದಿಯಲ್ಲೂ ಭಾರೀ ಯಶಸ್ಸು ಗಳಿಸಿತು. ಇದೀಗ ಈ ವರ್ಷ ಬಿಡುಗಡೆಯಾಗಬೇಕಿದ್ದ ‘ಕೆಜಿಎಫ್’ ಚಾಪ್ಟರ್ 2 ಗಾಗಿ ಜನರು ಕುತೂಹಲದಿಂದ ಕಾಯುತ್ತಿದ್ದಾರೆ. ಚಿತ್ರ ಬಿಡುಗಡೆಯಾಗಿ ಸುಮಾರು ಎರಡು ವರ್ಷಗಳ ನಂತರ, ‘ಕೆಜಿಎಫ್ ಚಾಪ್ಟರ್ 1’ ಅಂತಿಮವಾಗಿ ಜುಲೈ 5 ರಂದು ಅಂದರೆ ಭಾನುವಾರ ತೆಲುಗು ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಈ ಆಕ್ಷನ್ ಚಿತ್ರ ನೋಡಲು ಸಾಕಷ್ಟು ಅಭಿಮಾನಿಗಳು ಕಾಯುತ್ತಿದ್ದು, ಈ ಚಿತ್ರ ತೆಲುಗಿನ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವುದರಿಂದ ತೆರೆಯ ಮೇಲೆ ಮಾಡಿದ ಅದೇ ಮ್ಯಾಜಿಕ್ ಅನ್ನು ಕಿರುತೆರೆಯಲ್ಲೂ ಸೃಷ್ಟಿಸುತ್ತದೆಯೇ ಎಂದು ಜನರು ಕಾತುರರಾಗಿದ್ದಾರೆ. ಅಲ್ಲಿಗೆ ‘ಕೆಜಿಎಫ್’ ಚಾಪ್ಟರ್ 2 ಗಾಗಿ ಜನರು ಹೇಗೆ ಕಾಯುತ್ತಿದ್ದಾರೆ ಎಂಬ ಕಲ್ಪನೆಯನ್ನು ನೀವೇ ಮಾಡಿಕೊಳ್ಳಿ.

Advertisement

Advertisement

ಚಿತ್ರ ಬಿಡುಗಡೆಯಾಗಿ ಎರಡು ವರ್ಷಗಳಾಗಿವೆ ಮತ್ತು ‘ಕೆಜಿಎಫ್’ ಬಿಡುಗಡೆಯಾದ 100 ದಿನಗಳ ನಂತರ ಅಮೆಜಾನ್ ಪ್ರೈಮ್ನಲ್ಲಿ ಲಭ್ಯವಾಗಿದೆ. ಆದ್ದರಿಂದ ಜನರು ಅದನ್ನು ಮತ್ತೊಮ್ಮೆ ತಮ್ಮ ದೂರದರ್ಶನಗಳಲ್ಲಿ ಆನಂದಿಸುತ್ತಾರೆಯೇ ಅಥವಾ ನಿರ್ಲಕ್ಷಿಸುತ್ತಾರೆಯೇ ಎಂಬುದನ್ನು ನಾವು ಕಾದು ನೋಡಬೇಕು. ಅಂದುಕೊಂಡಂತೆ ಎಲ್ಲಾ ಆಗಿದ್ದರೆ ಹೊಂಬಲೆ ಫಿಲ್ಮ್ಸ್ ನಿರ್ಮಿಸಿದ, ರಾಕಿಂಗ್ ಸ್ಟಾರ್ ಯಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ, ಬಹುನಿರೀಕ್ಷಿತ ಅದ್ದೂರಿ ಚಿತ್ರ ‘ಕೆಜಿಎಫ್’ ಚಾಪ್ಟರ್ 2 ಈ ಅಕ್ಟೋಬರ್’ಲ್ಲಿ ತೆರೆಗೆ ಬರಬೇಕಾಗಿತ್ತು. ‘ಕೆಜಿಎಫ್’ ಚಾಪ್ಟರ್ 2ನಲ್ಲಿ ಬಾಲಿವುಡ್ ತಾರೆಯರಾದ ನಟಿ ರವೀನಾ ಟಂಡನ್ ಮತ್ತು ಸಂಜಯ್ ದತ್ ಸಹ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

Advertisement

Advertisement

ರವೀನಾ ಟಂಡನ್ ಈ ಚಿತ್ರದಲ್ಲಿ ರಮಿಕಾ ಸೇನ್ ಪಾತ್ರವನ್ನು ನಿರ್ವಹಿಸಿದರೆ, ಸಂಜಯ್ ದತ್ ಅವರು ಅಧೀರಾ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೆಜಿಎಫ್ ಚಾಪ್ಟರ್ 2 ಅನ್ನು ಮುಂದೂಡಲಾಗುತ್ತದೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಇತ್ತೀಚೆಗಷ್ಟೇ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ತನ್ನ ಪಾತ್ರದ ಬಗ್ಗೆ ಮಾತನಾಡಿದ್ದ ರವೀನಾ, “ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣವು ಬಹಳ ಸಂತೋಷದಾಯಕವಾಗಿತ್ತು.

ನನ್ನ ಪಾತ್ರವು ವಿಭಿನ್ನವಾಗಿದೆ, ಅದು ಗ್ರೇ ಕಲರ್ ಶೇಡ್ ಪಡೆದುಕೊಂಡಿದೆ. ಚಿತ್ರದಲ್ಲಿ ಸಾಕಷ್ಟು ಸಸ್ಪೆನ್ಸ್ ಇದ್ದು, ನನಗೆ ಆ ಪಾತ್ರ ಮಾಡಲು ಸಾಧ್ಯವಾಗುತ್ತದೆಯೇ, ಇಲ್ಲವೇ ಎಂಬುದು ನನಗೇ ಖಾತ್ರಿ ಇರಲಿಲ್ಲ. ಆದರೆ ನನ್ನ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ”ಎಂದು ಹೇಳಿದ್ದರು.

Advertisement
Share this on...