ಕೆಜಿಎಫ್ ಚಿತ್ರದಿಂದ ನಿಜವಾಗಿಯೂ ಚಿತ್ರರಂಗ ಹಾಗೂ ಕಿರುತೆರೆಗೆ ತೊಂದರೆ ಆಗಿದ್ಯಾ?

in ಮನರಂಜನೆ/ಸಿನಿಮಾ 139 views

ನಮ್ಮ ನಾಡಲ್ಲಿರುವ ಪರಭಾಷಿಗರು, ಕನ್ನಡ ಸಿನಿಮಾಗಳಲ್ಲಿ ಕಥೆ ಚೆನ್ನಾಗಿರುವುದಿಲ್ಲ, ಮೇಕಿಂಗ್ ಸರಿ ಇರುವುದಿಲ್ಲ, ಖರ್ಚು ಮಾಡುವುದಿಲ್ಲ ಹೀಗಲ್ಲಾ ಕೊಂಕು ಮಾತನಾಡುತ್ತಾ ಅಲೆದಾಡುತ್ತಿದ್ದರು. ಇಂತಹ ಕಿಡಿಗೇಡಿಗಳ ಬಾಯನ್ನು ಮುಚ್ಚಿಸುವುದರಲ್ಲಿ ಯಶಸ್ವಿಯಾದಂತಹ ಚಿತ್ರ ಕೆಜಿಎಫ್. ಹೌದು ಇದೊಂದು ಚಿತ್ರ ಕನ್ನಡ ಚಿತ್ರರಂಗದ ದಿಕ್ಕನ್ನೆ ಬದಲಿಸಿಬಿಟ್ಟಿತು. ಕನ್ನಡ ನೆಲದಲ್ಲೇ ಪರ ಬಾಷೆಯ ಚಿತ್ರದ ಹಾವಳಿ ಹೆಚ್ಚಿದ್ದ ಸಮಯದಲ್ಲಿ ಇದೊಂದು ಸಿನಿಮಾ ಕನ್ನಡ ಚಿತ್ರರಂಗವನ್ನು ತಿರುಗಿ ನೋಡುವಂತೆ ಮಾಡಿತ್ತು. ಚಿತ್ರದ ಕಥೆ, ಸ್ಕ್ರೀನ್ ಪ್ಲೇ, ಕಲಾವಿದರ ಆಯ್ಕೆ, ಕಲಾವಿದರ ಅಭಿನಯ, ತಂತ್ರಜ್ಞಾನರ ಕೆಲಸ, ಸಿನಿಮಾ ನಿರ್ದೇಶನ, ಸಂಗೀತ ಇವೆಲ್ಲವೂ ಕೂಡ ಭಾರತ ಚಿತ್ರರಂಗದ ವೀಕ್ಷರನೆಲ್ಲಾ ಒಂದೊಮ್ಮೆ ತಿರುಗಿ ನೋಡಿವಂತೆ ಮಾಡಿತ್ತು. ಇದೊಂದು ಸಿನಿಮಾದಿಂದ ನಾಯಕ ನಟ ಅಂತರರಾಷ್ಟ್ರೀಯ ಸ್ಟಾರ್ ಆಗಿ ಬಿಟ್ಟರು. ಎಲ್ಲಾ ಚಿತ್ರರಂಗದಲ್ಲಿ  ಅಭಿಮಾನಗಳ ಬಳಗವನ್ನು ಪಡೆದುಕೊಂಡರು. ನೋಡು ನೋಡುತಲ್ಲೇ ಚಿತ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯಿತು. ಕನ್ನಡ ಚಿತ್ರರಂಗದಲ್ಲಿ ಸಾರ್ವ ಕಾಲಿಕ ದಾಖಲೆ ಬರೆಯುವುದರ ಜೊತೆಗೆ ಇಡೀ ಭಾರತ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಟ್ರೆಂಡ್ ಹುಟ್ಟುಹಾಕಿದೆ. ಎಲ್ಲಿ ನೋಡಿದರು, ಯಾವುದೇ ಚಿತ್ರರಂಗ ನೋಡಿದರು, ಸಾಮಾಜಿಕ ಜಾಲತಾಣದಲ್ಲೂ ಕೂಡ ಕೆಜಿಎಫ್ ಹಾಗೂ ಚಿತ್ರದ ಮ್ಯೂಸಿಕ್ ದೇ ಹವಾ.

Advertisement

Advertisement

ಏಕಕಾಲದಲ್ಲಿ ಪಂಚ ಭಾಷೆಯಲ್ಲಿ ಬಿಡುಗಡೆಯಾದ ಈ ಚಿತ್ರ ಭಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸಿತ್ತು. ಅಲ್ಲದೇ ಈ ಸಿನಿಮಾದ ಬಿಡುಗಡೆ ದಿನದಂದೆ ಖ್ಯಾತ ನಟ ಬಾಲುವುಡ್ ನ ಕಿಂಗ್ ಖಾನ್ ಅವರ ಝೀರೋ ಸಿನಿಮಾ ಬಿಡಿಗಡೆಯಾಗಿತ್ತು. ಆದರೆ ಈ ಸಿನಿಮಾದ ಹಾವಳಿಗೆ ಬಾಲಿವುಡ್ ನ ಖಾನ್ ಸಿನಿಮಾ ಸೇರಿ ತೆಲುಗು ತಮಿಳಿನ ಖ್ಯಾತ ನಟರ ಸಿನಿಮಾ ವೆಲ್ಲಾ ಮೂಲೆ ಗುಂಪು ಸೇರಿದವು. ಅಬ್ಭಾ ಈ ರೀತಿಯಾಗಿ ಕನ್ನಡ ಚಿತ್ರರಂಗದ ದಿಕ್ಕನ್ನೆ ಬದಲಿಸಿದ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಅಭಿನಂದನೆ ತಿಳಿಸಲೇ ಬೇಕು. ಇದೀಗ ಕೆಜಿಎಫ್ ಚಾಪ್ಟರ್  ೨ ಕ್ಕೆ ಇಡೀ ದೇಶವೇ ಕಾದು ಕುಳಿತಿದೆ.

Advertisement

ಒಂದು ಕಡೆ ಈ ಸಿನಿಮಾದಿಂದ ಕನ್ನಡ ಚಿತ್ರರಂಗದ ಖ್ಯಾತಿ ಹಾಗೂ ಕೀರ್ತಿ ಹೆಚ್ಚಾಗಿದ್ದರೆ, ಇನ್ನೊಂದೆಡೆ ಈ ಚಿತ್ರದಿಂದ ಕನ್ನಡ ಕಿರುತೆರೆ ಹಾಗೂ ಚಿತ್ರಗಳಿಗೆ ಪೆಟ್ಟು ಬಿದ್ದಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

Advertisement

ಕೆಜಿಎಫ್ ಚಿತ್ರ ಬಿಡುಗಡೆಯಾಗುವ ಮೊದಲು ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ವಿರುದ್ಧವಾಗಿ ಪ್ರತಿಭಟನೆಗಳು ಜೋರಾಗಿಯೇ ನಡೆಯುತ್ತಿದ್ದವು. ಕನ್ನಡ ಚಿತ್ರರಂಗದ ಕಲಾವಿದರೆಲ್ಲಾ ಸೇರಿ ಕನ್ನಡದಲ್ಲಿ ಡಬ್ಬಿಂಗ್ ಬೇಡ ಎಂದು ವಿರೋಧಿಸಿ ಜೋರಾಗಿಯೇ ಪ್ರತಿಭಟನೆ ಮಾಡಿದ್ದರು. ನಂತರ ಪ್ರತಿಭಟನೆ ತಾರಕಕ್ಕೇರಿದ್ದ ಕಾರಣ ಕನ್ನಡಕ್ಕೆ ಡಬ್ಬಿಂಗ್ ಬೇಡ ಹಾಗೂ ನಮ್ಮ ಚಿತ್ರಗಳು ಕೂಡ ಡಬ್ಬಿಂಗ್ ಆಗುವುದು ಬೇಡ ಎಂದೇ ನಿರ್ಧರಸಿಲಾಗಿತ್ತು. ಈ ಪ್ರತಿಭಟನೆಯಲ್ಲಿ ಯಶ್ ಅವರು ಕೂಡ ಭಾಗಿಯಾಗಿದ್ದರು. ಆದರೆ ಕೆಜಿಎಫ್ ಚಿತ್ರ ಬಹುವೆಚ್ಚದಲ್ಲಿ ತಯಾರಾದ ಕಾರಣ ಬೇರೆ ಭಾಷಯಲ್ಲೂ ಡಬ್ಬಿಂಗ್ ಮಾಡ ಬೇಕಾಯಿತು. ಇದಕ್ಕೆ ಎಲ್ಲರೂ ಒಪ್ಪಿದ್ದರು ಹಾಗೂ ಪಂಚ ಭಾಷೆಯಲ್ಲೂ ಬಿಡುಗಡೆಯಾಗಿ ದೊಡ್ಡ ಸಂಚಲನವನ್ನೇ ಮೂಡಿಸಿದೆ. ಆದರೆ ಇದರಿಂದ ಕನ್ನಡ ಚಿತ್ರಗಳಿಗೆ ದೊಡ್ಡ ಮಟ್ಟದಲ್ಲಿ ಪೆಟ್ಟು ಬಿದ್ದಿದೆ ಎಂಬುದು ತಪ್ಪಲ್ಲ. ಅನೇಕ ಚಿತ್ರಗಳು ಇದೀಗ ಕನ್ನಡ ಅವತರಣೆಯಲ್ಲಿ ಬಿಡುಗಡೆಯಾಗುತ್ತಿದ್ದು, ಕನ್ನಡದ ಯುವ ಕಲಾವಿದರುಗಳ ಚಿತ್ರಕ್ಕೆ ಚಿತ್ರಮಂದಿರದ ಪೆಟ್ಟು ಬೀಳುತ್ತಿದೆ.

ಅನ್ಯ ಭಾಷೆಯ ಹಾವಳಿಯಿಂದ ಅನೇಕ ಕನ್ನಡ ಚಿತ್ರರಂಗಳು ಈ ಹಿಂದೆ ಚಿತ್ರಮಂದಿರದಿಂದ ಎತ್ತಂಗಡಿಯಾಗಿದ್ದವು. ಇನ್ನು ಲಾಕ್ ಡೌನ್ ಸಮಯದಲ್ಲಂತೂ  ಕಿರುತೆರೆಯ ಮೇಲೆ ದೊಡ್ಡ ಪೆಟ್ಟು ಬಿದ್ದಿದೆ. ಎಲ್ಲಾ ವಾಹಿನಿಯಲ್ಲೂ ಕೂಡ ಹಿಂದಿ ಹಾಗೂ ತೆಲುಗಿನ ಕೆಲ ಧಾರಾವಾಹಿಗಳು ಕನ್ನಡ ಅವರತರಿಣಿಕೆಯಲ್ಲಿ ಬಿಡುಗಡೆಯಾಗಿದ್ದು, ನೋಡುಗರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ನಮ್ಮ ನೆಲದ ಧಾರಾವಾಹಿಗಳ ಮೇಲೆ ಭಾರಿ ಪ್ರಮಾಣದ ಹೊಡೆತ ಬಿದ್ದಿದ್ದು, ನೋಡುಗರ ಸಂಖ್ಯೆಯೂ ಕಡಿಮೆಯಾಗಿದೆ. ಅಲ್ಲದೇ ಟಿ ಆರ್ ಪಿ ಅಲ್ಲಿಯೂ ಕೂಡ ಡಬ್ಬಿಂಗ್ ಧಾರಾವಾಹಿಗಳ ಮೇಲುಗೈ ಸಾಧಿಸಿದ್ದು, ಇದರಿಂದ ನಮ್ಮ ನೆಲದವರು ನರಳುವಂತಾಗಿದೆ. ಇದಕ್ಕಿಂತ ಹೆಚ್ಚಾಗಿ ನಮ್ಮ ವಾಹಿನಿಗಳಲ್ಲಿ ಕನ್ನಡ ಸಿನಿಮಾಗಳನ್ನು ಹಾಕುವುದನ್ನೇ ನಿಲ್ಲಿಸಿದ್ದಾರೆ. ಪ್ರತೀ ಶನಿವಾರ ಹಾಗೂ ಬಾನುವಾರ ಕೇವಲ ಡಬ್ಬಿಂಗ್ ಮೂವಿಗಳನ್ನು ಪ್ರಸಾರಮಾಡುತ್ತಿದ್ದು, ಇದರಿಂದ ನಮ್ಮ ಸಿನಿಮಾಗಳಿಗೆ ಅವಮಾನವಾಗುತ್ತಿದೆ ಎಂದು ಕೆಲವರು ಧ್ವನಿ ಎತ್ತಿದ್ದಾರೆ.

ಹೀಗೆ ಮುಂದು ವರೆದರೆ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ಗತಿ ಏನಾಬೇಕು? ಕೇವಲ ಕೆಜಿಎಫ್ ಎಂಬ ಒಂದು ಸಿನಿಮಾದಿಂದ ಈ ರೀತಿಯಾದ ಬದಲಾವಣೆ ಕನ್ನಡದಲ್ಲಿ ಆದರೆ ಹೊಸ ಹೊಸ ಕಲಾವಿದರು, ತಂತ್ರಜ್ಞನರ ಗತಿ ಏನಾಬೇಕು? ನಮ್ಮ ಸಿನಿಮಾಗಳಿಲ್ಲವೇ.. ಡಬ್ಬಿಂಗ್ ಸಿನಿಮಾಗಳನ್ನೇ ಪ್ರಸಾರ ಮಾಡುವ ಅವಶ್ಯಕತೆ ಏನಿದೆ? ಹೀಗೆ ಮುಂದುವರೆದರೆ ನಮ್ಮ ಸಿನಿಮಾಗಳು ಅವಶ್ಯವಾಗಿ ನೆಲಕಚ್ಚುತ್ತವೆ.. ಹೇಗೆ ನಾವುಗಳು ಬೇರೆ ಭಾಷೆಯ ಸಿನಿಮಾಗಳನ್ನು ಅವರ ಭಾಷೆಯಲ್ಲಿ ನೋಡುತ್ತೀವೋ ಅವರು ಕೂಡ ನಮ್ಮ ಸಿನಿಮಾವನ್ನು ನಮ್ಮ ಭಾಷೆಯಲ್ಲಿ ನೋಡಬೇಕು.. ದಯವಿಟ್ಟು ಕಿರುತೆರೆಯಲ್ಲಿ ಈ ಡಬ್ಬಿಂಗ್ ಸಿನಿಮಾ ಹಾಗೂ ಧಾರವಾಹಿಗಳನ್ನು ಆದಷ್ಟು ಕಡೆಮೆ ಮಾಡಿ ನಮ್ಮ ಭಾಷೆ ಹಾಗೂ ನಮ್ಮ ಸಿನಿಮಾಗಳಿಗೆ ಅಧ್ಯತೆ ನೀಡಬೇಕು ಅಲ್ಲವೇ?

ಮೋಡಿ ಮಾಂತ್ರಿಕರು ಪ್ರಸಿದ್ಧಜ್ಯೊತಿಷಿಗಳಾದ ಶ್ರೀ ಮಂಜುನಾಥ್ ಭಟ್ ಅವರು ಗಂಡ ಹೆಂಡತಿ ಕಲಹ, ಡೈವರ್ಸ ಪ್ರಾಬ್ಲಮ್, ಆಸ್ತಿಯಲ್ಲಿ ಕದನ, ಕೋರ್ಟ್ ಕೇಸ್, ಆರೋಗ್ಯದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಂತಾನ ಫಲ, ಸಾಲ ಭಾದೆ, ಮದುವೆ ವಿಚಾರದಲ್ಲಿ ವಿಘ್ನ , ಅತ್ತೆ ಸೊಸೆ ಕಲಹ, ನಿಮ್ಮ ಮನದಾಳದ ಯಾವುದೇ ಗುಪ್ತ ಸಮಸ್ಯೆ  ಇದ್ದರೆ ಜೀವನದಲ್ಲಿ ಜಿಗುಪ್ಸೆ ಹೊಂದ್ದಿದರೆ ನಿಮ್ಮ ಒಂದೇ ಒಂದು ಫೋನ್ ಕರೆ 9591706765 ನಿಮ್ಮ ಜೀವನವನ್ನೇ ಬದಲಾಯಿಸಿ ಬಿಡುತ್ತದೆ.
ವಿಶೇಷ  ಸೂಚನೆ : ಕೊಳ್ಳೆಗಾಲದ ಮಂತ್ರ ಶಕ್ತಿಯಿಂದ ಸ್ತ್ರೀ- ಪುರುಷ ವಶೀಕರಣ 3 ದಿನಗಳಲ್ಲಿ 100% ಪರಿಹಾರ ಶತಸಿದ್ಧ. ಅಸಾದ್ಯವಾದದ್ದು ಇಲ್ಲಿ ಸಾದ್ಯ.

Advertisement
Share this on...