ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಖುಷ್ಬು ಅವರ ಜೀವನ ಈಗ ಹೇಗಿದೆ ಗೊತ್ತಾ…?

in ಮನರಂಜನೆ/ಸಿನಿಮಾ 60 views

ಖುಷ್ಬು 80 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಒಂದು ವೈಬ್ರೇಶನ್ ಉಂಟುಮಾಡಿದ ನಟಿ. ಕ್ರೇಜಿ಼ಸ್ಟಾರ್ ರವಿಚಂದ್ರನ್ ರವರ ‘ರಣಧೀರ’ ಚಿತ್ರದಲ್ಲಿ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಾಯಕ ನಟಿಯಾಗಿ ನಟಿಸಿದರು. ನಂತರ ಅಂಜದಗಂಡು, ಶಾಂತಿಕ್ರಾಂತಿ, ಯುಗಪುರುಷ ಚಿತ್ರಗಳಲ್ಲಿ ರವಿಚಂದ್ರನ್ ರವರ ಜೊತೆ ನಟಿಸಿ ಉತ್ತಮ ಜೋಡಿ ಎನಿಸಿಕೊಂಡರು. ನಂತರ ಅನಂತ್ ನಾಗ್ ರವರ ಜೊತೆ ‘ಗಗನ’ ಚಿತ್ರದಲ್ಲಿ ಹಾಗು ವಿಷ್ಣುವರ್ಧನ್ ರವರ ಜೊತೆ ‘ಜೀವನದಿ’ ಚಿತ್ರದಲ್ಲಿ ನಟಿಸಿದರು. ತಮ್ಮ ಸೌಂದರ್ಯದಿಂದ ಪಡ್ಡೆ ಹುಡುಗರ ಹೃದಯ ಬಡಿತ ಹೆಚ್ಚು ಮಾಡಿದರು ನಟಿ ಖುಷ್ಬೂ. ಮೂಲತಃ ಮುಂಬೈನಗರದವರಾದ ಖುಷ್ಬು ಬಾಲನಟಿಯಾಗಿ ಬಾಲಿವುಡ್ ನಲ್ಲಿ ಅಮಿತಾ ಬಚ್ಚನ್ ರವರ ಚಿತ್ರಗಳಲ್ಲಿ ನಟಿಸಿದ್ದರು. ಈ ವಿಷಯವನ್ನು ಸ್ವತಃ ಖುಷ್ಬೂ ಒಂದು ಶೋನಲ್ಲಿ ಹೇಳಿಕೊಂಡಿದ್ದಾರೆ. ನಂತರ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ನಟಿಸಿದ್ದರು. ಆದರೆ ಹೆಚ್ಚು ಕೀರ್ತಿಗಳಿಸಿದ್ದು ಮಾತ್ರ ತಮಿಳು ಚಿತ್ರರಂಗದಲ್ಲಿ. ತಮಿಳಿನ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿದರು ನಟಿ ಖುಷ್ಬೂ. ಇವರ ಸೌಂದರ್ಯ ಹಾಗೂ ನಟನೆಗೆ ಮಾರುಹೋದ ತಮಿಳು ಅಭಿಮಾನಿಗಳು ಇವರನ್ನು ದೇವರಂತೆ ಆರಾಧಿಸಿದರು. ತಮ್ಮ ನೆಚ್ಚಿನ ನಟಿಗಾಗಿ ಒಂದು ದೇವಾಲಯವನ್ನೇ ನಿರ್ಮಾಣ ಮಾಡಿಬಿಟ್ಟರು.

Advertisement

 

Advertisement

Advertisement

ಖುಷ್ಬು ಹೆಸರಿನಲ್ಲಿ ಇಡ್ಲಿ,ಕಾಫಿ, ಖುಷ್ಬು ಹೆಸರಿನ ಸೀರೆ ಹೀಗೆ ಇನ್ನೂ ಮುಂತಾದವುಗಳಿಗೆ ಖುಷ್ಬೂರವರ ಹೆಸರಿಟ್ಟರು.ಹೀಗೆ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ತಮಿಳಿನ ಮೇರು ನಟ ಶಿವಾಜಿ ಗಣೇಶನ್ ಅವರ ಪುತ್ರ ತಮಿಳು ಹೀರೋ ಪ್ರಭುರವರ ಜೊತೆ ಖುಷ್ಬು ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದಾರೆ ಎಂಬ ಸುದ್ದಿ ಹರಡಿತ್ತು. ಕೊನೆಗೆ ಖುಷ್ಬು ಸ್ವತಃ ತಾನು ಆ ಸಂಬಂಧದಿಂದ ಹೊರ ಬಂದಿರುವುದಾಗಿ ಘೋಷಣೆ ಮಾಡಿದರು. ನಂತರ ತಮಿಳಿನ ನಟ, ನಿರ್ಮಾಪಕ, ನಿರ್ದೇಶಕ ಸುಂದರ್ ಅವರನ್ನು ಪ್ರೀತಿಸಿ ಮದುವೆಯಾದರು. ನಂತರದ ದಿನಗಳಲ್ಲಿ ಖುಷ್ಬೂರವರು ತಮಿಳುನಾಡಿನ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಬೋಲ್ಡ್ ನಟಿಯಾಗಿದ್ದ ಖುಷ್ಬು ತಮ್ಮ ಅಸಂಪ್ರದಾಯಿಕ ಸ್ಟೇಟ್ಮೆಂಟ್ ಗಳಿಂದ ಸಂಪ್ರದಾಯವಾದಿಗಳ ಟೀಕೆಗೆ ಗುರಿಯಾಗಿದ್ದರು.

Advertisement

ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಖುಷ್ಬೂ ಅವರು ಟಿವಿ ರಿಯಾಲಿಟಿ ಶೋಗಳನ್ನು ನಡೆಸಿಕೊಡುತ್ತಾರೆ. ಇನ್ನು ಖುಷ್ಬು ರವರಿಗೆ ಆವಂತಿಕಾ ಮತ್ತು ಆನಂದಿತ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಪ್ರಸ್ತುತ ಖುಷ್ಬೂರವರು ಅನೇಕ ಧಾರಾವಾಹಿಗಳಲ್ಲಿಯೂ ಅಭಿನಯಿಸುತ್ತಿದ್ದಾರೆ‌.

– ಸುಷ್ಮಿತಾ

Advertisement
Share this on...