ಒಮ್ಮೆ ದೀಪು ಕೆನ್ನೆಗೆ ಬಾರಿಸಬೇಕು ಎಂದುಕೊಂಡಿದ್ದೆ..ಕಿಚ್ಚನ ಅಕ್ಕ ಹೀಗೆ ಹೇಳಿದ್ದೇಕೆ..ವಿಡಿಯೋ ವೈರಲ್

in ಸಿನಿಮಾ 140 views

ದೀಪು, ಚಿತ್ರರಂಗಕ್ಕೆ ಬರುವ ಮುನ್ನ ಕಿಚ್ಚ ಸುದೀಪ್ ಅವರಿಗೆ ಇದ್ದ ಹೆಸರು. ಇಂದಿಗೂ ಸುದೀಪ್ ಅವರ ಮನೆಯಲ್ಲಿ ಅವರನ್ನು ದೀಪು ಎಂದೇ ಕರೆಯುತ್ತಾರೆ. ಕನ್ನಡ ಮಾತ್ರವಲ್ಲ ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿ ಅಲ್ಲಿಯ ಜನರ ಮನಸ್ಸಲ್ಲೂ ನೆಲೆಸಿದ್ದಾರೆ. ‘ಬ್ರಹ್ಮ’ ಚಿತ್ರದ ಮೂಲಕ ಸುದೀಪ್ ಸಿನಿಮಾಗಾಗಿ ಬಣ್ಣ ಹಚ್ಚಿದರು. ಆದರೆ ಆ ಸಿನಿಮಾ ಬಿಡುಗಡೆಯಾಗಲಿಲ್ಲ.’ಬ್ರಹ್ಮ’ ಚಿತ್ರದ ನಂತರ ‘ಓ ಕುಸುಮ ಬಾಲೆ’ ಸಿನಿಮಾ ಮಾಡಿದರು. ಅದರೂ ಕೂಡಾ ಕಾರಣಾಂತರಗಳಿಂದ ಬಿಡುಗಡೆಯಾಗಲಿಲ್ಲ. ನಂತರ ತಾಯವ್ವ, ಪ್ರತ್ಯರ್ಥ ಸಿನಿಮಾಗಳಲ್ಲಿ ಕಿಚ್ಚ ನಟಿಸಿದರು. ‘ಸ್ಪರ್ಶ’ ಚಿತ್ರದ ಮೂಲಕ ಸುದೀಪ್​​​​​​​​​​​​​​​​​ ಪೂರ್ಣ ಪ್ರಮಾಣದ ನಾಯಕನಾಗಿ ಕರಿಯರ್ ಆರಂಭಿಸಿದರು. ಆದರೆ ಅವರಿಗೆ ಹೆಸರು ನೀಡಿದ್ದು ಮಾತ್ರ 2000 ರಲ್ಲಿ ಬಿಡುಗಡೆಯಾದ ಓಂ ಪ್ರಕಾಶ್ ರಾವ್ ನಿರ್ದೇಶನದ ‘ಹುಚ್ಚ’ ಸಿನಿಮಾ. ಪ್ರೀತಿಸಿದ ಹುಡುಗಿ ದೂರಾದಾಗ ಮಾನಸಿಕ ಅಸ್ವಸ್ಥನಾಗಿ ಆಸ್ಪತ್ರೆ ಸೇರುವ ಪ್ರೇಮಿಯ ಪಾತ್ರದಲ್ಲಿ ಕಿಚ್ಚ ನಟಿಸಿದ್ದು ನಿಜಕ್ಕೂ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿದೆ.

Advertisement

 

Advertisement

Advertisement

ಕೆಲವು ವರ್ಷಗಳ ಹಿಂದೆ ಸುದೀಪ್ ಹಾಗೂ ಪತ್ನಿ ಪ್ರಿಯಾ ಸುದೀಪ್ ರಮೇಶ್ ಅರವಿಂದ್​​​​​​​​​​ ನಡೆಸಿಕೊಡುತ್ತಿದ್ದ ‘ಪ್ರೀತಿಯಿಂದ ರಮೇಶ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಸುದೀಪ್ ಅಕ್ಕ ಸುಜಾತಾ ಅವರು ಮಾತನಾಡಿದ ವಿಡಿಯೋ ಕ್ಲಿಪ್ಪಿಂಗ್ ಒಂದು ಈಗ ವೈರಲ್ ಆಗುತ್ತಿದೆ.’ಹುಚ್ಚ’ ಸಿನಿಮಾ ಬಿಡುಗಡೆ ಆಗಿ ಕೆಲವು ದಿನಗಳ ನಂತರ ಬೇರೊಂದು ಚಿತ್ರದ ಶೂಟಿಂಗ್ ಮುಗಿಸಿ ರಾತ್ರಿ ಸುದೀಪ್ ಮನೆಗೆ ಬಂದು ಕಾಲಿಂಗ್ ಬೆಲ್ ಒತ್ತಿದ್ದಾರೆ. ಆ ವೇಳೆ ಸುದೀಪ್ ತಂದೆ, ತಾಯಿ, ಅಕ್ಕ, ಪತ್ನಿ ಎಲ್ಲರೂ ಮನೆ ಹಾಲ್​ನಲ್ಲಿ ಕುಳಿತಿದ್ದಾರೆ. ಬಾಗಿಲು ತೆಗೆಯುತ್ತಿದ್ದಂತೆ ಸುದೀಪ್ ‘ಹುಚ್ಚ’ ಸಿನಿಮಾದ ಮಾನಸಿಕ ಅಸ್ವಸ್ಥನ ರೀತಿ ಕೈ, ಕಾಲು ತಿರುಗಿಸುತ್ತಾ, ಜೊಲ್ಲು ಸುರಿಸಿಕೊಂಡು ಒಳಗೆ ನಡೆಯುತ್ತಾ ಬಂದರಂತೆ, ಅಕ್ಕ ಸುಜಾತಾ ಅವರಿಗೆ ಇದು ನಾಟಕ ಎಂದು ಗೊತ್ತಿದ್ದರೂ ಬಹಳ ಹೊತ್ತು ಸುದೀಪ್ ಅದೇ ರೀತಿ ವರ್ತಿಸುತ್ತಿದ್ದನ್ನು ನೋಡಿ ಭಯವಾಯ್ತಂತೆ. ಆಗ ಸುದೀಪ್ ತಾಯಿ ಮಗನಿಗೆ ಏನಾಯ್ತೋ, ಏನೋ ಎಂದು ಭಯಗೊಂಡು ಅಳಲು ಆರಂಭಿಸಿದ್ದಾರೆ.

Advertisement

#AbinayaChakravarthy #KicchaSudeep

Abhinaya Chakravarthy for a Reason??

Posted by Being Sudeepians on Friday, May 22, 2020

ಕೂಡಲೇ ಸುದೀಪ್, ಇಷ್ಟು ಆ್ಯಕ್ಟಿಂಗ್ ಸಾಕು ಅಲ್ವಾ ಅವಾರ್ಡ್ ಪಡೆಯೋಕೆ ಎಂದು ಹೇಳಿ ನಗಲಾರಂಭಿಸಿದ್ದಾರೆ. ‘ಆಗ ನನಗೆ ಬಂದ ಕೋಪಕ್ಕೆ ದೀಪು ಕೆನ್ನೆಗೆ ಬಾರಿಸಬೇಕು ಎನ್ನಿಸಿತ್ತು, ಆದರೆ ಹಾಗೆ ಮಾಡಲಿಲ್ಲ’ ಎಂದು ಸುಜಾತಾ ಹೇಳಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸುದೀಪ್ ಇಂದು ನಮ್ಮೆಲ್ಲರ ಕಿಚ್ಚನಾಗಿ, ಅಭಿನಯ ಚಕ್ರವರ್ತಿಯಾಗಿ ಕನ್ನಡಿಗರ ಮನಸ್ಸನ್ನು ಆವರಿಸಿದ್ದಾರೆ.

Advertisement
Share this on...