ಆ ಒಂದು ಕೆಲಸ ಮಾಡಲು ಕಿಚ್ಚ ಸುದೀಪ್ ಅವರಿಂದ ಬಹಳ ಕಷ್ಟವಂತೆ !

in ಮನರಂಜನೆ/ಸಿನಿಮಾ 75 views

ಅಭಿನಯ ಚಕ್ರವರ್ತಿ ಎಂಬ ವಿಶೇಷವಾದ ಬಿರುದನ್ನು ಹೊಂದಿರುವ ಕನ್ನಡದ ಹೆಮ್ಮೆಯ ನಟ ಕಿಚ್ಚ ಸುದೀಪ್ ಅವರ ನಟನೆಗೆ ಬಾಲಿವುಡ್ ಚಿತ್ರರಂಗ ಕೂಡ ಫಿದಾ ಆಗಿಬಿಟ್ಟಿದೆ. ಕನ್ನಡ ಚಿತ್ರರಂಗ ಮಾತ್ರವಲ್ಲದೆ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲಿ ಒಂದು ವಿಶೇಷ ಪಾತ್ರಕ್ಕಾಗಿ ಸುದೀಪ್ ಅವರಿಗೆ ಸಿಕ್ಕಾಪಟ್ಟಸ ಡಿಮ್ಯಾಂಡ್ ಇದೆ. ಪಾತ್ರಕ್ಕಾಗಿ ಅವರು ತೋರಿಸುವ ಬದ್ಧತೆ ಮತ್ತು ಶ್ರಮ ಇದಕ್ಕೆ ಕಾರಣ ಎಂದರೆ ತಪ್ಪಾಗಲಾರದು. ಯಾವುದೇ ಪಾತ್ರವನ್ನು ಕೊಟ್ಟರು ಲೀಲಾಜಾಲವಾಗಿ ಮಾಡುವ ಸುದೀಪ್ ಅವರಿಗೆ ಕ್ಯಾಮೆರಾ ಮುಂದೆ ನಿಂತಾಗ ಒಂದು ಕೆಲಸದ ವಿಚಾರದಲ್ಲಿ ಅವರು ಯಾವಾಗಲೂ ಹಿಂದೆಯಂತೆ. ಇದೊಂದು ಕೆಲಸ ತಮ್ಮಿಂದ ಬಹಳ ಕಷ್ಟ ಎಂದು ಅವರು ಹೇಳಿಕೊಂಡಿದ್ದಾರೆ..

Advertisement

 

Advertisement

Advertisement

‘ನಾನು ದೊಡ್ಡ ಡ್ಯಾನ್ಸರ್ ಅಲ್ಲವೇ ಅಲ್ಲ. ಆದರೆ ಚಿತ್ರಗಳಲ್ಲಿ ನಾನು ಮಾಡುವುದು ಡ್ಯಾನ್ಸ್‌ ಮಾಡಿದಂತೆ ಕಾಣಿಸುತ್ತದೆ. ಒಬ್ಬ ನಟ ಡ್ಯಾನ್ಸರ್ ಆಗಿರುವುದಕ್ಕೂ, ನಟನಾಗಿರುವುದಕ್ಕೂ ಅವುಗಳನ್ನು ಎಂಜಾಯ್ ಮಾಡುತ್ತಾರೆ ಎನ್ನುವುದು ವಿಭಿನ್ನ. ಸಿನಿಮಾ ಶೂಟಿಂಗ್ ಎಂದು ಬಂದಾಗ ನಾನು ಡ್ಯಾನ್ಸ್ ಎಂಜಾಯ್ ಮಾಡಿಯೇ ಇಲ್ಲ. ಸಿನಿಮಾಗಳಲ್ಲಿ ನನಗೆ ಎಲ್ಲ ಕೊರಿಯಾಗ್ರಾಫರ್‌ಗಳು ಬೇಕಾದವರೇ ಇರುತ್ತಾರೆ. ನಾವು ಕಣ್ಣಲ್ಲಿ ಮಾತಾಡಿಕೊಳ್ಳುತ್ತೇವೆ. ಅಲ್ಲಿ ನೂರು ನೂರೈವತ್ತು ಜನ ಒಳ್ಳೆಯ ಡ್ಯಾನ್ಸರ್ ಇರುತ್ತಾರೆ. ನಾನು ಇದುವರೆಗೆ ನಟಿಸಿದ ಸಿನಿಮಾಗಳ ನಟಿಯರೆಲ್ಲರೂ ಒಳ್ಳೆಯ ನೃತ್ಯಪಟುಗಳು. ಇದರಲ್ಲಿ ನಾನು ಒಂದು ಹೆಜ್ಜೆ ಹಿಂದೆ. ಎಲ್ಲರಿಗೂ ಒಂದೊಂದು ಕಷ್ಟ ಇರುತ್ತದೆ. ನನಗೆ ಇದು ಕಷ್ಟ’

Advertisement

‘ಪೈಲ್ವಾನ್ ಚಿತ್ರಕ್ಕೆ ನಟನೆ ಮಾತ್ರವಲ್ಲ ಎಕ್ಸ್‌ಟ್ರಾ ಬೇಕು. ನನ್ನಲ್ಲಿ ಆ ಎಕ್ಸ್‌ಟ್ರಾ ಇರಲಿಲ್ಲ. ‘ವಿಲನ್’ ಚಿತ್ರಕ್ಕೆ ತೂಕ ಹೆಚ್ಚು ಮಾಡಿಕೊಂಡಿದ್ದೆ. ಜಿಮ್‌ಗೆ ಹೋಗಿ ಶರ್ಟ್ ಬಿಚ್ಚಿ ಓಡಿದಾಗ ಶಾಕ್ ಆಯ್ತು, ಹೇಗಿದ್ದೋನು ಹೇಗಾಗಿದ್ದೇನೆ ಎಂದು. ಬಹಳ ಕೆಟ್ಟ ರೀತಿಯಲ್ಲಿ 88-89 ಕೆಜಿಯಷ್ಟು ಹೋಗಿದ್ದೆ. ಅಲ್ಲಿಂದ ವಾಪಸ್ ಬರುವುದು ಸುಲಭವಲ್ಲ. ಆದರೆ ಹೀಗೆ ಬದಲಾಗುವುದು ಮತ್ತು ಅದನ್ನು ಒಪ್ಪಿಕೊಳ್ಳುವುದು ವಿಶೇಷವಲ್ಲ. ನಿರ್ಧರಿಸುವುದು ಸವಾಲು..ಈ ಪಾತ್ರಕ್ಕಾಗಿ ನಾನು ಸಾಕಷ್ಟು ಸಮಯ ತೆಗೆದುಕೊಂಡೆ. ಏಕೆಂದರೆ ತೆರೆಯ ಮೇಲೆ ಗ್ರಾಫಿಕ್ಸ್ ಮೂಲಕ ದೇಹ ತೋರಿಸಬಹುದು. ಆದರೆ ಸೆಟ್‌ನಲ್ಲಿ ಎಲ್ಲರೂ ನೋಡುತ್ತಾರಲ್ಲ.

ಸೆಟ್‌ನಲ್ಲಿ ಜೂನಿಯರ್ಸ್ ನೋಡಿ ಹೀರೋ ಹೇಗಿದ್ದಾರೆ ಎಂದರೆ ? ಇದೆಲ್ಲ ತಲೇಲಿ ಬರುತ್ತಿತ್ತು. ಇದು ಬಹಳ ಮೈಂಡ್ ಗೇಮ್. ರಾತ್ರಿ ಮಲಗಲು ಆಗುತ್ತಿರಲಿಲ್ಲ. ಬೆಳಗೆದ್ದರೆ ಜಿಮ್. ಹೀಗೆ ತಯಾರಿ ನಡೆಸಿದ್ದೆ. ಮನೆಯಲ್ಲಿ ಅದಕ್ಕೆ ಬೆಂಬಲ. ಇಂದು ನನಗೆ ಆತ್ಮವಿಶ್ವಾಸ ಮೂಡಿಸಿರುವುದು ಎಂದರೆ ಆ ಸಿನಿಮಾ ಮಾಡಿದ್ದು. ಅದರಿಂದಾಗಿ ನನ್ನ ಜೀವನಶೈಲಿ, ದಿನಚರಿ ಬದಲಾಗಿದೆ’ ಎಂದು ಕಿಚ್ಚ ಸುದೀಪ್ ವಿದೇಶದಲ್ಲಿರುವ ಕನ್ನಡ ಅಭಿಮಾನಿಗೆ ವಿಡಿಯೋ ಕಾಲ್ ನಲ್ಲಿ ಹೇಳಿದ್ದಾರೆ.

Advertisement
Share this on...