ಸುದೀಪ್ ಮಾಡಿರುವ ಈ ಕೆಲಸ ನಿಜವಾಗಿಯೂ ಮೆಚ್ಚುವಂತದ್ದು !

in ಮನರಂಜನೆ/ಸಿನಿಮಾ 214 views

ಕನ್ನಡ ಚಿತ್ರರಂಗ ಕಂಡ ಹೆಮ್ಮೆಯ ನಟ ನಿರ್ದೇಶಕರೆಂದರೆ ಕಿಚ್ಚ ಸುದೀಪ್ , ಕನ್ನಡದ ಸೊಬಗನ್ನು ಮಂಡ್ಯದಿಂದ ಇಂಡಿಯಾ ವರೆಗೂ ಮುಟ್ಟಿಸಿರುವ ಅಜಾನುಬಾಹು ಪ್ರತಿಭೆ ಈ ಸುದೀಪ್.  ತಮ್ಮ ನೇರನುಡಿ ಹಾಗೂ ಅರ್ಥಪೂರ್ಣ ಮಾತುಗಳಿಂದ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನಟ ಕಿಚ್ಚ ಸುದೀಪ್.. ಬಡತನದಿಂದ ಬಂದ ಅದೆಷ್ಟೋ ಪ್ರತಿಭೆಗಳಿಗೆ ಬೆನ್ನೆಲುಬಾಗಿ ನಿಂತಿರುವ ಈ ಅಭಿನಯ ಚಕ್ರವರ್ತಿ ಬಗ್ಗೆ ಎಷ್ಟು ಹೇಳಿದರೂ ಸಾಕಾಗುವುದಿಲ್ಲ.. ಕನ್ನಡ ಸೇರಿದಂತೆ ತೆಲುಗು ತಮಿಳು ಹಿಂದಿ ಚಿತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈ ನಟನಿಗೆ  ನಿರ್ದೇಶಕ ನಿರ್ಮಾಪಕರು ಕಾಲ್ ಶೀಟ್  ಗಾಗಿ ಕಾಯುತ್ತಿರುತ್ತಾರೆ.. ಕನ್ನಡ ಚಿತ್ರರಂಗವನ್ನು ಬೇರೊಂದು ಹಂತಕ್ಕೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದವರಲ್ಲಿ ಸುದೀಪ್ ಅವರು ಕೂಡ ಒಬ್ಬರು. ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವ ಈ ಕಿಚ್ಚ, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಾರೆ. ಅವರ ವಿಲನ್ ಅವತಾರಕ್ಕೆ ಇಡೀ ಭಾರತ ಚಿತ್ರರಂಗವೇ ಸಲಾಂ ಹೊಡೆದು ಬಿಟ್ಟಿದೆ ಆದರೆ ಅತಿಥಿ ಮತ್ತು ಕೇಡಿ ಪಾತ್ರವನ್ನು ಮಾಡಬೇಡಿ ಅದನ್ನು ನೋಡುಲು ನಮ್ಮ ಕೈಯಲ್ಲಿ ಆಗುವುದಿಲ್ಲ ಎಂದು ಅಭಿಮಾನಿಗಳು ಧ್ವನಿ ಎತ್ತುತ್ತಲೆ ಇದ್ದಾರೆ..

Advertisement

Advertisement

ಬಾಲಿವುಡ್, ಕಾಲಿವುಡ್,  ಟಾಲಿವುಡ್ ಸಿನಿಮಾಗಳಲ್ಲಿ ವಿಲನ್ ಆಗಿ ಮಿಂಚಿ ಬೇಡಿಕೆಯ ನಟರಾಗಿರುವ ಸುದೀಪ್, ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಅವರ ದಬಾಂಗ್ ೩ ಚಿತ್ರದಲ್ಲೂ ಕೂಡ ಕೇಡಿ ಪಾತ್ರವನ್ನು ನಿರ್ವಹಿಸಿದ್ದರು. ಹೀಗೆ ಬೇರೆ ಚಿತ್ರರಂಗದ ಸ್ಟಾರ್ ನಟರ ಮುಂದೆ ಕಿಚ್ಚ ಸುದೀಪ್ ಅವರು ಪೆಟ್ಟು ತಿನ್ನುವುದು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತಿಲ್ಲ. ಆದರೂ ಯಾವುದೇ ಪಾತ್ರವಾದರು ಪರವಾಗಿಲ್ಲ ಎಂದು ಅಭಿನಯಿಸುವ ಕಿಚ್ಚ, ಇದೀಗ ಅಂತರಾಷ್ಟ್ರೀಯ ಸ್ಟಾರ್ ನಟರಾಗಿದ್ದಾರೆ. ಇನ್ನು ಇದೀಗ ಮಹಾಮಾರಿ ಕರೊನಾ ಸಂಕಷ್ಟ ಕಾಲದಲ್ಲಿ ಮಾನವೀಯ ಕಾರ್ಯಗಳಲ್ಲಿ ತೊಡಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇದೀಗ ಮತ್ತೊಂದು ಸಮಾಜಮುಖಿ ಕೆಲಸಕ್ಕೆ ಮುಂದಾಗಿದ್ದಾರೆ.​

Advertisement

Advertisement

ಈ ಬಾರಿ ಕಿಚ್ಚನ ಕಣ್ಣು ಸರ್ಕಾರಿ ಶಾಲೆಗಳ ಮೇಲೆ ಬಿದ್ದಿದ್ದು, ಶಾಲೆಗಳ ಅಭಿವೃದ್ಧಿಗೆ ಸುದೀಪ್​ ಪಣ ತೊಟ್ಟಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ ನಾಲ್ಕು ಸರ್ಕಾರಿ ಶಾಲೆಗಳನ್ನು ಸುದೀಪ್​ ದತ್ತು ಪಡೆದಿದ್ದಾರೆ.  ಚಾರಿಟಬೆಲ್ ಸೊಸೈಟಿ ಮೂಲಕ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಮತ್ತು ಚಳ್ಳಕೆರೆ ತಾಲೂಕಿನ ನಾಲ್ಕು ಸರ್ಕಾರಿ ಶಾಲೆಗಳನ್ನು ಕಿಚ್ಚ ದತ್ತು ಪಡೆದಿದ್ದು, ಸರ್ಕಾರಿ ಶಾಲಾ ಶಿಕ್ಷಕರ ಸಂಬಳ ಹಾಗೂ ಮಕ್ಕಳ ಸ್ಕಾಲರ್​ಶಿಪ್ ಬಿಟ್ಟು ಶಾಲೆ ಅಭಿವೃದ್ಧಿಯ ಜವಬ್ದಾರಿಯನ್ನು ಕಿಚ್ಚ ವಹಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಯ ಕಟ್ಟಡ ನಿರ್ಮಾಣ ಕೆಲಸ. ಪೇಂಟಿಂಗ್​, ಶೌಚಾಲಯ ನಿರ್ಮಾಣ ಸೇರಿದಂತೆ ಶಾಲೆಗೆ ಬೇಕಾದ ಮೂಲ ಸೌಕರ್ಯವನ್ನು ಕಿಚ್ಚ ತಮ್ಮ ಟ್ರಸ್ಟ್​ ಮೂಲಕ ಒದಗಿಸಲಿದ್ದಾರೆ.

Advertisement
Share this on...